ಈಶ ಸುತ

0

ಈಶ ಸುತ ಗಣಪತಿ ನೀನೆ ಜಗದಾಧಿಪತಿ
ಕರುಣಿಸಿ ವಿದ್ಯೆ ಬುದ್ಧಿ ತೋರೆಮಗೆ ಸದ್ಗತಿ ||ಪ||

ನಿನಗೆಂದೆ ಮಾಡಿದ ಮಂಟಪವ ಅಲಂಕರಿಸಿ
ಕಡುಬು ಹೋಳಿಗೆ ನೈವೇದ್ಯವ ಸ್ವೀಕರಿಸಿ
ನಂಬಿ ಬಂದ ಭಕ್ತರ ಅಭೀಷ್ಟವ ನ ನೆರವೇರಿಸಿ
ಪಾಲಿಸು ಸಜ್ಜನರ ಪ್ರೀತಿಯಿಂದ ನೀ ಹರಸಿ ||೧||

ಮುಕ್ಕೋಟಿ ದೇವರಲಿ ನೀನೆ ಬಲು ಮತಿವಂತ
ಮುಕ್ಕಣ್ಣ ಪರಶಿವನ ಬಾಗಿಲಲಿ ತಡೆದ ಧೀಮಂತ
ಗಜಮೂಕಾಸುರನ ಕೊಂದ ಮಹಾ ಶಕ್ತಿವಂತ
ನಿನ್ನ ಪೂಜಿಸುವ ಪುಣ್ಯ ಪಡೆದವನೆ ಭಾಗ್ಯವಂತ ||೨||

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.