ಈ ಜೀವನ ಅವಳು ಕೊಟ್ಟ ಭಿಕ್ಷೆ

1.166665

ವಯಸ್ಸಿಗೆ ಬಂದವರು, ಪ್ರೀತಿ ಪ್ರೇಮದ ಬಲೆಗೆ ಬೀಳುವುದು ಸಹಜ, ಆದರೆ ನಮ್ಮ ಯುವಜನತೆ ಈ ಪ್ರೀತಿಗೆ ಬೀಳುವ ಮುನ್ನ ಕೊಂಚ ಯೋಚಿಸಿಲ್ಲಾ. ಎಂಬುವುದು ನಿಮಗೆ ಮುಂದಿನ ಓದಿನಿಂದ ತಿಳಿಯುತ್ತದೆ. “ ಪ್ರೀತಿಲಿ ಬಿಳುವುದು ಮಾಮೂಲಿ ಮಗಾ, ಆದರೆ ಅದರಲ್ಲಿ ಒಂದುಸಲ ಬಿದ್ದರೆ ಏಳಕ್ಕೆ ಆಗಲ್ಲಾ. ನೋಡು. ನಮ್ಮ ವಿಶುನ ಗತಿ ಏನಾಗಿದೆ ಅಂತಾ " ಹೀಗೆ ಮಾತಾಡುತ್ತಾ ಗೆಳೆಯರಾದ ವಿಶ್ವ , ರಾಘು, ಪ್ರೀತಿ ಹರಟೆ ಹೊಡಿಯುತ್ತಾ ಸರಕಾರಿ ಕಾಲೇಜಿನ ಕ್ಯಾಂಪಸ್ ನಲ್ಲಿ ನಿಂತಿದ್ದರು. ವಿಶ್ವನ ಮುಖದಲ್ಲಿ ಪ್ರೀತಿ ಕಳೆದುಕೊಂಡ ಛಾಯೆಯ ಜೊತೆಗೆ ಪರೀಕ್ಷೆಯಲ್ಲಿ ಫೇಲ್ ಆದ ಒಂದು ಕುರುಹು ಹೊಮ್ಮುತಿತ್ತು . ಆಗ ಆ ಲವ್ ಮಾಡಿದ ಮಾಹಾತ್ಮ ಹೇಳಿದ್ದ ಈ ಕಥೆ ಅವನ ಮಾತಲ್ಲೆ ಕೇಳಿ " ಅಮ್ಮ ಲೇಟ್ ಆಗುತ್ತಿದೆ ಬೇಗಾ ಟಿಫನ್ ತಾ ಅಮ್ಮ ಶಾಲೆಗೆ ತಡಮಾಡಿ ಹೋದರೆ ಮೇಸ್ಟ್ರು ಬೈತಾರೆ " ಇವನಿಗೆ ಶಾಲೆಯ ಎಷ್ಟು ಹಂಬಲ ಅಂದಿರಾ ಖಂಡಿತಾ ಇಲ್ಲಾ, ಅತಿ ಚಿಕ್ಕ ವಯಸ್ಸಿನಲ್ಲಿಯೆ ತನ್ನ ಕ್ಲಾಸ್ ಮೇಟ್ ಸೌಮ್ಯಾಳನ್ನು ನೋಡುವ ಆಸೆ ಹಾಗೂ ಅವಳ ಜೊತೆಗೆ ಬಸ್ ಲ್ಲಿ ಹೋಗುವ ಆಸೆ ಅಷ್ಟೆ . ಅದಕ್ಕಾಗಿ ಈ ಜೋರಾದ ಪೀಠಿಕೆ . ಇವರಿಬ್ಬರು ಇನ್ನು ಆರನೆ ತರಗತಿ ಓದುವ ವಯಸ್ಸು . ಆದರೆ ಇವರಿಗೇನು ಗೊತ್ತು ಬದುಕು ಹೇಗಿದೆ ಅಂತಾ . ವಿಶುನ ಮನೆಯಲ್ಲಿ ಅತಿಯಾದ ಬಡತನ ಒಬ್ಬನೆ ಮಗ ತಂದೆ ಊರಿನ ಗೌಡರ ಮನೆಯ ಆಳು ಹಗಲು ರಾತ್ರಿ ಎನ್ನದೆ ಮಗನ ಓದಿಗಾಗಿ ಕಷ್ಟ ಪಡುತ್ತಿದ್ದ. ಇತ್ತ ತಾಯಿಯು ದಿನಾಲು ದುಡಿದು ವಿಶುಗೆ ಯಾವ ಕೊರತೆಯು ಕಾಣದಂತೆ ನೋಡಿಕೊಳ್ಳುತ್ತಿದ್ದಳು. ಇಬ್ಬರು ತಂದೆ ತಾಯಿ ನಮ್ಮ ಈ ಕಠೋರ ಕಡು ಬಡತನ ನಮ್ಮ ಮಗನಿಂದ ಹೋಗಲಾಡುತ್ತದೆ. ನಮ್ಮ ಮಗ ನಮಗೆ ಮುಂದಿನ ಆಸರೆಯಾಗುತ್ತಾನೆ. ಎಂಬ ಮಹತ್ತರವಾದ ಬಯಕೆಯಲ್ಲಿ ಬದುಕಿನ ಬಂಡಿ ವಯಸ್ಸಾದರು ಭರವಸೆಯ ಹಳಿಯ ಮೇಲೆ ಎಳೆಯುತ್ತಲೆ ಮಗನನ್ನು ಡಿಗ್ರೀವರೆಗೂ ಓದಿಸಿದರು. ಜಾನಕಿ ಅತ್ಯಂತ ಚೂಟಿ ಹಾಗೂ ಜಾಣ ಹುಡುಗಿ ಶಾಲೆಯಲ್ಲಿ ಎಲ್ಲಾ ಶಿಕ್ಷಕರ ಮುದ್ದಿನ ಮತ್ತು ಫೇವರೇಟ್ Student ಎಲ್ಲದರಲ್ಲಿಯು ಮುಂದೆ ಮುಂದೆ ಏಕೆಂದರೆ ನಮ್ಮ ಈ ಶಾಲೆಯ ಎಲ್ಲಾ ಹುಡುಗರು ಆಕೆಯ ಹಿಂದೆ ಹಿಂದೆ. ಶ್ರೀಮಂತ ಕುಟುಂಬದ ಜಾನಕಿ ದಿನಾಲು ಮೃಷ್ಠಾನ್ನದಲ್ಲಿ ಕೈ ತೊಳೆಯುತ್ತಿದ್ದಳು. ಅವಳ ನಡೆ ನುಡಿ ಎಲ್ಲವು ಚೆಂದ ಸದ್ಗುಣ ಸಂಪನ್ನೆಯಾಗಿದ್ದಳು. ಆದರೆ ಯಾಕೋ ಗೊತ್ತಿಲ್ಲಾ ಈ ಬಡಪಾಯಿ ವಿಶ್ವನ ಪಾಲಿಗೆ ಕರಾಳ ಮನಸ್ಸು ಮಾಡಿದಳು. ಇವರಿಬ್ಬರ ಪ್ರೀತಿಯ ವಿಷಯ ಪ್ರಾರಂಭವಾಗಿದ್ದು ಅತಿ ಚಿಕ್ಕ ವಯಸ್ಸಿನಲ್ಲಿಯೆ ಇವರಿಬ್ಬರಿಗೂ ವ್ಯತ್ಯಾಸ ಒಂದೆ ವಿಶ್ವ ಯಥೇಚ್ಚವಾಗಿ ಪ್ರೀತಿಸುತ್ತಿದ್ದಾ. ಆದರೆ ಸೌಮ್ಯ ಪ್ರೀತಿಸುತ್ತಿರಲಿಲ್ಲಾ. ಹೀಗೆ ಚಿಕ್ಕಂದಿನ ಒಂದು ಚಿಕ್ಕ ಘಟನೆ ಹೇಳುವುದಾದರೆ. “ ಅಂದು ಶಾಲೆಯ ವಾರ್ಷಿಕೊತ್ಸವ ಕಾರ್ಯಕ್ರಮ ಹತ್ತನೆಯ ತರಗತಿ ಮುಗಿಸುವ ಸಂದರ್ಭ ವೇದಿಕೆ ಮಾತಾಡಲು ಸಜ್ಜಾಗಿರುತ್ತದೆ. ಆಗ ವಿದ್ಯಾರ್ಥಿಗಳು ಅವರ ಅನಿಸಿಕೆ ಹೇಳಬೇಕು ಎಂದು ನಿರೂಪಕರು ಹೇಳುತ್ತಾರೆ. ಆಗ ಮಾತಾಡಿದ ನಮ್ಮ ವಿಶ್ವ ಬರಿ ಅವನ ಪ್ರೀತಿಯ ಬಗ್ಗೆ ಪ್ರೀತಿಸುತ್ತಿದ್ದ ಹುಡುಗಿಯ ಬಗ್ಗೆ ಮಾತಾಡಿದ್ದ. “ ಗೆಳೆಯರೆ ನಾವಿಂದು ಇಲ್ಲಿಂದ ಅಗಲಬಹುದು ಆದರೆ ನಾನು ನನ್ನ ಹುಡುಗಿಯಿಂದ ಯಾವತ್ತು ಅಗಲುವುದಿಲ್ಲಾ ಅವಳ ಮನಸ್ಸು ಹೃದಯಗಳಿಂದ ಯಾವತ್ತು ಮಾಸುವುದಿಲ್ಲಾ ಎಂದು ಅವಳ ಹೆಸರು ಹೇಳದೆ ಲವ್ ಯುವ ಚಿನ್ನಾ ಅಂದಿದ್ದ . ನನ್ನ ಹುಡುಗಿಯನ್ನು ಮನದಾಳದಲ್ಲಿ ಇಟ್ಟುಕೊಂಡಿದ್ದೇನೆ " ಅಂದಿದ್ದ. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಂದೆ ತಾಯಿ ಈ ಮಾತು ಕೇಳಿ ತಂಗಾದರು. ಅವರ ನೂರು ಕನಸು ನುಚ್ಚು ನೂರಾದವು. ನಂತರ ಮಾತಾಡಿದ ಜಾನಕಿ " ಗೆಳೆಯರೆ ನಾವಿನ್ನು ಚಿಕ್ಕವರು ನಮಗೆ ಇನ್ನು ಬದುಕು ತುಂಬಾ ದೊಡ್ಡದಿದೆ . ಅನುಭವಿಸಬೇಕು. ಈ ಭೂಮಿಗೆ ಬಂದಮೇಲೆ ನಾವೆಲ್ಲಾ ಏನನ್ನಾದರು ಸಾಧಿಸಬೇಕು. ಎಲ್ಲರು ನಮ್ಮ ಈ ಸಮಾಜವನ್ನು ಪ್ರೀತಿಸಬೇಕು ತಂದೆ ತಾಯಿಯರ ಆಸೆ ಈಡೇರಿಸಬೇಕು. ಅದಕ್ಕಾಗಿ ನಾವೆಲ್ಲಾ ಚೆನ್ನಾಗಿ ಓದಿ ಮುಂದೆ ಬರೋಣ " ಈ ಮಾತು ಮುಗಿದ ತಕ್ಷಣ ಎಲ್ಲರು ಚೆಪ್ಪಾಳೆಗಳ ಸುರಿಮಳೆ ಸುರಿಸಿದರು.

ಇತ್ತ ನನ್ನನ್ನೆ ಪ್ರೀತಿಸುತ್ತಾಳೆ ಎಂಬ ಗೊಡ್ಡು ನಂಬಿಕೆಯಲ್ಲಿದ್ದ ವಿಶ್ವ ದಿನೆ ದಿನೆ ಅವಳ ನೆನಪು ಅವಳ ಹಿಂದೆ ಸುತ್ತುವ ಕೆಲಸ ಅತಿಯಾಗುತ್ತದೆ. ಹಾಗೊ ಹೀಗೊ ಕಾಡಿ ಬೇಡಿ ಡಿಗ್ರೀವರೆಗೂ ಶಿಕ್ಷಣ ಅವಳ ಪ್ರೀತಿಯ ನೆನಪಲ್ಲಿ ಮುಗಿಯುವ ಹಂತಕ್ಕೆ ತರುತ್ತಾನೆ. ಆದರೆ ಸೌಮ್ಯ ಪ್ರತಿ ವರ್ಷವು ಚಿನ್ನದ ಪದಕ ಪಡೆಯುತ್ತಾಳೆ. ಈ ಸಾಹೇಬರು ಮಾತ್ರ ಅಲ್ಪ ಅಂಕ ಪಡೆದು ಪಾಸಾಗುವುದರಲ್ಲಿ ನಿರತರಾಗಿರುತ್ತಾರೆ. ಗೆಳೆಯರು ಕೇಳಿದರೆ ನನ್ನ ಹುಡುಗಿ ಪಾಸಾದರೆ ಸಾಕು ನನಗೇಕೆ ಎಂದು ಅಪ್ಪ ಅಮ್ಮ ಕೇಳಿದರೆ ನಿಮ್ಮ ಸೊಸೆ ಈ ಬಾರಿಯು ಚಿನ್ನದ ಪದಕ ಪಡೆದಳು. ಅಂತಾ Sweet ಹಂಚುತ್ತಾನೆ. ತಂದೆ ತಾಯಿ ಇವನ ಬೆಳವಣಿಗೆ ನೋಡಿ ಚಿಂತಿತರಾಗುತ್ತಾರೆ. ಹತ್ತಾರು ದಾರಿಗಳನ್ನು ಹುಡುಕುತ್ತಾರೆ. ಹೇಗಾದರು ಮಾಡಿ ಇವನನ್ನು ದಾರಿಗೆ ತರೋಣ ಎಂಬ ಪ್ರಯತ್ನ ಮಾಡುತ್ತಾರೆ. ಆದರೆ ವಿಶ್ವ ಈಗಾಗಲೆ ಸೌಮ್ಯಾ ಳ ಪ್ರೀತಿಯಲ್ಲಿ ತೊಯ್ದು ಒದ್ದೆಯಾಗಿರುತ್ತಾನೆ. ವಿರ್ಪರ್ಯಾಸವೆಂದರೆ ಈ ಹೆಮ್ಮರವಾಗಿ ಬೆಳೆದ ಪ್ರೀತಿಯನ್ನು ಸೌಮ್ಯಾಳ ಮುಂದೆ ಒಂದು ಬಾರಿಯು ವಿಶ್ವ ಹೇಳಿರುವುದಿಲ್ಲಾ. ಹೇಳಿದರೆ ಅರ್ಥಮಾಡಿಕೊಳ್ಳದೆ ಇರುವ ಹುಡುಗಿಯರ ಕಾಲದಲ್ಲಿ ಈ ಸಾಹೇಬರು ಹೇಳದೆ ಹೇಗೆ ಆ ಹುಡುಗಿ ಅರ್ಥಮಾಡಿಕೊಂಡಾಳು ಎಂಬ ಕಲ್ಪನೆಯು ಇವರಿಗಿಲ್ಲಾ. ಡಿಗ್ರೀ ಕೊನೆವರೆಗೂ ಸುಮ್ಮನಿದ್ದ ವಿಶ್ವ Final ಆಗಿ ಅವಳ ಮುಂದೆ ಹೇಳಬೇಕು ಎಂಬ ಮನಸ್ಸು ಮಾಡಿದ . ಹಾಗೆ ಅವಳನ್ನು ಗಾರ್ಡನ್ ಕ್ಯಾಂಪಸ್ ಗೆ ಬರಲು ಹೇಳಿದ ಯಥಾ ಪ್ರಕಾರ ಸೌಮ್ಯ ಬಂದಳು . ಅಲ್ಲಿ ಈ ವಿಶ್ವ ಹೇಳಿದ್ದು ಇಷ್ಟು " ಜಾನಕಿ ಕಳಿದ 25 ವರ್ಷಗಳಿಂದ ಇಲ್ಲಿಯವರೆಗೂ ನಿನಗೆ ಹೇಳಲು ಆಗದ ಸತ್ಯದ ಮಾತೊಂದು ನಿನಗೆ ಗೊತ್ತಾ? ಎಂದನು ಅವಳು ಖುಷಿಯಾಗಿ ಓ...... ಗೊತ್ತು ಎಂದಳು ಆಗ ಈತನಿಗೆ ಎಲ್ಲಿಲ್ಲದ ಖುಷಿ ಅವಳು ನನ್ನ ಪ್ರೀತಿಯ ಬಗ್ಗೆ ಮಾತಾಡುತ್ತಾಳೆ ಅಂತಾ ಅನಿಸಿತು. ಆದರೆ ಅವಳು ಹೇಳಿದ್ದು ಹೀಗೆ " ನೀನು ನನಗೆ ಹೇಳದೆಯಿರುವ ವಿಷಯವೆಂದರೆ ನೀನು ಯಾರು? ಎಲ್ಲಿಂದ ಬಂದಿದ್ದೀಯೋ ಯಾವ ಸಾಧನೆಯ ಹಾದಿ ನಿನ್ನದು.. ನಿನ್ನ ಸಂಪೂರ್ಣ ಮಾಹಿತಿ ಇಲ್ಲಯವರೆಗೂ ಹೇಳೆ ಇಲ್ಲಾ ..ಅಷ್ಟೆ ಯಾಕೆ ನೀನು ಇಷ್ಟು ಚೆನ್ನಾಗಿ ನನ್ನ ಜೊತೆಗೆ ಮಾತಾಡಿದ್ದು ಇದೆ ಮೊದಲಲ್ಲವೆ? ಎಂದಳು. ವಿಶ್ವನಿಗೆ ಸಿಡಿಲು ಬಡಿದು ಭೂಮಿಗೆ ಅಪ್ಪಳಿಸಿದಂತಾಯಿತು. ಒಂದು ಹೊತ್ತು ಕರೆಂಟ್ ಹೊಡೆದ ಕಾಗೆಯಂತಾದನು. ಮತ್ತೆ ಜಾನಕಿ ನೋಡು ವಿಶ್ವ ನನಗೆ ಜೀವನದಲ್ಲಿ ತುಂಬಾ ದೊಡ್ಡ ಸಾಧನೆ ಮಾಡಬೇಕು ಮತ್ತು ನನ್ನ ತಂದೆ ತಾಯಿಗೆ ಒಳ್ಳೆಯ ಹೆಸರು ತರಬೇಕು ಎಂಬ ನೆನಪು ಬಿಟ್ಟರೆ ನನಗೆ ಯಾರ ಬಗ್ಗೆಯು ವಿಚಾರವಿಲ್ಲಾ ನೀನು ಅಷ್ಟೆ ಮಾಡು ಮೊದಲು ಜೀವನ ಸಾಧನೆಯ ಕಡೆ ಗಮನ ಕೊಡು ಕೆಲಸಕ್ಕೆ ಬಾರದ ಹರಟೆ ಗೆಳೆಯರನ್ನು ಬಿಟ್ಟು ಜೀವನದಲ್ಲಿ Serious ಆಗು ನಿಮ್ಮ ಕುಟುಂಬದ ಬಗ್ಗೆ ಚಿಂತಿಸು ಅವರ ಕಷ್ಟ ಸುಖ ಕೇಳುವ ಮಕ್ಕಳಾಗಬೇಕು. ಎಂದು ಮಾತು ಮುಗಿಸುವಷ್ಟರಲ್ಲಿ ಕಾಲೇಜಿನಿಂದ ಬೆಲ್ ಶಬ್ದ ಕೇಳಿತು ಓಕೆ ವಿಶ್ವ..ಅದೋ ನೋಡು ಸರಿಯಾಗಿ ನನ್ನ Favourate ವಿಷಯದ ಅವಧಿಯ ಸಮಯವಾಯಿತು. ಕೆಮಿಷ್ಟ್ರಿ ಕ್ಲಾಸ್ ಇದೆ ಬರತೀನಿ ವಿಶ್ವ ಎಂದು ಹೋದಳು. ಇದನೆಲ್ಲಾ ಕೇಳಿದ ನಮ್ಮ ಆಧುನಿಕ ಪ್ರೇಮಿ ಏನು ಮಾಡುವುದು ತಿಳಿಯಲಿಲ್ಲಾ. ಅವಳು ಅವಸರದಲ್ಲಿ ಸುಮ್ಮನೆ ಹೇಳಿದಳು ಇಲ್ಲಾ ನಿಜವಾಗಿಯೆ ಹೀಗೆ ಮಾಡಿದಳು ಎಂದು ವಿಚಾರಿಸ ತೊಡಗಿದ. ಆದರು ಯಾಕೊ ಸಮಾಧಾನವಿಲ್ಲದ ವಿಶು ಮತ್ತೆ ಆಕೆಯ ಹತ್ತಿರ ಹತ್ತಿರ ಹೋಗ ತೊಡಗಿದ . ಅವಳು ಅಷ್ಟೆ ದೂರ ದೂರ ಹೋಗತೊಡಗಿದಳು. ಇಬ್ಬರು ಬೇಟಿ ಮಾಡುವ ಮತ್ತೊಂದು ಸುಂದರ ಸಮಯ ಒದಗಿ ಬಂದಿತು. ಅಂದು ಸಾಯಂಕಾಲದ ಸಮಯ ವಿಶು ಹಾಗೂ ಸೌಮ್ಯ ಗಾರ್ಡನ್ ನಲ್ಲಿ ಹಾಗೆ ಒಬ್ಬರಿಗೊಬ್ಬರು ಮುಖ ನೋಡುತ್ತಾ ಕುಳಿತಿರುತ್ತಾರೆ. ಈ ಮೊದಲು ತನ್ನ ಗೆಳತಿಯರಿಂದ ವಿಶು ತನ್ನನ್ನು ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದಾನೆ. ಎಂಬ ವಿಷಯ ಕೇಳಿ ತುಂಬಾ ಕೋಪಗೊಂಡಿರುವ ಸೌಮ್ಯ ಆ ಕೋಪದಲ್ಲಿಯೆ ವಿಶುನ ಮುಖ ಬಿಡದೆ ನೋಡುತ್ತಿದ್ದಾಳೆ. ವಿಶ್ವ ಈ ಕಡೆ ತಡವರಿಸಲು ಪ್ರಾರಂಭಿಸುತ್ತಾನೆ. ಮಾತು ಆಡದೆ ಮೌನ ಆಗುತ್ತಾನೆ. ಹೇಗೆ ಹೇಳಲಿ ಎಂದು ವಿಚಾರಿಸುತ್ತಾನೆ. ಆತನಿಗೆ ಪ್ರೀತಿ ಹೇಳಲು ಆಗದೆ ತನ್ನಲ್ಲಿಯೆ ಇಟ್ಟುಕೊಳ್ಳಲು ಆಗದೆ ಒಂದೆ ಸಮನೆ ವ್ಯಥೆ ಪಡುತ್ತಾನೆ. ಕೊನೆಗೆ ಅವಳ ಮುಂದೆ ಸತ್ಯ ಹೀಗೆ ಹೇಳುತ್ತಾನೆ. ಸೌಮ್ಯ ಯಾಕೊ ಗೊತ್ತಿಲ್ಲಾ ನೀನನಿಲ್ಲದೆ ನನಗೆ ಜೀವನವಿಲ್ಲಾ ಎನಿಸುತ್ತಿದೆ. ಕಷ್ಟವೊ ನಷ್ಟವೊ ಸುಖವೊ ಗೊತ್ತಿಲ್ಲಾ ಬಾಳಿದರೆ ನಿನ್ನೊಂದಿಗೆ ಬಾಳಬೇಕು ಎನಿಸುತ್ತಿದೆ. ನಿನ್ನನ್ನು ತುಂಬಾ ಮನಸ್ಸಿಗೆ ಹಚ್ಚಿಕೊಂಡಿದ್ದೀನಿ ಯಾವಾಗಲು ನಿನ್ನದೆ ಯೋಚನೆಯಾಗಿದೆ. ಸದಾ ಕನಸು ಮನಸ್ಸಲ್ಲಿ ಬರತೀಯಾ ಯಾವುದೊ ಲೋಕಕ್ಕೆ ಕರೆದುಕೊಂಡು ಹೋಗತೀಯ ನಾನು ನಿನ್ನನ್ನು ಪ್ರೀತಿಸುತ್ತೇನೆ. ಜಾನಕಿ ಎಂದಾ ಇಷ್ಟು ಮಾತು ಅವನ ಬಾಯಿಂದ ಕೇಳಿದ ಜಾನಕಿಗೆ ಒಂದು ಬಾರಿ ತುಂಬಾ ಕೋಪ ಬಂದಿತು ಮತ್ತೆ ಒಂದು ಸಲ ತುಂಬಾ ಖುಷಿಯಾಯಿತು. ಅತ್ತ ತಿರಿಗಿ ತನ್ನೊಳಗೆ ಒಮ್ಮೆ ಯೋಚಿಸತೊಡಗಿದಳು ಒಳಗೊಳಗೆ ಖುಷಿ ಪಟ್ಟಳು. ಆದರೆ ಆ ಖುಷಿಯಿಂದ ವಿಶು ಇನ್ನು ಹೆಚ್ಚಿಗೆ ಹಾಳಾಗಬಹುದು ಎಂದು ಮತ್ತೊಮ್ಮೆ ಯೋಚಿಸಿದಳು. ಈಗಾಗಲೆ ಎಲ್ಲವು ಕಳಿದುಕೊಂಡ ವಿಶು ಅವನ್ನು ಮರಳಿ ಪಡೆಯುವಂತೆ ಮಾಡುವುದೆ ನನ್ನ ಪ್ರೀತಿಯ ಗುರಿ ಎಂದು ನಿರ್ಧರಿಸಿದಳು. ನೇರವಾಗಿ ಅವನ ಕಡೆಗೆ ತಿರುಗಿ ಹೇಳುತ್ತಾಳೆ. ಕಳೆದ 25 ವರ್ಷಗಳಿಂದ ನೀನು ಮಾಡಿದ ಸಾಧನೆಯೆಂದರೆ ಇದೇನಾ? ಛೇ ಎಂದಾದರು ಇಷ್ಟು ನಿನ್ನ ತಂದೆ ತಾಯಿಯ ಬಗ್ಗೆ ಯೋಚಿಸಿದ್ದೀಯಾ? ಅವರು ಹೇಗಿದ್ದಾರೆ ಕೇಳಿದ್ದೀಯಾ ? ಅವರ ಪಾಡೇನಾಗಿದೆ ನೋಡಿದ್ದೀಯಾ? ಯಾವಾಗ ಈ ಪ್ರೀತಿ ಎಂಬ ಮಾಯೆ ನಿಮ್ಮನ್ನು ಆವರಿಸುತ್ತದೆಯೊ ಅವಾಗ ಈ ಪ್ರಪಂಚದಲ್ಲಿ ನಿಮ್ಮ ಹುಡುಗಿ ಮತ್ತು ಪ್ರೀತಿಯೆ ನಿಮಗೆ ಹೆಚ್ಚಾಗುತ್ತದೆ. ಸಾಕಿ ಸಲುಹಿದ ಹೆತ್ತವರ ಮಾತು ನಿಮ್ಮ ಅಮೂಲ್ಯ ಕಿವಿಗೆ ಬೀಳುವುದಿಲ್ಲಾ ಅಲ್ಲವಾ? ಇಷ್ಟು ವರ್ಷ ಹೇಳದೆ ಇರುವ ನಿನ್ನ ಪ್ರೀತಿ ಎಷ್ಟು ಶಾಶ್ವತ ಹೇಳು ನೀನು ನನಗೆ ಪ್ರೀತಿಸುವ ಯಾವ ಅರ್ಹತೆ ಉಳಿಸಿಕೊಂಡಿದ್ದೀಯಾ ಹೇಳು ಎಲ್ಲವು ಶೂನ್ಯವಾಗಿದೆ. ಎಂದಾದರು ನಾನು ಯಾರು ? ಹೇಗಿದ್ದೀನಿ ಅಂತಾ ಕೇಳಿದ್ದೀಯಾ? ನನ್ನ ಮನೆಯವರ ಬಗ್ಗೆ ಗೊತ್ತಿದೆಯಾ? ಹೋಗಲಿ ನನ್ನ ಸಂಪೂರ್ಣ ಮಾಹಿತಿಯಾದರು ಇದೆಯಾ ವಿಶು ನಿನಗೆ ಅದು ಇಲ್ಲಾ ಮತ್ತೆ 25 ವರ್ಷ ಸುಮ್ಮನೆ ಬೀದಿ ಸುತ್ತಿ ಪ್ರೀತಿ ಮಾಡತ್ತೀನಿ ಅವಳು ನನ್ನ ಹೆಂಡತಿ ಅಂತಾ ಎಲ್ಲರ ಮುಂದೆ ಹೇಳಿದ್ರೆ ಅದೂ ಪ್ರೀತಿ ಅಲ್ಲಾ ಈ ಪ್ರೀತಿಯಲ್ಲಿ ಬಿದ್ದು ಉಳಿಬೇಕು ತಿಳಿಬೇಕು ಅಳಿಯುವುದಲ್ಲಾ ಪ್ರೀತಿ. ನಾನು ಈಗ ನಿನಗೆ ನೇರವಾಗಿ ಹೇಳತ್ತೇನೆ ನಾನು ಯಾರನ್ನು ಪ್ರೀತಿಸುವುದಿಲ್ಲಾ ನಾನು ನಿನ್ನಂತು ಮೊದಲು ಪ್ರೀತಿಸಲ್ಲಾ ಅದಕ್ಕಾಗಿ ಹುಚ್ಚು ಚಿಂತೆಯ ಬಿಡು ಒಂದು ಹುಡುಗಿ ತಾನು ಪ್ರೀತಿಸುವ ಹುಡುಗ ಹೇಗಿರಬೇಕು ಎಂದು ಕನಸಿರುತ್ತವೆ. ಅವುಗಳ ಬಗ್ಗೆ ಆಕೆಗೂ ಆಸೆಗಳಿರುತ್ತವೆ. ಎನ್ನುವುದು ಮರೆಯಬೇಡಾ ಹೋಗು ಮೊದಲು ಜೀವನ ಸಾಧನೆಯ ಬಗ್ಗೆ ಯೋಚಿಸು ಆಮೇಲೆ ಪ್ರೀತಿ ಗೀತಿ ಮದುವೆ ಗಿದುವೆ ಯೋಚಿಸು ಅದಕ್ಕಿಂತ ಮೊದಲು ನಿನ್ನ ತಂದೆ ತಾಯಿಯ ಆಸೆ ಏನು ಕೇಳು ಅವರು ಹೇಳಿದ ಸಾಧನೆ ಮಾಡು ಅಂದಾಗ ನೀನು ಈ ದೇಶದಲ್ಲಿ ಬದುಕಿ ಬಾಳುವ ಹಕ್ಕೆಗೆ ಭಾಜನವಾಗಿರುತ್ತಿ. ಇನ್ನು ನಾನು ತುಂಬಾ ಶ್ರೀಮಂತೆ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ ನೀನು ನನಗೆ ನಿಜವಾಗಿ ಪ್ರೀತಿಸುವುದಾದರೆ ನಾನು ಹೇಳಿದ ಒಂದು ಚಿಕ್ಕ ಕೆಲಸ ಮಾಡು ಇನ್ನು ಡಿಗ್ರೀ ಮುಗಿಯಲು ಸಮಯವಿದೆ ಆದಷ್ಟು ಬೇಗಾ ಮುಗಿಸಿ ನೀನು ಐ.ಎ.ಎಸ್. ಬರಿಬೇಕು ಅಂದಾಗ ಮಾತ್ರ ನಾನು ನಿನ್ನ ವರೆಸಲು ಮದುವೇ ಪ್ರೀತಿ ಮಾಡಲು ಸಾದ್ಯ ಇದು ನನ್ನ ಡಿಮಾಂಡ ಅಲ್ಲಾ ನನ್ನ ಹೆತ್ತವರು ಆಸೆ ನಾನು ಕೆ.ಎ.ಎಸ್. ಮಾಡಲೇಬೇಕು ಅದಕ್ಕೆ ನನಗೆ ಮಾಡಕೊಳ್ಳುವವನು ಹೇಗಿರಬೇಕು ಎಂದು ಮಾತಾಗಿದೆ ಅದಕ್ಕಾಗಿ ನೀನು ನನ್ನ ಪಡೆಯುವುದು ಕನಸಿನ ಮಾತು ಎಂದು ಮನದಲ್ಲಿಯ ಇನ್ನೊಂದು ದೊಡ್ಡ ವೇದನೆ ಇಟ್ಟುಕೊಂಡು ಅತ್ತಳು ಅವನ ಎದುರು ಹೇಳಲು ಆಗಲಿಲ್ಲಾ. ಇಷ್ಟು ಮಾತು ಕೇಳಿದ ವಿಶ್ವ ತುಂಬಾ ಯೋಚಿಸುವಾಗ ಕತ್ತಲಾಯಿತು ಇಬ್ಬರು ಮನೆಗೆ ಹೋದರು.

ಸೌಮ್ಯ ತನ್ನ ಮನೆಯಲ್ಲಿ ಅವನ ಪ್ರೀತಿ ಬಗ್ಗೆ ತುಂಬಾ ಯೋಚಿಸುತ್ತಾಳೆ . ಏನು ಮಾಡುವುದು ತಿಳಿಯದಾಗುತ್ತದೆ. ದಿನೆ ಅವನ ನೆನಪು ಮಾಡುತ್ತಾ ಕಳಿಯುತ್ತಾಳೆ ಅವಳ ಬದುಕಿನ ಕೆಲವು ಕೊನೆಯ ಘಳಿಗೆಗಳನ್ನು ಸಂತೋಷದಿಂದ ಕಳಿಯಬೇಕು ಎನ್ನುವ ಆಸೆಯಿಂದ ಇದ್ದ ಇವಳು ನನಗೆ ಪ್ರೀತಿಸುವ ಒಬ್ಬ ಹುಡುಗ ಇದ್ದಾನಲ್ಲಾ ಎಂಬ ಸಂತೋಷದಿಂದ ಕುಣಿದಾಡುತ್ತಾಳೆ. ಹಳೆಯ ಶಾಲೆಯ ಭಾವಚಿತ್ರಗಳನ್ನು ಹರಡಿ ಅದರಲ್ಲಿಯ ವಿಶ್ವ ನ ಭಾವಚಿತ್ರಗಳಿಗೆ ನಾಚಿ ಮುತ್ತು ಕೊಡುತ್ತಾಳೆ ಸ್ವಾರಿ and I Love you ವಿಶ್ವ ಅನ್ನುತ್ತಾಳೆ. ತುಂಬಾ ಖುಷಿಯಾಗಿ ಹಲವು ಜೀವನದ ಹಿಂದಿನ ಮತ್ತು ಮುಂದಿನ ಕೆಲವು ಕನಸುಗಳನ್ನು ಕಾಣುತ್ತಾಳೆ. ಮೂರು ದಿನದಲ್ಲಿ ಅವಳು ಜೀವನದ ನೂರು ದಿನದ ಸಂತೋಷ ಆಕೆಗೆ ಆಗುತ್ತದೆ. ಏಕೆಂದರೆ ಆಕೆ ನೋಡುಗರ ಕಣ್ಣಿಗೆ ಬೇರೆ ಮತ್ತು ಆಕೆಯ ಜೀವನ ಸ್ಥಿತಿಗತಿಯೆ ಬೇರೆ.

ಇತ್ತ ವಿಶು ತುಂಬಾ ಚಿಂತಾ ಜನಕ ಸ್ಥಿತಿ ಇರುತ್ತದೆ. ಮನೆಗೆ ಬಂದು ಮೊದಲಿಗೆ ಅಮ್ಮನಲ್ಲಿಗೆ ಹೋಗುತ್ತಾನೆ. ಹಳೆಯ ಹಾಸಿಗೆ ಮೇಲೆ ಮಲಗಿದ್ದ ತಾಯಿ ಏಳಲು ಆಗದೆ ಇದ್ದರು ಎದ್ದು ಬಾ ಮಗ ಎಷ್ಟು ತಡವಾಯಿತಲ್ಲಾ ಶಾಲೆಯಲ್ಲಿ ತುಂಬಾ ಓದುವದು ಇತ್ತಾ ಆಯಾಸವಾಗಿದೆಯ ಬಾ ಎಂದು ಮುದ್ದಿಸುತ್ತಾ ಕೆಮ್ಮುತ್ತಾ ಕರೆದಳು . ಅವಳಿಗೆ ನಿಲ್ಲಲು ಆಗದಿದ್ದರು. ಮಗನ ಕೈ ಹಿಡಿದು ನಡೆಸುತ್ತೀನಿ ಎಂಬಂತೆ ಕಾಣುತ್ತಿದ್ದಳು. ಇದನ್ನು ಇಷ್ಟು ಹತ್ತಿರದಿಂದ ಇಂದೆ ಗಮನಿಸಿದ ವಿಶ್ವ ನ ಕಣ್ಣಲ್ಲಿ ಅವನ ಅರಿವಿಗೆ ಬಾರದೆ ಕಣ್ಣೀರು ಧಾರೆಯಾಗಿ ಹರಿಯಿತು. ಅಷ್ಟರಲ್ಲೆ ಅಪ್ಪ ಮನೆಗೆ ಬಂದ ಆತನು ಕೆಮ್ಮುತ್ತಾ ಧಾವಿಸುತ್ತಾ ಏನ್ ಮಾಡತ್ತಿದ್ದೀಯೆ ತುಂಬಾ ದಣಿವಾಗುತ್ತಿದೆ. ನೀರು ಕೊಡು ಹಾಳಾದ ವಯಸ್ಯಾಕೆ ಇಷ್ಟು ಬೇಗಾ ಮುಗಿತು ಇನ್ನು ಚೆನ್ನಾಗಿ ಕೆಲಸಮಾಡಿ ನನ್ನ ಮಗನನ್ನ ದೊಡ್ಡ ಅಧಿಕಾರಿ ಮಾಡಬೇಕು ಅಂದರೆ ಎಲ್ಲಿ ನಾವು ಬೇಗಾ ಸಾಯಿತೀವಿ ಅನಿಸ್ತಿದೆ. ಕಣೆ ಅಂದಾ ಅಪ್ಪನ ಈ ಮಾತು ಕೇಳಿದ ವಿಶು ದೂರ ಹೋಗಿ ಒಂದೆ ಸಮನೆ ಅಳತೊಡಗಿದ. ಏಕೆಂದರೆ ಈ ಸಾಹೇಬರು ತನ್ನ ತಂದೆ ತಾಯಿಯನ್ನು ಇಷ್ಟು ಹತ್ತಿರದಿಂದ ನೋಡಿದ್ದು ಇದೆ ಮೊದಲ ಬಾರಿಗೆ. ಪ್ರತಿಬಾರಿಯು ಅಪ್ಪ ಅಮ್ಮನ ಮಾತು ಕೇಳದೆ ಬರಿ ಯಾವಾಗಲು ಅವಳ ನೆನಪಲ್ಲೆ ಕಳಿಯುತ್ತಿದ್ದ ವಿಶ್ವ ಇಂದು ತನ್ನ ತಪ್ಪಿನ ಅರಿವಾಗಿ ಯೋಚಿಸತೊಡಗಿದ. ಈ ವೇದನೆ ಆಕ್ರಂಧನ ನನ್ನ ಮನೆಯಲ್ಲಿಯೆ ಇದ್ದರು ನಾನು ಕಾಣದೆ ಹೋದೆ ಎನ್ನುವ ವಿಷಯ ತಿಳಿದಾಗ ತುಂಬಾ ಸಂಕಟವಾಯಿತು. ಬದುಕು ಇಷ್ಟು ಕಂಠಕಪ್ರಾಯವಿದೆಯೆಲ್ಲಾ ಈ ಹಾಳಾದ ಪ್ರೀತಿಯಲ್ಲಿ ನಾನು ನನ್ನ ಬದುಕಿನ ಎಂತೆಂತಹ ಕ್ಷಣಗಳನ್ನು ಕಳೆದುಕೊಂಡೆ ಎಂಬುವುದನ್ನು ಒಂದೊಂದಾಗಿ ಯೋಚಿಸತೊಡಗಿದಾಗ ತಿಳಿಯಿತು. ಎಂತಹ ದಡ್ಡ ತಾನು ಎಂದು ಹೀಗೆ ಯೋಚಿಸುತ್ತಾ ಊಟಮಾಡದೆ ನಿದ್ದೆಗೆ ಜಾರಿದ ಇಡೀ ರಾತ್ರಿ ಆಕೆ ಹೇಳಿದ ಪ್ರತಿಯೊಂದು ಮಾತು ಅವನನ್ನು ಮಲಗಿಕೊಳ್ಳಲು ಬಿಡಲಿಲ್ಲಾ ಕಾಡುತ್ತಾ ಹೋದವು. ನಿದ್ದೆ ಹತ್ತಿತ್ತು ಆದರೆ ಅದರ ಸಂತೋಷ ಸವಿಯಲು ಸಾದ್ಯವಾಗಲಿಲ್ಲಾ. ಹಲವು ದಿನಗಳು ಕಳೆದವು ಆತನಲ್ಲಿ ಒಂದು ಚಿಕ್ಕ ಬದಲಾವಣೆ ಕಂಡಿತು ಅಂದು ರಾತ್ರಿಯ ಸಮಯ ಎದ್ದು ತಾನೊಂದು ಪುಸ್ತಕ ಹಿಡಿದು ಕುಳಿತು ಚಿಂತೆಗೆ ಒಳಗಾಗುತ್ತಾನೆ. ಅವನ ಕೈಯಲ್ಲಿ ಇದ್ದದ್ದು ಐ.ಎ.ಎಸ್. ಪುಸ್ತಕ ಅಬ್ಬಾ ಇಂತಹ ಪುಸ್ತಕ ಹೇಗೆ ಓದಿ ಮುಗಿಸುವುದು ಎಂಬ ಚಿಂತೆಯಲ್ಲಿ ದಿನಗಳನ್ನು ಕಳಿಯುತ್ತಾನೆ. ಅವನು ಅನುಭವಿಸಿದ ದಿನಗಳು ತಾನು ಕಂಡ ಅದ್ಭುತ ಕ್ಷಣಗಳೆಂದು ಬಣ್ಣಿಸುತ್ತಾ ಹೋಗುತ್ತಾನೆ ತನಗೆ ಅರಿವಿಲ್ಲದೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ. ಹೀಗೆ ದಿನಾಲು ಒಂದೊಂದು ಚಿಂತೆ ಮಾಡುತ್ತಾ. ಅವಳ ಮಾತು ನೆನಪಿಸುತ್ತಾ ಹೋಗುತ್ತಾನೆ. ತಾನು ಕೂಡಾ ತನ್ನ ತಂದೆ ತಾಯಿಗೆ ಏನಾದರು ಮಾಡಲೇಬೇಕು ಎನ್ನವು ಹಂಬಲಕ್ಕೆ ಒಳಗಾಗುತ್ತಾನೆ. ಅದರ ಪ್ರೇರಣೆಯೆ ಆತ ತನ್ನ ವಿದ್ಯಾಭ್ಯಾಸ ಮುಂದುವರೆಸುತ್ತಾನೆ. ಡಿಗ್ರೀ ಸರಿಯಾಗಿ ಪಾಸಾಗಿ ಮುಂದೆ ಐ.ಎ.ಎಸ್. ಪರೀಕ್ಷೆ ಬರೆಯಲು ಸಿದ್ಧನಾಗುತ್ತಾನೆ. ಅವನು ತನ್ನ ಜೀವನದ ಗುರಿಯನ್ನು ಬದಲಿಸಿಕೊಂಡಿದ್ದು ಗಮನಿಸಿ ತಂದೆ ತಾಯಿಗೆ ತುಂಬಾ ಖುಷಿಯಾಗುತ್ತದೆ. ಸತತ ಪರಿಶ್ರಮ ಮತ್ತು ವಿಚಾರಗಳಿಂದ ಆತ ತನ್ನ ಜೀವನದಲ್ಲಿ ಒಂದು ಸಾಧನೆ ಮಾಡಲೇಬೇಕು ಎಂದು ಧೈರ್ಯ ಮಾಡುತ್ತಾನೆ. ಅದರ ಫಲವೆ ವಿಶು ತನ್ನ ಐ.ಎ.ಎಸ್. ಪ್ರಥಮ ದರ್ಜೆಯಲ್ಲಿ ಪಾಸು ಮಾಡುತ್ತಾನೆ ತನ್ನ ಮನೆಗೆ ತಕ್ಕ ಮಗನಾಗುವುದರಲ್ಲಿ ಯಶಸ್ವಿಯಾಗುತ್ತಾನೆ. ಮುಂದೆ ಒಂದು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕವಾಗುತ್ತಾನೆ.

ಒಂದು ದಿನ ಮದ್ಯಾಹ್ನದ ಸಮಯ ಒಂದು ಚಿಕ್ಕ ಹಳ್ಳಿಯಿಂದ ಒಂದು ಕರೆ ಬರುತ್ತದೆ. ಆ ಕರೆ ಹೀಗಿರುತ್ತದೆ. “ ಸರ್ ನಮ್ಮ ಊರಿನಲ್ಲಿ ಏಡ್ಸ್ ನಿಂದ ಪೀಡಿತಾಳದ ಒಬ್ಬ ಮಹಿಳೆಗೆ ಕಿರುಕುಳದಿಂದ ಕೊಲೆ ಮಾಡಿದ್ದಾರೆ ಅವಳ ಸಾವಿಗೆ ನ್ಯಾಯ ಕೊಡಿ ಇದಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನೀವು ಬರದಿದ್ದರೆ ಈ ಹೋರಾಟ ಉದ್ರೇಕ್ಕಕ್ಕೆ ಒಳಗಾಗುತ್ತದೆ ಅದಕ್ಕಾಗಿ ನೀವು ಇಲ್ಲಿ ಬಂದು ನ್ಯಾಯ ದೊರಕಿಸಿ ಕೊಡಬೇಕು " ಎಂದರು. ತಕ್ಷಣವೆ ಹೊರಟ ಡಿ.ಸಿ. ಸಾಹೇಬರು ಘಟನೆಯ ಸ್ಥಳಕ್ಕೆ ಧಾವಿಸುತ್ತಾರೆ. ಅಲ್ಲಿ ಶವವನ್ನು ಇಟ್ಟು ಧರಣಿ ನಡೆದಿರುತ್ತದೆ. ಡಿ.ಸಿ.ಯವರು ಶವ ನೋಡುವುದಿಲ್ಲಾ. ಆದರೆ ಆ ಕೇಸ್ ನ ಫೈಲ್ನ್ನು ತರೆಸಿ ಓದಲು ಕುಳಿತಿರುತ್ತಾನೆ.

ಅದರ ಸಾರಾಂಶ ಹೀಗಿರುತ್ತದೆ. “ ತುಂಬಾ ಜಾಣೆಯಾದ ಈ ಹುಡುಗಿಯ ಮಲತಾಯಿ ಸೇರದೆ ಇರುತ್ತಾಳೆ. ಅಪ್ಪ ತನ್ನ ಅನೈತಿಕ ಚಟುವಟಿಕೆಯಿಂದ ಏಡ್ಸ್ ರೋಗಕ್ಕೆ ತುತ್ತಾಗಿರುತ್ತಾನೆ. ಅಲ್ಲದೆ ಆ ಮಾಹಾತ್ಮ ತನ್ನ ಮಗಳಿಗೆ ಈ ರೋಗವನ್ನೆ ಕೊಡುಗೆಯಾಗಿ ಕೊಡುತ್ತಾನೆ. ಅದನ್ನು ಹೊತ್ತು ಈ ಹುಡುಗಿ ಈ ರೋಗ ತನಗೆ ಇದೆ ಎಂಬ ಪರಿವೆ ಇಲ್ಲದೆ ತನ್ನ 20 ವರ್ಷದ ಜೀವನ ಕಳೆಯುತ್ತಾಳೆ. ತದನಂತರ ತಾನು ಬದುಕುವುದಿಲ್ಲಾ ತನ್ನ ಮಗಳಿಗೂ ಈ ರೋಗ ಹೋಗಿದೆ ತಿಳಿದು ತಂದೆ ಆತ್ಮ ಹತ್ತೆ ಮಾಡಿಕೊಳ್ಳುತ್ತಾರೆ. ಈಕೆ ತನ್ನ ಮಲತಾಯಿ ದೌರ್ಜನ್ಯ ಸಹಿಸಲಾಗದೆ, ಅವಳ ಜೀವನದಲ್ಲಿ ತುಂಬಾ ನೊಂದು ಹೋಗುತ್ತಾಳೆ . ಯಾರನ್ನು ಪ್ರೀತಿಸದೆ ತನ್ನ ಜೀವನವೆ ಸಾಗಿಸುತ್ತಾಳೆ. ತನ್ನ ಜೀವನದಲ್ಲಿ ಒಬ್ಬ ಹುಡುಗ ತನ್ನನ್ನು ಪ್ರೀತಿಸುತ್ತೀನಿ ಅಂದರೆ ಆಕೆ ಬೇಡಾ ಎಂದು ತಿರಸ್ಕರಿಸುತ್ತಾಳೆ . ಅವಳು ಮಾತ್ರ ತನ್ನ ವೇದನೆ ಯನ್ನು ಯಾರಿಗೂ ಹೇಳದೆ ಸಾಗುತ್ತಾಳೆ. ಅವಳ ಹೆಸರೆ ಸೌಮ್ಯ ರಾಮನಾಥನ್ " ಈ ಹೆಸರನ್ನು ಓದಿದ ತಕ್ಷಣ ಡಿ.ಸಿ.ಯವರಿಗೆ ತುಂಬಾ ದು:ಖವಾಯಿತು ಕಾರಣ ಸೌಮ್ಯ ತಾನು ಪ್ರೀತಿಸಿದ ಮೊದಲ ಹಾಗೂ ಕೊನೆಯ ಹುಡುಗಿ ಈಗ ಬೇಗನೆ ಆ ಶವವನ್ನು ನೋಡಲೇಬೇಕು ಎಂದು ಅದರತ್ತ ಧಾವಿಸುತ್ತಾನೆ. ಅಲ್ಲಿ ಸುಂದರವಾದ ಸೀರೆಯ ಮೇಲೆ ಮಲಗಿರುವ ಮಹಿಳೆ ಈಗತಾನೆ ಊಟವ ಮಾಡಿ ಮಲಗಿದ್ದಾಳೆ ಎಂಬ ಭಾವನೆ ಬರುತ್ತಿತ್ತು ಆಕೆಯ ಮುಖ ನೋಡದಿದ್ದರು. ಅವಳೊಬ್ಬ ದೊಡ್ಡ ಕನಸು ಕಂಡ ಒಬ್ಬ ಮಾಹಾನ್ ವ್ಯಕ್ತಿಯಂತೆ ಭಾಸವಾದಳು. ಈತ ಹತ್ತಿರ ಹೋದಾಗ ಎದೆ ಝಲ್ ಎನಿಸುವ ಸ್ಥಿತಿ ಅಲ್ಲಿತ್ತು ಅವಳು ಬೇರೆ ಯಾರು ಅಲ್ಲಾ ನಮ್ಮ ಡಿ.ಸಿ. ಸಾಹೇಬರು ತಮ್ಮ ಮೊದಲಿನ ಜೀವನದಲ್ಲಿ ಅತಿಯಾಗಿ ಪ್ರೀತಿಸಿ ಅವಳ ಮಾತಿನಿಂದ ಬದಲಾಗಿ ಇಂದು ಡಿ.ಸಿ. ಆಗಿದ್ದು ಬೆಳಕಿಗೆ ಬಂತು. ಅದನ್ನು ಅರಿತ ವಿಶು ತುಂಬಾ ಸಂಕಟ ಅನುಭವಿಸಿದ ಅವನ ಈ ವೇದನೆ ಯಾರಿಗೂ ಹೇಳದಂತಾಯಿತು. ಆತ ಒಬ್ಬ ಡಿ.ಸಿ. ಎಂಬುವುದ ಮರೆತು ಜೋರಾಗಿ ಅಳತೊಡಗಿದ. ಅವನ ಅಳುವನ್ನು ನೋಡಿ ನೆರದ ಜನ ಗದ್ಗದಿತರಾದರು. ಅವರೇಕೆ ಅಳುತ್ತಿರುವರು ಎಂಬ ಪ್ರಶ್ನೆ ಕಾಡಿತು. ತನ್ನ ದು:ಖ ತಾಳಲಾಗದೆ ತುಂಬಾ ವಿಚಿತ್ರವಾಗಿ ಅಳುತ್ತಾ ನಿಂತನು. . ಅವನ ಆಕ್ರಂಧನ ಮುಗಿಲ ಮುಟ್ಟಿತು. ಅವನ ಅಳುವನ್ನು ನೋಡಲು ಎರಡು ಕಣ್ಣು ಸಾಲದಂತಿತ್ತು . ಒಬ್ಬ ಡಿ.ಸಿ.ಯಾಗಿ ತಾನು ಇಂತಹ ಸ್ಥಿಯನ್ನು ನಾನು ಅವಳಿಗೆ ತೋರಿಸಬೇಕು. ಎಂದು ತಿಳಿದಿದ್ದೆ ಆದರೆ ನನಗೆ ಈ ಸ್ಥಿತಿಯು ಬಂತು ಎಂದರೆ ನೋವಾಯಿತು. ನಾನು ನನ್ನ ಜೀವನದಲ್ಲಿ ಅತಿದೊಡ್ಡ ವಿಷಯದ ನೋವು ಮಾಡಿಕೊಂಡೆ ಸುಮಾರು ದಿನಗಳು ಅವನು ಅವಳ ನೆನಪಲ್ಲೆ ಕಳಿಯುತ್ತಾನೆ. ಒಂದು ದಿನ ರಾತ್ರಿ ಕನಸು ಬೀಳುತ್ತದೆ. ಅದರ ಸಾರಾಂಶ ಹೀಗಿರುತ್ತದೆ. “ ವಿಶ್ವ ಇಂದು ನನಗೆ ತುಂಬಾ ಖುಷಿಯಾಯಿತು . ನಿನ್ನನ್ನು ಡಿ.ಸಿ. ರೂಪದಲ್ಲಿ ನೋಡಿ ಸಂತೋಷಗೊಂಡೆ ಇಂದು ನನ್ನ ಪ್ರೀತಿ ಸಾರ್ಥಕವಾಯಿತು ಅನಿಸುತ್ತಿದೆ. ಆದರೆ ನೀನು ಈಗ ಎಲ್ಲವು ಬಿಟ್ಟು ಕೂತಿರುವುದು ಸರಿಯಲ್ಲಾ ನೀನು ನಿನ್ನ ಜವಾಬ್ದಾರಿಯನ್ನು ನಿರ್ವಹಿಸು ನನ್ನ ಕಥೆ ನಿನಗೆ ಗೊತ್ತಾಗಿದೆ ಅಂತಾ ತಿಳಿದುಕೊಳ್ಳುತ್ತೀನಿ. ಅದಕ್ಕೆ ನೀನು ಮದುವೆಯಾಗಿ ಒಬ್ಬ ಉತ್ತಮ ಮಗುವನ್ನು ಈ ಸಮಾಜದಲ್ಲಿ ಮಾದರಿಯಾಗಿ ಮಾಡಬೇಕು.” ಎಂದಳು ಇಷ್ಟು ಕನಸು ಕಂಡ ವಿಶ್ವ ಎದ್ದು ಮುಂದೆ ತಾನು ತನ್ನ ಕೆಲಸ ಸರಿಯಾಗಿ ಮಾಡತೊಡಗಿದ ಮುಂದೆ ಅದರಂತೆ ಮುಂದುವರಿಯುತ್ತಾನೆ. ತನ್ನ ಅದೀನದಲ್ಲಿ ಬರುವ ಮಹಿಳೆಯ ರಕ್ಷಣೆ ಮಾಡಲು ಕಂಕಣಬದ್ಧವಾಗಿ ದುಡಿಯುತ್ತಾನೆ. ಮುದೊಂದು ದಿನ ವಿಶ್ವ ತನ್ನ ಮಗಳು ಮಡದಿಯೊಂದಿಗೆ ಜಿವನ ನಡೆಸುತ್ತಾನೆ . ಮನೆಯ ಸಂದರ್ಭದಲ್ಲಿ ಅವರ ಮಗಳು ಆಡುತ್ತಾ ಅಲ್ಲಿಯೆ ನೇತು ಹಾಕಿದ್ದ ಫೋಟು ನೋಡಿ ಅವನ ಮಗಳು ಕೇಳಿದ್ದು ಹೀಗೆ. “ ಅಪ್ಪಾ ಆ ಫೋಟುದಲ್ಲಿರುವರು ಯಾರು ?” ಅಂತಾ ವಿಶುನ ಮಗಳು ಸೌಮ್ಯ ಕೇಳುತ್ತಾಳೆ ಅದಕ್ಕೆ ಉತ್ತರ ವಿಶು ಹೇಳಿದ್ದು " ಅವಳು ನನ್ನ ಜೀವನ ಬದಲಿಸಿದ ತಾಯಿ ಅವಳು ಕೂಡಾ ನಿನ್ನಂತೆ ಸೌಮ್ಯ ಎಂದನು. ಏಕೆಂದರೆ ಅವಳು ನನ್ನ ಬದುಕಿನಲ್ಲಿ ಬಾರದಿದ್ದರೆ ಇಂದು ನಿಮ್ಮಪ್ಪ ಡಿ.ಸಿ. ಅಲ್ಲಾ ಎಲ್ಲೊ ಮೂಲೆಯಲ್ಲಿ ಕಾಲ ಕಳಿಯುತ್ತಿದ್ದ. ಎಲ್ಲವು ಅವಳು ಕೊಟ್ಟ ಜೀವನ ಭಿಕ್ಷೆ ಅಷ್ಟೆ .

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):