ಉದರ ನಿಮಿತ್ತಂ ಬಹುಕೃತ ವೇಷಂ!!.

4.666665

ಇತ್ತೀಚಿಗೆ ನಡೆದ ಘಟನೆ, ನಾನು ನನ್ನ ಖಾಸಗಿ ಸಂಸ್ಥೆ ಇಂದ ಎರಡು ದಿನಗಳ ರಜೆ ಪಡೆದು ಮನೆಯಲ್ಲಿಯೇ ಉಳಿದುಕೊಂಡಿದ್ದೆ. ಏಕಾಂತದಲ್ಲಿ ಏನಾದರು ಮಾಡೋಣವೆಂದರೆ ಹೀಗೆ ಬೇಜಾರು ( ಸೋಮಾರಿತನ). ನಿದ್ದೆ ಇಂದ ಎದ್ದವನೇ ನನ್ನ ಕಾರ್ಯಕ್ರಮಗಳೆಲ್ಲವ ಮುಗಿಸಿ, ಸಂಜೆ ಕೃಷ್ಣರಾಜಪುರಂ ಗೆ ಹೋಗಿ ಗಡದ್ದಾಗಿ ತಿನ್ನೊನ್ವೆಂದು ಆಲೋಚಿಸಿ, ಮಲಗಿದ್ದಲಿಗೆ ಮರಳಿ ಬಂದು ಮಲಗಿದೆ, ಸಂಜೆ ಎದ್ದೊಡನೆ, ಹಸಿದ ಹೊಟ್ಟೆಯಲಿ ಆತುರಾತುರವಾಗಿ ರೆಡಿಯಾಗಿ ಹೊರಬಂದೆ. ಬಸ್ ಬರದ ಕಾರಣ ಸಮೀಪದ ರಸ್ತೆಯಲ್ಲಿ ಸಿಗರೇಟ್ ಹೊತ್ತಿಸೋಣವೆಂದು ಹೊರಟೆ, ಅಲ್ಲೇ ಬದಿಯ ರಸ್ತೆಯಲ್ಲಿ ಒಂದು ಚಿಕ್ಕ ಮನೋರಂಜನಾ ಕಾರ್ಯಕ್ರಮ ನಡೆದಿತ್ತು ಸ್ವಲ್ಪ ಹೊತ್ತು ಅಲ್ಲಿ ನಿಂತು ವೀಕ್ಷಿಸಿದೆ. ತಂದೆ ಮಕ್ಕಳಿಬ್ಬರು ನೃತ್ಯ ಮಾಡುತ್ತಿದರು ( ಕುಚ್ಚಿಕೂ ಕುಚಿಕ್ಕೂ ಹಾಡಿಗೆ) ಹಾಗೆ ನೋಡುತಿದ ನನಗೆ ಅವರ ಮುಖಭಾವ ಕಂಡು ಒಂದು ರೀತಿಯ ಸಂಕಟವಾಯಿತು. ಇನ್ನು ನಾನು ವ್ಯಥೆ ಪಡೋದು ಬೇಡವೆಂದುಕೊಳ್ಳುವಷ್ಟರಲ್ಲಿ , ನೃತ್ಯವಾದುತ್ತಿದ ಆತನೊಂದಿಗೆ ಒಂದು ಹೆಣ್ಣು ಮಗಳು ಸೇರ್ಪಡೆಯಾದಳು, ಆ ಹೆಣ್ಣುಮಗಳು ಬಂದೊಡನೆಯೇ ಶಿಳ್ಳೆ ಕೇಕೆ ಜಾಸ್ತಿಯಾಯಿತು, ಈ ಸಂದರ್ಭದಲ್ಲಿ ನನಗೆ ನೆರೆದಿದ್ದವರ ಮೇಲೆ ಅಸಹ್ಯವೆನಿಸಿತು, ಈ ಸಂಗೀತದ ನಡುವೆ ಆ ತಂದೆ ಅಥವಾ ಮತ್ಯಾರೋ ! ದಾನವನ್ನ ಅಪೇಕ್ಷಿಸುತ್ತಿದ! ನೆರೆದಿದ್ದರಲ್ಲೋಬ್ಬನು ದಾನ ಮಾಡಲು ಮುಂದಾಗಲಿಲ್ಲ. ದೀನನಾಗಿ ಆತ ಕೇಳಿಕೊಳ್ಳುತ್ತಿದರು ಯಾರ ಮನಕರಗಲಿಲ್ಲ, ಅಲ್ಲೊಬ್ಬ ಇಲ್ಲೊಬ್ಬ ೧೦,೫ ರೂ ಕೊಟ್ಟು ಕೃತಾರ್ಥರಾಗುತ್ತಿದರು.. ವಯಸಿನರಿವಿಲ್ಲದ ಮಗಳವಯಸ್ಸಿನ ಹೆಣ್ಣು ಮಗಳೊಬ್ಬಳು ಬೀದಿಯಲ್ಲಿ ನೃತ್ತ್ಯಮಾದುತ್ತಿರೆ, ಮನಸಿಗಾಯಸ್ಸಗದ ಮಹಾನುಭಾವರು ಅಂಗಾಗಳ ವರ್ಣಿಸುತ್ತಿದ್ದರು.
ಮೂಕ ಪ್ರೇಕ್ಷಕನಂತೆ ನೋಡುತಿದ್ದ ನನ್ನ ಮಸ್ತಕಕ್ಕೆ ಮನಸಾಕ್ಷಿಯ ಆದೇಶವಾಗಿ ಅದರಾಣತಿಯಂತೆ ಕೈಲಾದ ಸಹಾಯವನ್ನಿತ್ತು ಅಲ್ಲಿಂದ ಕಾಲ್ಕಿತ್ತೆ, (ಮನ: ಸಂತ್ರುಪ್ತಿಯಾಗಲಿಲ್ಲ. ) ದೂರದಲ್ಲಿ ಹೊಗಳುತ್ತಿದ ಮಾತುಗಳು ಕೇಳುತ್ತಿದವು..
ಮನಸಿನಲ್ಲಿ ಕಂಡ ದೃಶ್ಯಗಳೇ ಮರುಕಳಿಸುತ್ತಿದವು,! ಹಸಿವಿನ ಒದ್ದಾಟ, ಅವಮಾನ, ಬಡತನ ಒಂದೆಡೆಯಾದರೆ!
ತೆವಲಿನ ಸಂಕಟ ಇನ್ನೊಂದೆಡೆ.
ಹಸಿವಿನ ಎರಡು ಮುಖಗಳ ಅವಲೋಕನ ನಡೆಸಿ ನನಗೆ ನಾನೇ "ಉದರ ನಿಮಿತ್ತಂ ಬಹುಕೃತ ವೇಷಂ" !! ಎಂದುಕೊಳ್ಳುತ್ತ ಊಟಕ್ಕೆ ಮುನ್ನಡೆದೆ.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹರೀಶ ಶರ್ಮರಿಗೆ ವಂದನೆಗಳು ' ಉದರ ನಿಮಿತ್ತಂ ಬಹುಕೃತ ವೇಷಂ' ಸರಳವಾದ ಬಹಳ ಚಿಂತನೆಗೆ ಹಚ್ಚುವಂತಹ ಲೇಖನ. ತಮ್ಮ ಹೊಟ್ಟೆಪಾಡಿಗಾಗಿ ಡೊಂಬರಾಟ, ದುರಗ ಮುರಗಿಯವರ ವಿಶೇಷವಾಗಿ ಹೆಣ್ಣುಮಕ್ಕಳನ್ನು ಎಲ್ಲರಲ್ಲದಿದ್ದರೂ ಕೆಲವರು ನೋಡುವ ದೃಷ್ಟಿ ಮತ್ತು ಅವರ ಕುರಿತು ಆಡುವ ಮಾತುಗಳು ಬೇಸರ ತರಿಸುತ್ತವೆ ಮೇಲಾಗಿ ವಿಷಾದವನ್ನು ಹುಟ್ಟಿಸುತ್ತವೆ. ನಿಮ್ಮ ಲೇಖನದ ಹೆಣ್ಣುಮಗಳ ಬಗ್ಗೆ ನನ್ನ ಅನುಕಂಪವಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 ಆ ತರಹದ್ದು ನಾ ಸಹಾ ಅಲ್ಲಲ್ಲಿ ನೊಡೀರುವೆ... ಆ ರಿತಿ ನ್ರುತ್ಯ ಬದಲಿಗೆ ಯಾವುದಾರ ಒಳ್ಳೇ ಉದ್ಯೊಗ ಮಾಡಬಹುದಲ.. ಮನಸಿಗೆ ಬೆಜಾರಾಯ್ತು... ಇನ್ನು ಆ ಜನರ ಬಗ್ಗೆ ಎನು ಹೆಳೊದು?.. ((( \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಹನುಮಂತ ಅನಂತ ಸಪ್ತಗಿರಿವಾಸಿ ರವರೆ! ತಿಂಗಳ ನಂತರ ಸಂಪದಕ್ಕೆ ಹಿಂದಿರುಗಿದ್ದೇನೆ, ಸ್ವಾಗತ ಇಲ್ವಾ ???????
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಹನುಮಂತ ಅನಂತ ಪಾಟೀಲರವರೆ! ಪರಪಂಚವೆ ಹಾಗಿದೆ, ದೃಷ್ಟಿ ಎಲ್ಲರದು ಒಂದೇ! ಆದರೆ ದೃಷ್ಟಿ ಕೋಣ ಬೇರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.