||ಉಸುಕಿನ ಗಡಿಯಾರ||

||ಉಸುಕಿನ ಗಡಿಯಾರ||

ಕವನ

||ಉಸುಕಿನ ಗಡಿಯಾರ||

ಪಾಂಡಿತ್ಯ ತರ್ಕಗಳ ವ್ಯಾಕರಣ ವ್ಯಾಖ್ಯೆಗಳ-

ಸೋಗಿನಲಿ ಸಮಯವಾ ಬಿತ್ತಿ ಬಿಗಿದು |

ಅರಿಯದಾ ಸತ್ವವನು ಅರಿಯಲೆಂದೆಣಿಸದೆಯೆ...

ಪುಸ್ತಕದ ಹುಳುವಾಗಿ ಬದುಕಲೆಂತು ?||

ರೇಣುರೇಣುವಿನಿಂದೆ ಕ್ಷಣವುರುಳೆ ಬಾಳಿನಲಿ...

ಜಗವುರುಳುವುದಂತ್ಯದೆಡೆ ಬಾಳ ಪಥದಿ |

ಬದುಕು ಎಂಬುವುದೊಂದು ಉಸುಕಿನಾ ಗಡಿಯಾರ...

ಕಾಯದೆಯೆ ಕರಗುವುದು ಕಾಲವುರುಳೆ ||

ಕನಸಿನೋಪಾದಿಯೆಂದವಗಹಿಸಿ ಲೋಕವನು.

ಪಂಕಜದಎಲೆಮುತ್ತಿನಂತ್ತಾಗಿಸಿ  |

ಪರಮ ತತ್ವವನರಿಯೆ ಜೇವಿತವ ಸವೆಸಲ್ಕೆ....

ಮತಿಯ ಸಾಣೆಯ ಹಿಡಿದು ದಾರಿ ತೋರಿ...||

ಕಾಣದಾಸತ್ಯವನು ಕಣ್ಣರಿತ ಕುರುಡನಿಗೆ...

ತಿಳಿಯಲಾದಿಯ ತೊರಿ ಮರಳಿಪುಟಿಸಿ...|

ಶಾಶ್ವತದ ಅರಿವಿತ್ತು ಆತ್ಮದೇಪವಬೆಳಗಿ

ಆ ಪೂರ್ಣತೆಯ ಸವಿಯುಣಿಸಿ ಸಲಹು ಗುರುವೆ ||

ಚಿತ್ರ್