ಎಂದೂ ಇಷ್ಟವಾಗದ ಅಪ್ಪ !

Submitted by rjewoor on Sat, 06/18/2016 - 19:52
ಬರಹ

ನನ್ನಪ್ಪ. ಪ್ರಶಾರ್ಥಕ ಚಿನ್ಹೆ.
ಇದು ಸತ್ಯ. ಸುಳ್ಳಲ್ಲ.
ನನ್ನ ಒಳಿತಿಗೆ ಪ್ರಶ್ನೆ ಕೇಳ್ತಾನೆ.
ನನಗೆ 38. ಅಪ್ಪನಿಗೆ 84
ಇದು ನಮ್ಮಿಬ್ಬರ ವಯಸ್ಸು.
ಅಪ್ಪನ ದೇಹ ಕ್ಷಿಣಿಸುತ್ತಿದೆ.
ನನಗೆ ಅಪ್ಪನಲ್ಲಿ ಎಂದೂ ಹುಟ್ಟದ
ನನ್ನ ಮಗ ಕಾಣಿಸುತ್ತಿದ್ದಾನೆ.

ಅರಳು ಮರಳು. ಅದು ನನ್ನಪ್ಪನ
ಹತ್ತಿರವೂ ಸುಳಿದಿಲ್ಲ. ಸುಳಿಯೋ
ಲಕ್ಷಣಗಳೂ ಇಲ್ಲ. ಸ್ಟ್ರಾಂಗ್ ಮೆಮರಿ
ನನ್ನಪ್ಪನದು. ಆದರೂ ಮತ್ತೆ ಮತ್ತೆ
ಅದೇ ಪ್ರಶ್ನೆ. ನನ್ನಿಂದ ಅದೇ ಉತ್ತರ

ನಾನು ನನ್ನದಲ್ಲದ ಊರಲ್ಲಿ.
ಆತ ನಾನು ಹುಟ್ಟಿದ ಊರಲ್ಲಿ.
ನನ್ನ ನಿರೀಕ್ಷೆಯಲ್ಲಿ. ಸಿಗದ ಕೆಲಸ.
ಇಡೇರದ ಕನಸುಗಳ ಬೆನ್ನಟ್ಟಿ, ಇಲ್ಲಿ
ಬಂದಾಗಿದೆ. ಅಪ್ಪ ನನ್ನ ನಿರೀಕ್ಷೆ
ಯಲಿದ್ದಾನೆ.

ಸದಾ ಕೇಳೋದು ಒಂದೇ.
ಯಾವಾಗ ಇಲ್ಲಿಗೆ ಬರ್ತೀ ಅಂತ.
ನನ್ನಪ್ಪ ನನಗೋಸ್ಕರ ಕಾಯ್ತಿದ್ದಾರೆ.
ಹೋಗಬೇಕು. ಅವನು
ಹೋಗೋ ಮುನ್ನ.

ಅವನ ಜಾಗ ತುಂಬಲು.
ಅಪ್ಪ  ನೀ ನನಗಿಷ್ಟ. ಈಗ
-ರೇವನ್

ಚಿತ್ರ್