ಒಂದು ಗಝಲ್
ಕವನ
ಹೊಸನಾಡ ಕಟ್ಟಲು ಹೊರಡುವೆವು ನಾವಿಂದು
ಸ್ವಾರ್ಥತೆಯ ಕೆಡವುತಲಿ ಬಾಳುವೆವು ನಾವಿಂದು
ಜೀವಿಗಳ ಹಿತಕೆ ಒಂದೆನುತ ಹೋಗೋಣವಲ್ಲವೇ
ಒಲುಮೆಯಾ ಉಳುಮೆಗೆ ನಡೆಯುವೆವು ನಾವಿಂದು
ಜಗದೊಳಗಿನ ಜನರ ಸಮತೆಯನು ಸಾರೋಣ
ಪ್ರಗತಿಯಾಳದ ಜೊತೆಗೆ ಬೆಳೆಯುವೆವು ನಾವಿಂದು
ತಾರತಮ್ಯದ ಗೆಲುವು ಬೇಡವದು ಹೇಳೋಣ
ನೆಮ್ಮದಿಯ ಬದುಕಲ್ಲಿ ನಲಿಯುವೆವು ನಾವಿಂದು
ನನ್ನದೆನುವುದ ಮರೆತು ಕೂಡಿ ಬಾಳೋಣ ಈಶಾ
ಪಯಣದೊಳು ಸವಿಯಾಗಿ ಸಾಗುವೆವು ನಾವಿಂದು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
