ಒಂದು ಹಿಡಿ ಕ್ಷಣಗಳು...

ಒಂದು ಹಿಡಿ ಕ್ಷಣಗಳು...

ಬರಹ

ನಿನ್ನ ಕಣ್ಣುಗಳಲ್ಲಿ
ನನಗೆ ನಾನು ಮತ್ತೊಮ್ಮೆ ಪರಿಚಯವಾಗ್ತೀನಿ

ನಿನ್ನ ನಾನು ಅಪ್ಪಿಕೊಂಡಾಗ
ಮಾಯವಾಗಿಹೋದ ನನ್ನ ಮೂಲಗಳ
ಜಾಡೆ ಸಿಕ್ಕಿದಹಾಗೆ ಆಗತ್ತೆ

ನೀನು ನನ್ನ ತಾಕಿದಾಗ
ಪ್ರಕೃತಿ ಮೊದಲು ದಿನಗಳ
ಬೆಚ್ಚಗಿನ ಭಾವ ಪ್ರಸಾರವಾಗತ್ತೆ

ನಿನ್ನ ನಗು
ಶಬ್ದಕ್ಕ, ನಿಶ್ಶಬ್ದಕ್ಕೆ ವಾರಧಿಯನ್ನು ಕಟ್ಟೆತ್ತೆ
ನಾನು ಪ್ರವಹಿಸುತ್ತಾ ಹೋಗುತ್ತೀನೆ!

ಆಗ
ಸಮುದ್ರ ನದಿಯಲ್ಲಿ ಲೀನವಾಗತ್ತೆ!