ಒಲವಿನ ಒರತೆ ಬತ್ತದಿರಲಿ

4

 ನೋವಿನಲ್ಲಿ ನಲಿವು

     ದುಃಖದಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಸ್ಪಂದಿಸುವವರನ್ನು ನೆನೆಸಿಕೊಳ್ಳಬೇಕು. ಸುಖವಾಗಿದ್ದಾಗ, ಸಮೃದ್ಧಿಯಾಗಿದ್ದಾಗ ಜೊತೆಗಿದ್ದವರೆಲ್ಲಾ ನಮ್ಮ ಕಷ್ಟಕ್ಕೆ, ದುಃಖಕ್ಕೆ ಸ್ಪಂದಿಸುತ್ತಾರೆಂದು ಹೇಳುವಂತಿಲ್ಲ. ಪ್ರತಿಯೊಬ್ಬರಲ್ಲೂ ಒಳ್ಳೆಯ, ಕೆಟ್ಟ ಗುಣಗಳು ಇರುತ್ತವೆ. ಒಳ್ಳೆಯ ಗುಣಗಳು ಹೊರಹೊಮ್ಮಿದಾಗ ಮಾತ್ರ ಅವರು ನಮಗೆ ಪ್ರಿಯರಾಗುತ್ತಾರೆ. ಇತ್ತೀಚಿನ ಎರಡು ಘಟನೆಗಳು ನನಗೆ ನೆನಪಿಗೆ ಬರುತ್ತಲೇ ಇರುತ್ತವೆ.

ಘಟನೆ -೧: 

ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ!

     ಅಂದು ನನ್ನ ಮನಸ್ಸಿಗೆ ನೋವಾಗುವಂತಹ ಘಟನೆ ನಡೆದಿತ್ತು. ಅದನ್ನು ತಪ್ಪಿಸಲಾಗಲೀ, ತಡೆಯಲಾಗಲೀ ನನಗೆ ಆಗಿರಲಿಲ್ಲ. ನನ್ನ ಕೈಮೀರಿದ ವಿಷಯವಾಗಿದ್ದರೂ ವೈಯಕ್ತಿಕವಾಗಿ ನನ್ನ ತಪ್ಪಿಲ್ಲದಿದ್ದರೂ ಅಂತಹ ಪ್ರಸಂಗಕ್ಕೆ ನಾನು ಹೊಣೆ ಹೊರಬೇಕಿತ್ತು. ದೂಷಿಸಲು ಯಾರಾದರೂ ಬೇಕಿತ್ತು. ಅದು ನಾನೇ ಅಗುವ ಎಲ್ಲಾ ಸಂಭವವೂ ಇತ್ತು. ನನಗೆ ತಡೆಯಲಾಗದಷ್ಟು ದುಃಖವಾಗಿತ್ತು. ಯಾರಿಗೂ ಕಾಣದಂತೆ ಹೊರಗೆ ಹೋಗಿ ಗಿಡದ ಮರೆಯಲ್ಲಿ ನಿಂತು ಕಣ್ಣು ಒರೆಸಿಕೊಳ್ಳುತ್ತಿದ್ದೆ. ನನ್ನ ತಮ್ಮನ ಮಗ ಅದನ್ನು ಗಮನಿಸಿ (ಬಹುಷಃ ಆತ ನನ್ನನ್ನು ಮೊದಲಿನಿಂದ ಗಮನಿಸುತ್ತಿದ್ದಿರಬೇಕು) "ದೊಡ್ಡಪ್ಪ, ಬನ್ನಿ, ಕರೆಯುತ್ತಿದ್ದಾರೆ"ಎಂದು ಕರೆದ. ಯಾರೂ ನನ್ನನ್ನು ಕರೆದಿರಲಿಲ್ಲ. ಅವನು ಅಂದು ಸಾಯಂಕಾಲ ನನ್ನನ್ನು ಕಾರಿನಲ್ಲಿ ಬಸ್ ನಿಲ್ದಾಣಕ್ಕೆ ಬಿಡಲು ಬಂದವನು ನಾನು ಮೌನವಾಗಿದ್ದುದನ್ನು ಗಮನಿಸಿ ನನ್ನ ತೊಡೆಯ ಮೇಲೆ ಕೈಯಿಟ್ಟು "ದೊಡ್ಡಪ್ಪ, ಚಿಂತೆ ಮಾಡಬೇಡಿ, ನಾನು ನಿಮ್ಮೊಂದಿಗಿದ್ದೇನೆ" ಎಂದು ಹೇಳಿದ್ದು ಅವನ ಹೃದಯದಿಂದ ಬಂದ ಮಾತಾಗಿತ್ತು. ಬಿರುಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿ ಗಂಟಲು ಒಣಗಿದ್ದವನಿಗೆ ಶೀತಲ ತಂಗಾಳಿ ಸೋಕಿದ ಅನುಭವವಾಗಿತ್ತು. ಕಣ್ಣಂಚಿನಿಂದ ಜಿನುಗಿದ ನೀರು ಒರೆಸಿಕೊಂಡೆ.

ಘಟನೆ -೨:

ಸಮಾಧಾನ ಮಾಡಿಕೋ, ತಾತ!

     ಬೆಂಗಳೂರಿನಲ್ಲಿ ಎಲ್.ಕೆ.ಜಿ.ಯಲ್ಲಿ ಓದುತ್ತಿರುವ ನಾಲ್ಕು ವರ್ಷದ ನನ್ನ ಮೊಮ್ಮಗಳು ಅಕ್ಷಯಳಿಗೆ  ರಜ ಕೊಟ್ಟಾಗ ಕೆಲವು ದಿನ ನಮ್ಮೊಡನೆ ಇರಲಿ ಎಂದು ಹಾಸನಕ್ಕೆ ಕರೆದುಕೊಂಡು ಬಂದಿದ್ದೆ. ಅವಳಿಗೂ ಖುಷಿಯಾಗಿತ್ತು. ದಿನ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ದಿನವೆಲ್ಲಾ ಅವಳೊಂದಿಗೆ ಆಡಬೇಕು, ರಾತ್ರಿ ಮಲಗುವ ಮುನ್ನ ೩-೪ ಕಥೆಗಳನ್ನಾದರೂ ಹೇಳಬೇಕು, ಆನಂತರವೇ ಅವಳು ಮಲಗುತ್ತಿದ್ದುದು. ನನಗೆ ಆಗಾಗ್ಗೆ ಮಧ್ಯರಾತ್ರಿಯಲ್ಲಿ ಉಸಿರಾಟದ ತೊಂದರೆ ಉಂಟಾಗುತ್ತಿತ್ತು. ಗಂಟಲಿನ ಹತ್ತಿರ ತಡೆಯುಂಟಾಗಿ ಉಸಿರನ್ನು ಒಳಕ್ಕೆ ಎಳೆದುಕೊಳ್ಳುವುದು, ಬಿಡುವುದಕ್ಕೆ ಹರಸಾಹಸ ಪಡಬೇಕಾಗುತ್ತಿತ್ತು. ಹೀಗಾದಾಗ ಧಡಕ್ಕನೆ ಎಚ್ಚರವಾಗಿ ಪರದಾಡಿಬಿಡುತ್ತಿದ್ದೆ. ಗಡಬಡಿಸಿ ಓಡಾಡುವುದು, ಹಾಗೂ ಹೀಗೂ ಸ್ವಲ್ಪ ಗಾಳಿ ಒಳಕ್ಕೆ ಹೋದಾಗ ಸುಧಾರಿಸಿಕೊಂಡು ನೀರು ಕುಡಿಯುವುದು, ಮೈಮೇಲಿನ ಷರ್ಟು, ಬನಿಯನ್‌ಗಳನ್ನು ಕಳಚಿ ಹಾಕಿ, ಎದೆ, ಗಂಟಲುಗಳಿಗೆ ವಿಕ್ಸ್ ಹಚ್ಚಿಕೊಂಡು ಹತ್ತು ನಿಮಿಷ ಜೋರಾಗಿ ಫ್ಯಾನು ಹಾಕಿಕೊಂಡು ಓಡಾಡಿದ ನಂತರ ಸಮಾಧಾನವಾಗಿ ಮಲಗಲು ಸಾಧ್ಯವಾಗುತ್ತಿತ್ತು. ಒರಗು ದಿಂಬು ಇಟ್ಟುಕೊಂಡು ಒರಗಿ ಕುಳಿತುಕೊಂಡ ಸ್ಥಿತಿಯಲ್ಲಿ ಮಲಗುತ್ತಿದ್ದೆ. ಒಂದು ದಿನ ನನ್ನ ಅಂತ್ಯ ಹೀಗೇ ಆಗುತ್ತದೆಯೇನೋ ಎಂದು ಎಷ್ಟೋ ಸಲ ನನಗೆ ಅನ್ನಿಸುತ್ತಿತ್ತು, ಮೊಮ್ಮಗಳು ಬಂದು ನಾಲ್ಕು ದಿನವಾಗಿತ್ತು. ಅಂದು ರಾತ್ರಿ ಕಥೆ ಕೇಳಿ ಅವಳು ಮಲಗಿದಾಗ ರಾತ್ರಿ ಹನ್ನೊಂದು ಹೊಡೆದಿತ್ತು. ರಾತ್ರಿ ಸುಮಾರು ೧೨-೩೦ರ ಹೊತ್ತಿಗೆ ನನಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಧಡಕ್ಕನೆ ಎದ್ದ ರಭಸಕ್ಕೆ ನನ್ನ ಪಕ್ಕ ಮಲಗಿದ್ದ ಮೊಮ್ಮಗಳಿಗೂ ಎಚ್ಚರವಾಯಿತು. ನನ್ನ ಪತ್ನಿ ಮೊಮ್ಮಗಳ ಆಟ, ಊಟಗಳ ಜೊತೆಗೆ ಹಬ್ಬದ ಕೆಲಸ, ಮನೆಕೆಲಸ ಕಾರ್ಯಗಳನ್ನೂ ಮಾಡಿ ಸುಸ್ತಾಗಿ ಮಲಗಿದ್ದು ಅವಳಿಗೆ ಎಚ್ಚರವಾಗಲಿಲ್ಲ. ಮೊಮ್ಮಗಳು ಎದ್ದು ಕುಳಿತು "ಏನಾಯಿತು, ತಾತ, ಸಮಾಧಾನ ಮಾಡಿಕೋ ತಾತ, ನೀರು ಕೊಡಲಾ, ಹಾಲು ಕುಡೀತೀಯಾ" ಎಂದು ವಿಚಾರಿಸಿದಾಗ ನನಗೆ ಹೃದಯ ತುಂಬಿ ಬಂತು. ಎದ್ದಿದ್ದ ರಭಸಕ್ಕೆ ನನಗೆ ಸ್ವಲ್ಪ ಉಸಿರಾಡಲು ಅನುಕೂಲವಾಯಿತು. ಇಟ್ಟುಕೊಂಡಿದ್ದ ನೀರು ಕುಡಿದೆ. ಮೊಮ್ಮಗಳು ನನ್ನ ಎದೆ, ಬೆನ್ನು ಸವರುತ್ತಿದ್ದಳು. ಅವಳನ್ನು ಬಾಚಿ ತಬ್ಬಿಕೊಂಡೆ. ಅವಳೂ ನನ್ನ ತಲೆ ಸವರಿ ನನ್ನ ಕೆನ್ನೆಗೆ ಮುತ್ತು ಕೊಟ್ಟಾಗ ನಾನು ನಿಜಕ್ಕೂ ಧನ್ಯನಾಗಿದ್ದೆ. ನನಗೆ ಸಮಾಧಾನವಾಗಿತ್ತು. ನಾನು ದಿಂಬಿಗೆ ಒರಗಿದಂತೆ ಮಲಗಿದಾಗ ಅವಳೂ ನನ್ನನ್ನು ಒರಗಿಕೊಂಡೇ ನಿದ್ದೆ ಮಾಡಿದ್ದಳು. ಏನೂ ಅರಿಯದ ನಾಲ್ಕು ವರ್ಷದ ಪುಟಾಣಿ ತೋರಿದ ಮಮತೆಯನ್ನು ನಾನು ಹೇಗೆ ಮರೆಯಲಿ?

 

 

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅದಕ್ಕೆ ಅಲ್ಲವೇ ಮಕ್ಕಳನ್ನು ದೇವರಿಗೆ ಹೋಲಿಸುವುದು, ಮನಸ್ಸು ದುಃಖದಲ್ಲಿರುವಾಗ ಮಕ್ಕಳಿಂದಲೆ ದುಃಖ ಮರೆಯಾಗುತ್ತದೆ. ನಿಮಗೆ ಶ್ರೀನರಸಿಂಹ ಸಂತೋಷ, ಆರೋಗ್ಯ ದಯಪಾಲಿಸಲಿ ಎಂದು ಕೇಳಿಕೊಳ್ಳುತ್ತೇನೆ. .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮನದುಂಬಿದ ಅನುಭವ ನನ್ನದು. ಧನ್ಯವಾದ, ಸತೀಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜಾ ಸರ್ ನಮ್ಮ ಕಷ್ಟಕಾಲದಲ್ಲಿ ಯಾರು ನಮ್ಮಗೆ ಆಗುವರೋ ಅವರೆ ನಿಜವಾದ ಬ0ಧುಗಳು.ಈ ಲೇಖನವನ್ನ ಓದುವಾಗ ನನಗರಿವಿಲ್ಲದೆ ಕನ್ನ0ಚಿನಿ0ದ ಕ0ಬನಿ ಹೊರಬಿದ್ದಿತು. ನಿಮ್ಮ ಮೊಮ್ಮಗಳಿಗೆ ಹ್ಯಾಟ್ಸ್ ಆಫ್. ದೇವರು ನಿಮ್ಮನ್ನ ಯಾವಾಗಲೂ ಸುಖವಾಗಿಡಲೆ0ದು ಪ್ರಾರ್ಥಿಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೊಮ್ಮಗಳ ಪ್ರೀತಿ ನನ್ನನ್ನು ಸುಖವಾಗಿರಿಸಿದೆ. ಶುಭಕಾಮನೆಗೆ ವಂದನೆ, ಸುಮಂಗಲಾರವರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಾಗುವ ವಯಸ್ಸಲ್ಲದಿದ್ದರೂ ತನ್ನ ಪ್ರೀತಿಯ ತಾತನಿಗೆನೋ ತೊಂದರೆಯಾಗಿದೆ.. ಎಂಬುದು ಪುಟ್ಟ ಕರುಳು ಅರಿತಿದೆ. ತನಗೆ ತೋಚಿದ, ಗೊತ್ತಿದ್ದ ಮಾತುಗಳನ್ನಾಡಿದ್ದು ಓದಿದಾಗ ನನಗೆ ಅವಳು ಪುಟ್ಟ ಕಂದ ಎಂಬ ಭಾವನೆ ಬರಲೇ ಇಲ್ಲ. ನನಗನ್ನಿಸಿದ್ದು ಆ ಕ್ಷಣ ಒಬ್ಬ ತಾಯಿಯಾಗಿದ್ದಳು ಎಂದು. ಆ ರೀತಿಯ ಸಾಂತ್ವನ, ಅಕ್ಕರೆಯ ಧಾರೆ ತಾಯಿಯಿಂದ ನಿಮ್ಮೆಡೆಗೆ ಹರಿದಿತ್ತು. ನಿಜಕ್ಕೂ ನೀವು ತುಂಬಾ ಧನ್ಯರು ಸಾರ್. ಓದಿದ ನಾವೂ ಧನ್ಯರೆ... ಧನ್ಯವಾದಗಳು ಮತ್ತು ನಿಮ್ಮ ಪುಟ್ಟ ಮೊಮ್ಮಗಳಿಗೆ ದೇವರು ಒಳ್ಳೆಯದು ಮಾಡಲೆಂದು ಪ್ರಾರ್ಥಿಸುವೆ... ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೋವಿನಲ್ಲಿದ್ದಾಗ ಬರುವ ಸಾ೦ತ್ವನದ ಮಾತುಗಳು ನಿಜಕ್ಕೂ ಎ೦ದಿಗೂ ಮರೆಯಲಾಗದ೦ಥವು! ನಿಮ್ಮ ಎರಡೂ ಅನುಭವಗಳು, ಅಲ್ಲಿನ ಪಾತ್ರಗಳು, ಚಿರನೂತನವಾಗಿರುತ್ತವೆ ನಿಮ್ಮ ನೆನಪಿನಲ್ಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಂಜು ಮತ್ತು ಶ್ಯಾಮಲಾರವರೇ, ವಂದನೆಗಳು. ನನ್ನ ಮೊಮ್ಮಗಳು ಅಂದು ನನ್ನ ತಾಯಿಯೇ ಆಗಿದ್ದಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ ಸರ್, ನಮ್ಮ ಕಷ್ಟಕ್ಕೆ, ನೋವಿಗೆ ಸ್ಪ0ದಿಸುವವರನ್ನು ಖ0ಡಿತಾ ಮರೆಯಲಾಗದು. ದೇವರು ನಿಮ್ಮನ್ನು ಸದಾ ಸ0ತೋಷವಾಗಿರಿಸಲೆ0ದು ಹಾರೈಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದ, ಶ್ರೀನಿವಾಸರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರೀತಿ ಪ್ರೇಮದ ಮಧುರ ಭಾವನೆಗಳಿಗೆ ಬೆಲೆಯೆ ಇಲ್ಲದ ಕಾಲವೇನೊ ಎನ್ನಿಸುವ ಈ ಯುಗದಲ್ಲಿ ಅದು ಸಿಕ್ಕಾಗ ಸಿಗುವ ಆನಂದವೆ ಆನಂದ. ಇನ್ನು ಆ `ಸುಂದರ` ಭಾವನೆಗಳ ಮನಸ್ಸುಳ್ಳವನನ್ನು ಈಗಿನವರು ಹೆಸರಿಸುವುದು, `ಭಾವನಾತ್ಮಕ ಮೂರ್ಖ` -ತಮ್ಮ ಅನುಭವದ ಆನಂದ ನಮ್ಮೊಂದಿಗೆ ಹಂಚಿಕೊಂಡದ್ದು ನಮಗೂ ಮುದ ನೀಡಿತು ನಾಗರಾಜ್ ಸಾರ್, ಭಗವಂತ ತಮಗೆ ಹೆಚ್ಚಿನ ಆಯಸ್ಸಿನೊಂದಿಗೆ ಉತ್ತಮ ಆರೋಗ್ಯವನ್ನು ನೀಡಲಿ. -ಧನ್ಯವಾದಗಳು -ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆನಂದದ ಅನುಭವ ಹಂಚಿಕೊಂಡಿದ್ದರಿಂದ ನನಗೆ ಅದು ಇನ್ನೂ ಹೆಚ್ಚಾಯಿತು. ಧನ್ಯವಾದ, ರಾಮಮೋಹನರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗರಾಜರೆ ನಿಜ ಈಗೀಗ ಭಾವನೆಗಳೆ ಮಾಯವಾಗಿ ಎಲ್ಲವು ವ್ಯಾವಹಾರೀಕವಾಗಿ ಗೋಚರಿಸುತ್ತದೆ, ಎಲ್ಲ ಸಂಬಂದಗಳು ಸಹ. ನಿಮ್ಮ ಲೇಖನ ಓದುವಾಗ ಮನಸ್ಸು ಹಗುರವಾಯಿತು ಮತ್ತು ಹಳೆಯ ಘಟನೆಯೊಂದು ನೆನಪಿಗೆ ಬಂತು, ಆಗ ನಾನೇನು ಮಗುವಲ್ಲ ಡಿಗ್ರಿಗೆ ಸೇರಿದ್ದನೇನೊ, ಮೈಸೂರಿನಲ್ಲಿದ ಚಿಕ್ಕಪ್ಪನ ಮನೆಗೆ ಹೋಗಿದ್ದೆ (ಈಗ ಅವರಿಲ್ಲ ಸ್ವರ್ಗಸ್ಥರು) ರಾತ್ರಿ ಮಲಗಿದ್ದೆ ಬೆಳಗ್ಗೆ ಏಳು ಗಂಟೆಯೇನೊ ಇನ್ನು ಎದ್ದಿರಲಿಲ್ಲ, ನನ್ನನ್ನು ಎಬ್ಬಿಸಲೆಂದು ಚಿಕ್ಕಪ್ಪ ರೂಮಿಗೆ ಬಂದರು, ಎರಡು ಸಾರಿ ಕೂಗಿದರು, ನಂತರ ಹತ್ತಿರ ಬಂದರು ನಾನು ತೆಳು ಹೊದ್ದಿಕೆ ಮಾತ್ರ ಹೊದ್ದಿದ್ದೆ ಅನ್ನಿಸುತೆ, ಹತ್ತಿರವಿದ್ದ ರಗ್ಗನ್ನು ತೆಗೆದು ಹೊದ್ದಿಸಿ, ಮುಖವನ್ನೊಮ್ಮೆ ಸವರಿ ಕೂದಲು ಹಿಂದೆ ತಳ್ಳಿ, ಆಚೆ ಹೊರಟುಹೋದರು, ನನಗೆ ಆ ಸ್ಪರ್ಶ,ಅನುಭವ ಎಲ್ಲ ತುಂಬಾ ಹಿತವೆನ್ನಿಸುತ್ತಿತ್ತು, ಎಚ್ಚರವಿದ್ದರು ನಾನು ಕಣ್ಣುಬಿಡಲಿಲ್ಲ ಆ ಅನುಭೂತಿಯನ್ನು ಅನುಭವಿಸುತ್ತ ಮಲಗಿದ್ದೆ. ಏಕೊ ಎಷ್ಟು ವರ್ಷಗಳಾದರು ಆ ಭಾವ ನನ್ನ ಮನಸಿನಲ್ಲಿ ಹಸಿಯಾಗಿಯೆ ಉಳಿದಿದೆ. - ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ, ಪಾರ್ಥರೇ,ಅಂತಹ ಆನಂದ ಅನುಭವಿಸಿದವರಿಗೇ ಗೊತ್ತಾಗುವುದು. ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಾನವೀಯತೆಯನ್ನು ಹತ್ತಿರದಿ0ದ ನೋಡಿದ ಹಾಗಾಯಿತು. ಒ0ದು ಮಾನಸಿಕ ಸಾ0ತ್ವನವಾದರೆ ಇನ್ನೊ0ದು ದೈಹಿಕ. ನಿಮ್ಮ ಆಪ್ತರಾದ ಆ ಇಬ್ಬರು ಕಿರಿಯರ ಮನದ ಮಿಡಿತವೇ ನಮ್ಮೆಲ್ಲರಲ್ಲಿ ಹಬ್ಬಿ ಹರಡಲಿ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಹರಕೆಯಂತೆ ಅಂತಹ ಆಪ್ತತೆ ಎಲ್ಲೆಡೆ ಹರಡಲಿ. ಧನ್ಯವಾದ, ರಘುಮುಳಿಯರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗರಾಜ್ ಅವರೇ ನಿಮ್ಮ ಪುಟ್ಟ ಮೊಮ್ಮಗಳ ಮಾತುಗಳಿ೦ದ ಹ್ರುದಯ ತು೦ಬಿ ಬ೦ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೊಮ್ಮಗಳನ್ನು ಹರಸಿದ್ದಕ್ಕೆ ತಾತನಿಗೆ ಸಂತೋಷವಾಯಿತು. ಧನ್ಯವಾದ, ಜಯಂತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.