ಕನ್ನಡವಾಗಲಿ ನಿತ್ಯ

5

ಕನ್ನಡವಾಗಲಿ ನಿತ್ಯ
-------------------------
ಕನ್ನಡವಾಗಲಿ ನಿತ್ಯ
ಕನ್ನಡವಾಗಲಿ ಸತ್ಯ|
ಕನ್ನಡ ಕಂಪಿನ ಹೂಮಳೆ ಸುರಿದು
ಸಮೃದ್ಧಿಯಾಗಲಿ ಕರುನಾಡು|
ಭವ್ಯ ಪರಂಪರೆಯ ಈ ನಾಡು||

ಕರುಣೆಯ ಕಡಲು ಈ ಕರುನಾಡು
ಶಾಂತಿಗೆ ಹೆಸರು ಈ ಕನ್ನಡನಾಡು
ಪ್ರೀತಿಗೆ ಮನೆಮಾತು ಈ ಕರುನಾಡು
ತ್ಯಾಗಕೆ ಎತ್ತಿದಕೈ ಈ ಕನ್ನಡನಾಡು|
ಸ್ನೇಹಕೆ ಸ್ನೇಹವ ತೋರುವ ನಾಡು
ಪ್ರಾಣಕೆ ಪ್ರಾಣವ ನೀಡುವ ನಾಡು
ಇದುವೆ ಕವಿ ಕೋಗಿಲೆಗಳ ಪುಣ್ಯದ ಬೀಡು||

ಶಿಲ್ಪಕಲೆಗಳ ಸುಂದರ ನಾಡು
ಶಿಲೆಗಳು ಸಂಗೀತವನಾಡುವ ನಾಡು|
ಹಸಿದವರಿಗನ್ನವ ನೀಡುವ ನಾಡು
ಧರ್ಮ ದೇವತೆಗಳು ನೆಲಸಿಹ ನಾಡು
ನವದುರ್ಗಾ ದೇವತೆಗಳ ತಾಯ್ನಾಡು|
ತುಂಗೆ ಭದ್ರೆ ನೇತಾವತಿ ಕೃಉಷ್ಣೆ
ನಿತ್ಯ ಹರಿಯುವ ಸುಂದರ ನಾಡು||

ಹಕ್ಕಬುಕ್ಕರಾಳಿದ ಈ ಸಿರಿ ನಾಡು
ವಿಜಯನಗರ ವೀರರು ಆಳಿದನಾಡು|
ಹೊಯ್ಸಳ ಕದಂಬ ವಿರಚಿತನಾಡು
ತಾಯಿ ಕಾವೇರಿ ಉದಿಸಿದನಾಡು|
ಶಂಕರ ರಾಮಾನುಜ
ವಿದ್ಯಾರಣ್ಯರು ಬೆಳೆಸಿದ ನಾಡು||

ಕವಿರನ್ನ ಪಂಪರ ನೆಚ್ಚಿನ ನಾಡು
ಬೇಂದ್ರೆ ಕುವೆಂಪು ಮಾಸ್ತಿ ಕಾರಂತ
ಗೋಕಾಕರ ಸುಂದರ ಕನ್ನಡ ನಾಡು
ಕನಕ ಪುರಂದರ ಬಸವ ಸರ್ವಜ್ಞರ
ಶ್ರೀಮಂತ ಸಾಹಿತ್ಯದ ಈ ಕರುನಾಡು||

*ಜಾನಕಿತನಯಾನಂದ
(ಜೀವನತರಂಗಗಳು ಕವನಸಂಕಲನದಿಂದ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.