ಕನ್ನಡಿ ನೋಡಿದಾಗ,

4.666665

ಮಗುವಾಗಿದ್ದಾಗ 
ಕನ್ನಡಿ ನೋಡಿದೆ,
ಕಂಡದ್ದು ನಾಲ್ಕಾಣೆಯ ಕೆಂಪು ಚಾಕಲೇಟು,
 
ಶಾಲೆಗೇ ಹೋಗುವಾಗ 
ಕನ್ನಡಿ ನೋಡಿದೆ 
ಕಂಡದ್ದು ಶಾಲೆಯ ಆವರಣದ ಚಿಕ್ಕ ರಬ್ಬರ್ ಬಾಲ್,
 
ಕಾಲೇಜಿಗೆ ಹೋಗುವಾಗ
ಕನ್ನಡಿ ನೋಡಿದೆ,
ಕಂಡದ್ದು ಅವಳ್ಯಾರೋ ಹೊಳೆವ ಕಣ್ಣ ಹುಡುಗಿ,
 
ಕೆಲಸಕ್ಕೆ ಸೇರಿದಾಗ
ಕನ್ನಡಿ ನೋಡಿದೆ,
ಕಂಡದ್ದು ಕಂಪ್ಯೂಟರಿನ ಗಜಿಬಿಜಿ ಪರದೆ
 
ಮದುವೆಯಾದಾಗ
ಕನ್ನಡಿ ನೋಡಿದೆ,
ಕಂಡದ್ದು ಮುಂದೆ ಬರುವ ಮಗುವಿನ ಮುಖ
 
ಈಗ 
ಮನೆಯ ಮೂಲೆಯ ಹಾಸಿಗೆಯಲ್ಲಿ ಬಿದ್ದಿದ್ದೇನೆ
ಕನ್ನಡಿ ನೋಡಿದೆ,
ಕಾಣುತ್ತಿರುವುದು ನಾನೇ, 
ಆದರೆ ಅದು ಈಗಿನ ನಾನಲ್ಲ
ಅದರೊಳಗೆ ನಾನು ಮಗುವಾಗಿದ್ದಾಗಿನ ಚಿತ್ರ,
 
-ಜಿ ಕೆ ನ 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.