ಕನ್ನಡ ಕಲಿಸೋಣ

5

ಕನ್ನಡ ಕಲಿಸೋಣ
----------------------
ಕನ್ನಡ ಕಲಿಸೋಣ
ಕನ್ನಡ ಬೆಳೆಸೋಣ|
ಕನ್ನಡ ಕೀರ್ತಿಯ ಎಲ್ಲೆಡೆ ಬೆಳಗುತ
ಕನ್ನಡ ತನದಲಿ ಬಾಳೋಣ|
ಕನ್ನಡಸೇವೆಯ ಮಾಡುತ
ಕನ್ನಡ ತಾಯಿಗೆ ನಮಿಸೋಣ||

ಕನ್ನಡ ಕಲಿಸಿದ ಗುರುಗಳಿಗೊಮ್ಮೆ
ಮನ ಮುಟ್ಟಿ ನಮಿಸೋಣ|
ಕನ್ನಡ ಬೆಳೆಸಿದವರೆಲ್ಲರಿಗೊಮ್ಮೆ
ತಲೆಯನು ಬಾಗಿಸೋಣ|
ಕನ್ನಡ ಹಾಡ ಹಾಡುವವರಿಗೊಮ್ಮೆ
ಜಯಕಾರ ಮಾಡೋಣ||

ಈ ನಾಡನು ಕಟ್ಟಿದವರೆಲ್ಲರಿಗೊಮ್ಮೆ
ಪೂಜೆಯ ಮಾಡೋಣ|
ಕನ್ನಡಿಗರ ಬೆನ್ನತಟ್ಟುವವರನ್ನೊಮ್ಮೆ
ಕೈ ಕುಲುಕಿಸಿ ವಂದಿಸೋಣ|
ಕನ್ನಡದಲಿ ಉಸಿರಾಡುವರನ್ನೊಮ್ಮೆ
ಗುರುತಿಸಿ ಪ್ರೀತಿಸೋಣ||

ಕನ್ನಡಕ್ಕಾಗಿ ದುಡಿಯುವವರನು
ಒಂದುಗೂಡಿಸೋಣ|
ಕನ್ನಡಕ್ಕೆ ಪ್ರಶಸ್ತಿಯ ತಂದವರೆಲ್ಲರ
ಆತ್ಮೀಯತೆಯಿಂದ ಗೌರವಿಸೋಣ|
ಕನ್ನಡ ಬಾವುಟ ಹಾರಿಸುವರೆಲ್ಲರ
ಕೈ ಹಿಡಿದು ಬೆಳೆಸೋಣ||

-ಜಾನಕಿತನಯಾನಂದ
(ಜೀವನತರಂಗಗಳು ಕವನ ಸಂಕಲನದಿಂದ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.