ಕಾಡಿಲ್ಲದ ನಾಡಲ್ಲಿ ಹುಲಿ ಬಂದಿತ್ತು

0

ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ ಬಗರ್ ಹುಕಂನಿಂದ ಕಾಡು ನಾಶವಾಗುತ್ತಿದೆ. ಮತ್ತೊಂದೆಡೆ ಪೀಠೋಪಕರಣಗಳ ಹೆಸರಿನಲ್ಲಿ ಮರ

ಗಳ್ಳರು ಕಾಡನ್ನು ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಒಂದೆಡೆ ಜನಪ್ರತಿನಿಧಿಗಳ ಕುಮ್ಮಕ್ಕು ಇದ್ದರೆ, ಮತ್ತೊಂದೆಡೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವಾಗಿದೆ ಎನ್ನುವುದು ಜಗಜ್ಜಾಹೀರು.

ಕಾಡೇ ಇಲ್ಲದ ಶಿಕಾರಿಪುರದಲ್ಲಿ, ಮೊನ್ನೆಯಂದು ಧಿಡೀರ್ ಆಗಿ ಹೆಬ್ಬುಲಿಯೊಂದು ಪ್ರತ್ಯಕ್ಷವಾಯಿತು. ಕಾಡಿನಲ್ಲಿ ಚೆನ್ನಾಗಿಯೇ ಇದ್ದ ಹುಲಿ, ಆಹಾರ ಸಿಗದ ಕಾರಣ ನಾಡಿಗೆ ಬಂದಿದೆ ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ. ಹುಲಿ ಅಡಗಿದ್ದ ಬಾಳೆ ತೋಟದ ಸುತ್ತಮುತ್ತ ಸುಮಾರು 10ಸಾವಿರಕ್ಕೂ ಅಧಿಕ ಜನಸಂಖ್ಯೆ ಜಮಾವಣೆಗೊಂಡಿತು.

ಯಾವುದೋ ಎಮ್ಮೆಗೆ ಓಡಿಸುವಂತೆ , ಹುಲಿಯನ್ನು ಓಡಿಸಲು ಹೋದ ವ್ಯಕ್ತಿ ಹುಲಿ ಬಾಯಿಗೆ ಸಿಕ್ಕು ಮೃತಪಟ್ಟ, ಮತ್ತೊಬ್ಬ ಬಾಲಕ ಹತ್ತಿರದಿಂದ ನೋಡಲು ಹೋಗಿ ಹುಲಿಯಿಂದ ಭಾರೀ ದಾಳಿಗೆ ತುತ್ತಾದ. ಇಷ್ಟೆಲ್ಲಾ ಘಟನೆ ನಡೆಯುತ್ತಿರುವಾಗಲೇ ಜನ ರೊಚ್ಚಿಗೆದ್ದಿದ್ದರು. ನಾವೇ ಹುಲಿಯನ್ನು ಸಾಯಿಸುತ್ತೇವೆ ಎಂದು ಕೂಗಾಟ ಬೇರೆ. ಇವರನ್ನು ಸಮಾಧಾನಗೊಳಿಸುವ ಹೊತ್ತಿಗೆ ಪೊಲೀಸರು ಸುಸ್ತಾಗಿದ್ದರು, ಅಂತೂ ಸಂಜೆ ಸುಮಾರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಇದೀಗ ಹುಲಿರಾಯ ತಾವರೆಕೊಪ್ಪ ಸಿಂಹಧಾಮದಲ್ಲಿ ಇದ್ದಾನೆ. ಭಾರೀ ಭೋಜನ ಪ್ರಿಯನಾದ ಇವನನ್ನು ಸಾಕುವುದು ಕಷ್ಟವಂತೆ ಹಾಗಾಗಿ ಮತ್ತೆ ಬೇರೆ ಪ್ರದೇಶದ ಅರಣ್ಯಕ್ಕೆ ಬಿಡುತ್ತಿದ್ದಾರೆ.

Image preview

Image preview

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

<ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ ಬಗರ್ ಹುಕಂನಿಂದ ಕಾಡು ನಾಶವಾಗುತ್ತಿದೆ. ಮತ್ತೊಂದೆಡೆ ಪೀಠೋಪಕರಣಗಳ ಹೆಸರಿನಲ್ಲಿ ಮರ ಗಳ್ಳರು ಕಾಡನ್ನು ಲೂಟಿ ಮಾಡುತ್ತಿದ್ದಾರೆ.>ಸಹಜವಾಗಿ ಪ್ರಾಣಿಗಳು ಆಹಾರ ಹುಡುಕಿಕೊಂಡು ಬರುತ್ತವೆ. <ಯಾವುದೋ ಎಮ್ಮೆಗೆ ಓಡಿಸುವಂತೆ , ಹುಲಿಯನ್ನು ಓಡಿಸಲು ಹೋದ ವ್ಯಕ್ತಿ ಹುಲಿ ಬಾಯಿಗೆ ಸಿಕ್ಕು ಮೃತಪಟ್ಟ> :) :) ಚಿತ್ರಗಳು ಚೆನ್ನಾಗಿವೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಜನವರಿ ತಿಂಗಳಲ್ಲಿ ಎಷ್ಟೋ ವರ್ಷಗಳ ನಂತರ ಶಿವಮೊಗ್ಗಕ್ಕೆ ಬಂದಿದ್ದೆ. ತೀರ ಬದಲಾಗಿದೆ ಅನ್ನಿಸಿತು. ಮುಂಚಿನಿಂದಲೇ ಹಸಿರಿಗೆ ಕತ್ತರಿ ಬಿದ್ದಿದೆ. ಈಗ ಇನ್ನೂ ಜಾಸ್ತಿ. ತಾವರೆಕೊಪ್ಪ ಸಿಂಹಧಾಮವಂತೂ ಸಫಾರಿ ಕಡಿಮೆ, ಮೃಗಾಲಯ ಹೆಚ್ಚು ಎನ್ನುವಂತಿದೆ. ಬಹುಶಃ ಅಲ್ಲಿರುವುದೇ ಎರಡು ಸಿಂಹಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಯಲುಸೀಮೆಯಾದ ಶಿಕಾರಿಪುರದಲ್ಲಿ ಹುಲಿ ಕಂಡ ವಿಚಾರ ಕೇಳಿ ಮೊದಲಿಗೆ ನನಗೂ ಸಖತ್ ಅಚ್ಚರಿ. ಮತ್ತೆ ಯೋಚಿಸಿದರೆ, ಎಂತಿದ್ದರೂ ಶಿಕಾರಿಮಾಡಿಸಿಕೊಳ್ಳಲು ಹುಲಿಯೊಂದು ಶಿಕಾರಿಪುರಕ್ಕಲ್ಲದೆ ಬೇರಿಲ್ಲಿಗೆ ತಾನೆ ಬಂದೀತು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಿಕಾರಿಪುರಕ್ಕೆ ಬಂದಿದ್ದರೂ ಆಹುಲಿ ಶಿಕಾರಿಯಾಗಿಲ್ಲ ಅನ್ನುವುದು ತೃಪ್ತಿಕರ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಿಕಾರಿ ಮಾಡಲು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕೇವಲ ಮೂರುಚಿತ್ರಗಳು ಒಂದು ದೊಡ್ಡ ಕಥೆ ಹೇಳಿದಷ್ಟು ವಿಷಯವನ್ನು ಒಳಗೊಂಡಿದೆ.. ತಾಂತ್ರಿಕವಾಗು ಅದ್ಭುತವಾದ ಚಿತ್ರಗಳು -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1... ಚಿತ್ರಗಳು ಸೂಪರ್.. ಕ್ರೂರ ಮನುಷ್ಯನ ಮು೦ದೆ ಆ ಹೆಬ್ಬುಲಿ ಸಾಧುವಾಗಿ ಕಾಣುತ್ತಲಿದೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹುಲಿ ಏಕೆ ಬಂತು ನಾಡಿಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ತು ನಮ್ಮ ನಾಡಿಗರ ಕ್ಯಾಮೆರಾ ಮೂಲಕವಾದರೂ ಸಂಪದದಂಗಳಕ್ಕೆ ಕಾಲಿಡುವ ಉತ್ಕಟಾಸೆ ಇದ್ದಿರಬಹುದೇನೋ ಆ ಹುಲಿಯ ಮನದಲ್ಲಿ! :) -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

<<ಇದೀಗ ಹುಲಿರಾಯ ತಾವರೆಕೊಪ್ಪ ಸಿಂಹಧಾಮದಲ್ಲಿ ಇದ್ದಾನೆ.>> ಇದು ಖುಷಿ ತಂದ ವಿಚಾರ ಚಿತ್ರಗಳು ಚೆನ್ನಾಗಿವೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮನುಷ್ಯ ಹುಲಿಯ ತಂಟೆಗೆ ಹೋಗಿದ್ದ ಮಾತ್ರಕ್ಕೆ ಅದು ಅವನನ್ನು ಕೊಂದಿದ್ದು ತಪ್ಪು ಎಂದು ದಿಗ್ವಿಜಯ ಸಿಂಗ್ ಹೇಳಿಕೆ ಕೊಟ್ಟಿದ್ದಾರಂತೆ :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಚಿತ್ರಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಮಂಜು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮವಾಗಿ ಸೆರೆಹಿಡಿದ ಚಿತ್ರಗಳು ಮತ್ತು ಲೇಖನ ಯೋಚನೆಗೆ ಹಚ್ಚಿತು. ಹಾಸನ ಮಲೆನಾಡು ಎಂದರೆ ಈಗ ಯಾರಾದರೂ ನಂಬಿಯಾರೇ? ನಾಳೆ ಶಿವಮೊಗ್ಗೆಯೂ ಈ ಸ್ಥಿತಿಗೆ ಬರುವದೆಂಬುದನ್ನು ನೆನೆಸಿದರೇ ಕಸಿವಿಸಿಯಾಗುತ್ತದೆ! :-( ಹುಲಿ ಬೆಕ್ಕಿನಂತೆ ಎಂದು ಭಾವಿಸಿಕೊಂಡು ತನ್ನ ಮುಠ್ಠಾಳತನದಿಂದ ಒಬ್ಬ ಸತ್ತ; ಇನ್ನೊಬ್ಬ ಹುಡುಗ ಗಾಯಗೊಂಡನೆಂದರೆ, ಮಲೆನಾಡಿನವರಿಗೂ ಕಾಡಿನ ಪ್ರಾಣಿಗಳ ಬಗ್ಗೆ ಅರಿವಿಲ್ಲದಿರುವುದಕ್ಕೆ ಶಿವಮೊಗ್ಗೆ, ಶಿಕಾರಿಪುರ, ಮುಂತಾದವು ಬಯಲುಸೀಮೆಯಾಗಿಬಿಟ್ಟಿದೆಯೆಂದೇ ಅನ್ನಬೇಕೇ? ಮಲೆನಾಡಲ್ಲಿ ಮರಗಳ್ಳತನದಿಂದ, ಸಂಬಂಧಿಸಿದವರ ನಿರ್ಲಿಪ್ತಿಯಿಂದ ಮರಗಳ ಮಾರಣಹೋಮವಾಗುತ್ತಿದ್ದರೆ, ಬೆಂಗಳೂರಿನಲ್ಲಿ, ಬೆಂಗಳೂರು-ಮೈಸೂರಿನ ಹೆದ್ದಾರಿಯಲ್ಲಿ, ಮತ್ತಿತರೆಡೆ, ‘ಮರ? ಹಾಗೆಂದರೇನು?’ ಎಂದು ಕೇಳುವ ಪರಿಸ್ಥಿತಿಯಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.