ಕೃಷ್ಣ ಸುಂದರಿ

5

ಅವಳು ಹೊರೆಯೋ, ದಾರಿಗೆ ಅಡ್ಡಲೋ
ಅವರವರ ಮಾತಿಗೆ  ಬಲಿಯಾದಳು
ಮೌನದಲೆ ಮರುಗಟ್ಟಿದವಳು
ರೋಧನ ಮುಗಿಲೆತ್ತರದಲ್ಲಿ
ಆದರು ಕೇಳುವ ಕಿವಿಗಳಿರಲಿಲ್ಲ
ಸಂತೈಸುವ ಮನಸುಗಳಿರಲಿಲ್ಲ
 
ಅವಳಿಗಂಟಿದ ಕಪ್ಪು ಚುಕ್ಕೆ
ತಾನೇನು ಅರ್ಹಳಲ್ಲೆಂಬಂತಿತ್ತು 
ಜೀವನದ ಪರೀಕ್ಷೆ, ಬೆಂಬಿಡದ ಸೋಲು
ತೆರೆಹಿಂದಿನ ಪಿಸುಗುಸು,
ಎಲ್ಲ ಹೊತ್ತು, ನಕ್ಕಂತೆ ನಟಿಸಿದಳು 
ಒಡಲೊಳಗೆ ಬಚ್ಚಿಟ್ಟು ಮರುಗಿದಳು
 
ಚದುರಂಗದಾಟಕೆ ಕೊನೆಯಿಲ್ಲವೇ
ಆಟದಲಿ ಕಪ್ಪದಾರೇನು, ಬಿಳುಪಾದರೇನು
ಆಟಗಾರರ ಆಟ ಮುಂದುವರೆದಿದೆ
ನನ್ನೀ ಜೀವನದ ಆಟ, ಪಥನಗೊಳಿಸಿ
ಇನ್ಯಾರ ಮನೆಯ, ಕಪ್ಪು ಮೊಗದ 
ಬಿಳುಪು ಮನಸಿಗೆ ಮಸಿ ಬಳಿಯಲಿದ್ದಾರೋ 
 
ಮೊಗ ನೋಡಿ ಮಣೆ ಹಾಕುವವರೇ
ಮನಸ ಅರಿತು, ಬದುಕಲು ಬಿಡಿ
ಜನ್ಮಕ್ಕಂಟಿದ ನಂಟು ನಂದು,ಮನಸ್ಸಿಗಂಟಿಸಿದ ಅಂಟು ನಿಮ್ಮದು
ಕಪ್ಪೊ- ಬಿಳುಪೊ ಯಾವುದೆನ್ನುತ್ತದೆ ಈ ಜಗತ್ತು
ವರವೆಂದು ಸಾಂತ್ವನಗೊಳ್ಳುವ ನಾವು
ಶಾಪವೆಂದು ಹೆಸರುಉಳಿಸಿಬಿಡುವ ನೀವು...
 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.