ಕೋರ್ಟ್ ಆದೇಶ

ಕೋರ್ಟ್ ಆದೇಶ

ಬರಹ
 ಶಬ್ದ ಮಾಡೋ ಫ್ಯಾನ್ ತಿರುಗುತ್ತಇರೊತ್ತೆ, ಕಟಕಟೇಲಿ  ಕೋಳಿ ನಾಗ ಮೈಕೈ ಕೇರ್ಕೊತ  ನಿಂತಿರ್ತಾನೆ, ಹಿಂದೆ ಪೋಲಿಸ್ ನವರು.
ಧೂಳ್ ಕೋಟಿನ ಲಾಯರ್ , ತಲೆ ತುಂಬಾ ಎಣ್ಣೆ ಬಳ್ಕೊಂಡುಇರೋ  ನ್ಯಾಯಾಧೀಶರು.

ನ್ಯಾ: ಏನ್ರೀ ಕೇಸ್ , ಅ ಮನುಷ್ಯನಿಗೆ ಸುಮ್ನಿರೋಕ್ಕೆ ಹೇಳ್ರಿ, ಕೇರ್ಕೊತ  ನಿಂತಿದ್ದಾರಲ್ಲ ಅವ್ರಿಗೆ.

ವಕೀಲರು : ಯುವರ್ ಆನರ್ ,  ಈ  ವ್ಯಕ್ತಿ ಕೋಳಿ  ನಾಗ ಅಂತ , ಇವ್ನ್ಮೇಲೆ ತುಂಬಾ ಕೇಸ್ ಇದೆ.

ನ್ಯಾ: ಸರಿ ಇವತ್ತಿನ್ನ ಕಥೆ ಏನು ?

ವ: ಕೆಲವು ಮಾರಕಾಸ್ತ್ರ ಇಟ್ಕೊಂಡು ಓಡಾಡ್ತಿದ್ದ, ಪೋಲಿಸ್ ಇವನನ್ನ ಅರ್ರೆಸ್ಟ್ ಮಾಡಿದ್ದರೆ , ಕಾನೂನ್ ಪ್ರಕಾರ ಆಯುಧಗಳನ್ನೂ
    public ಆಗಿ ಇಟ್ ಕೊಳೋ ಹಾಗಿಲ್ಲ.

ನ್ಯಾ: ಇವರೇ ... ಏನ್ರಿ ಇದೇನು ದಸರ ಸೀಸನ್ ನ weapons ಇಟ್ ಕೊಳಕ್ಕೆ  ? ಏಕೆ ಹೀಗೆ ಮಾಡಿದ್ರಿ  ?

ಕೋಳಿ: ಸಾರ್ , ನಾನ್ ಏನಾದ್ರು ಯುಜ್ ಮಾಡಿದನ ಸಾರ್ . ಸಾಣೆ ಇದ್ಸೋಣ ಅಂತ ಇಚೆಗೆ ತ್ಯಗಿ ತಾಗಿದ್ದೆ , ಅಷ್ಟ್ರಲ್ಲಿ  
          ಪೋಲಿಸ್............

ನ್ಯಾ: ಆದರು ಹೊರಗಡೆ ಹೀಗೆ, ತಪಲ್ಲ್ವ ?

ಕೋಳಿ: ಯಾವ್ದು ಸಾರ್ ತಪ್ಪು ? ನಾನ್ ಏನ್ ಮಚ್ಚು ಲಾಂಗು ಬೀಸಿದನ , ಹಂಗಿದ್ರೆ ನಮ್ಮ ದೇವರಗಳನ್ನ ಅರ್ರೆಸ್ಟ್ ಮಾಡಿ.
           ಅವರಹತ್ರಾನು ಎಲ್ಲಾ ಲಾಂಗು ಮಚ್ಚು ಇರೋಕ್ಕಿಲ್ವಾ ? ಈ ದೇವರ್ಗೋಳುತಾವ ಕತ್ತಿ, ಚಾಕು , ಎಲ್ಲಾ ಐತ್ಹೆ ಅದು public  
            ಅಲ್ಲೇ   ತೋರ್ಸಿತವ್ರೆ, ಅವರ ಮೇಲಿನ ಭಯಕ್ಕೆ ಜನ ಅಡ್ಡ ಬೀಳೋದು , ಭಕ್ತಿ ಅಲ್ಲ  ಅವರನ್ನ ಏಕೆ ಬಿಟ್ರಿ ?

ನ್ಯಾ: ರೀ ಇವರೇ .. ಕೋಳಿ ಹೇಳೋದು ಕರೆಕ್ಟ್ ಕಂಡ್ರಿ ... ಕೋಳಿ ನಿಂಗುನು ಶಿಕ್ಷೆ ಆಗೊತ್ತೆ
ತೀರ್ಪು : ಕಾನೂನು ಪ್ರಕಾರ ಯಾರೇ ಆಗಲಿ ಮಾರಕಾಸ್ತ್ರ ಇಟ್ಕೊಂಡು ಇದ್ರೆ  ಅದು ಯಾರೋ ಕೊಲೆಗೆ ಸಂಚು ಅಂತ ನ್ಯಾಯಾಲಯ 
            ನಿರ್ಧರಿಸುತ್ತದೆ .  ಆರೋಪಿಗೆ 1ತಿಂಗಳ ಶಿಕ್ಷೆ , ೨೫೦ ರುಗಳ  ದಂಡ ವಿಧಿಸಲಾಗೊತ್ತೆ . ಹಾಗೆ ಆರೋಪಿ ಕೊಟ್ಟ ಮಾಹಿತಿ ಪ್ರಕಾರ.
           ಎಲ್ಲ  ದೇವರುಗಳನ್ನು ಪೊಲೀಸರು ಅವರ ವಶಕ್ಕೆ ತೊಗೊಂಡು ಕೋರ್ಟ್ಗೆ ಒಪ್ಪಿಸಬೇಕು.
ಯಾವುದೇ ದೇವರುಗಳು ಚಾಕು , ಕತ್ತಿ , ಮಚ್ಚು, ಬಾಕು ತ್ರಿಶೂಲ, ಚಕ್ರ   ಈ ತರಹದ sharp object ಗಳನ್ನೂ ಇಟ್ಕೊಂಡು ಇರ್ತಾರೋ  ಎಲ್ಲರನ್ನು ವಶಕ್ಕೆ ತೆಗೆದುಕೊಳ್ಳಬೇಕಾಗಿ ಕೋರ್ಟ್ ಆದೇಶ ನೀಡೋತ್ತೆ.

except ಹನುಮಂತ ಈತ ಆರೋಪದಿಂದ ಮುಕ್ತಿ ಹೊಂದಿರುತ್ತಾನೆ , ಕಾರಣ , ಈ ದೇವರ ಅಸ್ತ್ರ ಗದೆ ಆಗಿದ್ದು ಇದು sharp object
ಅಲ್ಲ,.ಮೇಲಾಗಿ ಇವರು ಕನ್ನಡಿಗ.

ಇದಲ್ಲದೇ ಈ ದೇವರುಗಳನ್ನು ಪ್ರಚೋದಿಸುತ್ತಿರುರುವ ಎಲ್ಲ ಅರ್ಚಕರನ್ನು ಕೂಡ ವಶಕ್ಕೆ ತೆಗೆದು ಕೊಳ್ಳಬೇಕಾಗಿ ಕೋರ್ಟ್ ಆದೇಶ ನೀಡೋತ್ತೆ.

ವಕೀಲರು : ಯುವರ್ ಅನರ್ , ದೇವರು ಓಕೆ ಪೂಜಾರಿ ಯಾಕೆ ?

ನ್ಯಾ: ರೀ ಇವರೇ ..... ದಿನ ಪೂಜೆ ಮಾಡೋವಾಗ ಈ  ಅರ್ಚಕರು , ಸಂಸ್ಕೃತ ಯಾರಗೂ ಗೊತಗೋಲ್ಲ ಅಂತ.
         ಪ್ರತಿಯೊಂದು ಶ್ಲೋಕದ ಕೊನೇಲಿ  " ತನ್ನೋ ದಂತಿ ಪ್ರಚೋದೆಯಾತ್ ,, ತನ್ನೋ ರುದ್ರ ಪ್ರಚೋದೆಯಾತ್..."
          ಹೀಗೆ ಪ್ರಚೋದನಕಾರಿ ಮಂತ್ರ ಗಳನ್ನೂ ಹೇಳ್ತಾರೆ ಅದಿಕ್ಕೆ.