ಗಂಗಾ

ಗಂಗಾ

ಕವನ

ಜುಳುಜುಳು ಹರಿಯುವೆ ಮಂಜುಳದನಿಯಲಿ

ಥಳಥಳ ಹೊಳೆಯುತ ಕಲ್ಮಷ ತೊಳೆಯುವೆ

ಕವಿಗಳ ಕಿವಿಗಳ ಮೊರೆಯುತ ಸುರಿಯುವೆ

ಗಿರಿಗಳ ಬಳಸುತ ಧುಡುಧುಡು ಧುಮುಕುವೆ

ಧರೆಯಲಿ ಹಸಿರಿನ ಪುಳಕದ ಸಿರಿಯನು

ಕೊನರಸಿ ಪಸರಿಸಿ ಮನುಜರ ಪೊರೆಯುವೆ

ತಟಗಳ ತಾಡಿಸಿ  ಕೋಪವ ತಾಳುವೆ

ಪ್ರಳಯದ ತಾಂಡವ ತುಡಿತದ ಪಿಡುಗಲಿ

ಮನುಜರ ಜೀವನ ನರಕವ ಮಾಡುವೆ

ತಿರ್ರನೆ ತಿರುಗುತ ಮಡುಗಳ ಸೃಷ್ಟಿಸಿ

ಮರಳಿನ ರಾಶಿಯ ದಡದಲಿ ಪೇರಿಸಿ

ತಣ್ಣಗೆ ಹರಿಯುತ ತಾಪವ ತಣಿಸುವೆ

ತ್ರಿಭುವನ ತಿರುಗುವೆ ಧರೆಯಲಿ ಸುರಿಯುವೆ

ಬರೆಯಲಿ ಬಣ್ಣಿಸಿ ನವಯುವ ಕವಿಗಳು

ಕನ್ನಡ ಗಂಗೆಯ ಹಿರಿಮೆಯ ಗರಿಮೆಯ

ಸುಂದರ ಸೊಬಗಿನ ಗಂಗಾವತರಣ