ಗರ್ಭ ಧರಿಸುವ ಮುನ್ನ ದಂಪತಿಗಳು ಅನುಸರಿಸಬೇಕಾದ ನಿಯಮಗಳು

3.46154


ಪಾಲಿಸಬೇಕಾದ ಆರೋಗ್ಯ ಸೂತ್ರಗಳು: ಆಲಿಸಬೇಕಾದ ಕಿವಿ ಮಾತು:

* ಹೆಣ್ಣಿಗೆ ಮದುವೆಯ ವಯಸ್ಸು 18 ವರ್ಷ ಹಾಗೂ ಪುರುಷನಿಗೆ 21 ವರ್ಷ ಎಂದು ನಿಗದಿಪಡಿಸಿ ಕಾಯ್ದೆ ಜಾರಿಗೆ ಬಂದಿದೆಯಾದರೂ, ಮದುವೆಯಾದ ತಕ್ಷಣ ಅವರು ಮತ್ತೊಂದು ಜೀವಕ್ಕೆ ಜನ್ಮ ಕೊಡಬಹುದು ಎಂಬ ನಿಯಮವಿಲ್ಲ,

* ಗರ್ಭ ಧರಿಸುವ ಮುನ್ನ ದಂಪತಿಗಳಿಬ್ಬರೂ ಪರಸ್ಪರ ಒಬ್ಬರೊನ್ನಬ್ಬರು ಅರಿಯುವುದು, ಹುಡುಗಿಯು ತಾನು ಗಂಡನ ಮನೆಯ ವಾತಾವರಣಕ್ಕೆ ಹೊಂದಿಕೊಂಡು ಜೀವನ ನಡೆಸುವುದು, ತಮ್ಮ ಆರ್ಥಿಕ ಪರಿಸ್ಥಿತಿ ಇವನ್ನೆಲ್ಲಾ ಅವಲಂಬಿಸಿದೆ.

* ಗಂಡ-ಹೆಂಡಿರ ಆರೋಗ್ಯ ಸ್ಥಿತಿ, ಮಾನಸಿಕ ಸಮತೋಲನ, ಆರ್ಥಿಕ ಭದ್ರತೆ, ಹಿರಿಯರ ಆಸರೆ, , ಎಂಬಂತೆ ಬಹಳಷ್ಟು ಅಂಶಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕಾದಂತಹ ಪರಿಸ್ಥಿತಿ ಇದೆ. 20 ವರ್ಷದಿಂದ 32 ವರ್ಷಗಳೊಳಗೆ ಹೆಣ್ಣು ಮಕ್ಕಳು ಗರ್ಭ ಧರಿಸುವುದು ಸೂಕ್ತ.

* 20 ವರ್ಷಕ್ಕೂ ಚಿಕ್ಕ ವಯಸ್ಸಿನ ಹೆಣ್ಣು ,ಇನ್ನೂ ತನ್ನ ದೇಹದ ಬೆಳವಣಿಗೆ ಪರಿಪೂರ್ಣವಾಗಿರದ ಹದಿಹರೆಯದ ಹೆಣ್ಣು ಮಕ್ಕಳು ಹಾಗೂ 40ವರ್ಷ ದಾಟಿದ ಮಹಿಳೆಯರು ಗರ್ಭ ಧರಿಸಿದಲ್ಲಿ ಅವರ ಜೀವಕ್ಕೂ ಅಪಾಯ ಹಾಗೂ ಹುಟ್ಟುವ ಶಿಶುವಿನ ಸರಿಯಾದ ಬೆಳವಣಿಗೆಯೂ ಅಸಾಧ್ಯ. ಅನೇಕ ವಿಧವಾದ ನ್ಯೂನತೆಗಳಾಗುವ ಸಂಭವ ಹೆಚ್ಚು.
 

 * ಹತ್ತಿರದ ಸಂಬಂಧದಲ್ಲಿ ಮದುವೆಯಾಗುವುದನ್ನು(ರಕ್ತ ಸಂಬಂಧಿ) ತಡೆಯುವುದು ಉತ್ತಮ. ಸೋದರ ಮಾವ, ಮಾವನ ಮಗ, ಸೋದರತ್ತೆಯ ಮಗ ಎಂಬಂತೆ, ಬಹಳ ಹತ್ತಿರ ವಾದ ರಕ್ತ ಸಂಬಂಧಿಕರೊಡನೆ ವಿವಾಹ ಸಂಬಂಧ ಬೇಡ. ಇದರಿಂದ ಹುಟ್ಟುವ ಮಗು ಅನೇಕ ಅನುವಂಶಿಕ ರೋಗಗಳಿಗೆ ಬಲಿಯಾಗುವುದು.

 * ಆರೋಗ್ಯವೇ ಭಾಗ್ಯ. ರೋಗ ಬಾರದಂತೆ ತಡೆಯುವುದು, ರೋಗ ಚಿಕಿತ್ಸೆಗಿಂತ ಉತ್ತಮ ಎಂಬ ನಾಣ್ಣುಡಿ ಎಲ್ಲರಿಗೂ ಚಿರಪರಿಚಿತ.
  * ರೋಗ ಬಾರದಂತೆ ತಡೆಯುವುದು, ಹುಟ್ಟುವ ಮಗು ಆರೋಗ್ಯದಿಂದ ಇರುವುದಕ್ಕಾಗಿ,

ಆರೋಗ್ಯಕರ ಸಂತಾನಕ್ಕಾಗಿ ಹಾಗೂ ಗರ್ಭ ಧರಿಸುವ ಮುನ್ನ ದಂಪತಿಗಳು ಆರೋಗ್ಯದಿಂದಿರಲು  ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು.ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ಗುರ್ತಿಸಿ ಸೂಕ್ತ ಚಿಕಿತ್ಸೆ ಪಡೆಯಲು ಗರ್ಭ ಧರಿಸುವ ಮುನ್ನ ದಂಪತಿಗಳು ಕಟ್ಟೆಚ್ಚರ ವಹಿಸಬೇಕು.
  * ಇಂದಿನ ಯುಗದಲ್ಲಿ ಪ್ರತಿಯೊಬ್ಬ ದಂಪತಿಗೂ ಇರುವುದು ಒಂದು ಮಗು, ಅಬ್ಬಬ್ಬಾ ಎಂದರೆ ಎರಡು! ಅದಕ್ಕಿಂತ ಹೆಚ್ಚು ಮೂರು ಮಕ್ಕಳು ಎಂದರೆ ಆಶ್ಚರ್ಯಕರ. ನಾವು ಆಶಿಸುವ, ಬಯಸುವ ಆ ಒಂದು ಮಗು ಆರೋಗ್ಯದಿಂದಿರಬೇಕೆಂಬುದಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಬೇಕಲ್ಲವೆ?
 

-2-

     * ಪತ್ನಿಯೂ ಉದ್ಯೋಗಸ್ಥಳಾಗಿ ಅತಿಯಾದ ಬ್ಯುಜಿ ಜೀವನ ನಡೆಸುತ್ತಿರಲು, ಅವಿಭಕ್ತ ಕುಟುಂಬ ಮರೆಯಾಗುತ್ತಿರಲು, ಹುಟ್ಟಿದ ಮಗುವನ್ನು ನಾನು ಸಾಕಬಲ್ಲೆನೇ? ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಸಹಜ!  ಮನೆಯಲ್ಲಿ ಅತ್ತೆ, ಮಾವ ಅಥವಾ ಹುಡುಗಿಯ ತಂದೆ, ತಾಯಿ ಮಗುವನ್ನು ನೋಡಿಕೊಳ್ಳಲು ಇದ್ದಾರೆ ಎಂಬುದಾದರೆ ನಿಶ್ಚಿಂತೆ!  ಆದರೆ ಅತ್ತೆ ಮಾವನೊಟ್ಟಿಗೆ ಜೀವನ ನಡೆಸುವ ಸೊಸೆಯಂದಿರೆಷ್ಟು ಮಂದಿ?

 

     * ಈ ಸಮಸ್ಯೆಗೆ ಉತ್ತರವೆಂದರೆ ಯಾರಾದರೂ ಸೂಕ್ತ ಆಯಾ ಅಥವಾ ಹೆಣ್ಣು ಮಕ್ಕಳನ್ನೋ, ಮಹಿಳೆಯನ್ನೋ ಮಗುವನ್ನು  ನೋಡಿಕೊಳ್ಳಲು ನೇಮಿಸಬಹುದು. ಮಗುವಿಗೆ ಒಂದು ವರ್ಷ ಆಗುತ್ತಿದ್ದಂತೆ ಬೇಬಿ ಸಿಟ್ಟಿಂಗ್‍ಗೆ ಒಪ್ಪಿಸುವುದು.

 

     * ಇದೆಲ್ಲಾ ಸರಿ! ಮಗುವನ್ನು ನಾವು ನೋಡಿಕೊಳ್ಳ ಬಲ್ಲೆವೇ? ಎಷ್ಟು ದೊಡ್ಡ ಜವಾಬ್ದಾರಿ ಯದು. ನಮ್ಮ ನಡುವೆ ಮತ್ತೊಂದು ಜೀವ ಎಂಬುದರ ಬಗ್ಗೆ ಚಿಂತಿಸುವ  ಹೈಟೆಕ್ ಲಲನಾಮಣಿಯರು ಕಂಡುಕೊಂಡಿರುವ ಸೂತ್ರವೇನು ಬಲ್ಲಿರಾ?

 

     * ಗರ್ಭ ಧರಿಸುವ ಮುನ್ನ ಒಂದು ಚಿಕ್ಕ ನಾಯಿಮರಿಯನ್ನು ಮನೆಗೆ ಕೊಂಡು ತರು ವುದು. ನಾಯಿಮರಿಯನ್ನು ಬೆಳೆಸಿದವರಿಗೇ ಗೊತ್ತು! ಮಕ್ಕಳನ್ನು ಬೆಳೆಸುವಂತೆಯೇ ಅವುಗಳ ಸೇವೆ

ಯನ್ನು ಮಾಡಬೇಕೆಂಬುದು.

 

     * ನಾಯಿಮರಿಯನ್ನು ಲಾಲಿಸಿ, ಪಾಲಿಸಿ ಪೋಷಿಸುವುದರಲ್ಲಿ ಸಮರ್ಥ ಎಂದು ಮನಸ್ಸಿಗೆ ಬಂದಲ್ಲಿ ತಮ್ಮದೇ ಆದ ಮಗುವನ್ನು ಪಡೆಯುವಲ್ಲಿ ಕಾರ್ಯನಿರತರಾಗುವರಂತೆ. ಮತ್ತು ಕೆಲವರು ನಾಯಿ ಮರಿಯನ್ನೇ ಮಗುವಂತೆ ಸಾಕುತ್ತಾ ಮಕ್ಕಳ ಗೊಡವೆಯೇ ಬೇಡ ಎಂದು ತೃಪ್ತಿ ಪಡುವÀ ರಂತೆ!

 

     * ಇದು ಆಧುನಿಕ ಯುಗದ ವಿದ್ಯಾವಂತ, ಉದ್ಯೋಗಸ್ಥ, ಬಿಡುವಿಲ್ಲದೇ ದುಡಿಯುವ ಮಹಿಳೆಯರ ಪಾಡು.  ಒಂದು ರೀತಿಯಲ್ಲಿ ಸರಿಯೇ!

 

     * ಯಾವುದೇ ಹೆಣ್ಣು ಮದುವೆಯಾದ ನಂತರ ತಾಯ್ತನಕ್ಕಾಗಿ ಹಂಬಲಿಸುತ್ತಿರುತ್ತಾಳೆ. “ತಾಯ್ತನ ಹೆಣ್ಣಿನ ಪರಿಪೂರ್ಣತೆಯನ್ನು ಸಾರುತ್ತದೆ” . ಮಕ್ಕಳಿಲ್ಲದ ಹೆಣ್ಣು ಬಂಜೆ ಎಂಬೆಲ್ಲಾ ಮಾತುಗಳು ಇಂದಿಗೂ ಎಲ್ಲರ ಬಾಯಲ್ಲಿದ್ದರೂ ಸಹ ವಿಭಿನ್ನ ದೃಷ್ಠಿಯಿಂದ ಇದನ್ನು ಅವಲೋಕಿಸೋಣ.. ‘ಮದರ್ ಥೆರೆಸಾ’ ಲೋಕದಲ್ಲಿ ಎಲ್ಲರಿಗೂ ತಾಯಿಯಲ್ಲವೇ! ನಮ್ಮ ಗರ್ಭದಿಂದ ಜನಿಸಿದವರಷ್ಟೇ ನಮ್ಮ ಮಕ್ಕಳಲ್ಲ. ಲೋಕದಲ್ಲಿನ ಎಲ್ಲ ಮಕ್ಕಳೂ ನಮ್ಮ ಮಕ್ಕಳೇ ಎಂಬುದರ ಅರಿವು ಬಹಳ ಮುಖ್ಯ.

 

     * ಗರ್ಭಧರಿಸುವ ಹೆಣ್ಣುಮಕ್ಕಳ ದೇಹದ ತೂಕ ಸರಿಯಾಗಿರ ಬೇಕುÀ ದೇಹ ತೂಕ  ನಮ್ಮ ಎತ್ತರಕ್ಕನುಗುಣವಾಗಿರಬೇಕು. ಬಾಡಿ ಮಾಸ್ ಇಂಡೆಕ್ಸ್ (ಬಿ.ಎಂ.ಐ) ನಿಂದ  ದೇಹದ ತೂಕ ಸರಿಯಿದೆಯೇ? ಹೆಚ್ಚೋ ಅಥವಾ ಕಡಿಮೆಯೋ ತಿಳಿಯಬಹುದು.

 

 

- 3 –

 

ಈ ಕೆಳಗಿನ ಸೂತ್ರದಿಂದ ಬಿಎಂಐ ಕಂಡು ಹಿಡಿಯಿರಿ:

 

                    ದೇಹದ ತೂಕ(ಕೆ.ಜಿ. ಗಳಲ್ಲಿ)

    ಬಿ.ಎಂ.ಐ   =     ದೇಹದ ಎತ್ತರ(ಮೀಟರ್) 2

 

ಉದಾ:       ದೇಹದ ತೂಕ 50 ಕೆಜಿ.

           ಎತ್ತರ 5 ಅಡಿ ಅಂದರೆ 150 ಸೆಂಟಿಮೀಟರ್ = 1.5 ಮೀಟರ್

              

                   50

              ಬಿ.ಎಂ.ಐ  --------

                        (1.5)2

 

ಬಿಎಂಐ 18 ಕ್ಕಿಂತ ಕೆಳಗಿದ್ದರೆ ಅತೀ ಕಡಿಮೆ ದೇಹದ ತೂಕ ಇಂತವರು ತೂಕವನ್ನು ಹೆಚ್ಚಿಸಿ ಕೊಳ್ಳಲು ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸಬೇಕು .

 

ಬಿಎಂಐ 25 ಕ್ಕಿಂತ ಹೆಚ್ಚಿದ್ದಲ್ಲಿ ಹೆಚ್ಚಿನ ತೂಕ, 27 ಕ್ಕಿಂತ ಜಾಸ್ತಿ ಆದಲ್ಲಿ ಬೊಜ್ಜು ಎನ್ನುತ್ತೇವೆ. ಇಂಥಹವರು ದೇಹದ ತೂಕವನ್ನು ಇಳಿಸಲು ವ್ಯಾಯಾಮ ಮಾಡುವುದರ ಜೊತೆಗೆ ಕೊಬ್ಬಿನ ಆಹಾರ, ಸಿಹಿ ಮುಂತಾದವುಗಳನ್ನು ತ್ಯಜಿಸಬೇಕು. ಬೊಜ್ಜು ಸಹಾ ಸಂತಾನಹೀನತೆಗೆ ಕಾರಣ. ಬಹಳ ದಪ್ಪಗಿರುವ ಮಹಿಳೆಯರಲ್ಲಿ ಇಸ್ಟ್ರೋಜನ್ ಪ್ರಮಾಣ ಸಹಾ ಹೆಚ್ಚಾಗುವುದು.

 

     * ವ್ಯಾಯಾಮ, ಆಹಾರ ನಿಯಂತ್ರಣ ಮುಂತಾದವುಗಳಿಂದ ದೇಹದ ತೂಕ ಕಡಿಮೆಯಾಗದಿದ್ದಲ್ಲಿ ಥೈರಾಯಿಡ್ ಗ್ರಂಥಿಯ ಕಾರ್ಯ ವೈಖರಿ ಕಡಿಮೆಯಾಗಿರಬಹುದೇ (ಹೈಪೋ ಥೈರಾಯಿಡಿಸಂ) ಎಂಬುದನ್ನು ತಿಳಿಯಬೇಕು.

 

     * ವೈರಸ್ ಸೋಂಕುಗಳಾದ ರುಬೆಲ್ಲಾ ( ಜರ್ಮನ್ ಮೀಸಲ್ಸ್) ಚಿಕನ್ ಫಾಕ್ಸ್ (ಅಮ್ಮ) ಇವು ಗರ್ಭಿಣಿ ಮಹಿಳೆಗೆ ಬಂದಲ್ಲಿ ಗರ್ಭದಲ್ಲಿರುವ ಭ್ರೂಣಕ್ಕೆ ನ್ಯೂನತೆಯಾಗುವುದು. ಆದ್ದರಿಂದ ವೈದ್ಯರೊಡನೆ ಆಪ್ತ ಸಮಾಲೋಚನೆ ಅಗತ್ಯ. ರುಬೆಲ್ಲಾ, ಚಿಕನ್ ಫಾಕ್ಸ್ ಬಾರದಂತೆ ಲಸಿಕೆ ಪಡೆಯ ದಿದ್ದಲ್ಲಿ , ಗರ್ಭ ಧರಿಸುವ ಮುನ್ನ ಅವನ್ನು ತೆಗೆದುಕೊಳ್ಳುವುದು ಅವಶ್ಯಕ. ಮದುವೆಗೆ ಮುನ್ನವೇ ಹೆಣ್ಣು ಮಕ್ಕಳಿಗೆ ಈ ಲಸಿಕೆಗಳನ್ನು ಕೊಡಬೇಕು.

 

     * ಲೈಂಗಿಕ ಸೋಂಕುಗಳಾದ ಸಿಫಿಲಿಸ್, ಹೆಚ್.ಐ.ವಿ. ಸೋಂಕು ಹಾಗೂ ಹೆಪಟೈಟಿಸ್ ‘ಬಿ’ ಸೋಂಕಿಲ್ಲವೆಂದೂ ಸಹ ಖಚಿತಪಡಿಸಿಕೊಳ್ಳಬೇಕು. ಸುಲಭ ರಕ್ತ ಪರೀಕ್ಷೆಗಳಿಂದ ಈ ಸೋಂಕು ಗುರ್ತಿಸಬಹುದು. ಹೆಪಟ್ಯಟಿಸ್ ‘ಬಿ’ ಸೋಂಕು ಬಾರದಂತೆ ತಡೆಗಟ್ಟಲು ಲಸಿಕೆ ಲಭ್ಯ.

 

     * ಸಿಗರೇಟ್ ಸೇವನೆ ಹಾಗೂ ಮಧ್ಯ ಸೇವನೆಗೆ ವಿದಾಯ ಹೇಳಲೇಬೇಕು. ಇದರಿಂದ ಅಬಾರ್ಷನ್, ಕಡಿಮೆ ತೂಕದ ಮಕ್ಕಳು, ಅವಧಿಗೆ ಮುನ್ನವೇ ಜನಿಸುವ ಮಕ್ಕಳು ಹಾಗೂ ಮಗು ವಿನ    ಜನನದವೇಳೆ ಇನ್ನಿತರ ದುಷ್ಪರಿಣಾಮಗಳನ್ನು ತಡೆಯಬಹುದು.

 

   

 

- 4-

 

* ಮಹಿಳೆಯು ಇನ್ನಾವುದೇ ಸಮಸ್ಯೆಗಳು. ಉದಾ: ಅಸ್ತಮ, ಅಪಸ್ಮಾರ, ಸಕ್ಕರೆ ಖಾಯಿಲೆ ಮುಂತಾದವುಗಳಿಂದ ಬಳಲುತ್ತಿದ್ದಲ್ಲಿ ಇತರೇ ರೋಗಗಳಿಗೆ ಗುಳಿಗೆ ಸೇವಿಸುತ್ತಿದ್ದಲ್ಲಿ ತಜ್ಞ ವೈದ್ಯರ ಸಲಹೆ ಪಡೆದು ನಂತರ ಗರ್ಭ ದರಿಸಬಹುದು. ಔಷಧಿಗಳು ಭ್ರೂಣದ ಮೇಲೆ ದುಷ್ಪರಿಣಾಮ ಬೀರುವುವು.

ಮಹಿಳೆಯರು ರಕ್ತದಲ್ಲಿನ ಹೀಮೋಗ್ಲೋಬಿನ್ ಅಂಶ 12 ಗ್ರಾಂಗಳಿಗೂ ಅಧಿಕವಾಗಿರುವಂತೆ

ಕಬ್ಬಿಣಯುಕ್ತ ಆಹಾರ,ಹಾಲು,ಮೊಸರು,ಸೊಪ್ಪು,ಕಾಳುಗಳು ಮುಂತಾದುವುಗಳ ಸೇವನೆಯ ಜೊತೆಗೆ 5 ಮಿಗ್ರಾಂ ಫೋಲಿಕ್ ಆಸಿಡ್ ನ ಗುಳಿಗೆಯನ್ನು ಸೇವಿಸಬೇಕು.ಇದರಿಂದ ಹುಟ್ಟುವ ಮಗುವಿನ ಮಿದುಳು ಹಾಗೂ ನರಮಂಡಲದ ನ್ಯೂನತೆಯನ್ನು ತಡೆಯಬಹುದು.

 

ಗರ್ಭ ಧರಿಸುವ ಮುನ್ನ ಪುರುಷರು ಪಾಲಿಸಬೇಕಾದ ಕೆಲವು ಸೂತ್ರಗಳು

 

       * ತಮಗೆ ಮಗು ಬೇಕೆಂದು ನಿರ್ಧಾರ ಮಾಡುವಲ್ಲಿ ದಂಪತಿಗಳಿಬ್ಬರ ಪಾತ್ರವೂ ಅತ್ಯಂತ ಪ್ರಮುಖವಾದದ್ದು. ಇಬ್ಬರೂ ಸೇರಿ ನಿರ್ಧಾರ ಕೈಗೊಂಡಲ್ಲಿ ಗರ್ಭ ಪೂರ್ವ, ಗರ್ಭಿಣಿಯಾದಾಗ ಹಾಗೂ ಪ್ರಸವದ ನಂತರದಲ್ಲಿ ಹೆಣ್ಣಿಗೆ ಸರಿಯಾದ ಆರೈಕೆ ದೊರಕುವುದರಲ್ಲಿ ಸಂದೇಹವಿಲ್ಲ.

 

     * ಆರೋಗ್ಯವಂತ ಶಿಶು ಜನನಕ್ಕೆ ಪುರುಷನೂ ಆರೋಗ್ಯವಾಗಿರಬೇಕು. ಪುರುಷನ ದೇಹಾ ರೋಗ್ಯ, ಮಾನಸಿಕ ನೆಮ್ಮದಿ, ಸಂತೋಷ ಮುಖ್ಯ. ಇತ್ತೀಚೆಗೆ ಅತೀ ಚಿಕ್ಕವಯಸ್ಸಿನಲ್ಲೇ ಒತ್ತಡ, ಆತಂಕ ಬದಲಾದ ಜೀವನ ಶೈಲಿಗಳಿಂದ ಸಕ್ಕರೆ ಖಾಯಿಲೆ ಹಾಗೂ ಹೆಚ್ಚಿನ ರಕ್ತದೊತ್ತಡದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದ್ದು, ಇದು ಪುರುಷನ ಫಲವತ್ತತೆಗೆ ಸಮಸ್ಯೆಯಾಗಬಹುದು.

ಪೌಷ್ಟಿಕ ಆಹಾರ ಸೇವನೆ, ಧ್ಯಾನ, ವ್ಯಾಯಾಮ, ಒತ್ತಡ ನಿರ್ವಹಣೆಗೆ ಹಲವಾರು ಸೂತ್ರಗಳನ್ನು ಪಾಲಿಸುತ್ತ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಪಡಿಸಿಕೊಳ್ಳಬೇಕು.

ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಪುರುಷರು ,ಕ್ರಿಮಿನಾಶಕಗಳನ್ನು ಬಳಸುವಾಗ,ಸಿಂಪಡಿಸುವಾಗ ,ಮೈ ಕೈ ತ್ವಚೆ,ದೇಹಕ್ಕೆ ಅದು ಸೋಕದಂತೆ,ಮೂಗು ಬಾಯಿಯ ಮುಖಾಂತರ ದೇಹವನ್ನು ಪ್ರವೇಶಿಸದಂತೆ ತಡೆಯುವ ಮುಂಜಾಗ್ರತಾ ಕ್ರಮವನ್ನನುಸಸರಿಸಬೇಕು.ನಂತರ ಶುಭ್ರವಾಗಿ ಮೈ ಕೈ ತೊಳೆದುಕೊಳ್ಳಬೇಕು.ಅನೇಕ ಪೆಸ್ಟಿಸೈಡ್‍ಗಳು ವೀರ್ಯಾಣುಗಳ ಸಂಖ್ಯೆ ಹಾಗೂ ಫಲವತ್ತತೆಯ ಮೇಲೆ ದುಷ್ಪರಿಣಾಮ ಬೀರುವುವು.

 

     * ದುಶ್ಚಟಗಳಿಗೆ ವಿದಾಯ:: ತಂಬಾಕು ಸೇವನೆ( ಬೀಡಿ, ಸಿಗರೇಟು, ಗುಟ್ಕಾ, ಚುಟ್ಟಾ, ಹುಕ್ಕಾ,,,,) ಗೆ ವಿದಾಯ ಹೇಳಲು ಪ್ರಯತ್ನಿಸಿ. ತಂಬಾಕಿನ ಪರಿಣಾಮ ದೇಹದಲ್ಲಿರುವ ಜೀನ್ಸ್ ಮೇಲೂ ಆಗಬಹುದು. ವೀರ್ಯಾಣುಗಳ ಫಲವತ್ತತೆಯೂ ಕಡಿಮೆಯಾಗುವುದು. ಮನೆಯಲ್ಲಿ ಅಥವಾ ಹೆಂಡತಿಯೊಂದಿಗಿದ್ದಷ್ಟು   ಸಮಯ ಸದಾ ತಂಬಾಕು ಸೇವಿಸುತ್ತಿದ್ದರೆ ನೀವು ಬಾಯಿಂದ ಹೊರ ಹಾಕುವ ಹೊಗೆಯನ್ನು ಸೇವಿಸುವ ಹೆಣ್ಣು ವಿಪರೀತ ತೊಂದರೆಗೊಳಗಾಗುತ್ತಾಳೆ. ಇಂತಹ ಹೊಗೆ ಯನ್ನು ಸೇವಿಸುವ ಹೆಣ್ಣು ಮಕ್ಕಳು ಹಾಗೂ ಸ್ವತ: ಸಿಗರೇಟ್, ಹುಕ್ಕಾ ಪೈಪ್ ಗಳಿಗೆ ಶರಣಾದ ಹೆಣ್ಣು ಮಕ್ಕಳಲ್ಲಿ ಸಂತಾನ ಹೀನತೆ , ಗರ್ಭ ದರಿಸಿದಲ್ಲಿ, ಅಬಾರ್ಷನ್, ಪೂರ್ಣಾವಧಿಗೆ ಮುಂಚಿತ ವಾಗಿಯೇ(ಪ್ರೀ ಟರ್ಮ) ಶಿಶು ಜನನ, ಗರ್ಭದಲ್ಲಿನ ಭ್ರೂಣದಲ್ಲಿ ಹಾಗೂ ನವಜಾತ ಶಿಶುವಿನಲ್ಲಿ ಅನೇಕ ನ್ಯೂನತೆಗಳು ಕಂಡು ಬಂದಿವೆ. ಗಂಡ-ಹೆಂಡತಿ ಇಬ್ಬರೂ ತಂಬಾಕಿನ ಸೇವನೆಗೆ ವಿದಾಯ ಹೇಳಿದಲ್ಲಿ ಆರೋಗ್ಯವಂತ ಶಿಶುವಿನ ಜನನವನ್ನು ನಿರೀಕ್ಷಿಸಬಹುದು.

 

     * ಕುಡಿತವೂ ಒಂದು ಚಟ. ಅತಿಯಾಗಿ ಮದ್ಯ ಸೇವಿಸುವವರು, ಮದ್ಯ ಸೇವನೆಯನ್ನು ನಿಯಂತ್ರಣದಲ್ಲಿಡಲು ಮನಸ್ಸು ಮಾಡಬೇಕು. ಮದ್ಯ ,ತಂಬಾಕು ವ್ಯಸನದಿಂದ  ವೀರ್ಯಾಣುಗಳುÀ ಹಾನಿಗೊಳಗಾಗುವುವು, ಲೈಂಗಿಕಸಾಮಥ್ರ್ಯವೂ ಕುಂದುವುದು.

ಈ ಕೆಳಗಿನ ಕವಿತೆಯು ನೊಂದ ಹೆಣ್ಣೊಬ್ಬಳು ಇತರೆ ಹೆಣ್ಣುಮಕ್ಕಳಿಗೆ ಕೊಡುವ ಎಚ್ಚರಿಕೆಯ,ಅನುಭವದ ಮಾತು.

                         

 

 

ಪ್ರತಿ ಹೆಣ್ಣಿಗೂ ತಾಯ್ತನದ ಬಯಕೆ,

ಮಮತೆಯ ಕುಡಿಗಾಗಿ ನೂರಾರು ಹರಕೆ !

ದೇವಾ, ಕನಸು ನನಸಾಗಲೆನಗೆ

ಗಂಡೋ, ಹೆಣ್ಣೋ ಬೇಕೊಂದು ಮಗು ಎನಗೆ !!

 

       ಕನಸು ನನಸಾಗಲೊಂದು ದಿನ

       ಕುಣಿದಾಡಿತೆನ್ನ  ತನು-ಮನ !

       ಜನನ ದತ್ತ  ಪಯಣ

       ನಡೆಸಿತೆನ್ನ ಗರ್ಭದಲ್ಲಿನ ಭ್ರೂಣ !!

 

ಸಂತಸದಿ ಮೈಮರೆತೆ ನಾ

ಕಡೆಗಾಣಿಸುತ್ತಾ ವೈದೈಯ ಸಲಹೆಯನ್ನ !

ತಿಂಗಳೊಂಭತ್ತು ತುಂಬುವಾ ಮುನ್ನ

ಕಂಡೆ ನನ್ನ ಕರುಳ ಕುಡಿಯನ್ನ !

ಉಸಿರಾಡದೆ ಆಗಿತ್ತದು ಅಂಗಹೀನ

ಅದ ನೋಡುತ್ತಾ ಛಿದ್ರವಾಯಿತೆನ್ನ ಮನ

ನುಚ್ಚು ನೂರಾಗಿತ್ತು ನನ್ನ ಕನಸು, ಸ್ಥಾನ-ಮಾನ !!

 

                            ಬೇಡ ತಂಗಿ ಯಾರಿಗೂ ಈ ಪರಿಸ್ಥಿತಿ

                            ಅರಿಯೋಣ ನಮ್ಮ ಆರೋಗ್ಯದ ಸ್ಥಿತಿಗತಿ !

                            ಆಲಿಸೋಣ, ಪಾಲಿಸೋಣ ವೈದ್ಯರ ಕಿವಿ ಮಾತು

                            ಗರ್ಭ ಧರಿಸುವ ಮುನ್ನ, ಗರ್ಭಿಣಿಯಾದಾಗ

                            ಪ್ರಸವದ ನಂತರ ಅಷ್ಟೇ ಅಲ್ಲ,  ಸದಾ ನಿರಂತರ !!

ಡಾ.ಶಶಿಕಲಾ.ಪಿ.ಕೃಷ್ಣಮೂರ್ತಿ.

ದಾವಣಗೆರೆ. 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಡಾ. ಶಶಿಕಲಾ ರ‌ವರೆ, ವೈದ್ಯಕೀಯ ರಂಗದಲ್ಲಿ ಕೆಲಸ ನಿರ್ವಹಿಸುತ್ತಿರುವರಿಂದ‌ ವೈಜ್ನಾನಿಕ ಲೇಖನಗಳ‌ ಅಗತ್ಯ ನಮ್ಮ ಸಮಾಜಕ್ಕೆ ಅತ್ಯಂತ ತುರ್ತು ಹಾಗೊ ಅತ್ಯಂತ ಅನಿವಾರ್ಯ, ಹಾಗಾಗಿ ನಿಮಗೆ ತುಂಬು ಹ್ರುದಯದ ಸ್ವಾಗತವಿದೆ. ಹತ್ತು ಹಲವು ಸಾಮನ್ಯ ರೋಗಗಳ ಜನರಿಗೆ ತಿಳುವಳಿಕೆ ನೀಡಬಲ್ಲ ಲೇಖನಗಳನ್ನ, ಸಾಹಿತ್ಯವನ್ನ ನಿಮ್ಮಂದ ಇನ್ನುಮ್ಮುಂದೆ ನೀರಿಕ್ಶಿಸುತ್ತೇವೆ. ಉಪಯುಕ್ತ ಲೇಕನಕ್ಕೆ ಅಭಿನಂದನೆಗಳು ಸಲ್ಲುತ್ತವೆ. ದ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉಪಯುಕ್ತ ಲೇಖನ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದಿರಿ ಶಶಿಕಲಾ ಅವರೇ..ನಿಮ್ಮ ಸೇವೆ ಹೀಗೆ ಮುಂದುವರೆಯಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ತೆ! ಉಪಯುಕ್ತ ಮಾಹಿತಿ. ದಯವಿಟ್ಟು ನಿಮ್ಮ ಫೋನ್ ನಂಬರ್ ಅನ್ನು ಇಂಟರ್ನೆಟ್ ನ ಯಾವುದೆ ತಾಣದಲ್ಲಿ ಹಾಕುವುದು ಯೋಗ್ಯವಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಮಾ ಅವರೆ. ಯಾಕೆ ಹಾಕಬಾರದು ಹೇಳಿ? ಇನ್ನೊಬ್ಬರು ದುರುಪಯೋಗ ಮಾಡಿಕೊಳ್ಳುತ್ತಾರೆಂದೆ? ಆದರೆ ಇವು ಈಗಿನ ಆವಶ್ಯಕತೆಗಳಲ್ಲಿ ಒಂದಾಗಿದೆ. ಇಂಥ ಸಂಪರ್ಕಗಳು ಅನೇಕರಿಗೆ ತಮ್ಮ ವೈಯಕ್ತಿಕ ತೊಂದರೆಗಳನ್ನು ನೇರವಾಗಿ ಚರ್ಚಿಸಿ ಉತ್ತ ಪಡೆಯಲು ಸಾಧ್ಯವಾಗುತ್ತವೆ ಎಂದು ನನ್ನ ಅಭಿಉಮತ. ಎಲ್ಲದಕ್ಕೂ ಎರಡು ಮುಖಗಳಿವೆ. ಆದರೆ ಬರೀ ಕೆಟ್ಟದ್ದೆಆಗುತ್ತದೆ ಎಂಬ ಕಾರಣಕ್ಕೆ ಸಂಪರ್ಕ ಸಾಧ್ಯತೆಗಳನ್ನು ಬಹಿರಂಗಗೊಳಿಸಬಾರದು ಎಂಬುದಕ್ಕೆ ನನ್ನ ಸಹಮತವಿಲ್ಲ. ನೀವೆನಂತೀರಿ? ಕೃಷ್ಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅತ್ಯುತ್ತಮ ಸರಳ ಮಾಹಿತಿ... ನನ್ನಿ ಒಳಿತಾಗ್ಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಾಹಿತಿ ಚೆನ್ನಿದೆ ... ಕವಿತೆ ಪೂರಕವಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಮ್ಮೆಲ್ಲರ ಅಭಿಮಾನ ಹೀಗೇ ಮುಂದುವರೆಯಲಿ.ನಾ ಬರೆಯುತ್ತಾ ಹೋಗುವೆ.ನನ್ನ ಪುಸ್ತಕಗಳನ್ನೂ ಇಲ್ಲಿ ಪ್ರಕಟಿಸಲು ಪ್ರಯತ್ನಿಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಲೇಖನ. ‍‍ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಡಾ. ಶಶಿಕಲಾ ಅವರೆ, ತುಂಬ ಮಾಹಿತಿಯುಕ್ತ ಲೇಖನವಿದು. ತಾಯಿ ತನ್ನ ಮಗಳಿಗೆ ತಿಳಿಹೇಳುವಂತೆ ಬರೆದಿದ್ದೀರಿ. ನವ ಜೀವನಕ್ಕೆ ಕಾಲಿಡುವ ಎಲ್ಲ ಯುವಕ-ಯುವತಿಯರು ನಿಜಕ್ಕೂ ಓದಲೇ ಬೇಕು. ಇಂಥ ಲೇಖನಗಳು ಇನ್ನಷ್ಟು ನಿಮ್ಮಿಂದ ಬರುತ್ತಿರಲಿ ಕೃಷ್ಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.