ಗುಬ್ಬಚ್ಚಿ

4
 ಚೀಂವ್ ಚೀಂವ್ ಗುಬ್ಬಚ್ಚಿ
           ಮಾರ್ಚ್ ೨೦ "ವಿಶ್ವ ಗುಬ್ಬಚ್ಚಿ ದಿನ". ಬಹುಶಃ ಅನೇಕರಿಗೆ ಇದು ಆಶ್ಚರ್ಯ ತರಬಹುದು. ಹೀಗೆ ಪ್ರತಿ ಹಕ್ಕಿಗಳಿಗೂ ಒಂದೊಂದು ದಿನ ಎಂದು ನಿಗದಿ ಪಡಿಸಿದರೆ ವರ್ಷದ ಎಷ್ಟು ದಿನಗಳು ಬೇಕಾಗಬಹುದು ಎಂದು ಆಲೋಚಿಸಬಹುದು. ಆದರೆ ಗುಬ್ಬಚ್ಚಿ ವಿಷಯ ಹಾಗಲ್ಲ. ಗುಬ್ಬಚ್ಚಿ ಹಿಂದಿನಿಂದಲೂ ಮನುಷ್ಯರ ಒಡನಾಡಿಯಾಗಿಯೇ ಬಂದ ಹಕ್ಕಿ. ಅವುಗಳನ್ನು ಪಂಜರದಲ್ಲಿಟ್ಟು ಸಾಕುವುದಿಲ್ಲ. ಮನೆಯಲ್ಲಿರುವ ಫೊಟೋಗಳ ಹಿಂದೆ ಅಥವಾ ಮರದ ಜಂತಿಗಳ ನಡುವೆ ಮರದ ಹಲೆಗೆಗಳನ್ನು ಹೊಡೆದಿಟ್ಟರೆ ಆಜಾಗದಲ್ಲಿ ಗುಬ್ಬಚ್ಚಿಗಳು ಸಂಸಾರ ಹೂಡುತ್ತಿದ್ದವು. ಇವೆಲ್ಲವೂ ಕಳೆದ ಶತಮಾನದ ೮೦ರ ದಶಕದವರೆಗೆ ಮಾಮೂಲಿಯಾಗಿತ್ತು. ಆದರೆ ಇದ್ದಕ್ಕಿದ್ದಂತೆ ಗುಬ್ಬಚ್ಚಿಗಳು ನಮ್ಮ ನಡುವೆಯಿಂದ ಕಾಣೆಯಾಗತೊಡಗಿದವು. ಮಡಿ ಬ್ರಾಹ್ಮಣರ ಅಡುಗೆ ಮನೆಯೋಳಗೂ ಪ್ರವೇಶ ಮಾಡುವ ಹಕ್ಕು ಪಡೆದ ಗುಬ್ಬಚ್ಚಿ ಎಲ್ಲಾ ಕಡೆಗಳಿಂದಲೂ ಕಣ್ಮರೆಯಾಗುತ್ತಿರುವ ಸುದ್ದಿ ಪಕ್ಷಿ ಪ್ರಿಯರ ಆತಂಕಕ್ಕೆ ಕಾರಣವಾಯಿತು. ಆ ಬಗ್ಗೆ ಚರ್ಚೆ, ಸಂಶೋಧನೆ, ವಿಶ್ಲೇಷಣೆಗಳು ಇಂದು ನಡೆಯುತ್ತಿವೆ. ಪ್ರಮುಖ ಕಾರಣಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ.
   ೧. ಪರಿಸರ ಮಾಲಿನ್ಯದ ಏರುಗತಿ
    ೨. ರಾಸಾಯನಿಕ ಕೀಟನಾಶಕಗಳ ಸಿಕ್ಕಾಪಟ್ಟೆ ಬಳಕೆ
    ೩. ಪಾರಂಪರಿಕ ರೀತಿಯಲ್ಲಿ ಮನೆಗಳನ್ನು ಕಟ್ಟುವುದು ನಿಲ್ಲಿಸಿದ್ದು.
    ೪. ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು  ಮನೆಗಳ ಒಳಗೆ ಜಾಗದ ಅಭಾವ
    ೫. ಗುಬ್ಬಚ್ಚಿಗಳಿಗೆ ಅವುಗಳ ಆಹಾರದ ಕೊರತೆ
      ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಗುಬ್ಬಚ್ಚಿಗಳ ಕಣ್ಮರೆ ಹೆಚ್ಚು ವೇಗದಲ್ಲಿ ನಡೆಯುತ್ತಿವೆಯೆಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ. ಒಟ್ಟಿನಲ್ಲಿ ಗುಬ್ಬಚ್ಚಿಯ ಕಣ್ಮರೆಯ ವಿಷಯ ನಮಗೊಂದು ಎಚ್ಚರಿಕೆಯ ಗಂಟೆಯೇ ಅಥವಾ ಪ್ರಕೃತಿಯಲ್ಲಿ ಇವೆಲ್ಲಾ ಸಹಜವೆಂದು ತೀರ್ಮಾನಿಸುವ ಹೊತ್ತಿಗೆ ಕಾಲ ಮಿಂಚಿಹೋಗುತ್ತದೆಯೋ ಏನೋ? ಆದರೆ ಕನಿಷ್ಟ ನಮ್ಮ ಮುಂದಿನ ಪೀಳಿಗೆಗೆ ಗುಬ್ಬಚ್ಚಿ ಹಾಗೂ ಮಾನವನ ನಡುವಿನ ಸಂಬಂಧಗಳ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ನೀಡುವುದು ಒಳಿತಲ್ಲವೇ? ಗುಬ್ಬಚ್ಚಿಯ ಚೀಂವ್ ಚೀಂವ್ ಸದ್ದು ಇನ್ನೆಷ್ಟು ದಿನ!?
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಗುಬ್ಬಚ್ಚಿಯನ್ನು ಬೆ0ಗಳೂರಲಿ ನೋಡಿದಾಗ‌ ಆಗುವ‌ ಖ್ಸುಷಿ ಹೇಗೆ ಹೇಳಲಿ... ಅವುಗಳ‌ ಅವನತಿಗೆ ನಾವೇ ಕಾರಣ‌ ;( ಹಳ್ಳಿಯಲ್ಲಿ ಅವುಗಳು ಮುಕ್ತವಾಗಿ ಮನೆ ಒಳಗೆ ಬ0ದು ಕಾಳೂ ಕಡಿ ತಿನ್ವುದು ಈಗಲೂ ಇದೆ... ವಿ ಮಿಸ್ ಯು ಗುಬ್ಬಿ ಎನ್ನಲೂ ನಾಛ್ಕೆ ಆಗ್ತಿದೆ... ಸಕಾಲಿಕ‌ ಬರಹ‌.. ಒಳೀತಾಗಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>>ಅವುಗಳ‌ ಅವನತಿಗೆ ನಾವೇ ಕಾರಣ‌ ;(! ಶೋಭಾ ಅವರೆ, ೬ನೇ ಕಾರಣ ಸಪ್ತಗಿರಿವಾಸಿ ಎಂದು ಬರೆಯಿರಿ.:) ಹಿಂದೆ ರೇಶನ್ ಅಕ್ಕಿ ತಿನ್ನುವ ಕಾಲದಲ್ಲಿ ಅಕ್ಕಿ ತಂದ ಮೇಲೆ ಹೊರಗೆ ಕುಳಿತು ಆರಿಸುವಾಗ(ಕಸಕಡ್ಡಿ ಭತ್ತವೇ ಜಾಸ್ತಿ ಇರುವ ಕಾಲ) ಗುಬ್ಬಚ್ಚಿಗಳು ಬಳಿಯೇ ಬಂದು ಇರುತ್ತಿದ್ದವು.(ರೇಶನ್ ಭತ್ತ ತಿಂದದ್ದೂ ಗುಬ್ಬಚ್ಚಿ ಕಾಣೆಯಾಗಲು ಕಾರಣವಿರಬಹುದೇ?) ಈಗ ಪ್ರತೀ ಮಾರ್ಚಲ್ಲಿ ಗುಬ್ಬಚ್ಚಿ ಬಗ್ಗೆ ಅತ್ತು ಮತ್ತೆ ಮರೆಯುವುದು. ಎರಡು ವರ್ಷದ ಹಿಂದೆ ಗುಬ್ಬಚ್ಚಿಗೂಡು ೧೦೦೦೦ ಹಂಚುತ್ತೇವೆ ಎಂದೆಲ್ಲಾ ಪತ್ರಿಕೆಗಳಲ್ಲಿ ಬಂದದ್ದೇ ಬಂದದ್ದು ( http://www.dnaindia.... ) ಇವರ ಗೂಡು ನೋಡಿ ಗುಬ್ಬಚ್ಚಿ ಬರುತ್ತಾ...ಆಶ್ರಯ ಮನೇನಾ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ದಾರಿ ಕಾಣದಂತಾಗಿದೆ ನನಗೆ ಗುಬ್ಬಿಗಳನ್ನ ಆಕರ್ಶಿಸೊಕೆ ಎನೆನೆಲ್ಲ ಮಾಡಿದಿನಿ, ಮಾಳಿಗೆ ಮೇಲೆ ಕಾಳು ಹಾಕ್ತಿದ್ದೆ. ನೀರು ಇಡ್ತಿದ್ದೆ. ಎಲ್ಲೊ ಮುರಿದು ಬಿದ್ದ ಮರದಲ್ಲಿದ್ದ ಒಣಗಿದ ಗುಬ್ಬಿ ಗೂಡನ್ನ ತಂದು ಮನೆ ಮುಂದಿನ ಮರಕ್ಕೆ ಕಟ್ಟಿದೆ. ಮನೆಯ ಮೇಲಿನ ಕುಂಬಿಯ ಮೇಲೆ ಚಿಕ್ಕ ಚಿಕ್ಕ ಮನೆಗಳಥರ ಮಾಡಿಸಿದೆ ಉಉಉಉಉಉಉಹುಮ್....... ಯಾವ್ದಕ್ಕೂ ಏನು ಉಪಯೊಗ ಆಗಿಲ್ಲ. ನನ್ನ ಮುಖ ನೊಡೊ ಯೊಗ್ಯತೆ ನಿಮಗಿಲ್ಲ ಅನ್ತ ಹಿಯಾಳಿಸ್ತಿವೆ ಯೆನೊ ಅನ್ನಿಸ್ತಿದೆ. ಗುಬ್ಬಿಗಳಿಲ್ಲದ್ದಕ್ಕೆ ಬಾಲ್ಲ್ಯವೇ ಮರೆತು ಹೊಗ್ತಾ ಇದೆ ಆದರೆ ಎಲ್ಲಿ ಗುಬ್ಬಿಗಳಿವೆಯೊ... ಅಲ್ಲಿಯವರಿಗೆ ಈ ನೊವಿನ ಅರಿವಿಲ್ಲ. ಇದ್ದಾಗ ಯಾವುದರ ಬೆಲೆಯೂ ಅರ್ಥ ಆಗಲ್ಲ ಕಳೆದು ಹೂದಾಗ............ "೦"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

shejwadkarರೆ, ದಾರಿ ಸರಿಯಾಗಿದೆ. ಪ್ರಯತ್ನ ಮುಂದುವರೆಸಿ. ಮುಂದಿನ ಮಾರ್ಚ್‌ಗೆ ನಿಮ್ಮ ಗೂಡಲ್ಲಿರುವ ಗುಬ್ಬಿಯ ಬಗ್ಗೆ ಸಂಪದದಲ್ಲಿ ಬರಹ ಬರೆಯುವಂತಾಗಲಿ.-ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಖಂಡಿತ ಗಣೆಶ ರವರೆ, ನನ್ನ ಪ್ರಯತ್ನ ನಿಂತಿಲ್ಲ ಈಗಲೂ ಕೂಡ ನಿರೀಕ್ಷಿಸುತ್ತಿದ್ದೆನೆ... ನಿಮ್ಮ ಹಾರೈಕೆಗೆ ಧನ್ಯವಾದಗಳು -ಶ್ರೀನಥ್ ಶೇಜವಾಡ್ಕರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗುಬ್ಬಿಯ ಬಗ್ಗೆ ನಾನು ಬರೆದ ಕವನ http://sampada.net/%...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಪ್ರಯತ್ನ ಯಶಸ್ವಿಯಾಗಬೇಕಾದರೆ ನಿಮ್ಮ ಊರಲ್ಲಿ ಗುಬ್ಬಿ ಇರಬೇಕು. ಇಲ್ಲದಿದ್ದರೆ ಗುಜರಾತ್ ನಿಂದ ನನ್ನ ಹಾಗೆ ಫೊಟೋ ತಂದು ಇಟ್ಟುಕೊಳ್ಳಬೇಕು. ಗುಜರಾತ್ ನಲ್ಲಿ ತುಂಬಾ ಗುಬ್ಬಿಗಳಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅದೆ ನೋವಿನ ಸಂಗತಿ ಶೊಭಾಅವ್ರೆ. ಫೊಟೊದಲ್ಲೆ ನೋಡಿ ಖುಶಿಪಡೊ ಕಾಲ ಬಂತಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಾಶೋ, ಗುಬ್ಬಚ್ಚಿ, ಮತ್ತಿತರ ಹಕ್ಕಿಗಳ ಕಣ್ಮರೆಗೆ ತಾವು ನೀಡಿದ ಕಾರಣಗಳೊಂದಿಗೆ ಮೊಬೈಲ್ ಟವರ್ ಗಳೂ ಕಾರಣವಂತೆ. ಕೇರಳದ ಜೀವಶಾಸ್ತ್ರ ಪ್ರೊಫೆಸರ್ ಜೈನುದ್ದೀನ್ ರವರ ಸಮೀಕ್ಷೆಯ ಪ್ರಕಾರ ಟವರ್ ಗಳಿಂದ ಹೊಮ್ಮುವ ಕಿರಣಗಳ ಕಾರಣ ಪಕ್ಷಿಗಳ ಹಾರಾಟದ ಸಾಮರ್ಥ್ಯ ಕುಗ್ಗಿ ಪಟ್ಟಣ, ನಗರ ಪ್ರದೇಶಗಳಿಂದ ಕಣ್ಮರೆ ಯಾಗುತ್ತಿವೆಯಂತೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ಕಿಸಿ. http://www.thehindu....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.