ಗುರಿಯ ದಾರಿ ಗುರು.....

4

          ಗುರಿಯ ದಾರಿ ಗುರು.....
ಗುರಿಯ ಸರಿದಾರಿಯನ್ನು ನಿರತವಾಗಿ ತಿರು ತಿರುಗಿ ತೋರಿ
ಅಜ್ಞಾನದ ತಿಮಿರವನು ಕರಗಿಸಿ 
ಜ್ಞಾನದ ಬೆಳಕನ್ನು ಧಾರೆಯಾಗಿ ಹರಿಸುವ ಗುರು
 
                    
ಶಿಷ್ಟತೆಯನು ಶಿಷ್ಯರಿಗೆ ರೂಢಿಸಿ ಜ್ಞಾನದ 
ಕ್ಷಕಿರಣಗಳ ಜೀವನದುದ್ದಕ್ಕೂ ತೂರಿಸುವ  
ಕಲೆಗಾರ ಸರ್ವತೋಮುಖ ವ್ಯಕ್ತಿತ್ವದ ಸಾಕಾರ ಶಿಕ್ಷಕ
 
ಆದಿ ಅನಾದಿಯ ಅರಿವನು ಅಗಾಧವಾಗಿ ಅರಿವಾಗಿಸುವ
 ಆಚಾರ ವಿಚಾರಗಳನ್ನು ಪ್ರಚುರಗೊಳಿಸುವ 
ಜ್ಞಾನದ ಆದಿಯ ಆರ್ಯ ಆಚಾರ್ಯ
 
 
ಅಮ್ಮನಂತೆ ಮಮತೆಯ ಯೋಗಿಯ 
ಧ್ಯಾನ ಮನಸಿನ
ಪರಿಪಕ್ವ ವಿಷಯ ನುರಿತ 
ಕಲ್ಪನೆಯನು ವಾಸ್ತವಕ್ಕಿಳಿಸುವ ಅಧ್ಯಾಪಕ
 
ಉನ್ನತ ಪದವಿ ಪಡೆಯಲು ತಡೆಗಳನ್ನು 
ಪಾರುಮಾಡುವ ಉಪಾಯವನ್ನು ಅಪ್ಯಾಯಮಾನವಾಗಿ 
ಅಧ್ಯಾಯಗಳನ್ನು ಪ್ರವಚಿಸುವ ಉಪಾಧ್ಯಾಯ
 
—Rukku 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.