ಗೂಗಲ್ ಬಜ್ ಗೊಂದು ವಿದಾಯ ಹೇಳಿಬಿಡಿ.

4

 
ಬಹಳ ವರ್ಷಗಳಿಂದ ಅಂತರ್ಜಾಲ ಲೋಕದಲ್ಲಿ ನಿನ್ನ ಲೀಲೆ ತೋರಿದ್ದೆ. ನಿನ್ನ ಅಂಗಳದಲ್ಲಿ ಚಂದದ ಮಾತುಗಳ ವಿನಿಮಯವಾಗಿತ್ತು, ಹೊಸ ಸ್ನೇಹಿತರು ಸಿಕ್ಕಿದ್ದರು.ಅಂದದ ಚಿತ್ರಗಳಿಗೆ ಶಭಾಶ್ ಎನ್ನಲು ಪರಿಚಯವೇ ಬೇಕಿರಲಿಲ್ಲ.. ಜಗಳ ಗಳಲ್ಲೂ ಸ್ನೇಹ ಕಂಡವರಿದ್ದರು, ಚಿಂತನ ಕಟ್ಟೆ ಕೆಲವರಿಗಾದರೆ, ತುಂಟಾಟದ ಅಂಗಳವಾಗಿದ್ದೆ ಹಲವರಿಗೆ.ಯಾರದೋ ಕೋಪಕ್ಕೆ, ಅಳುವಿಗೆ, ನೋವಿಗೆ, ಸಾಂತ್ವನಕ್ಕೆ, ಕಚಗುಳಿಗೆ ,ನಗುವಿಗೆ ,ಪ್ರಚಲಿತ ವಿಧ್ಯಾಮಾನಗಳಿಗೆ, ಒಳ್ಳೆಯ ಮನಸುಗಳ ಕೂಡುವಿಕೆಗೆ ಸಾಕ್ಷಿಯಾಗಿದ್ದೆ ನೀನು . ದಿನವು ನಿನ್ನ ಅಂಗಳದ ದರ್ಶನವಿಲ್ಲದೆ ಮುಂದಿನ ಕೆಲಸ ಇರಲಿಲ್ಲ. ಆದರೆ ಯಾಕೋ ಕಾಣೆ ನೀನು ನಮ್ಮನ್ನು ಬಿಟ್ಟು ನಮ್ಮೆಲ್ಲರ ಮನದ ಮಾತುಗಳ , ಭಾವನೆಗಳ ಗೆಳೆತನ ಬಿಟ್ಟು ಹೊರಟೇಬಿಟ್ಟೆ ಮತ್ತೆ ಬಾರದ ಜಾಗಕ್ಕೆ. ನಿನ್ನ ಅಂಗಳವಿಂದು ಯಾರೂ ಸುಳಿಯದ ತಾಣವಾಗಿ ಗುರುತುಸಿಗದೆ ಇತಿಹಾಸವಾಗಿದೆ. ಇಷ್ಟುದಿನ ನಮ್ಮೊಡನಿದ್ದ ನಿನಗೆ ಇಗೋ ನನ್ನ ಭಾವ ಪೂರ್ಣ ಶ್ರದ್ದಾಂಜಲಿ . ನಿನ್ನ ನೆನಪು ನನ್ನ ಮನದಲ್ಲಿ ಸದಾ ಅಮರ . ಬನ್ನಿ ಗೆಳೆಯರೇ ನಿಮ್ಮ ಮಾತನ್ನೂ ಸೇರಿ "ಬಜ್" ಗೆ ವಿದಾಯ ಹೇಳಿಬಿಡಿ.


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನು ಇದನ್ನು ಗಮನಿಸಿಯೇ ಇರಲಿಲ್ಲ.. :-( (ಮರೆತೇ ಹೋಗಿತ್ತು Buzz ಸೇವೆ ನಿಇಂತಿರುವುದು) Buzz.. ಇಲ್ಲದಿರುವುದು ಏನೋ ಕಳೆದಂತಿದೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.