ಗೆಳತಿ....ಆದರ್ಶ ಸ್ನೇಹಿತೆ.

4

ಆದರ್ಶ ಸ್ನೇಹಿತೆ——-
                                                       
  ಸ್ನೇಹದ ಹೂದೋಟದಿ ಅರಳುವ ಹೂ ಸ್ನೇಹಿತೆ
 ಬದುಕಿನ ಹಾಳೆಯ ಮೇಲೆ ಬರೆವಳು ಸ್ನೇಹ ಕವಿತೆ 
ಧೀರೆಯ ಸಂಗದಲಿ ದುಮ್ಮಾನ ಮರೆತೆ ....
ಜೀವನ ಯಾನವ ಜತನದಿ ಕಾಯುವ ಜೊತೆಗಾತಿ  
ಬಾಳ ಗೋಳನು ಅಳಿಸಿ ನಲಿಸುವ ನಲ್ಮೆಯ ಗೆಳತಿ ...
ಬಂಧು ಬಂಧನ ರಹಿತ ಸ್ನೇಹ ಬಂಧಿತೆ      
ಸೋಲಿನ ಸವಾಲನು ಸಲೀಸಾಗಿ ಗೆಲಿಸುವ ಸರಳ ಸಹೇಲಿ..
ಥಳುಕು ಬಳುಕಿನ ಕಳಪೆಯಾಗದೆ ಹಾಲು ಬೆಳಕಿನ ಗುಣಿಯಾಗಿ ಬಳಿಯಲಿ ಗಣಿಯಾಗಿರುವಳು ಗೆಳತಿ.
                           
              ಗೆಳತಿ....
ಗೆಳತಿ ಆದರೆ ಜೊತೆಯಲ್ಲಿ ನಡೆವೆ 
ಇಲ್ಲದೆ ಹೋದರೆ ನೀ ನಡೆವುದ ನೋಡುವೆ
ನಿನ್ನ ದಾರಿ ತಲುಪಿದ ಮೇಲೆ ಹಿಂದಿರುಗುವೆ 
ಎಡವಿದರೆ ಎಲ್ಲಡತಡೆಯ ದಾಟಿ ಬೀಳದಂತೆ ತಡೆಯುವೆ 
ಬಿದ್ದರೆ ಸದ್ದಿಲ್ಲದೆ ಎದ್ದು ನಿಲಿಸಿ ನಡೆಸುವೆ 
ಅದ್ಹಾಗದಿದ್ದರೆ ನಿನ್ನ ನಡೆಯ ಗುರಿ ತಲುಪಲೆಂದು ಹಾರೈಸುವೆ 
—-Rukku 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.