" ಜೀವನದಲ್ಲಿ ಮೊದಲು ನೌಕರಿ ಆಮೇಲೆ ಛೋಕರಿ "

2

ಹೆತ್ತವರ ಮಾತು ಕೇಳಿ ಬದುಕುವುದು ತುಂಬಾ ಸೂಕ್ತ, ಎಕೆಂದರೆ ಅವರು ನಮ್ಮ ಉದ್ಧಾರಕ್ಕಾಗಿಯೆ ನಮಗೆ ಬುದ್ದಿವಾದ ಹೇಳುವುದು. ಅವರು ನಮ್ಮ ಜೀವನ ಸುಖವಾಗಿರಲಿ ಅನ್ನುವದು ಅವರ ಆಸೆಯ ಜೊತೆಗೆ ಅವರ ಹಕ್ಕು ಕೂಡಾ ಹುಟ್ಟಿಸಿದ ನಮಗೆಲ್ಲಾ ಒಂದು ಸರಿಯಾದ ದಾರಿ ತೋರಿಸುವುದು. ಅವರ ಕರ್ತವ್ಯದ ಜೊತೆಗೆ ಜವಾಬ್ದಾರಿಯಾಗಿದೆ. ಅದರಂತೆ ನಡೆದುಕೊಳ್ಳುವುದು ನಮ್ಮ ಧರ್ಮವಾಗಿದೆ. ಯಾಕೆ ಮಾತಿನ ಉಲ್ಲೇಖವಾಯಿತುಯೆಂದರೆ, ನನ್ನ ಗೆಳೆಯ ಮಹೇಶನ ಕಥೆ ನಿಮ್ಮ ಮುಂದೆ ಹೇಳಬೇಕಿದೆ ಅದಕ್ಕಾಗಿ ಚಿಕ್ಕ ಪೀಠಿಕೆ ಅಷ್ಟೆ ಅವನ ಜೀವನಕ್ಕು ಮೇಲಿನ ಮಾತಿಗೂ ತುಂಬಾ ಸಂಬಂಧವಿದೆ. ಹೇಗೆ ಅಂದರೆ ಕಥೆ ನಿವು ಓದಲೆ ಬೇಕು.

ಮಹೇಶ ನನ್ನ ಚಿಕ್ಕಂದಿನಲ್ಲಿಯ ಗೆಳೆಯ, ಅವರ ತಂದೆ ಕಂಬಾರಿಕೆಗೆ ನಮ್ಮ ಊರಲ್ಲಿ ಹೆಸರಾದವರು, ಅವರ ತಾಯಿ ಗೃಹಿಣಿ ಅಕ್ಕ ತಂಗಿ ತಮ್ಮಂದಿರನ್ನು ಹೊಂದಿದ್ದ ಒಂದು ಸಮೃದ್ಧ ಕುಟುಂಬ ತಾನು ಕಂಬಾರಿಕೆ ಮಾಡುತ್ತಿರುವುದು ನನ್ನ ಕರ್ಮ ಆದರೆ ನಮ್ಮ ಮಕ್ಕಳು ಇದೆ ಕಾಯಕದಲ್ಲಿ ಮುಂದುವರೆಯಬಾರದು ಎನ್ನುವ ದೊಡ್ಡ ಹಂಬಲದಿಂದ ಅವರ ತಂದೆ ಶ್ರೀ ರಾಮಚೆಂದ್ರ ತನ್ನ ಎಲ್ಲಾ ಮಕ್ಕಳಿಗೂ ಸರಕಾರಿ ಶಾಲೆಗೆ ಹಾಕಿದ ಮಹೇಶ ಮೊದಲನೆ ಮಗ ಈತನೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವ ಭರವಸೆಯೊಂದಿಗೆ ಅವನು ಚಿಕ್ಕಂದಿನಲ್ಲಿ ಬೇಡಿದೆಲ್ಲವನ್ನು ತೆಗೆದುಕೊಟ್ಟು ಅವನನ್ನು ಚೆನ್ನಾಗಿ ಬೆಳಿಸಿದರು. ಮಹೇಶ ಜಾಣನಲ್ಲದಿದ್ದರು, ತರಗತಿಯಲ್ಲಿ ನಡೆಯುವ ಕಾರ್ಯಗಳಿಗೆ ಸ್ಪಂದಿಸುವ ಮಟ್ಟಿಗೆ ಜಾಣನಾಗಿದ್ದು ಶಾಲೆಯ ಗಣಿತ ಶಿಕ್ಷಕರಿಗೆ ತುಂಬಾ ಬೇಕಾದ ವಿಧ್ಯಾರ್ಥಿಯಾಗಿದ್ದ ಅವನ ಗಣಿತ ಚಾತುರ್ಯಕ್ಕೆ ಸಾಟಿಯಿರಲಿಲ್ಲಾ ನಮ್ಮ ತರಗತಿಯಲ್ಲಿ ಅವನು ಹೇಗಿದ್ದ ಎನ್ನುವುದಕ್ಕೆ ಒಂದು ಚಿಕ್ಕಂದಿನ ಘಟನೆ ನನಗೆ ನೆನಪಿದ್ದ ಪ್ರಕಾರ ಅಂದು ನಮ್ಮ ಗಣಿತ ಗುರುವಿನ ಪಾಠ ಗಣಿತದ ಲೆಕ್ಕಗಳನ್ನು ಬಿಡಿಸುವ ಸಮಯ ಎಲ್ಲರು ಅವರವರ ಲೆಕ್ಕದಲ್ಲಿ ಬಿಜಿಯಾದೇವು ನಮ್ಮ ಮಹೇಶ ಹಾಗೆ ಎದ್ದು ನನ್ನಲ್ಲಿ ಬಂದು ಹೇಳಿದ್ದು ಲೇ ಇದು ಸರಿಯಿದೆ ನನ್ನದು ನೋಡಿ ಮಾಡು ಅಂದಾ ಅದಕ್ಕೆ ನಾನು ಸರಿಯೆಂದು ಅದನ್ನೆ ನೋಡಿ ಬರೆದೆ ಎಲ್ಲರನ್ನು ಎಬ್ಬಿಸಿ ನಮ್ಮ ಸರ್ ಕೇಳಿದರು ಆಗ ಇಬ್ಬರದು ಒಂದೆ ತರನಾಗಿದೆಯೋ ಅವರನ್ನು ಎಬ್ಬಿಸಿ ನಿಲ್ಲಿಸಿದರು ಆದರೆ ನಮ್ಮಿಬ್ಬರಿಗೆ ಮಾತ್ರ ನಿಲ್ಲಿಸಲಿಲ್ಲಾ ಇದನ್ನು ನೋಡಿ ನನಗೆ ವಿಚಿತ್ರ ಅನಿಸಿತು. ನಾನು ಮತ್ತು ಮಹೇಶ ಇಬ್ಬರು ನೋಡಿಯೆ ಬರೆದೆವು ಆದರೆ ನಮಗೇಕೆ ಎಬ್ಬಿಸಲಿಲ್ಲಾ ಅಂತಾ ಆಗ ಎಲ್ಲವು ಮುಗಿದು ಹೊರಗಡೆ ಬಂದು ನೋಡಿದಾಗ ಆತ ನನಗೆ ತೊರಿಸಿದ್ದೆ ಬೇರೆ ನಮ್ಮ ಸರ್ ಗೆ ತೋರಿಸಿದ್ದೆ ಬೆರೆ ಈತ ಹೀಗೆ ನಮಗೂ ನಮ್ಮ ಸರ್ ಗೂ ಒಂದೊಂದು ಬಾರಿ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ. ಇಂತಹ ಮಹೇಶ ತನ್ನ ಹತ್ತನೆಯ ತರಗತಿವರೆಗೂ ಓದಿದ ನಂತರ ಇವನಿಗೆ ಆದ ವಿಚಿತ್ರ ಖಾಯಿಲೆಯೆ ಪ್ರೀತಿ ಪ್ರೇಮ ಅದರ ಹಿನ್ನಲೆಯಲ್ಲಿ ನಮ್ಮ ಮಹೇಶನು ಇಂದು ಸ್ವಲ್ಪ ಹಿಂದೆ ಇದ್ದಾನೆ ಅನಿಸುತ್ತೆ. ಹಾಗೋ ಹೀಗೋ ನಮ್ಮ ಮಹೇಶ ತನ್ನ ಹತ್ತನೆಯನ್ನು ಮುಗಿಸಿದ ತನ್ನ ಪಿ.ಯು.ಸಿ. ಯನ್ನು ಓದಲು ಸಾಹೇಬರು ಸಿಟಿ ಹಾದಿ ಹಿಡಿದಾಗ ಕೆಟ್ಟರು ಅವರು ಅದರ ಮಾತೆ ಬೇರೆಯಾಗಿ ಹೋಯಿತು.

ದಿನಾಲು ಬಸ್ ಹತ್ತಿ ಇವರು ಕಾಲೆಜಿಗೆ ಹೋಗಬೇಕು ಎಲ್ಲಾ ಗೆಳೆಯರೊಂದಿಗೆ ಕಾಲೆಜಿನ ಪಯಣ ಶುರುವಾಯಿತು. ಮಹೇಶ ತನ್ನ ಕಾಲೆಜಿನಿಂದಲೆ ತನ್ನ ಭಾವಿ ಬದುಕಿನ ದಿನಗಳನ್ನು ಸರಿಯಾಗಿ ಕಳೆಯಲು ಸಾಧ್ಯವಾಗಲಿಲ್ಲಾ ಅನಿಸುತ್ತೆ. ದಿನಗಳಲ್ಲಿ ಅವನಿಗೆ ಜೊಡಿಯಾಗಿ ಸಿಕ್ಕವಳು ನಮ್ಮ ಪಕ್ಕದ ಊರಿನ ಚೆಲುವೆ ಜಾನಕಿ ಇವಳು ಪಿ.ಯು.ಸಿ. ಓದುವ ಹುಡುಗಿ ಚೆಂದ ಅಂದಕ್ಕೇನು ಕಡಿಮೆ ಇರಲಿಲ್ಲಾ ಇವಳು ಸ್ವಲ್ಪ ಸೂಕ್ಷ್ಮಿ ಹುಡುಗಿ ಬಸ್ ಲ್ಲಿ ಬರುವಾಗ ಹೋಗುವಾಗ ಯಾರಿಗೂ ನೋಡದವಳು ಆದರೆ ನಮ್ಮ ಮಹೇಶನ ಹತ್ತಿರ ಏನು ನೋಡಿದಳು ಗೊತ್ತಿಲ್ಲಾ ಅವನ ಒಂದೆ ನೋಟಕ್ಕೆ ಪ್ರೀತಿಲಿ ಬಿದ್ದಳು ಅವರ ಪ್ರೀತಿಲಿ ಬಿದ್ದ ಕ್ಷಣವೆ ಅಪರೂಪ ಅದು ಹೇಗೆ ಅಂದ್ರೆ " ಅಂದು ಸಮಯ ಹತ್ತು ಗಂಟೆ ಎಲ್ಲಾ ಗೆಳೆಯರು ಬಸ್ ಗಾಗಿ ಕಾಯುತ್ತಿರುತ್ತಾರೆ. ಆಗ ನಮ್ಮ ಮಹೇಶ ಕೂಡಾ ಒಬ್ಬರು ಅಲ್ಲಿಯೆ ನಿಂತಿದ್ದ ಜಾನಕಿಯು ಇದ್ದಳು . ಎಲ್ಲರಿಗೂ ಬಸ್ ಯಾವಾಗ ಬರುತ್ತೆ ಅಂತೆ ಚಿಂತೆ ಆದರೆ ಇವರಿಬ್ಬರು ಒಬ್ಬರಿಗೊಬ್ಬರು ನೋಡುತ್ತಾ ನಿಂತಿದ್ದರು. ಅವರ ನೋಡುವ ಶೈಲಿ ಎಲ್ಲರು ಅವರನ್ನೆ ನೋಡುವ ಹಾಗಿತ್ತು. ಪರಿಚಯವಿಲ್ಲದಿದ್ದರು ಪರಿ ಅವರಿಬ್ಬರು ತಮ್ಮ ಪಿ.ಯು.ಸಿ. ಮುಗಿಯುವವರೆಗೂ ನೋಡಿದರು ತಾವು ಇಬ್ಬರು ಪ್ರೀತಿ ಮಾಡುತ್ತಿವಿ ಅಂತಾ ಹೇಳಲೆ ಇಲ್ಲಾ ದಿನಾಲು ನೋಡುವ ಕಿರಿ ಕಿರಿ ಅವರ ಗೆಳೆಯ ಗೆಳತಿಯರೆಲ್ಲರಿಗೆ ಅತಿಯಾಯಿತು ಕೆಲವರು ಅವರಿಂದ ದೂರಾದರು ಕೆಲವರು ಬೈದರು ಇವರು ಮಾತ್ರ ಹಾಗೆ ಮುಂದುವರೆದರು .

ಇಂದು ಪಿ.ಯು.ಸಿ. ಪರೀಕ್ಷೆಯ ಕೊನೆಯ ಪತ್ರಿಕೆ ಹೇಗೆ ಬರೆದೆವು ಮುಂದೆ ಏನು ಮಾಡುವದು ಎನ್ನವ ಲೆಕ್ಕಾಚಾರದಲ್ಲಿ ಎಲ್ಲರು ನಿರತರಾಗಿದ್ದರೆ ಇವರಿಬ್ಬರು ಒಂದೊಂದು ಪತ್ರ ಮಾತ್ರ ಬದಲಾವಣೆ ಮಾಡಿರುತ್ತಾರೆ. ಅವರಿಬ್ಬರ ಪತ್ರದ ಸಾರಾಂಶ ಮಾತ್ರ ಒಂದೆ ಅದೆ ಪ್ರೀತಿ ಪ್ರೇಮ ಮಧುವೆ ನಿನಿಲ್ಲದೆ ನಾನು ಬದುಕಲಾರೆ ನನಗೆ ಮಧುವೆ ಆಗು ಹಾಗೆ ಹೀಗೆ ಬರೆದಿತ್ತು. ಪರೀಕ್ಷೆ ಬರೆದು ಮನೆಗ ಹೋದ ಇಬ್ಬರಿಗೂ ಈಗ ಮತ್ತೆ ಸೇರುವ ದಾರಿ ಯಾವುದು ತಿಳಿಯದಾಯಿತು. ಈತ್ತ ಮಹೇಶನ ತಂದೆ ತಾಯಿ ನಮ್ಮ ಮಗ ಸರಿಯಾಗಿ ಓದುತ್ತಿದ್ದಾನೆ ಅಂತಾ ಕನಸು ಆದರೆ ಸಾಹೇಬರು ಮಾತ್ರ ಅವಳ ಪ್ರೀತಿಯ ಗುಂಗಲಿ ಹಗಲು ಇರುಳು ಅತ್ತ ಜಾನಕೀಯು ದಿನೆ ದಿನೆ ಇವನ ಚಿಂತೆಯಲ್ಲಿ ಕೊರಗಿದಳು. ಒಂದು ದಿನ ಆಕಸ್ಮಿಕವಾಗಿ ಇಬ್ಬರು ಬೇಟಿ ಆಗುತ್ತಾರೆ. ಒಬ್ಬರಿಂದ ಇನ್ನೊಬ್ಬರಿಗೆ ಅವರ ಫೋನ್ ನಂಬರ ಸಿಗುತ್ತೆ. ಆಗ ಅವರಿಬ್ಬರು ನಮ್ಮ ಜೀವನದ ಮಧುವೆಗೆ ತಯಾರಾಗೋಣ ನಾನು ನಿನ್ನ ಬಿಟ್ಟು ಇರುವುದಿಲ್ಲಾ ಅಂತ ನಿರ್ಧಾರ ಮಾಡಿಯೆ ತೀರುತ್ತಾರೆ. ಅವರ ಮಾತಿನಂತೆ ಇಬ್ಬರು ಮನೆ ಬಿಟ್ಟು ಓಡಿ ಹೋಗಲು ಸಿದ್ಧರಾಗುತ್ತಾರೆ. ಅವರಿಲ್ಲಿರುವ ಕೆಲವು ರುಪಾಯಿಗಳು ಬಿಟ್ಟರೆ ಕೈಯಲ್ಲಿ ಏನು ಇಲ್ಲದೆ ತಯಾರಾದರು. ಅಂದು ರಾತ್ರಿ ಯಾರಿಗೂ ಹೇಳದೆ ಇಬ್ಬರು ಮನೆಬಿಟ್ಟು ಹೋದರು. ಹೋಗುವುದು ಎಲ್ಲಿಗೆ ಅಂತಾ ಗೊತ್ತಿಲ್ಲಾ ಆದೃಷ್ಟ ಎಲ್ಲಿಗೆ ಕರೆದುಕೊಂಡು ಹೋಗುತ್ತೊ ಅಲ್ಲಿಗೆ ಹೋಗೋಣಾ ಎಂದು ನಡೆದರು. ದೂರದ ಊರಿನಲ್ಲಿ ಹೋಗಿ ಜೀವನ ಪ್ರಾರಂಭಿಸಿದರು.

ಸ್ವಲ್ಪದಿನ ಜೀವನ ತುಂಬಾ ಖುಷಿಯಾಗಿದ್ದರು ಮಹೇಶನು ಕೆಲಸ ಮಾಡತೊಡಗಿದ ಅದರಲ್ಲಿ ಇಬ್ಬರು ಒಳ್ಳೆಯ ಜೀವನ ಮಾಡತೊಡಗಿದರು. ಆದರೆ ಅವರಲ್ಲಿ ಯಾವುದೋ ಒಂದು ಕೊರತೆಯಿದೆ ಎಂಬುವದು ಅವರಿಗೆ ಕಾಡುತ್ತಲೆ ಇತ್ತು. ಒಂದು ದಿನ ಮಹೇಶನಿಗೆ ಮನೆಗೆ ಬರಲು ತಡವಾಯಿತು ಜಾನಕಿ ಸುಂದರ ಹುಡುಗಿ ಮನೆಯಲ್ಲಿ ಒಬ್ಬಳೆಯಿದ್ದದ್ದು ಊರಿನ ಕೆಲವು ಪುಡಾರಿಗಳಿಗೆ ಗೊತ್ತಾಗಿ ಅವಳ ಮನೆಗೆ ನುಗ್ಗಿದರು. ಅವಳನ್ನು ಬಾಯಿ ಮುಚ್ಚುವಂತೆ ಹೆದರಿಸಿ ಅವಳಮೇಲೆ ಅತ್ಯಾಚಾರವೆಸಗಿ ಮನೆಯಲ್ಲಾ ಕೊಳ್ಳೆಹೊಡೆದು ಹೋದರು ಸಂಧರ್ಭದಲ್ಲಿ ತಾನು ಒಂಟಿಯಾದೆ ಎಂಬ ಕಲ್ಪನೆ ಅವಳಲ್ಲಿ ಮೂಡಿತು. ತಾನು ಹೇಗಾದರೆ ಇವರು ನನ್ನ ಬಿಡುವರು ಎಂಬುವ ಕಲ್ಪನೆಯೆ ಇರಲಿಲ್ಲಾ ಮಹೇಶನು ತಿರುಗಿ ಬಂದು ಮನೆಯ ಸ್ಥಿತಿಗತಿ ನೋಡುತ್ತಾನೆ. “ ಜಾನಕಿ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ ಮನೆಯ ಎಲ್ಲಾ ಸಾಮಾನು ಅಸ್ಥವ್ಯಸ್ಥವಾಗಿ ಹೋಗಿವೆ, ಇದ್ದ ಸಾಮಾನುಗಳು ಜಾಗ ಬದಲಿಸಿವೆ. ಇದೆಲ್ಲಾ ನೋಡಿದ ಮಹೇಶನಿಗೆ ದಿಕ್ಕು ತೋಚದಾಯಿತು ಯಾರಾನ್ನಾದರು ಕೂಗೋಣವೆಂದರೆ ಮರ್ಯಾದೆಯ ಪ್ರಶ್ನೆ ಏನುಮಾಡಲಿ ಅಂತಾ ಅಳುತ್ತಾ ಜಾನಕಿಗೆ ನೀರು ಹಾಕಿ ಎಚ್ಚರಮಾಡುತ್ತಾ ಕುಳಿತಾ ಒಂದೆ ಸಮನೆ ಜಾನು ಏನಾಯಿತು ಏಳು ಏನು ಇದೆಲ್ಲಾ ಯಾರು ಮಾಡಿದ್ದು ಹೇಳು ನಿನಗೇನಾಯಿತು ಹೇಳು ಎಂದು ಅಳುತ್ತಾನೆ. ಎಷ್ಟೊತ್ತಾದರು ಜಾನಕಿಯು ಏಳಲೇ ಇಲ್ಲಾ ನಂತರ ಸ್ವಲ್ಪ ಚೇತರಿಸಕೊಂಡು ಎದ್ದ ಜಾನಕಿ ಕಣ್ಣಬಿಡುತ್ತಾಳೆ ಆಗ ತನ್ನ ಪಕ್ಕದಲ್ಲಿ ಮಹೇಶನನ್ನು ನೋಡಿ ಜೋರಾಗಿ ಅಳುತ್ತಾ ಈಗ ಬಂದಿರಾ ನಿಮ್ಮ ಬರುವಿಕೆಗಾಗಿ ನನ್ನ ಪ್ರಾಣ ಹಿಡಿದಿದ್ದೀನಿ ಎನ್ನುತ್ತಾ ನಡೆದ ಘಟನೆ ವಿವರಿಸಿ ಅವನ ಎದೆಯಮೇಲೆ ಕೊನೆಯ ಉಸಿರೆಳೆದಳು ಮಹೇಶನು ದಿಗ್ಗಭೃಮೆಯಾದನು. ಜಾನಕಿ ಹೇಳಿದ ಕೊನೆಯ ಮಾತು ಏನು ಗೊತ್ತೆ" ನಾವು ತಪ್ಪು ಮಾಡಿದೇವು ನನಗೆ ಅಪ್ಪಾ ಅಮ್ಮಾ ಹತ್ತಿರವಿದ್ದರೆ ಸ್ಥಿತಿ ಬರುತ್ತಿರಲಿಲ್ಲಾ ನಾವು ದೊಡ್ಡ ತಪ್ಪು ಮಾಡಿದೆವು ಎಂದಳು. ನಮ್ಮ ಜೀವನವೇ ನಾವೆಲ್ಲ ನಮ್ಮ ತಂದೆ ತಾಯಿಯ ಮಾತು ಕೇಳದೆ ಹೋಗಿದ್ದಕ್ಕೆ ಗತಿ ಬಂದಿದೆ ಅನಿಸುತ್ತಿದೆ. ಈಗ ನಾನು ನಿನ್ನನು ಬಿಟ್ಟು ಹೋಗುತ್ತಿರುವೆನು ನನ್ನ ಕ್ಷಮಿಸು ಎಂದಳು. ಆಕೆಯ ಕೊನೆ ಉಸಿರೆಳೆದು ಹೋದ ಸ್ಥಿತಿ ನೋಡಿ ಮಹೇಶ ಕಂಗಾಲಾದನು .

ಇಂದು ಅವರಿಬ್ಬರು ಈಗ ನಮಗ್ಯಾರು ಇಲ್ಲಾ ನಾವು ಯಾರಿಗಾಗಿ ಎನ್ನುವ ವಿಚಾರ ಮೂಡಿದ್ದು ಜೀವನದ ಮೊದಲನೆ ಬಾರಿಗೆ ಅನಿಸಿತು. ಮಹೇಶ ತನ್ನ ದು:ಖದ ಸಮಯ ಕಳಿಯುತ್ತಾ ಜಾನಕಿಯ ಶವವನ್ನು ಹೊತ್ತು ನಡೆದಾಗ ಅವನಿಗೆ ಎದುರಾದ ವಿಧಿಯ ಹೊಸ ಆಟ ಕಾದಿದ್ದು ಗೊತ್ತಿರಲಿಲ್ಲಾ ಆಗ ಎದುರಿಗೆ ಬಂದಿದ್ದು ಪೋಲಿಸರು ಹೆಣವನ್ನು ನಿಲ್ಲಿಸಿ ಹೇಳಿದರು ಯು ಆರ್ ಅಂಡರ ಅರೆಷ್ಟ ಅಂತಾ ಇದನ್ನು ಕೇಳಿ ಕಾರಣ ಕೇಳಿದ್ದಕ್ಕೆ ನೀವು ಒಂದು ಹುಡುಗಿಯನ್ನು ಕಿಡ್ನಾಪ್ ಮಾಡಿ ಅನುಭವಿಸಿ ಕೊಲೆ ಮಾಡಿದ ಪ್ರಕರಣದ ಮೇಲೆ ನಿಮ್ಮ ಮೇಲೆ ಅರೆಷ್ಟ ವಾರಂಟ್ ಇದೆ ಅಂತಾ ಹೇಳಿದ್ದಾರೆ ಹೆಣವನ್ನು ಪೊಸ್ಟ ಮಾಟಂಗೆ ಕೊಡಿ ಎಂದರು ಮೊದಲೇ ನೊಂದಿರುವ ಮಹೇಶನಿಗೆ ಏನು ಹೇಳುವುದು ತಿಳಿಯಲಿಲ್ಲಾ ನೋಡಿ ಇದರಲ್ಲಿ ನನ್ನದೇನು ತಪ್ಪು ಇಲ್ಲಾ ನನಗೇನು ಅಂತಾನೆ ಗೊತ್ತಿಲ್ಲಾ ನನ್ನ ಜಾನಕಿಯನ್ನು ಪ್ರೀತಿಸಿ ಮಧುವಾಯಾದದ್ದು ಮಾತ್ರ ಗೊತ್ತು ಅದಕ್ಕಾಗಿ ನನಗೆ ಏನು ಮಾಡಬೇಡಿ ಪ್ಲೀಸ್ ನಾನು ನಿರಾಪರಾಧಿ ಎಂದು ಅಂಗಲಾಚಿ ಬೇಡಿದ ಆದರೆ ಕರುಣೆ ತೋರದ ಪೋಲಿಸರು ಎಳೆದು ಜೈಲಿಗೆ ಒಯ್ಯದರು ಈತ್ತ ಪೋಸ್ಟಮಾಟಂ ಮಾಡಿದೆ ಮೇಲೆ ಸ್ಪಷ್ಟವಾಗಿ ತಿಳಿಯಿತು ಅದು ರೇಪ್ ಮತ್ತು ಕೊಲೆ ಅಂತಾ ಮಹೇಶನು ಕೋರ್ಟ್ ಗೆ ಹಾಜಾರಾದ ಮಹೇಶ ಹೇಳಿದ್ದು ಇಷ್ಟು ಮೈಲಾರ್ಡ ನನಗೆ ಇದಾವುದು ಸಂಬಂಧವಿಲ್ಲಾ ನಾನು ನಿರಾಪರಾಧಿ ನಾನು ಅವಳನ್ನು ಪ್ರಿತಿಸಿ ಮಧುವಾಯಾದವನು ಇದಕ್ಕು ನನಗೂ ಸಂಬಂಧವಿಲ್ಲಾ ನನ್ನ ಹೆಂಡಿತಿಯ ಸಾವಿಗೆ ನ್ಯಾಯ ಕೊಡುವುದು ಬಿಟ್ಟು ತಾವು ನನಗೆ ಅನ್ಯಾಯ ಮಾಡಬೇಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ. ಆದರೆ ಅವನ ಕತೆ ಮಾತ್ರ ಯಾರು ಕೇಳಲಿಲ್ಲಾ ಬಗೆಹರಿಸಲಿಲ್ಲಾ ಹೀಗೆ ಜೈಲಿನಲ್ಲಿ ಕೆಲವು ದಿನಗಳು ಕಳೆಯುತ್ತಾನೆ. ಜೈಲಿನಲ್ಲಿ ಕುಳಿತ ಮಹೇಶ ತನ್ನ ಭಾವನೆಗಳನ್ನು ಆಗಾಗ ಬರೆಯುತ್ತಾನೆ. ಅವಳೊಂದಿಗಿನ ಜೀವನದ ಪುಟಗಳನ್ನು ಬರೆಯುತ್ತಾ ಹೋಗುತ್ತಾನೆ. ತನಗಾದ ನೋವು ತನಾಗಾದ ಹತಾಶೆ ಯಾರಿಗೂ ಹೇಳದೆ ಇರುವ ವಿಷಯ ತನ್ನ ಬರವಣಿಗೆಯ ಮೂಲಕ ಹೇಳುತ್ತಾನೆ. ಹಾಗೆ ತನ್ನ ಕೆಲವು ಬರಹಗಳನ್ನು ಕೆಲವು ಪತ್ರಿಕೆಗಳಿಗೆ ಕಳುಹಿಸುತ್ತಾನೆ ಅದರಲ್ಲಿ ಕೆಲವು ಪತ್ರಿಕೆಯವರು ಸ್ಪಂದಿಸುತ್ತಾರೆ. ಕೆಲವರು ಇವು ಹುಚ್ಚು ಮನಸ್ಸಿನ ಹತ್ತು ಕಾಯಿಲೆಗಳು ಅಂತಾ ಅಲ್ಲಾ ಗಳಿಯುತ್ತಾರೆ. ಅದರಲ್ಲಿ ಒಂದು ಪತ್ರಿಕೆಯ ಸಂಪಾದಕರು ಇವನ ಬರಹಗಳನ್ನು ನೋಡಿ ತುಂಬಾ ಕುತುಹಲರಾಗುತ್ತಾರೆ. ಇವರ ಬರಹಗಳ ಒಂದು ಪುಸ್ತಕ ಮಾಡಬೇಕು ಎನ್ನುವ ಆಸೆಯಿಂದ ಅವನನ್ನು ಬೇಟಿಮಾಡಲು ಒಂದು ದಿನ ಜೈಲಿಗೆ ಬರುತ್ತಾರೆ. ಅಂದು ಜೈಲಿನಲ್ಲಿ ನನಗೆ ಬೇಟಿಮಾಡಲು ಯಾರೊ ಬಂದಿದ್ದಾರೆ ಅಂದಾಗ ಆತ ನಂಬುವವುದಿಲ್ಲಾ ನನಗೆ ಯಾರು ಇಲ್ಲಾ ಇದ್ದರು ಅವರ್ಯಾರು ಬರುವದಿಲ್ಲಾ ನಾನೆನು ಅಂತಹ ಸಾಧನೆ ಮಾಡೆಯಿಲ್ಲಾ ಅದಕ್ಕಾಗಿ ಅವರು ಬರುವುದಿಲ್ಲಾ ನಾನು ಕೂಡಾ ಯಾರಿಗೂ ಕಾಯುತ್ತಿಲ್ಲಾ ಅದಕ್ಕಾಗಿ ನನ್ನೊಂದಿಗೆ ತಮಾಷೆ ಮಾಡಬೇಡಿ ಎನ್ನುತ್ತಾನೆ. ಆಗ ನಿಜವಾಗಿಯು ನಿಮ್ಮನ್ನು ನೋಡಲು ಯಾರೊ ಬಂದಿದ್ದಾರೆ ಅಂದಾಗ ಹೊರಗಡೆ ನೋಡಿ ಗಾಬರಿಯಾಗುತ್ತಾನೆ. ಅವರು ಯಾರು ಪರಿಚಯವೆ ಇಲ್ಲಾ ಆದರೆ ನನ್ನ ಯಾಕೆ ನೋಡಲು ಬಂದರು ಎಂದು ಆಗ ಸಂಪಾದಕರು ನಾನು ಅಮೃತ ಸ್ವರ ಪತ್ರಿಕೆಯ ಸಂಪಾದಕ ಅಂದಾಗ ಅವನಲ್ಲಿ ಆನಂದಭಾಸ್ಪ ಹರಿದು ಬರುತ್ತದೆ. ಸರ್ ಕ್ಷಮಿಸಿ ತಾವು ಇಲ್ಲಿಯವರೆಗೂ ತಮಗೆ ಪತ್ರದಲ್ಲಿ ನಿಮ್ಮ ಅಕ್ಷರಗಳಲ್ಲಿ ನೋಡಿದ್ದೆ ಆದರೆ ಇಂದು ಎದುರಿಗೆ ನೋಡಿ ತುಂಬಾ ಖುಷಿಯಾಯಿತು. ಅಂದಾ ಇಲ್ಲಾ ನನಗೆ ನಿಮ್ಮ ನೋಡಿ ತುಂಬಾ ಖುಷಿಯಾಯಿತು ನಿಮ್ಮ ಬರಹಗಳನ್ನು ಓದಿದಾಗಲೆಲ್ಲಾ ನಿಮ್ಮ ಬೇಟಿಯಾಗಲೆ ಬೇಕು ಅನಿಸುತ್ತಿತ್ತು . ನಿಮ್ಮ ಒಂದೊಂದು ಬರಹದಲ್ಲು ಒಂದು ಸುಂದರ ಅನುಭವವಿದೆ ನಿಮ್ಮ ನೈಜ ಅನುಭವ ಚಿತ್ರಣ ನೀವು ಜೈಲಿನಲ್ಲಿದ್ದೀರಿ ಎಂದು ಕೇಳೀದಾಗ ಮತ್ತೆ ಹೆಚ್ಚಾಯಿತು ನೋಡಬೆಕು ಎನ್ನುವ ಕುತೂಹಲ ಜಾಸ್ತಿಯಾಯಿತು. ಅದಕ್ಕಾಗಿ ನಿಮ್ಮ ಕಾಣಲು ಬಂದೆ ನೀವು ಬರೆದ ಕೆಲವು ಬರಹಗಳಿಂದ ನಿಮ್ಮ ಜೀವನದ ಕೆಲವು ಘಟನೆಗಳು ನನಗೆ ಗೊತ್ತಿವೆ ಆದರೆ ಇನ್ನು ಸಾಕಷ್ಟು ಚಿಕ್ಕವರಿದ್ದೀರಿ ಇಷ್ಟು ಚೆನ್ನಾಗಿ ಬರೆಯಲು ಯಾರ ಬೆಂಬಲವಿದೆ ಅದೂ ಜೈಲಿನಲ್ಲಿದ್ದು ಬರೆದಿದ್ದೀರಿ. ತುಂಬಾ ಸಂತೋಷ ನಿಮ್ಮ ಬಗ್ಗೆ ಒಂದು ಸಂದರ್ಶನ ನಮ್ಮ ಪತ್ರಿಕೆಗೆ ಹಾಕುವ ನಿಮ್ಮ ಸಂದರ್ಶನಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿದರು. ಇದನ್ನು ಕೇಳಿದ ಮಹೇಶನಿಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲಾ ಆದರೆ ಅವರ ಮುಂದೆ ನಾನು ತುಂಬಾ ಚಿಕ್ಕವನು ಎಂದು ಸುಮ್ಮನಾದ. ಅಂದು ಪತ್ರಿಕೆಯ ಸಂಪಾದಕರು ಅವರನ್ನು ಸಂದರ್ಶಿಸಿ ಅವರ ಜೀವನದ ಕೆಲವು ಘಟನೆಗಳನ್ನು ಮೆಲುಕುಹಾಕಿ ಹೊರ ನಡೆದಾಗ ಮಹೇಶ ಹೇಳಿದ ಕೊನೆಯ ಸಾಲು ಸರ್ ನಾನು ನಿಜವಾಗಿಯೂ ಅಪರಾಧಿಯಲ್ಲಾ ಆದರೆ ನಾನು ಇಲ್ಲಿ ಅಪರಾಧಿ " ಎಂದ ಮಾತಿಗೆ ಸಂಪಾದಕರು ಹೇಳಿದರು ಜಗತ್ತೆ ಹೀಗೆ ಸರ್ ನಾವು ಮಾಡುವದು ಒಂದು ಅದೂ ತಿಳಿದುಕೊಳ್ಳುವುದು ಇನ್ನೊಂದು " ಹೆದರಬೇಡಿ ದೇವರಿದ್ದಾನೆ.

ಕೆಲವು ದಿನಗಳ ನಂತರ ಆತನ ಸಂದರ್ಶನ ಅವರ ಪತ್ರಿಕೆಯಲ್ಲಿ ಪ್ರಕಟವಾಯಿತು ಆಗ ಜೈಲಿಗೆ ಕೆಲವು ಪ್ರೇಮಿಗಳು ಕೆಲವು ಸಾಮಾನ್ಯ ಜನರು ಬೇಟಿಮಾಡಲು ಬಂದರು ಮತ್ತು ಕೆಲವು ಮಾಧ್ಯಮದ ಮಿತ್ರರು ಅವರನ್ನು ಕಾಣಲು ಜೈಲಿಗೆ ಬಂದರು ಇಷ್ಟು ನೋಡಿದ ಮಹೇಶನಿಗೆ ತುಂಬಾ ಸಂತೋಷವಾಯಿತು ಕೆಲವು ಮಾಧ್ಯಮ ಮಿತ್ರರು ಇವರು ನಿರಾಪರಾಧಿ ಎಂದು ಪ್ರತಿಬಿಂಬಿಸಿದವು ಆದರೆ ಇವರೆಗೆ ಅವನ ಜೈಲು ಶಿಕ್ಷೆ ಮುಗಿದಿತ್ತು ಇನ್ನು ಕೆಲವು ದಿನಗಳಲ್ಲಿ ಆತ ಹೊರಬರುವ ನಿಟ್ಟಿನಲ್ಲಿ ಇದ್ದ . ಇಂದು ನಮ್ಮ ಮಹೇಶನ ಬಿಡುಗಡೆಯ ದಿನ ಆತ ಹೊರಹೋಗಿ ಎನು ಮಾಡಲಿ ಎಂಬ ಪ್ರಶ್ನೆ ಕಾಡಿತು. ಆದರೂ ಹೊರಗೆ ಬಂದ ಆತ ಯಾರ ಮನೆಗೂ ಹೋಗಲಿಲ್ಲಾ ನೇರಾವಾಗಿ ಹೋದದ್ದು ಶ್ರೀ ಸುಕ್ಷೇತ್ರ ಘತ್ತರಿಗಿಗೆ ಯಾಕೆಂದರೆ ಆತ ತಾಯಿಯ ಪರಮ ಭಕ್ತ ಜಾನಕಿಯೊಂದಿಗೆ ಮಧುವೆ ಅವಳ ಸನ್ನಿಧಾನದಲ್ಲೆ ಆಗಿದ್ದ ಅದಕ್ಕಾಗಿ ಮುಂದೆ ಅವಳೆ ದಾರಿ ತೋರುವಳು ಎಂದು ತಿಳಿದು ಬಂದ ಕೆಲವು ದಿನಗಳ ಕಾಲ ತಾಯಿಯ ದಾಸೋಹದಲ್ಲಿ ದುಡಿದ ಅಲ್ಲಿಯೆ ಊಟ ಪಾಠ ಆಟ ಬರವಣಿಗೆ ಹೀಗೆ ಕೆಲವು ದಿನ ವರ್ಷಗಳವರೆಗೆ ಆತನ ಜೀವನ ಸಾಗಿತು. ತಾಯಿಯ ಕೃಪೆ ಎಂಬಂತೆ ಅಲ್ಲಿಗೆ ಒಂದು ಆತನ ಬಾಲ್ಯದ ಗೆಳೆಯರಿಬ್ಬರು ಬರುತ್ತಾರೆ. ಅವರೆ ಕಾಶಿ ಮತ್ತು ವಿಶ್ವ ಇಬ್ಬರು ಬಾಲ್ಯದ ಸ್ನೆಹಿತರು ಹಾಗೂ ಈಗಾಗಲೇ ತುಂಬಾ ಓದಿಕೊಂಡು ಒಂದೊಂದು ಕ್ಷೇತ್ರದಲ್ಲಿ ಮುಂದುವರೆದು ಇರುವ ವ್ಯಕ್ತಿಗಳು ಅವರಿಬ್ಬರು ಘತ್ತರಿಗಿ ತಾಯಿಯ ದರುಶನ ಮಾಡಲು ಬಂದಿದ್ದರು ಅಲ್ಲದೆ ಕಾಶಿ ಹೇಳಿದ್ದ ಇಲ್ಲಿ ಮಹೇಶ ಇರತಾನಂತೆ ಬೇಟಿಯಾಗುವ ಎಂದು ಹಾಗೆ ಇಬ್ಬರು ದಾಸೋಹದ ಒಳಗೆ ಹೋದರು ಅಲ್ಲಿ ತಾಯಿಯ ಸೇವೆಯಲ್ಲಿ ನಿರತಾನಾಗಿದ್ದ ಮಹೇಶನನ್ನು ಕಂಡು ಅವನಿಗೆ ನೋಡಿ ಜೋರಾಗಿ ತಬ್ಬಿಕೊಂಡರು ಆಗ ಮಹೇಶನ ಸ್ಥಿತಿಗತಿ ನೋಡಿದರೆ ಅವನು ಯಾರು ತಬ್ಬಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲಾ. ಆದರೂ ಇವರು ಗೆಳೆಯರಾಗಿದ್ದರಿಂದ ಯಾವುದೆ ಭೇಧಭಾವ ಮಾಡದೆ ತಬ್ಬಿಕೊಂಡು ಅವನ್ನನ್ನು ಒಂದು ಹಂತದವರೆಗೆ ಕೆಲವು ಬುದ್ದಿಮಾತು ಹೇಳಿದರು. ಅದನ್ನು ಮನಗೊಂಡ ಮಹೇಶನು ಅವರನ್ನು ನೋಡಿ ಅವರೊಂದಿಗೆ ಮಾತಾಡಿ ಪ್ರಚೋಧನೆಗೊಂಡ ನಂತರ ಅವರಿಂದ ಸಾಹಾಯ ಯಾಚಿಸಿದ ಅದಕ್ಕೆ ಒಪ್ಪಿದ ಇಬ್ಬರು ನಿನಗೆ ಯಾವರೀತಿಯಾದರು ನಾವಿಬ್ಬರು ಸಾಹಾಯ ಮಾಡುತ್ತೇವೆ ನೀನು ಹೆದರದೆ ಊರಿಗೆ ಬಾ ಬೇರೆಯೊಂದು ಜೀವನ ನಿನಗೆ ಕಾದಿದೆ ಜೀವನ ತುಂಬಾ ದೊಡ್ಡದಿದೆ ಇಲ್ಲಿಗೆ ಮುಗಿದಿಲ್ಲ ಎಂದು ಹೇಳಿ ಹೋಗುತ್ತಾರೆ. ಇದಾದ ಕೆಲವು ತಿಂಗಳುಗಳ ನಂತರ '' ಒಂದು ಪತ್ರಿಕೆಯಲ್ಲಿ ಸುದ್ದಿ ನೋಡಿ ಗಾಬರಿಯಾಗುತ್ತಾರೆ . ವಿಶ್ವ ಮತ್ತು ಕಾಶಿ ಸುದ್ಧಿ ಹೀಗಿತ್ತು " ಯುವಪ್ರಶಸ್ತಿ ಪಡೆದ ಯುವಕ ಮಹೇಶ ಒಬ್ಬ ಪ್ರೇಮ ಕವಿ ಎಂದು " ಅವನ ಭಾವಚಿತ್ರ ನೋಡಿ ಗಾಬರಿಯಾಗುತ್ತಾರೆ. . ಇಬ್ಬರು ಮಾತಾಡುತ್ತಾರೆ ನೋಡು ನಾವು ಬದಲಾಗುವ ಮನಸ್ಸು ಮಾಡಿದರೆ ಯಾವಾಗಬೇಕಾದರು ಬದಲಾಗಬಹುದು ಎಂದು ಅದಕ್ಕೆ ತಕ್ಕ ಉದಾಹರಣೆ ನಮ್ಮ ಮಹೇಶ ನೋಡು ಹೇಗಿದ್ದ ಜೀವನ ಹೇಗೆ ಮಾಡಿಕೊಂಡ ನಾಳೆ ಅವನಿಗೆ ಸನ್ಮಾನ ಸಮಾರಂಭವಿದೆ ಹೋಗೋಣ ಎಂದು ಮಾತಾಡಿದರು. ಮರುದಿನ ಬೆಳೆಗ್ಗೆ " ಒಂದು ಸುಂದರವಾದ ಸಾಮಾಜಿಕ ಸಮಾರಂಭ ನಡೆದಿತ್ತು ಅದರಲ್ಲಿ ಯುವ ಕವಿಗಳಿಗೆ ಪ್ರೇಮ ಬರಹಗಾರರಿಗೆ ಸಮ್ಮಾನವಿತ್ತು. ಕಾಶಿ ಮತ್ತು ವಿಶ್ವ ಹೋಗಿ ಒಂದು ಕಡೆ ಕುಳಿತ್ತಿರುತ್ತಾರೆ. ಆಗ ಮಹೇಶನು ಸನ್ಮಾನ ಸ್ವಿಕರಿಸಿ ಮಾತಾಡಲು ಹೇಳುತ್ತಾರೆ. ಮಹೇಶನ ಮಾತಿನ ಶೈಲಿ ಹೀಗಿತ್ತು.

ಆತ್ಮಿಯರೆ ನಾನು ನನ್ನ ಬದುಕಿನ ಒಂದೊಂದು ಕ್ಷಣವು ಕಣ್ಣೀರಲ್ಲಿ ಕೈತೊಳೆದೆ ನನ್ನ ಬದುಕು ಪ್ರೀತಿ ಪ್ರೆಮದಿಂದ ಹಾಳಾಯುತು ಕೂಡಾ ಹೀಗೆ ಬೆಳಕಾಯುತು ಕೂಡಾ ವಿಚಿತ್ರ ಅಂದ್ರೆ ನಾನು ಅಳಿದಿದ್ದು ಸ್ನೇಹ ಪ್ರೀತಿಯಿಂದ ಉಳಿದಿದ್ದು ಸ್ನೇಹ ಪ್ರೀತಿಯಿಂದ ಇಂದು ನಾನು ಪ್ರಶಸ್ತಿ ತೆಗದುಕೊಳ್ಳುತ್ತಿರುವುದು ಪ್ರೀತಿ ಸ್ನೇಹದಿಂದ ಮಾತ್ರ ಸಾದ್ಯವಾಗಿದೆ. . “ ನಾವು ಪ್ರೀತಿಸಬೇಕು ಸ್ನೇಹಮಾಡಬೇಕು ನಿಜಾ ಆದರೆ ಅದರಿಂದ ಹೇಗೆ ಪಾರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತೀವಿ ಎನ್ನುವುದು ಬಹಳ ಮುಖ್ಯವಾಗುತ್ತೆ. ಅದಕ್ಕಾಗಿ ನಾವು ನಮ್ಮ ತಂದೆ ತಾಯಿ ಸಂಬಂದಿಕರು ಸ್ನೇಹಿತರಿಗೆ ಅವರ ಪ್ರೀತಿ ಸ್ನೇಹಕ್ಕೆ ಬೆಲೆಕೊಡಬೇಕಾದ ಅಗತ್ಯವಿದೆ. ಹೀಗೆ ನಮ್ಮ ಮಹೇಶ ಸದ್ಯ ತನ್ನ ಮಗಳು ಜಾನಕಿಯ ಜೊತೆಗೆ ಹೊಸ ಕಥೆ ಬರೆಯುವ ಕೆಲಸಲದಲ್ಲಿ ನಿರತನಾಗಿದ್ದಾನೆ. ಕಥಾ ಸಂಕಲನಕ್ಕೆ ಮಗಳು ಜಾನಕಿಯೆ ಸ್ಪೂರ್ತಿಯಂತೆ ಆಕೆಯ ಮುಂದಿನ ಬದುಕು ಹೇಗೆ ಎಂಬ ವಿಚಾರಗಳನ್ನೆ ತನ್ನ ಕಥಾವಸ್ತುವಾಗಿಸಕೊಂಡು ಬರೆಯುತ್ತಿದ್ದಾನೆ. ಅದರ ತಾತ್ಪರ್ಯದ ಸಾಲು ಹೀಗೆದೆ ನೊಡಿ

" ಜೀವನದಲ್ಲಿ ಮೊದಲು ನೌಕರಿ ಆಮೇಲೆ ಛೋಕರಿ "

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):