ಜ್ಯೋತಿ

0

ಅಸ್ಪೃಶ್ಯತೆಯ ಅಂಧಕಾರವ 
ತೊಡೆಯಲು ಹುಟ್ಟಿದಂತ ಜ್ಯೋತಿ 
ನೆತ್ತರನ್ನೇ ತೈಲವಾಗಿಸಿ 
ನರಗಳನ್ನೇ ಬತ್ತಿಯಾಗಿಸಿ 
ಉಸಿರನ್ನೇ ಬೆಳಕನ್ನಾಗಿಸಿ 
 
ಹಚ್ಚಿತು ಹಚ್ಚಿತು
ಸಾವಿರಾರು ಹಣತೆಗಳ 
ಬೆಳಗಿತು ಬೆಳಗಿತು 
ಅಡೆ ತಡೆಯನ್ನು ಮೀರಿ 
 
ಮೂಡಿಸಿತು  ಮೂಡಿಸಿತು  
ಸರ್ವರಲ್ಲೂ  ಸಂಘಟನೆಯ ಶಕ್ತಿ 
ಪಸರಿಸಿತು  ಪಸರಿಸಿತು 
ಮೂಲೆಮೂಲೆಗೂ ಅಕ್ಷರದ 
ಅರಿವಿನ ಬೆಳಕ 
 
ಹರಿಸಿತು ಹರಿಸಿತು 
ಎಲ್ಲರಲೂ ಹೋರಾಟದ ಕೆಚ್ಚು 
ತುಂಬಿತು ತುಂಬಿತು 
ಭಾಂಧವರ ಬಾಳಿನಲ್ಲಿ ಭರವಸೆಯ ಹುರುಪು 
 
ಉರಿಯಿತು ಉರಿಯಿತು 
ನೊಂದು ಬೆಂದ ಬಾಳಿನ ನಂದಾದೀಪವಾಗಿ 
ತನ್ನವರ ಬದುಕಿನ ಉಳಿವಿಗಾಗಿ 
ದುಡಿಯುತ್ತಾ ದುಡಿಯುತ್ತಾ 
ನಮ್ಮನಗಲಿ ಸರಿಯಿತು
 ಸೇರಿತು ಚೈತ್ಯ ಭೂಮಿಯ ಬಸಿರ ..

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.