ಟೈಮ್

3

ಟೈಮ್  ಸದಾ ಸಂಚಾರಿ ,
ಟೈಮ್ ನಿಂತರೆ ನಾವೇ ಇಲ್ಲ,
ಟೈಮ್ ಎಲ್ಲರ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತೆ ,
 
ಯಾರಿಗಾದರು ಕೆಟ್ಟದು ಆದರು ,
ಅನಿಷ್ಟಕ್ಕೆಲ್ಲ  ಶನೇಶ್ವರ ಕಾರಣ ಅನೋಹಾಗೆ ,
ದೂಶಿಸುವುದು ಟೈಮ್ ನೇ ,
ಟೈಮ್ ಚೆನ್ನಾಗಿ ಇಲ್ಲ , ಹಾಳಾದ ಟೈಮ್ ಅಂತ ,
ಯಾರಿಗಾದರು ಒಳ್ಳೆಯದಾದರೂ ಕ್ರೆಡಿಟ್ ಟೈಮ್ ಗೆ ,
ಅವನ ಟೈಮ್ ಚೆನ್ನಾಗಿ ಇತ್ತು ಬಂಪರ್ ಹೊಡೆದ,
ಮದುವೆ ಹಾಗಿಲ್ಲ ಅಂದರು ,
ಟೈಮ್ ಬರಬೇಕು ಅನುತ್ತಾರೆ ,
 
 ಗ್ರಹಗಳ ಲೆಕ್ಕಾಚಾರ ಕೂಡ ಟೈಮ್ ಹೇಳುತ್ತೆ ,
ಗುರು ಬಲ ಇರೋದ್ರಿಂದ ಟೈಮ್ ಚೆನ್ನಾಗಿ ಇದೆ ,
ರಾಹು ಬಲ ಇರೋದ್ರಿಂದ ಟೈಮ್ ಚೆನ್ನಾಗಿ ಇಲ್ಲ ,
 ಇನ್ನು ಬೋರ್ ಆದಾಗ ಟೈಮ್ ಕಳಿಯೋದು ಕಷ್ಟ ಅನ್ನೋದು ಇದೆ ,
ಎಷ್ಟು ಅಂತ ಟೀವಿ ನೋಡೋದು ಟೈಮ್ ಹೋಗೋದೇ ಇಲ್ಲ ,
ಎಷ್ಟು ಅಂತ ಪೇಪರ್ ಓದೋದು ಟೈಮ್ ಹೋಗೋದೇ ಇಲ್ಲ ,
ಒಟ್ಟಾರೆ ಟೈಮ್ ಪಾಸಿಂಗ್ ಮಾಡೋದಕ್ಕೆ ಸರ್ಕಸ್ ಮಾಡಬೇಕು ,
ಕೆಲವರು ಏನಾದರು ಆಟ ಆಡುತ , ಇನ್ನು ಕೆಲವರು ಓದುತ್ತ ,
ಮತ್ತೆ ಕೆಲವರು ಹರಟೆ ಹೊಡಿಯುತ , ಮಗದೊಬರ್ರು ಬೇರೆಯವರ ಬಗೆ ಆಡಿಕೊಳುತ್ತ ,
ಏನೋ ಒಂದು ಮಾಡುತ್ತಾ ಟೈಮ್ ಕಳಿಯುತ್ತಾರೆ,
 
ಇವೇಲ್ಲ ಕೇಳಿಸಿಕೊಂಡ ಟೈಮ್ ನನ್ನ ಅಷ್ಟಕ್ಕೆ ನಾನು ನಡೀತಾ ಇದರು
ಇವರಿಗೆಲ್ಲ ನನ್ನ ಉಸಾಬರಿ  ಯಾಕೆ ಅಂದು ಕೊಂಡಿತು ,
 
                                                                      ಬರೆದ ಬಡ ಜೀವಿ ,
                                                                                               ಹರೀಶ್  ಎಸ್ ಕೆ
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.