ಡಾ// ರಾಜ್ ಕುಮಾರ್ ಹಾಗೂ ಬಿ. ಸರೋಜಾದೇವಿ ಆಕಾಶವೇ ಬೀಳಲಿ ಮೇಲೆ ಎಂದು ಹಾಡಿದ್ದು ಇಲ್ಲೇ !

4

ನ್ಯಾಯವೇದೆವರು ಚಿತ್ರದ ಆಕಾಶವೇ ಬೀಳಲಿ ಮೇಲೆ    ಹಾಡು ಕೇಳುತ್ತಿದ್ದೆ .ಅರೆ ತಾಳು ಈ ಹಾಡನ್ನು ಯೂ ಟ್ಯೂಬ್ ನಲ್ಲಿ ನೋಡೋಣ ಅಂತ ಅಲ್ಲಿಗೆ ಹೋದೆ.ಆಶ್ಚರ್ಯ ಕಾದಿತ್ತು!!! ತೆಲುಗಿನ ನಿರ್ದೇಶಕ  ಜಯಂತ್ ಪರಾಂಜಿ ಎನ್ನುವರು ತಮ್ಮ ಕಾಮೆಂಟ್ ಹಾಕಿ ಈ ಹಾಡು  ತಮಗೆ ತೆಲುಗಿನಲ್ಲಿ ಒಳ್ಳೆಯ ಚಿತ್ರಗಳನ್ನು ನೀಡಲು ಪ್ರೇರೇಪಿಸಿತು ಅಂತ ಹೇಳಿದ್ದಾರೆ.ಹಾಗೆ ನೋಡ್ತಾ ನೋಡ್ತಾ ಇದು ನಮ್ಮ ಕರಿಘಟ್ಟ ದಲ್ಲಿ ಚಿತ್ರಿಕರಿಸಿರೋದು ಕಾಣಿಸಿತು.ಸರಿ ಅಂತ ಭಾನುವಾರ ಅಲ್ಲಿಗೆ ಹೊರಟೆ..ಅಲ್ಲಿ ನನಗೆ ಕೆಲವು ತಾಣಗಳನ್ನು ನೋಡಿ ಹಾಡು ಜ್ಞಾಪಕ ಬಂತು. ಸುಮದುರ ಹಾಡನ್ನು ಚಿತ್ರೀಕರಿಸಿದ ಜಾಗ ನನ್ನ ಕ್ಯಾಮರಾ ದಲ್ಲಿ ಸೆರೆಯಾಯ್ತು!!!ದೂರದಲ್ಲಿ ಡಾ//ರಾಜ್ ಕುಮಾರ್  ಸರೋಜಾದೇವಿ  ಹಾಡು ಹೇಳುತ್ತಾ ಓಡಿ ಬರುತ್ತಿರುವಂತೆ ಭಾಸವಾಯಿತು !!!.ಇದರ ಶ್ರೇಯಸ್ಸು ಹಾಡು ರಚಿಸಿದ ಚಿ.ಉದಯ ಶಂಕರ್ , ಸಂಗೀತ ನೀಡಿದ ರಾಜನ್ ನಾಗೇಂದ್ರ , ಹಾಡು ಹೇಳಿದ ಪಿ.ಬಿ. ಶ್ರೀನಿವಾಸ್ , ಹಾಡಿನಲ್ಲಿ  ನಟಿಸಿದ ಡಾ//ರಾಜ್ ಕುಮಾರ್ ಬಿ.ಸರೋಜಾ ದೇವಿ  ಹಾಗು ನಿರ್ದೇಶಕ ಸಿದ್ದಲಿಂಗಯ್ಯ ಅವರಿಗೆ  ನಮ್ಮ ಕನ್ನಡ ಚಿತ್ರರಂಗದ ಕೀರ್ತಿ ಹಬ್ಬಲು ಕಾರಣರಾದ ಇವರೆಲ್ಲರಿಗೆ ಈ ನೆನಪಿನ ಕಾಣಿಕೆ. ತೆಲಗು ನಿರ್ದೇಶಕರ ಅಭಿಪ್ರಾಯ ಹೀಗಿದೆ ನೋಡಿ.

ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ !!!
 
ಹೆದರಿಕೆಯ ನೋಟವೇಕೆ ಒಡನಾಡ ನಾನಿರುವೆ !!1
 
ಹೊಸ ಬಾಳಿನ ಹಾದಿಯಲ್ಲಿ  ಜೊತೆ ಗೂಡಿ ನಾ ಬರುವೆ!!
 
ಇಂದೀಗ ಎರಡೂ ಜೀವ ಬೆರೆತೂ ಸ್ವರ್ಗ ವಾಯ್ತು!!
 
ಇಡೀ ಹಾಡನ್ನು ಈ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಗಿದೆ.. ಗೀತ ರಚನೆಕಾರ ಚಿ.ಉದಯಶಂಕರ ರವರ ಸಾಲುಗಳಿಗೆ ಪೈಪೋಟಿ ನೀಡುವಂತೆ ಈ ಪ್ರದೇಶದ ಚೆಲುವು ಇದೆ. ಇವತ್ತಿಗೂ ಇಲ್ಲಿಗೆ ಬಂದರೆ ಡಾ .ರಾಜಕುಮಾರ್ ಹಾಗು ಬಿ.ಸರೋಜಾದೇವಿ ಆಕಾಶವೇ ಬೀಳಲಿ ಮೇಲೆ ಎಂದು ಹಾಡುತ್ತಿರುವಂತೆ ಬಾಸವಾಗುತ್ತದೆ.ಒಮ್ಮೆ ನೀವೂ ಸಹ ಹೋಗಿಬನ್ನಿ.

 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.