ದಿನಾಂಕ‌ 11‍‍‍‍‍‍.12.13

3

 ಇಂದು ದಿನಾಂಕ 11-12-13. ದಿನಾಂಕವನ್ನು ನೋಡಿ ಇಂದೇನೋ ಅದ್ಭುತ ಸಾಧಿಸಲು, ಒಳ್ಳೆಯ ಕೆಲಸ ಪ್ರಾರಂಭಿಸಲು,ಮತ್ತಿನ್ನನ್ನೇನೋ ಬಯಕೆಗಳನ್ನು ಸಾಕ್ಷಾತ್ಕಾರಗೊಳಿಸಲೋ ಅಥವಾ ಅನುಭವಿಸಲೋ ಎಂದು ಅಂದುಕೊಳ್ಳುವುದು ಬೇಡ. ಬದುಕು ಎಂದ ಮೇಲೆ ಎಲ್ಲವೂ ನಿಯಮಿತವಾಗಿ     ಜರುಗುತ್ತವೆ, ಜರುಗಲೇಬೇಕು. ಗ್ರಹಣವೆಂದು,ಧೂಮಕೇತು ಅಪ್ಪಳಿಸುತ್ತದೆಂದು ಹಾಗೂ ಇನ್ನೇನೋ ಅಪಶಕುನ ಕಾದಿದೆ ಎಂದು ಭಯ ಬೀಳುವುದು ಬೇಡ.ಒಂದು ಸಂಸ್ಕøತಿ ಅಳಿದು ಇನ್ನೊಂದು ಸಂಸ್ಕøತಿ ಉದಯಿಸಿದರೂ,ಒಂದು ಕಾಲಘಟ್ಟ ಸವೆದು ಇನ್ನೊಂದು ಕಾಲಘಟ್ಟ ಬಂದಾಗಲೂ ಮಾನವನ ಬದುಕಿನಲ್ಲಿ ಹೋರಾಟ....ತಿಣುಕಾಟ ತಪ್ಪಿದ್ದಲ್ಲಾ.ಬದುಕಿನ ಪಯಣದಲ್ಲಿ ನೋವು,ನಲಿವುಗಳು ನಾವು ಒಲ್ಲೆ ಎಂದರೂ ಬರುತ್ತವೆ ಹಾಗೂ ಹಿಂಬಾಲಿಸುತ್ತವೆ.ಅವುಗಳನ್ನು ಸಮಸ್ಥಿತಿಯಲ್ಲಿ,ಸಮಚಿತ್ತದಿಂದ ತೂಗಿಸಿಕೊಂಡು,ಸಾಗಿಸಿಕೊಂಡು ಹೋಗುವುದರಲ್ಲೇ ಜಾಣತನ ಅಡಗಿದೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):