ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ)

4

ನಮ್ಮ ಸಾಮಾಜಿಕ ವಾತಾವರಣದಲ್ಲಿ, ಸ್ವಂತಿಕೆಗಿಂತ ಸಾಮೂಹಿಕತೆ ಹೆಚ್ಚಿನ ಪಾತ್ರ ವಹಿಸುತ್ತದೆ. ಹೀಗಾಗಿ ಸಣ್ಣ ಪುಟ್ಟ ನಿರ್ಧಾರದಿಂದ ಹಿಡಿದು, ದೊಡ್ಡ, ಮಹತ್ವದ ನಿರ್ಧಾರಗಳಿಗು ಅದೇ ಸೂತ್ರ ಕೆಲಸ ಮಾಡುತ್ತದೆ. ಅದರಲ್ಲೂ ಬಾಲ್ಯದಲ್ಲಂತೂ ವಯಸಿನ ಅಪ್ರಬುದ್ಧತೆಯ ಹೆಸರಿನಲ್ಲಿ ಎಲ್ಲಾ ನಿರ್ಧಾರಗಳನ್ನು ಹಿರಿಯರೆ ಕೈಗೊಳ್ಳುವುದೊ , ಅಥವಾ ಅವರ ಪ್ರಭಾವಲಯದ ಮಿತಿಯಿಂದ ಹೊರಬರದೆ ಅದಕ್ಕೆ ಪೂರಕವಾಗಿರುವಂತೆಯೆ ಮಕ್ಕಳು ನಿರ್ಧಾರ ತೆಗೆದುಕೊಳ್ಳುವುದೊ ಸಾಮಾನ್ಯವಾಗಿ ಕಂಡು ಬರುವ ಭಾವ. ಸರಿಯೋ ತಪ್ಪೊ ಎನ್ನುವ ಜಿಜ್ಞಾಸೆಯೊಂದು ಕಡೆಯಾದರೆ ಸಾಂದರ್ಭಿಕವಾಗಿ ಸರಿ ತಪ್ಪುಗಳ ತುಲನೆಯು ಬೇರೆ ಬೇರೆ ರೂಪ ತಾಳುವ ಅನಿವಾರ್ಯತೆಯ ಮತ್ತೊಂದು ಪರ್ಯಾಯ. ಕೊನೆಗೆಲ್ಲ ತಪ್ಪನ್ನು ದೇವರ ಮೇಳೆ ಆರೋಪಿಸಿ ಅವನಿಂದಲೆ ಎಲ್ಲಾ ಆದದ್ದು ಎಂದು ಅವನನ್ಬೆ ದೂಷಿಸುತ್ತಾ ಜಾಣತನದಿಂದ ಜಾರಿಕೊಳ್ಳುವ ಪರಿ. ಇದರ ಎರಡು ವಿಭಿನ್ನ ರೂಪಗಳನ್ನು (ಬಾಲ್ಯದ ಮತ್ತು ಪ್ರಾಯದ ಹೊದರಿನಲ್ಲಿ) ಬಿಂಬಿಸುವ ಜೋಡಿ ಕವನಗಳು - ದೇವರು ನಮಗೆ ಹಾಕಿದ ಟೋಪಿ.
.
ಕವಿ ಭಾವ:  01. ಬಾಲ್ಯದ ಹುಯಿಲು
.
ನಮ್ಮ ಮಕ್ಕಳುಗಳಿಗೆ ಹುಟ್ಟಿನಿಂದಲೆ ಬಂಧನದ ಕಾಟ. ಎಲ್ಲಾ ಹಿರಿಯರಾಣತಿಗನುಸಾರ ನಡೆವ ಜಗದಲ್ಲಿ ಹೆಣಗಬೇಕಾದ ಅನಿವಾರ್ಯ. ಅದನು ಅನುಭವಿಸಲೂ ಆಗದೆ ತಿರಸ್ಕರಿಸಲೂ ಆಗದ ಅಸಹಾಯಕ ಸ್ಥಿತಿಗೆ ತಾವೆ ಮರುಗುತ್ತ, ಎಲ್ಲ ಆ ದೇವರು ಮಾಡಿದ ಕುತಂತ್ರವೆಂದು ಅವನ ಮೇಲಾಪಾದನೆ ಹೊರಿಸುವ ಮುಗ್ದಭಾವದ, ತೆಳು ಹಾಸ್ಯ ಮಿಶ್ರಿತ ಕವನ. ಎಲ್ಲ ದುಗುಡ ದುಮ್ಮಾನಕ್ಕೆ, ದೇವರೆ ಟೋಪಿ ಹಾಕಿದನೆಂದು ಅಳುಕಲೆ ಹಾಡುವ ಶೋಕರಾಗ!
.
ಕವಿ ಭಾವ: 02. ಪ್ರಾಯದ ಕೊಯ್ಲು (ತುಸು ದೊಡ್ಡವರಿಗೆ?)
.
ದೇವರ ಟೋಪಿ ಹಾಕುವ ಆಟ ಬಾಲ್ಯದಲ್ಲೊಂದು ತರಹವಾದರೆ, ಪ್ರಾಯದಲ್ಲಿ ಇನ್ನೊಂದು ತರಹ. ಓದಿನಂತೆ ಕೆಲಸದಲ್ಲೂ, ಸಂಗಾತಿಯ ಆಯ್ಕೆಯಾಗಿ ಮದುವೆಯಲ್ಲೂ ಏನೆಲ್ಲ ಹೊಂದಾಣಿಸಿ, ತನ್ನ ಟೋಪಿ ಹಾಕುವ ಕಾರ್ಯವನ್ನು ಯಶಸ್ವಿಯಾಗಿ ಮುಂದುವರೆಸುವನೆಂಬ ಆರೋಪ. 
.
01. ಬಾಲ್ಯದ ಹುಯಿಲು (ಬಾಲ್ಯದ ಟೋಪಿ)
___________________________
.
ಹುಟ್ಟುವ ಮೊದಲೆ ಶುರು ತಪರಾಕಿ
ಛಾನ್ಸನೆ ಕೊಡದ ಜೀನ್ಸಿನ ಬಾಕಿ 
ಜನ್ಮಾಂತರದ ಲೇಬಲ್ ಘಾಟು
ಅಪ್ಪ ಅಮ್ಮನ ಫಿಕ್ಸೆಡ್ಡು ಡೆಪಾಸಿಟ್ಟು
ದೇವರು ನಮಗೆ ಹಾಕಿದ ಟೋಪಿ ||
.
ಮಕ್ಕಳೆ ದೇವರು ಊದಿದ ಪೀಪಿ
ಏನು ಮಾಡಿದರು ಎಲ್ಲಾ ಕಸಿವಿಸಿ
ಆಗೋದೆಲ್ಲ ದೊಡ್ಡವರಾಣತಿ
ಹುಟ್ಟಿಗು ಹಾಕುತ ನಿಯಮಿತ ಗಣತಿ  
ದೇವರು ನಮಗೆ ಹಾಕಿದ ಟೋಪಿ ||
.
ಸ್ಕೂಲಿನಲೇನು ಕಡಿಮೆಯೆ ಕಾಟ
ಬರಿ ಹೋಂವರ್ಕಿದೆ ಬೇಕಿರೆ ಆಟ
ಉತ್ತರಕಾದರೂ ಬರಿ ತಡಕಾಟ
ಟೀಚರಿಗಲ್ವೆ ಕೊಡಬೇಕು ಕ್ರೆಡಿಟ್ಟ?
ದೇವರು ನಮಗೆ ಹಾಕಿದ ಟೋಪಿ ||
.
ಹೈಸ್ಕೂಲ್ ಕಾಲೇಜ್ ಎಲ್ಲಾ ಒಂದೆ
ಅವರಿವರಿಷ್ಟವೆ ಬೆನ್ನಿನ ಹಿಂದೆ
ಪೈಂಟರು, ಟೀಚರು, ಡ್ಯಾನ್ಸರು ಕನಸು
ಡಾಕ್ಟರ, ಎಂಜಿನಿಯರ ಅವರಿಗೆ ಹುಲುಸು
ದೇವರು ನಮಗೆ ಹಾಕಿದ ಟೋಪಿ ||
.
---------------------------------------------- 
ನಾಗೇಶ ಮೈಸೂರು, ಸಿಂಗಾಪುರ 
----------------------------------------------
.
02. ಪ್ರಾಯದ ಕೊಯ್ಲು (ಪ್ರಾಯದ ಟೋಪಿ)
____________________________
.
ಸೇರಿದಾ ಕೆಲಸ ಯಾರದೋ ಸ್ವತ್ತು
ಏನೇ ಮಾಡಲು ಪರರ ಸಂಪತ್ತು
ನಮದೆನಿಸುವ ನಮ್ಮಯ ಖುಷಿ ವೃತ್ತಿ
ಮಾಡಲು ಬಿಡದ ಕುಯುಕ್ತಿ, ಪ್ರವೃತ್ತಿ
ದೇವರು ನಮಗೆ ಹಾಕಿದ ಟೋಪಿ ||
.
ಜೀವನದಲ್ಲೂ ಪೆದ್ದ ಗಿರಾಕಿ
ಅರಿಯುವ ಮೊದಲೇ ಸಿಕ್ಕಿದೆ ಪಾಪಿ
ಹೆಂಡತಿ ಮಕ್ಕಳ ಜತೆ ಗಂಟಾಕಿ
ಕಿತ್ಕೊಂಡು ಬಿಟ್ಟ ಸ್ವಾತಂತ್ರದ ಕೀ
ದೇವರು ನಮಗೆ ಹಾಕಿದ ಟೋಪಿ ||
.
ಬಲ್ ನನ್ಮಗ ಆ ದೇವರ ಆಟ
ಗೊತ್ತಿರದಂತೆ ಹೊಡೆಯುವ ಗೂಟ
ಹೊಟ್ಟೆಯ ಸಿಟ್ಟಿಗೆ ಬಂದರು ಕೋಪ
ಅವನ್ಹುಡುಕುವೆಯೆಲ್ಲಿ ಮುಂಗೋಪಿ
ಅವ ಹಾಕಿದ ಟೋಪಿ ಚಾಲಾಕಿ ||
.
---------------------------------------- 
ನಾಗೇಶ ಮೈಸೂರು, ಸಿಂಗಾಪುರ 
----------------------------------------
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮಸ್ಕಾರ. ದೇವರು ಹಾಕಿದ ಟೋಪಿ, ವಿಡಂಬನಾತ್ಮಕ ಮಕ್ಕಳ, ಯುವಕರ ಕವನಗಳು ಹಾಸ್ಯಲಾಲಿತ್ಯಪೂರ್ಣವಾಗಿವೆ. ಸುಂದರವಾಗಿ, ಅರ್ಥವಂತಿಕೆಯನ್ನು ಸೂಸುತ್ತವೆ.. ಧನ್ಯವಾದಗಳು ನಾಗೇಶ ಜಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಟ್ನಾಳರೆ ನಮಸ್ಕಾರ. ಮಕ್ಕಳು ಹೀಗೆ ಹೇಳುವಷ್ಟು ತಿಳುವಳಿಕೆ ಬರುವ ಹೊತ್ತಿಗೆ ದೊಡ್ಡವರಾಗಿಬಿಟ್ಟಿರುತ್ತಾರೆ ಮತ್ತು ಅವರ ಮಕ್ಕಳಿಗು ಪುನಾರಾವರ್ತನೆಯಾಗುತ್ತದೆ. ಹೀಗಾಗಿ ಇದೊಂದು ನಿಲ್ಲದ ನಿರಂತರ ಚಕ್ರ, ಅಲ್ಲವೆ? ಧನ್ಯವಾದಗಳೊಂದಿಗೆ, ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶರವರಿಗೆ ನಮಸ್ಕಾರಗಳು,
ನೀವು ಬರೆದ "ದೇವರು ಹಾಕಿದ ಟೋಪಿ" ಪದ್ಯ ನನಗೆ ತುಂಬಾ ಇಷ್ಟವಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರವೀಂದ್ರರವರೆ ನಮಸ್ಕಾರ. ಸರಳ ತೆಳು ಹಾಸ್ಯದ ಲಹರಿ ನಿಮಗೆ ಹಿಡಿಸಿದ್ದು ಸಂತೋಷಕರ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ ಮೈಸೂರು ರವರಿಗೆ ವಂಧನೆಗಳು
' ದೇವರು ನಮಗೆ ಹಾಕಿದ ಟೋಪಿ ' ಕವನ ಚೆನ್ನಾಗಿದೆ, ಬಾಲ್ಯ ಮತ್ತು ಯೌವನದ ದಿನಗಳನ್ನು ಬಹಳ ಅರ್ಥಪೂರ್ಣವಾಗಿ ನಿರೂಪಿಸಿದ್ದೀರಿ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ, ನೀವು ಹಿರಿಯರು. ಆ ಅನುಭವದ ಆಧಾರದ ಮೇಲೆ  ಹಿರಿಯರಿಗೆ ದೇವರು ಹಾಕುವ ಟೋಪಿಯ ಕುರಿತು ಕೆಲವು ಸಾಲು ಬರೆದು ಹಾಕಿ. ಆಗ ಒಂದು ರೀತಿ ಪರಿಪೂರ್ಣತೆ  ಸಿಕ್ಕಂತಾಗುತ್ತದೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.