ದೇವಾಲಯ ಸುತ್ತುತ್ತಿರುವ ವರಾಹ.

ದೇವಾಲಯ ಸುತ್ತುತ್ತಿರುವ ವರಾಹ.

ಬರಹ

ನಿನ್ನೆ ಮೊನ್ನೆಯಿಂದ ಹಂದಿಯೊಂದು ದೇವಾಲಯ ಸುತ್ತುತ್ತಿರುವ ದೃಷ್ಯವನ್ನು ಟಿ.ವಿ-೯ ರಲ್ಲಿ ತೋರಿಸಲಾಗುತ್ತಿದೆ. ನೀವೂ ನೋಡಿರಬಹುದು. ಆಂದ್ರದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿನ ಒಂದು ದೇವಾಲಯದ ಕಥೆ ಇದು. ಪಾಪ! ಆ ಹಂದಿ ಯಾಕೆ ಹಾಗೆ ಸುತ್ತು ಹಾಕುತ್ತಿದೆಯೋ ಗೊತ್ತಿಲ್ಲ. ಜನರಂತೂ ಅದನ್ನು ಸಕ್ಷಾತ್ ಭಗವಂತನ ಅವತಾರವೆಂದು ಭಾವಿಸಿ[ ಆದರೂ ಚಿಂತೆಯಿಲ್ಲ] ಅದರ ದರ್ಶನ ಪಡೆಯಲು ಸಹಸ್ರಾರು ಜನ ಜಮಾಯಿಸಿದ್ದಾರೆ. ಬಂದವರು ಸುಮ್ಮನಿರುತ್ತಾರೆಯೇ! ಅದರ ಮೈಗೆಲ್ಲಾ ಅರಿಶಿನ, ಕುಂಕುಮ ಎರಚಿ, ಎಲ್ಲರೂ ಅದರ ಮೈ ಮುಟ್ಟಿ ಅದು ಸಾಕಾಗಿ ಹೋಗಿದೆ. ಎರಡುಭಾರಿ ಪ್ರಜ್ಙೆ ತಪ್ಪಿ ವೈದ್ಯರು ಚಿಕಿತ್ಸೆ ನೀಡಿದ್ದಾಗಿದೆ, ಆದರೂ ಜನರು ಅದಕ್ಕೆ ಹಿಂಸೆ ಕೊಡುವುದು ತಪ್ಪಿಲ್ಲ. ಇಂತಹ ಮತಿಗೇಡಿಗಳಿಗೆ ಏನೆನ್ನಬೇಕು?