ದೊಡ್ಡವರ ದಾರಿ..........3

5

 

 

                T P ಕೈಲಾಸಂರವರು  ಒಮ್ಮೆ Y C M A  ಗ್ರೌಂಡ್ಸ್ ನಲ್ಲಿ ಅವರ ಗುರುಗಳ ಭಾಷಣ ಕೇಳುತ್ತಿದ್ದರು.  ಅಂದಿನ ದಿನಗಳಲ್ಲಿ ಲೌಡ್ ಸ್ಪೀಕರ್ ಗಳು  ಇರಲಿಲ್ಲವಾದ ಕಾರಣ ಎಲ್ಲರು ನಿಶಬ್ದವಾಗಿ ಭಾಷಣ ಕೇಳುತ್ತಿದ್ದರು. ಇದಕ್ಕೆ ಕೈಲಾಸಂ ಹೇಳುತ್ತಿದ್ದರು " ಲೌಡ್ ಸ್ಪೀಕರ್ ಗಳಿಲ್ಲದೆ ಇದ್ದಾಗ ಜನಗಳ ಸೈಲೆನ್ಸೆ ಆಮ್ಪ್ಲಿಫೈಯರುಗಳು. "   ಎಲ್ಲರು ಭಾಷಣಕಾರರ ಕಡೆಗೆ ಮುಖ ತಿರುಗಿಸಿಕೊಂಡು ಕುಳಿತಿದ್ದರೆ, ಕೈಲಾಸಂ ಮಾತ್ರ ದೂರದಲ್ಲಿನ ಮರದ ಕಾಂಡ ಒಂದಕ್ಕೆ ಕಿವಿ ಇರಿಸಿ ನಿಂತಿದ್ದರು.  ಗುರುವಿನ ವಾಣಿ ಗಾಳಿಯಲ್ಲಿ ತೇಲಿ ಬಂದು ಮರದ ಕಾಂಡಕ್ಕೆ ಅಪ್ಪಳಿಸುವ ಮತ್ತು ಪ್ರತಿಫಲಿಸುವ  ಬಿಂದುವಿಗೆ ಸರಿಯಾಗಿ ಇವರ ಕಿವಿ. 

         ಹೀಗೆ ನಿಂತಿದ್ದನ್ನು ನೋಡಿ ಯಾರೋ ಕೇಳಿದರು " ಏನು ಹೀಗೆ?" 

         ತಕ್ಷಣ ಅವರನ್ನು ಕರೆದು "ನಿಮಗೆ Laws of Reflection ಗೊತ್ತೇ?"  ಎಂದು ಪ್ರಶ್ನಿಸಿದರು.         

         ಅವರು ತಕ್ಷಣ ಬಂದ ಪ್ರಶ್ನೆಯಿಂದ ತಬ್ಬಿಬ್ಬಾದರು ಸಾವರಿಸಿಕೊಂಡು " ಗೊತ್ತಿಲ್ಲದೇ ಏನು?  ಮಕ್ಕಳಿಗೆ ನಿತ್ಯ ಪಾಠ          ಮಾಡಬೇಕಲ್ಲ !"  ಎಂದರು.  

         ತಕ್ಷಣ ಕೈಲಾಸಂರವರು " ಇದು Angle of incidence is equal to the angle of reflection.  ನೀವು ಪ್ರತಿನಿತ್ಯ ಹೇಳಿದ್ದನ್ನ ನಾನು ಪ್ರಾಕ್ಟಿಕಲ್ಲಾಗಿ ಮಾಡಿದೆ ಅಷ್ಟೇ. ಕೇಳಬೇಕು, ಕಲಿಯಬೇಕು ಎಂಬ ಮಾತಿನೊಂದಿಗೆ LAWS ಗಳು LOSS ಆಗದಂತೆ ಕರಗತ ಮಾಡಿಕೊಂಡಿದ್ದೇನೆ ಅಷ್ಟೇ " ಎಂದರು.  ಆ ಮೇಷ್ಟ್ರು ಸುಸ್ತು!!!!!!!!!!!.  

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಕ್ತಗತ ಹಾಸ್ಯ!! ಚೆನ್ನಾಗಿದೆ, ಆತ್ಮೀಯ ಪ್ರಕಾಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ನಾಗರಾಜರೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಕಾಶ್ ಅವರೆ ನಮಸ್ಕಾರಗಳು, ಒಂದು ಒಳ್ಳೆಯ ಸರಣಿ "ದೊಡ್ಡವರ ದಾರಿ ". ಇದರಲ್ಲಿ ಘನ ವ್ಯಕ್ತಿಗಳನ್ನು ಪರಿಚಯಿಸುತ್ತಾ ಒದುಗರಿಗೆ ಕುತುಹಲಕರವಾದ ವಿಶಯಗಳನ್ನು ತಿಳಿಸುತ್ತಿರುವಿರಿ. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಸ್ವರ್ಣ ಕಾಮತರೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಕಾಶ ನರಸಿಂಹಯ್ಯ ನವರಿಗೆ ವಂದನೆಗಳು ' ದೊಡ್ಡವರ ದಾರಿ ' ಸರಣಿ ಬರಹ ಓದುತ್ತಿರುವೆ, ಕೈಲಾಸಂ ಅವರು ಇಂಗ್ಲೀಷ್ ನಲ್ಲಿ ಹೇಳುವ ಪಂಚಿಂಗ್ ಡೈಲಾಗ ಗಳು ನಸಗುವನ್ನು ಹುಟ್ಟಿಸುವ ಜೊತೆಗೆ ಜೀವನದ ಅರ್ಥವನ್ನು ಸಹ ಮಾಡಿಸುತ್ತವೆ, ಹೀಗಾಗಿ ಟಿ.ಪಿ.ಕೈಲಾಸಂ ಎಲ್ಲ ಕಾಲಕ್ಕೂ ಪ್ರಸ್ತುತರು.ಸರಣಿ ಹೀಗೆಯೆ ಮುಂದುವರಿಯಲಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಪಾಟೀಲರೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.