ದೊಡ್ಡವರ ದಾರಿ..........4

5

 

 
                 ತಾ ರಾ ಸು ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರು.  ಇವರು ತಮ್ಮ ಯೌವನದಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರಂತೆ.  ಇವರ ಸ್ನೇಹಿತರ ಬಳಗ ದೊಡ್ಡದು. ಇವರ ಅನೇಕ ಸ್ನೇಹಿತರು ಸ್ವತಂತ್ರ ಭಾರತದ ಸರಕಾರದಲ್ಲಿ ಮಂತ್ರಿ ಮಹೋದಯರಾಗಿದ್ದರು.  ತಾ ರಾ ಸು ಬರಹಗಾರರಾಗಿಯೇ ಉಳಿದರು. ಎಂದಿನಂತೆ ಜನಪ್ರಿಯತೆ ಬಂತೆ ಹೊರತು ಇವರ ಬದುಕು ಕಷ್ಟದಲ್ಲಿಯೇ ಇತ್ತು.  ಹಲವಾರು ಪುಸ್ತಕಗಳನ್ನು ಹೊರತಂದರೂ, ಇವರ ಹಣಕಾಸಿನ ಸ್ತಿತಿ ಅಷ್ಟೇನೂ ಸುಧಾರಿಸಲಿಲ್ಲ.  ಆದರೆ, ಇದಾವುದರ ಪರಿವೆಯೂ ಈ ಕವಿಮಾನ್ಯರಿಗೆ  ಇರಲಿಲ್ಲ. 
                 ಒಮ್ಮೆ ತಾ ರಾ ಸು ರವರು ಒಂದು ಸಭೆಗೆ ಆಹ್ವಾನಿತರಾಗಿ ಹೋಗಿದ್ದರು.  ಅಲ್ಲಿಗೆ ಇವರ ಮಿತ್ರರಲ್ಲೊಬ್ಬರಾದ ಮಂತ್ರಿ ಮಹೋದಯರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.  ಕಾರ್ಯಕ್ರಮ ಮುಗಿದ ನಂತರ ಲೋಕಾಭಿರಾಮವಾಗಿ ಮಾತನಾಡುತ್ತ ಸಂಸಾರದ ವಿಚಾರ, ಆರ್ಥಿಕ ಸ್ಥಿತಿ ಗತಿ, ಇತ್ಯಾದಿಗಳು ಬಂದವು.  ಸೂಕ್ಷ್ಮವಾಗಿ ಇವರ ಪರಿಸ್ಥಿತಿ ಗಮನಿಸಿದ ಮಂತ್ರಿ ಮಹೋದಯರು ತಾ ರಾ ಸು ರವರಿಗೆ " ಸ್ವಾಮೀ, ನೀವು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಬಗ್ಗೆ ಒಂದು ಪ್ರಮಾಣಪತ್ರ ಲಗತ್ತಿಸಿ ಒಂದು ಅರ್ಜಿಕೊಡಿ.  ನಿಮಗೆ ಮಂಡ್ಯ ಹತ್ತಿರ ಒಂದೆರಡು ಎಕರೆ ದರಖಾಸ್ತು ಜಮೀನನ್ನು ಉಚಿತವಾಗಿ ಕೊಡಲು ಶಿಫಾರಸ್ಸು ಮಾಡುತ್ತೇನೆ. ನಿಮಗೆ ಖಂಡಿತ ಸಿಗುತ್ತದೆ " ಎಂದು ಹೇಳಿದರು.  ಆಗಲಿ ಎಂದು ಹೇಳಿ ತಾ ರಾ ಸು ಮನೆಗೆ ಬಂದರು.
                 ಒಂದೆರಡು ದಿನ ಕಳೆದ ನಂತರ ಅರ್ಜಿಯನ್ನು ತಯಾರು ಮಾಡಿದರು.  ಈ ಅರ್ಜಿಯನ್ನು ತಾ ರಾ ಸು ರವರ  ಪತ್ನಿ ಅಂಬುಜಮ್ಮ ನವರು ನೋಡಿದರು.  ಈ ಅರ್ಜಿ ಕೊಡೊ ವಿಚಾರ ಈಕೆಗೆ ಏಕೋ ಹಿಡಿಸಲಿಲ್ಲ. ಅವರು ನೇರ ಬಂದು ತಮ್ಮ ಪತಿಯಲ್ಲಿ " ನೀವು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದು ದೇಶಕ್ಕಾಗೋ ಅಥವಾ ಜಮೀನಿಗಾಗೋ? " ಎಂದು ಪ್ರಶ್ನಿಸಿಯೇ ಬಿಟ್ಟರು.      ಈ ಅನಿರೀಕ್ಷಿತ ಪ್ರಶ್ನೆಯಿಂದ ಕ್ಷಣಕಾಲ ತಬ್ಬಿಬ್ಬಾದರೂ ಸಾವರಿಸಿಕೊಂಡು " ದೇಶಕಾಗಿಯೇ " ಎನ್ನುತ್ತಾ   ಆ ಅರ್ಜಿಯನ್ನು ಹರಿದು ಬಿಸಾಕಿದರು.
                 ಇಂತಹ ನಿಸ್ಪೃಹ  ದಂಪತಿಗಳು  ನಮಗೆ ಆದರ್ಶವಲ್ಲವೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅದಕ್ಕೆ ಅಲ್ಲವೆ ಪರಂದರ ದಾಸರು ಹೇಳಿದ್ದು " ಸಾವಿರವಾಗಲಿ ಇಂತಹ ಹೆಂಡತಿಯ ಕುಲ " ಎಂದು. ಒಳ್ಳೆಯ ಘಟನೆಯ ವಿವರ ನೀಡಿದ್ದಕ್ಕೆ ಧನ್ಯವಾದಗಳು ಪ್ರಕಾಶ್ ರವರೇ ..........ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮ್ ದೇಶದಲ್ಲಿ ಇದೊಂದು ಕೆಟ್ಟ ಸಂಪ್ರದಾಯವಿದೆ- ನಮ್ ಯೋಗ್ಯತೆ ಅರ್ಹತೆಯನ್ನು ನಾವೇ ನಮಮ್ ಬೆನ್ನು ತಟ್ಟಿಕೊಂಡು ಹೇಳಿಕೊಂಡು ಕೈ ಚಾಚಿ ಅವಕಾಶ-ಪಾರಿತೋಷಕ- ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು..:( ಆತ್ಮ ಗೌರವ ಇರವ ಯಾರು ತಾನೇ ಅ ಹಾಗೆ ಹೀಗೆ ಅಂತ ಹೇಳಿಕೊಂಡು ಪ್ರಶಸ್ತಿಗೆ ಅರ್ಜಿ ಹಾಕುವರು?? ಸರಕಾರಗಳಿಗೆ ಅಧಿಕಾರಿಗಳಿಗೆ ಬುದ್ಧಿ ಬೇಡವೇ?.. ಉತ್ತಮ ಬರಹ.. ಶುಭವಾಗಲಿ. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ವಿಚಾರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಚಿಕ್ಕು ರವರೆ , ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.