ನನ್ನ ಅಪ್ಪ ಮತ್ತು ಪುಸ್ತಕ

4.25



" ಅಣ್ಣಾ, ಈ ತಿಂಗಳ ಸಂಬಳ ನನಗೆ ರೂ.112 .50  ಬಂದಿದೆ. ಅದನ್ನು ನಿಮ್ಮ ಕೈಯಲ್ಲಿಟ್ಟು ಆಶೀರ್ವಾದ ಪಡೆಯೋಣ ಅಂತ ಬಂದೆ." ಎಂದು ನನ್ನ ಮೊದಲ ತಿಂಗಳ ಸಂಬಳವನ್ನು ನನ್ನ ತಂದೆ ತಾಯಿಯ ಕೈಯಲ್ಲಿಟ್ಟು  ಅವರ ಪಾದಗಳಿಗೆ ಎರಗಿದೆ. ತುಂಬು ಸಂತೋಷದಿಂದ ತಂದೆತಾಯಿ ಇಬ್ಬರು ಬೆನ್ನುಸವರಿದರು.  " ಈ ಹಣದಲ್ಲಿ ಏನು ಮಾಡಬೇಕೆಂದು ಅಂದುಕೊಂಡಿರುವೆ?" ಎಂದು ಅಪ್ಪ ಕೇಳಿದರು.  ನಿಶ್ಚಯವಾಗಿ ನಾನು ಏನು ಅಂದುಕೊಂಡಿರಲಿಲ್ಲ. ನೇರ ಹೋಗಿ ಹಣವನ್ನು ಅಪ್ಪ ಅಮ್ಮನ ಕೈಲಿರಿಸಿ ಆಶೀರ್ವಾದ ಪಡೆಯುವುದು ಅಷ್ಟೇ ನನ್ನ ಮನಸಿನಲ್ಲಿ ಇದ್ದದ್ದು. ಇದನ್ನೇ ನೇರವಾಗಿ ಅಪ್ಪನಿಗೆ ಹೇಳಿದೆ. " ಅದು ಸರಿ.  ಈಗ ಆಶೀರ್ವಾದ ಸಿಕ್ಕಿತಲ್ಲ," ಎಂದು ಅಪ್ಪ ಮರು ಪ್ರಶ್ನೆ ಹಾಕಿದರು.ಏನೂ ಹೇಳಲು ತೋಚಲಿಲ್ಲ. ಅಮ್ಮ ನನ್ನ ಸಹಾಯಕ್ಕೆ ಬಂದರು " ಅದ್ಯಾಕೆ ಸುತ್ತಿಬಳಸಿ ಹೇಳುತ್ತಿರಿ?   ಅದೇನು ಮಾಡಬೇಕು?ಅದನ್ನ ಹೇಳಿ." ಎಂದು ನನ್ನ ಪಕ್ಷವಹಿಸಿ ಮಾತನಾಡಿದರು.  ನನ್ನನ್ನು ಹತ್ತಿರ ಕರೆದು ಕೂರಿಸಿಕೊಂಡು " ಈ ಹಣದಲ್ಲಿ ಯಾವುದಾದರು ಒಳ್ಳೆಯ ಪುಸ್ತಕ ತಂದು ಓದು. ಜೀವಮಾನದಲ್ಲಿ ನಿನ್ನ ಜೊತೆ ಸದಾ ಕಾಲ ಇರಬಹುದಾದ  ಪುಸ್ತಕ ತಂದು ಓದು.  ಪುಸ್ತಕವೇ ನಿನ್ನ ಒಳ್ಳೆಯ ಸ್ನೇಹಿತನಾಗಬೇಕು." ಎಂದರು.
 
ನಾನು ಪುಸ್ತಕ ಓದುವ ಹವ್ಯಾಸ ನನಗೇನು ಅಷ್ಟು ಇರಲಿಲ್ಲ. ಜೊತೆಗೆ ಯಾವ ರೀತಿಯ ಪುಸ್ತಕಗಳನ್ನು ಓದಬೇಕೆಂಬ ತಿಳುವಳಿಕೆಯು ಇರಲಿಲ್ಲ.  1977 ನೆ ಮಾರ್ಚ್ ಮೊದಲನೇ ಭಾನುವಾರ ನಡೆದ ಈ ಮಾತು ನನಗೆ ಇನ್ನು ಸ್ಪಷ್ಟವಾಗಿ ನೆನಪಿದೆ.  ಏನೂ ಸರಿಯಾಗಿ ತಿಳಿಯದಿದ್ದರಿಂದ ನಾನು ಬೆಪ್ಪನ ಹಾಗೆ ಅಪ್ಪನ ಮುಖ ನೋಡುತ್ತಾ ಕುಳಿತೆ.  " ನೋಡು ಮಗು, ಪ್ರಪಂಚಜ್ಞಾನ ತಿಳಿಬೇಕು ಅಂದರೆ, ತುಂಬಾ ತಿರುಗಬೇಕು ಇಲ್ಲ ತುಂಬಾ ಪುಸ್ತಕ ಓದಬೇಕು.   ನಿನಗೆ ತುಂಬಾ ತಿರುಗಲು ಆಗದು, ಹಾಗಂತ ನೀನು ಸುಮ್ಮನೆ ಕೂರಬಾರದು. ಚನ್ನಾಗಿ ಓದಿ ಚನ್ನಾಗಿ ಪ್ರಪ್ರಂಚ ಜ್ಞಾನ ಸಂಪಾದನೆ ಮಾಡಬೇಕು. ಪುಸ್ತಕಗಳನ್ನು ಓದು. ಕೊಂಡು ಓದು, ಎರವಲು ಪಡೆದು ಓಡಬೇಡ.  ಯಾವಾಗಲು ನಿನ್ನ ಸಂಗಾತಿ ಪುಸ್ತಕವೇ ಆಗಿರಲಿ. ತಿಂಗಳಿಗೆ ಒಂದು ಪುಸ್ತಕ ಸಾಕು. ಅದನ್ನು ಓದಲಾಗಲಿಲ್ಲವೆಂದು ಪುಸ್ತಕ ಕೊಳ್ಳುವುದನ್ನು ಬಿಡಬೇಡ.  ಪುಸ್ತಕ ನಿನ್ನಲ್ಲಿ ಇದ್ದರೆ ಅದು ನಿನ್ನನ್ನು ಓದಲು ಸೆಳೆಯುತ್ತದೆ." ಎಂದು ಹೇಳಿದರು. ನನಗೆ ಅಪ್ಪನ ಮಾತು ಸರಿಯೆನಿಸಿತು. " ಹಾಗಾದರೆ ಈ ಹಣದಲ್ಲಿ ಯಾವ ಪುಸ್ತಕ ಕೊಂಡುಕೊಳ್ಳಲಿ? " ಎಂದು ಕೇಳಿದೆ. " ನಿನ್ನ ಮೊದಲನೇ ಸಂಪಾದನೆಯಲ್ಲಿ  complete works of Swami Vivekananda"  ಕೊಂಡು ಓದಲು ಪ್ರಾರಂಭಿಸು." ಎಂದು ಸಲಹೆ ಇತ್ತರು.
 
ಆ ದಿನವೇ ನಾನು ನನ್ನ ಅಣ್ಣನ ಜೊತೆ ಹೋಗಿ ಮೈಸೂರಿನ ರಾಮಕೃಷ್ಣ ಆಶ್ರಮದಿಂದ ಪುಸ್ತಕಗಳನ್ನು ತಂದೆ. ಎಲ್ಲರಿಗೂ ಸಂತೋಷವಾಯಿತು. ನನ್ನ ತಂದೆಗೆ ಹೆಚ್ಚು ಸಂತೋಷವಾಯಿತು. ಅಂದು ಪ್ರಾರಂಭವಾದ ನನ್ನ ಪುಸ್ತಕ ಕೊಳ್ಳುವ ಮತ್ತು ಓದುವ ಹವ್ಯಾಸ ಇಂದಿಗೂ ಜಾರಿಯಲ್ಲಿದೆ. ನನ್ನ ಬಳಿ ಈಗ ಒಂದು ಚಿಕ್ಕ ಗ್ರಂಥಾಲಯವಿದೆ. ಸುಮಾರು  ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ. ನಾನು ಎಲ್ಲ ಪುಸ್ತಕಗಳನ್ನು ಕೊಂಡೇ   ಓದುವ ಅಭ್ಯಾಸ ಮಾಡಿಕೊಂಡಿದ್ದೇನೆ. ಅಂದು ನನ್ನ ತಂದೆ ನನಗೆ  ಹೇಳಿದ ಆ ಮಾತು  ನನ್ನ ಜೀವನದ ಗತಿಯನ್ನೇ ಬದಲಿಸಿತು. ನಾನು ಪ್ರತಿತಿಂಗಳು ಹೊಸ ಪುಸ್ತಕ ಕೊಂಡಾಗ ನನ್ನ ಅಪ್ಪನಲ್ಲಿ ಹೋಗಿ ತೋರಿಸುತ್ತಿದ್ದೆ.  ಅವರು ಕೆಲವೊಮ್ಮೆ ಪುಸ್ತಕ ಯಾವರೀತಿ ಆರಿಸಬೇಕೆಂದು ಸಲಹೆ ನೀಡಿ ತಿದ್ದುತ್ತಿದ್ದರು. ಅವರು ದೈವಾಧೀನರಾಗುವ ಹೊತ್ತಿಗೆ ನನ್ನ ಬಳಿ ೫೦ ಪುಸ್ತಕಗಳು ಇದ್ದವು.
 
ಇಂದಿಗೆ ಅವರು ಇದ್ದಿದ್ದರೆ? ಎಂದು ಅನ್ನಿಸಿದಾಗಲೆಲ್ಲ ಅವರೆಲ್ಲಿ ಹೋಗಿದ್ದಾರೆ? ನನ್ನ ಎಲ್ಲ ಪುಸ್ತಕದ ಪ್ರತಿ ಹಾಳೆಯಲ್ಲಿ ನನ್ನ ಅಪ್ಪ ಇದ್ದಾರೆ ಎಂದು ಭಾಸವಾಗುತ್ತದೆ.   ಪೂರ್ವಜನ್ಮದ ಸುಕೃತದಿಂದ ನನಗೆ ಇಂತಹ ಅಪ್ಪ ಅಮ್ಮನನ್ನು  ಭಗವಂತ ಕರುಣಿಸಿದ. 
 
ಇಂತಹ ತಂದೆತಾಯಿಯನ್ನು ಪಡೆದ ನಾನು ಪುಣ್ಯಶಾಲಿಯಲ್ಲವೇ?
 
ಹೆಚ್ ಏನ್ ಪ್ರಕಾಶ್

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಓದುವ ಹವ್ಯಾಸವೇ ಇಲ್ಲದ ಇಂದಿನ ಯುವಪೀಳಿಗೆಗೆ ಅನುಕರಣೀಯ....ಉತ್ತಮ ಬರಹಕ್ಕಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯರೇ, ನಿಮ್ಮ ತುಂಬು ಮನಸ್ಸಿನ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಕಾಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪುಸ್ತಕ ಓದುವ ಹವ್ಯಾಸ ಎಲ್ಲರಲ್ಲೂ ಮೂಡಲಿ.. ನಿಮ್ಮ ಈ ಹವ್ಯಾಸ ಹೀಗೆ ಸಾಗಲಿ.. ಶುಭವಾಗಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯರೇ, ನಿಮ್ಮ ತುಂಬು ಮನಸ್ಸಿನ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಕಾಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಕಾಶ್ ಅವರೆ, ನನಗೂ ನಿಮ್ಮ ಹಾಗೆ ಪುಸ್ತಕಗಳನ್ನು ಕೊಂಡುಕೊಳ್ಳುವ ಹವ್ಯಾಸವಿದೆ. ನನ್ನ ಬಳಿಯೂ 500 ರಿಂದ 600 ಪುಸ್ತಕಗಳ ಸಂಗ್ರಹವಿದೆ. ಆದರೆ ಇದರಲ್ಲಿ ಬಹುತೇಕ ರಾಮಕೃಷ್ಣ ‍ವಿವೇಕಾನಂದರ ಕುರಿತಾದ ಪುಸ್ತಕಗಳು ಇಲ್ಲವೇ ರಾಮಕೃಷ್ಣ ಆಶ್ರಮದಿಂದ ಪ್ರಕಟಗೊಂಡ ಪುಸ್ತಕಗಳೇ ಹೆಚ್ಚು. ಆದರೆ ನಿಮ್ಮಷ್ಟು ಓದುವ ಹವ್ಯಾಸವಿಲ್ಲ ಎಂದು ಹೇಳಬಹುದು. ಇತ್ತೀಚೆಗಷ್ಟೆ ಶಾಲೆ ಪ್ರಾರಂಭವಾಗಿರುವುದರಿಂದ ನನ್ನ ಮಕ್ಕಳ ಪುಸ್ತಕಗಳಿಗೆ ಬೈಂಡಿಂಗ್ ಕವರ್ ಹಾಕುತ್ತಾ, ನನ್ನ ಸಂಗ್ರಹದಲ್ಲಿರುವ ಸುಮಾರು 150 ಪುಸ್ತಕಗಳಿಗೆ ಬೈಂಡಿಂಗ್ ಮಾಡಿದ್ದೇನೆ. ನಮ್ಮಂತವರೊಬ್ಬರು ಪುಸ್ತಕದ ಗೀಳಿರುವವರು ಸಂಪದದಲ್ಲಿ ಇದ್ದಾರಲ್ಲ ಅನ್ನುವುದೇ ನನಗೆ ಅತೀವ ಸಂತೋಷವನ್ನು ಕೊಡುತ್ತಿದೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಶ್ರೀಧರ್ ಬಂಡ್ರಿ ಯವರೇ, ಪುಸ್ತಕ ಪ್ರೇಮಿಗಳ ಮಧ್ಯೆ ನನ್ನೊಂದು ಚಿಕ್ಕ ಚುಕ್ಕಿ. ನಿಮ್ಮ ಸದಭಿಲಾಷೆಯ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಕಾಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಕಾಶರಿಗೆ ನಮಸ್ಕಾರಗಳು. ನಾನೂ ಪುಸ್ತಕ ಪ್ರೇಮಿಯೇ ! ಆದರೆ ಅಷ್ಟೊ೦ದು ಪುಸ್ತಕಗಳ ಸ೦ಗ್ರಹವಿಲ್ಲ.. ಸುಧಾ- ತರ೦ಗ ಮನೆಗೆ ತರಿಸುತ್ತೇನೆ.. ಉದಯವಾಣಿಯ೦ತೂ ಅದರ ಜೊತೆಗೆ.. ಆಗಾಗ ಬೆ೦ಗಳುರು ಯಾ ಮೈಸೂರಿಗೆ ಹೋದಾಗ ಪುಸ್ತಕಗಳನ್ನು ಕೊ೦ಡು-ಕೊ೦ಡು ಈಗಷ್ಟೇ ಎರಡನೆಯ ಬಾರಿಗೆ ಅಒ೦ದೈವತ್ತು ಪುಸ್ತಕಗಳ ಸ೦ಗ್ರಹವಿದೆ. ಮೊದಲಿದ್ದ ಸ೦ಗ್ರಹ ೨೦೦ ಕ್ಕೂ ಹೆಚ್ಚಿತ್ತು!! ಓದಲು ತೆಗೆದುಕೊ೦ಡು ಹೋದ ಪುಣ್ಯಾತ್ಮರು ನನ್ನ ಗಳಿಕೆಯನ್ನೇ ಅವರದೆ೦ದು ತಿಳಿದುಕೊ೦ಡಿದ್ದರಿ೦ದ ಅವಾವುವೂ ಹಿ೦ತಿರುಗಿ ಬರಲೇ ಇಲ್ಲ!! ಸ್ವಲ್ಪ ದಿನ ಬೇಸರಗೊ೦ಡು ಸುಮ್ಮನಿದ್ದೆ! ಮತ್ತೀಗ ಆರ೦ಭಿಸಿದ್ದೇನೆ.. ಬೇರೆಯವರಿಗೆ ಕೊಡುವಾಗ ಅಳೆದು-ಸುರಿದು ಕೊಡುತ್ತೇನೆ.. ವಾಪಾಸು ಕೊಡುವವರೆ೦ಬ ಖಚಿತತೆ ಇದ್ದಲ್ಲಿ ಮಾತ್ರವೇ! ನಿಮ್ಮ ಪ್ರುಸ್ತಕ ಸ೦ಗ್ರಹಣೆಯ ಹಾಗೂ ಕೊ೦ಡು ಓದುವ ಪುಸ್ತಕ ಪ್ರೀತಿ ನಮಗೂ ಅನುಕರಣಿಯವೇ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಕಾಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ನಾವಡರವರೆ, " ಪುಸ್ತಕಂ ವನಿತಾ ವಿತ್ತಂ ಪರಹಸ್ತಂ ಗತಂ ಗತಃ|| ಪುನರಾಯಾಪಿ ಜೀರ್ಣಂ ಭ್ರಷ್ಟಂ ಖಂಡಶಃ || ಎನ್ನುವ ಮಾತು ಇಂದಿಗೂ ಸತ್ಯವೇ. ಪುಸ್ತಕ ಕೊಡುವಾಗ ಅಳೆದು ಸುರಿದು ಕೊಡುವ ನಿಮ್ಮ ಮಾತು ಸರಿ. ನಿಮ್ಮ ಸದಭಿಲಾಷೆಯ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಕಾಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಪ್ರಕಾಶ್, ಒಳ್ಳೆಯ ತಂದೆ, ತಕ್ಕ ಮಗ ಎಂಬುದನ್ನು ನಿರೂಪಿಸಿರುವಿರಿ. ಧನ್ಯವಾದಗಳು, ವಿಷಯ ಹಂಚಿಕೊಂಡದ್ದಕ್ಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯರೇ, ನಿಮ್ಮ ತುಂಬು ಮನಸ್ಸಿನ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಕಾಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.