ನಮ್ಮೆಲ್ಲ ಮುಂಬಯಿಕರರೆಲ್ಲರ ಹೆಮ್ಮೆಯ, ಪ್ರೀತಿಯ ಶ್ರೀಕೃಷ್ಣ !

0

ನಮ್ಮೆಲ್ಲ ಮುಂಬಯಿಕರರೆಲ್ಲರ ಹೆಮ್ಮೆಯ, ಪ್ರೀತಿಯ ಶ್ರೀಕೃಷ್ಣ ! ಪ್ರೊ. ಜೀವಿಯವರ ಲೇಖನ ಓದಿದೆವು. ಅವರ ಪ್ರೀತಿಯಮಾತುಗಳು ನಮ್ಮವು ಸಹಿತ.
ಮುಂಬಯಿ ಮಹಾನಗರದ ಹಿರಿಯ ಕನ್ನಡ ಕವಿ, ಪತ್ರಕರ್ತ, ಅಂಕಣಕಾರ, ಒಳ್ಳೆಯ ಮಾತುಗಾರ, ಚಿಂತಕ, "ಜೀವಿ" ಎಂದೇ ಮುಂಬಯಿ ಕನ್ನಡಿಗರಿಗೆ ಚಿರಪರಿಚಿತರಾದ ಜೀ. ವಿ. ಕುಲಕರ್ಣಿಯವರು ’ಕರ್ನಾಟಕ ಮಲ್ಲ ಪತ್ರಿಕೆಯ ಅಂಕಣದಲ್ಲಿ’ ತಮ್ಮ ಅಂತರಂಗದ ಆಳದಿಂದ ಜಸ್ಟಿಸ್ ಶ್ರೀಕೃಷ್ಣರನ್ನು ಅಭಿನಂದಿಸುತ್ತಾ ಬರೆದ ಲೇಖನದ ಕೊನೆಯಲ್ಲಿ ಬರೆದ ಕವನದ  ಪ್ರತಿ ಇಲ್ಲಿದೆ.
ಶೀರ್ಷಿಕೆ :  "ನಾ ಕಂಡ ಜಸ್ಟಿಸ್ ಶ್ರೀಕೃಷ್ಣ" 
ಕರ್ನಾಟಕ ಮಲ್ಲ, ೨೭,ಆಗಸ್ಟ್, ೨೦೧೮, ಪು. ೦೬
’ಜೀವನ ಮತ್ತು ಸಾಹಿತ್ಯ’ -ಡಾ.’ಜಿ.ವಿ’ಕುಲಕರ್ಣಿ.
 
ಜಸ್ಟಿಸ್ ಶ್ರೀಕೃಷ್ಣ :
ಚತುರ ನ್ಯಾಯವಾದಿ ಬಿ.ನಾರಾಯಣ ಸ್ವಾಮಿಯವರ ಪುತ್ರ,ಜಸ್ಟಿಸ್ ಶ್ರೀಕೃಷ್ಣ|ತಂದೆಯನು ಮೀರಿಸಿದಿರಿ, ಪುತ್ರಾದಿಚ್ಛೇತ್ ಪರಾಜಯಂ, ನಿಜಕು ದಿಟವಾಯ್ತು| ಮನೆಯ ಬದಿಯಲ್ಲೇ ಡಾನ್ ಬಾಸ್ಕೋ ಸ್ಕೂಲ್ ಇದ್ದರೂ ,ಕನ್ನಡ ಶಾಲೆ ಸೇರಿದಿರಿ| ವಿಜ್ಞಾನದ ಪದವೀಧರರಾಗಿಯೂ ,ಉಚ್ಚ ಕಾಯದೆ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿರಿ |
 
ನಿಮ್ಮ ಊರು ಬೆಳ್ಳೂರು, ಬಿಎಂಶ್ರೀ ಊರು,ಕನ್ನಡ ಬಾವುಟ ಹಾರಿಸಿದವರ ಊರು | ಸಂಸ್ಕೃತದಲ್ಲಿ ಎಂಎ, ಜೊತೆಗೆ ಉರ್ದು ಕಲಿಕೆ, ಹತ್ತು ಭಾಷೆಗಳಲಿ ನಿಪುಣರು ನೀವು | ನಾಟಕ, ಸಂಗೀತ, ಸಾಹಿತ್ಯ ಮತ್ತೆ ಕಲೆಗಳಪೋಷಕರು,ಜೊತೆಗೆ ಅಪ್ರತಿಮ ವಾಗ್ಮಿಗಳು, ಸರಳತೆ, ಸಜ್ಜನಿಕೆ. ನಿರಾಡಂಬರ ಜೀವನಕೆ ಮಾದರಿ, ಹಲವು ಗರಿಗಳ ಶ್ರೀಕೃಷ್ಣ ನೀವು|
 
ಕೇರಳ ಮುಖ್ಯ ನ್ಯಾಯಾಧೀಶ, ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಧೀಶ, ಹಲವು ವಿವಾದಗಳ| ತೀರ್ಪುಗಾರ,ಮುಂಬೈ ಕೋಮು ದಂಗೆಯ ವರದಿ 
ದೇಶವಿದೇಶಗಳಲ್ಲಿ ಮನ್ನಣೆ ಪಡೆದಿತ್ತು| ತೆಲಂಗಾಣ ಸಮಸ್ಯೆಗೆ ಪರಿಹಾರ ನೀಡಿದಿರಿ| ಆರನೆಯ ಪೇ ಕಮೀಶನ್ ನ ಮುಖಸ್ಥರಾಗಿ| ಎಲ್ಲರ ಸಂಬಳ, ಮುಖ್ಯವಾಗಿ ಬಡ ಮೇಸ್ಟ್ರ ಸಂಬಳ,ಹೆಚ್ಚುಮಾಡಿಸಿದಿರಿ, ಪುಣ್ಯಗಳಿಸಿದಿರಿ|
 
ಮುಂಬೈ ಕನ್ನಡಿಗರ ಹೆಮ್ಮೆಯ ಕನ್ನಡಪುತ್ರ, ಜಸ್ಟಿಸ್ ಶ್ರೀಕೃಷ್ಣ, ನಿಮಗೆ ನೂರು ನಮನ | ನೀವು ಕನ್ನಡಿಗರ ಸ್ಪೂರ್ಥಿ, ಕನ್ನಡಿಗರ ಕೀರ್ತಿ, ಉತ್ಪ್ರೇಕ್ಷೆಯಲ್ಲ, ಸ್ವಭಾವೋಕ್ತಿ ಈ ಕವನ. ||-ಜೀವಿ  

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.