ನಮ್ಮ ತಾಯಿ

4.5

ಪ್ರಖರ ತಾಪದೆ ಬಯಲ ಹೊ೦ಗೆಯ ನೆರಳು...
ಕಡುತೃಷೆಯನೀಗಿಸುವ ಜೀವಗ೦ಗೆ...            
ತಿವಿವ ಭಾವಗಳುರಿಯನಾರಿಸುವ ಜಲಪಾತ...
ಬೇಗೆಯೊಳು ತಾ ಸುಳಿವ ತ೦ಗಾಳಿಯು...
ನೋವಿನಲು ನಲಿವಿನಲು ಸಹಜದಲೆ ಮೌಲ್ಯಗಳ ತಿಳಿಸಿ ಅರಿವನು ನೀಡ್ವ ಮೊದಲ ಗುರುವು...
ಪುಟವಿಟ್ಟ ಬಾಳಪುಟದೇಳುಬೀಳಿನಮರ್ಮ ತಿಳಿದುತಿಳಿಸುವ ಗೆಳತಿ ಸಹಜಚರಿತೆ...
ಎಷ್ಟು ತಿಳಿದರು ಗೂಡ ಎಷ್ಟು ಕ೦ಡರು ಹಿರಿಯು...ಜಗಕಿವಳೆ ನಿಜಸಿರಿಯು ನಮ್ಮ ತಾಯಿ...|

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.