ನಾನು ಬುಧುವಾರ ಮಾತಾಡ್ತಾಯಿರೋದು...

0

ನಾನು ಬುಧುವಾರ ಮಾತಾಡ್ತಾಯಿರೋದು...ನಾನು ಸರಳ ಬುಧುವಾರ. ಸೋಮವಾರದ ಧಾವಂತ, ಶುಕ್ರವಾರದ ಸಂಭ್ರಮ, ಭಾನುವಾರದ ನೀರಳ ಯಾವುದು ಇಲ್ಲದ ಸಾದಸೀದಾ ಬುಧುವಾರ! ಗುರುವಾರಕ್ಕೆ ವಾರಾಂತ್ಯದ ಬಗ್ಗೆ ಸಣ್ಣಗೆ ನಿರೀಕ್ಷೆ ಹುಟ್ಟಿಸುವ ಶಕ್ತಿಯಿದೆ, ಮಂಗಳವಾರಕ್ಕೆ ಸೋಮವಾರದ ಧಾವಂತದಿಂದ ಹುಟ್ಟಿದ ಪುಟ್ಟ ಶಿಸ್ತಿದೆ, ಶನಿವಾರದಲ್ಲಿ ಶುಕ್ರವಾರದ ಸಂಭ್ರಮದ ಇಣುಕಿದೆ. ಆದರೆ ನನ್ನಲಿ ಇದ್ಯಾವುದೂ ಇಲ್ಲದ ಯಾಂತ್ರಿಕ ಸರಳತೆಯಿದೆ. ನನ್ನಿಂದಲೇ ಬೇರೆ ವಾರಗಳಿಗೆ ಹಲವು ವಿಶೇಷಣಗಳು ಹುಟ್ಟಿವೆ, ಅವರಿಗೆಲ್ಲಾ ವಿಶೇಷಣ ಕೊಟ್ಟು ನಾನು ಬರಿದಾಗಿ ಹೋದೆ.ಅದಕ್ಕೆ ಹೇಳಿದ್ದು ನಾನು ಸಾದಸೀದ, ಸರಳ ಬುಧುವಾರ!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):