ನಾನೆಂತು ನಿನಗಾದೆನೊ ಕೃಷ್ಣಾ !

5

ನಾನೆಂತು ನಿನಗಾದೆನೊ ಕೃಷ್ಣಾ !  
 
ಕಣ್ಣುಗಳೆರಡು ನೋಡುತಿದೆ ಕಿಂಡಿಯ ಸಂದಿಯಲಿ
ಇಣುಕಿ ನೋಡುವವರ ಕಣ್ಣಲ್ಲಿ ಕಣ್ಣಿಟ್ಟು ನೋಡುತಿದೆ
ಇವರಲ್ಲಿ ನನ್ನವರು ಯಾರು ಎಂದು
ಯಾರು ನನ್ನವರು...  ಯಾರು ನನ್ನವರು ಎಂದು ಹುಡುಕುತಿದೆ
ಹುಡುಕಿ ಹುಡುಕಿ ಮುಖ ಕಪ್ಪಾಗಿ ನಿಂತಿದೆ
ಆದರೂ ಆಸೆಯ ಬಿಡದೆ ಮತ್ತೆ ಮತ್ತೆ ಹುಡುಕುತಿದೆ
ನಾ ನಿನ್ನವನೆಂದು ನೋಡಲು ಬರುವವರ ಕಣ್ಣುಗಳ ಹುಡುಕುತಿದೆ
ಆ ಪುಟ್ಟ ಕಣ್ಣುಗಳೆರಡು ಕಣ್ಣಲ್ಲಿ ಕಣ್ಣಿಟ್ಟು ನೋಡುತಿದೆ

 
ನಾನೂ ಬಂದು ನೋಡುತಿರುವೆ ನಿನ್ನ ಕಣ್ಣುಗಳನೇ 
ಸುಮ್ಮನೆ ಬಂದು ನಿಂತು ನೋಡುತಿರುವೆನು 
ಎದುರು ನಿಂತು ಕಣ್ಣು ಮುಚ್ಚಿ ನಿನ್ನ ನೋಡಿದಂತೆ ಕಪಟವಾಡುತಿಹೆನು
ನಿನಗೆ ಬೇಕೆಂಬುದೇನು ಎಂದು ತಿಳಿಯದೆ ನೋಡ ಬರುತಿರುವೆನು
ನೀನು ನನ್ನವನೇ ಎಂದು ನನ್ನ ಮಂಕು ಬುದ್ದಿಗೆ ತೋರಲೇ ಇಲ್ಲವಲ್ಲಾ !
ನಿನ್ನವರಲ್ಲಿ ನಾನು ಒಬ್ಬನಾಗುವ ಬಗೆ ಹೇಗೆಂದು ನನಗೆ ತಿಳಿದಿಲ್ಲವಲ್ಲಾ !
ಹೊಳಪೇ ಇಲ್ಲದ ಕಣ್ಣಲ್ಲಿ ನಾ ನಿನ್ನ ಹೇಗೆ ನೋಡಲಿ ?
ಮತ್ತೆ ನಾನೆಂತು ನಿನಗಾದೆನೊ ಕೃಷ್ಣಾ !
 
ಸಾಯಿನಾಥ ಬಾಲಕೃಷ್ಣ, ಉಡುಪಿ - ೧೨. ೧೨. ೨೦೧೪.
Sainath Balakrishna, Udupi – 12.12.2014. 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.