ನಾನೆಷ್ಟರವನು ??

ನಾನೆಷ್ಟರವನು ??

ಕವನ

 

ಇಂದು ಬಂದು
ನಾಳೆ ಹೋಗುವ 
ಹುಲುಮಾನವ ನಾನು,

ಎಷ್ಟರವನು?
ಈ ವಿಶಾಲ ವಿಶ್ವದ ಮುಂದೆ
ನಾನೆಷ್ಟರವನು ??

 
ಬೆಳೆಯಬುಹುದೆನೋ ನಾನು
ನನ್ನೆಣಿಕೆಯ ಫಲದ ಕುಣಿಕೆಗಳು 
ಸಿಗುವ ತನಕ !
ಆದರೆ ಈ ಜಗದ 
ಅಗಾಧ ವಿಸ್ಮಯದ ಮುಂದೆ 
ನಾನೆಷ್ಟರವನು??

 
ಜನ ಮೆಚ್ಚಿ,
ಹಾಡಾಡಿ ಹೊಗಳಬಹುದು ನನ್ನ
ನಾ ಮಾಡಿದ ಕ್ಷುಲ್ಲಕ ಕೆಲಸಕ್ಕೆ !
ಆದರೆ ಎಷ್ಟೇ

ಉದ್ಘೋಷಗಳಾದರೂ

ಕಡಿಮೆಯೆ;
ಈ ಪ್ರಪಂಚದ ಪರಿಕ್ರಮಗಳ ಮುಂದೆ 
ನಾನೆಷ್ಟರವನು??

 
ಇಲ್ಲಿ ಎಲೆಮರೆಯಕಾಯಾಗಿ
ಕಾಲ ಸವೆಸಿ ಹೋದ
ಜೀವ-ಜಂತುಗಳೆಷ್ಟೋ?
ಇವುಗಳ ಮುಂದೆ,
ಮಾಡಿದ ಕಾರ್ಯಕ್ಕೆ 
ಮನ್ನಣೆ ಸಿಗದೇ ಹೋದಾಗ 
ಹಲುಬುತ ಕೂರುವ ನಾನು,
ಎಷ್ಟರವನು??

 
ಯಾವ ಪ್ರತಿ-ಫಲಾಫೆಕ್ಷೆಗೂ
ಹಂಬಲಿಸದೆ,
ಮನ ಮಿಡಿದದನ್ನೇ ಮಾಡಿ
ಮಡಿದ ಜೀವಗಳೆಷ್ಟೋ?
ಆದರೆ, ಒಂದೆರಡು ಸಾಲು 
ತೋಚಿದನ್ನ ಗೀಚಿ 
ಸಾಲು-ಸಾಲು
ಸನ್ಮಾನ ಪಡೆವ ನಾನು,
ಎಷ್ಟರವನು??