ನಾ ಕಡಲು ನೀ ಮುಗಿಲು

5

ನಿನಗೆಂದೆ ಬರೆದಿಟ್ಟ ನೂರೆಂಟು ಕವಿತೆಗಳು.
                                 ನಾ ಕಡಲು ನೀ ಮುಗಿಲು 
ನಾ ಕಡಲು ನೀ ಮುಗಿಲು
ನಮ್ಮ ನಡುವೆ ಏಕೆ ಈ ಕವಲು ?
ನಾ ಅರಸ ತಾ ಸರಸ 
ನಮ್ಮ ನಡುವೆ ಏಕೆ ಈ ವಿರಸ ?

ಬದುಕಲ್ಲಿ ನಿನ್ನ ಕಂಡೆ ,
ನಿನಗೆಂದೆ ಓಡಿ ಬಂದೆ
ಪ್ರೀತಿಯ ತಂದ ನೀನ್ಯಾರೇ..?

ಈ ಕವನವೂ ಈ ಪಯಣವೂ 
ಎಲ್ಲಾ ನಿನಗೆ ನೀನೆ ಸ್ವೀಕರಿಸೇ .!
ಈ ಕ್ಷಣಗಳು ಈ ಸ್ವರಗಳು
ಎಲ್ಲಾ ನಿನ್ನ ಕಡೆಗೆ ಸಮ್ಮತಿಸೇ !

ನೆನ್ನೊಲುಮೆ ನನ್ನ ಜೊತೆಗಿರಲು !
ನೀನ್ಯಾಕೆ  ನನ್ನ ಬಳಿಬರಲು.!
ಕಾಯುವೇ  ನಾ ಸಾಯುವೇ .....!

ನಾ ಕಡಲು ನೀ ಮುಗಿಲು 
ನಮ್ಮ ನಡುವೆ ಏಕೆ ಈ ಕವಲು ? 
ನಾ ಅರಸ ತಾ ಸರಸ 
ನಮ್ಮ ನಡುವೆ ಏಕೆ ಈ ವಿರಸ ? 
                              - ಅಂಶಿನ 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.