"ನೈಜ ಬದುಕಿನ ಮತ್ತೊಂದು ಪರ್ವಕಾಲ"

2.333335

ಭಾರತೀಯರೆಲ್ಲಾ ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ, ನಾವು ಕೆಲವು ಸಂಪ್ರದಾಯಿಕ ಅನಿಷ್ಟ ಪದ್ದತಿಗಳನ್ನು ಕೈ ಬಿಡುವಲ್ಲಿ ಹಿಂದೇಟು ಹಾಕುತ್ತಿದ್ದೇವೆ. ಅನಾದಿ ಕಾಲದಿಂದಲೂ ಬೆಳೆದು ಬಂದ ಅನೇಕ ಅನಾಗರಿಕ ಪದ್ಧತಿಗಳು ಮೂಢ ನಂಬಿಕೆಗಳು ಇನ್ನು ಇಂತಹ ತಾಂತ್ರಿಕ , ಕಂಪ್ಯೂಟರ್ ಯುಗದಲ್ಲಿ ಚಾಲ್ತಿಯಲ್ಲಿವೆ ಎಂದರೆ ವಿಪರ್ಯಾಸವೆನಿಸುತ್ತದೆ. ಉಲ್ಲಾಸಮಯವಾಗಿ ಓಡಾಡುವ ಮಹಿಳೆ ನಿರ್ಮಾಣವಾಗಿರಬಹುದು ಅವಳ ಹಿಂದೆಯೆ ಅನೇಕ ರೀತಿಯ ಚಿಂತನ ಮಂತನಗಳು ಪ್ರಾರಂಭವಾಗಿವೆ. ಅವಳ ಏಳ್ಗೆಗಾಗಿ ಎಷ್ಟೆ ಕಾನುನೂಗಳು ತಲೆ ಎತ್ತಿದರು ಅವಳ ಹಿಂದಿರುವ ಕಳಂಕ ಮತ್ತು ಸಂಪ್ರದಾಯಗಳನ್ನು ಬಿಡದ ಮೊಂಡು ಸಮಾಜವಿದು.

ನನ್ನ ಬಾಲ್ಯದ ಗೆಳೆತಿಯೊಬ್ಬಳ ಹೆಸರು ಸೌಮ್ಯ. ಆಕೆ ನಮ್ಮ ಗೆಳೆಯ ಗೆಳತಿಯರಲ್ಲಿ ಸುಂದರವಾದ ಹುಡುಗಿ ನಕ್ಕರೆ ಕೆನ್ನೆ ಮೇಲೆ ಕುಳಿ ಮೂಡಿವ ಹೆಣ್ಣು , ಬಹಳ ಆತ್ಮೀಯದಿಂದಲೆ ಇರುತ್ತಿದ್ದಳು. ತುಂಬಾ ದಿನಗಳಿಂದ ಅವಳ ದರ್ಶನವೆ ಆಗಿರಲಿಲ್ಲಾ ಅವಳ ಮದುವೆಗೆ ಹೋಗಿದ್ದಾಗ ಅವಳ ಜೊತೆಗೆ ಮಾತಾಡಿ ಇಲ್ಲಿಗೆ ಬರೊಬ್ಬರಿ ಆರು ವರ್ಷವಾಯಿತು. ಮೊನ್ನೆ ಆಕಸ್ಮಿಕವಾಗಿ ಒಂದು ಹೆಣ್ಣು ಮಗಳು ರೈಲು ನಿಲ್ದಾಣದಲ್ಲಿ ಮೂರು ಜನ ಮಕ್ಕಳೊಂದಿಗೆ ವಿಕಾರ ರೂಪದಲ್ಲಿ ನಿಂತು ನನ್ನತ್ತ ನೋಡಿದಾಗ ಆಶ್ಚರ್ಯ ಎನಿಸಿತು ಅವಳ ನೋಡಿದ ತಕ್ಷಣ ನನಗೆ ಏನೋ ವಿಚಾರ ಹೊಳೆದಂತಾಯಿತು. ಒಮ್ಮೆ ನಾನು ನನ್ನ ನೆನಪಿನಂಗಳಕ್ಕೆ ಹೋಗಿ ನೋಡಿದಾಗ ನೀವು ಸೌಮ್ಯ ಅಲ್ಲವೆ? ಎಂದೆ ಆಗ ದಾರಾಳಾವಾಗಿ ಕಣ್ಣೀರ ಧಾರೆ ಹರಿಸಿದ ಸೌಮ್ಯ ಹೌದು ನಾನೆ ವಿಶು ಎಂದಳು. ಅವಳ ಕಣ್ಣೀರ ಕಂಡು ಕರಗಿದೆ ಮರಗಿದೆ ಅಂತಹ ಜಾಣ ಹುಡುಗಿ ಹೇಗೆ ಹೀಗಾದಳು ಎಂದು ವಿಚಾರಿಸಿದೆ. ಎಂತಹ ಅದ್ಭುತ ಸುಂದರಿ ಹೀಗಾದಳಲ್ಲಾ ಎಂದು ಅನಿಸಿತು. ಹಾಗೆ ಅವಳನ್ನು ಸಮಾಧಾನ ಪಡೆಸುತ್ತಾ ಅವಳನ್ನು ಒಂದು ಕಡೆ ಕೂಡಿಸಿ ನನ್ನ ರೈಲು ಬರಲು ಇನ್ನು ಸಮಯವಿದ್ದುದರಿಂದ ಅವಳು ಸುಧಾರಿಸಿಕೊಂಡು ಹೇಳಿದ ಚಿಕ್ಕ ಕಥೆ ನಿಮ್ಮ ಮುಂದೆ ಹೇಳಲೆಬೇಕು ಎನಿಸಿತು ಕೇಳಿ ಅವಳ ಮಾತಲ್ಲೆ. " ಅಂದು ನನಗೆ ನೋಡಲು ಬಂದರು ಇಂದಿಗೆ ಆರೂ ವರ್ಷಗಳ ಹಿಂದೆ ನನಗೆ ಇನ್ನು ಓದಬೇಕು ಏನೋ ಸಾಧನೆ ಮಾಡಬೇಕು ಎನ್ನುವ ಹಂಬಲದಲ್ಲಿ ಇದ್ದೆ , ಆದರೆ ನಮ್ಮ ಕುಟುಂಬದವರ ಒತ್ತಡದಲ್ಲಿ ಈ ಮದುವೆಯೆಂಬ ಮಂಟಪಕ್ಕೆ ಬರಿ ಹದಿನೈದು ದಿನಗಳಲ್ಲಿ ಬಿದ್ದೆ ನನಗೆ ಮಾಡಿಕೊಂಡವನು ಅಗರ್ಭ ಶ್ರೀಮಂತ. ನನ್ನ ಮದುವೆಯು ಸುಲಲಿತವಾಗಿ ಆಗಿ ಹೋಯಿತು ನಾನು ಆಗ ಇದೂ ಸುಖ ಜೀವನ ಪ್ರಾರಂಭವೆಂದು ಭಾವಿಸಿ ಸಂಸಾರಕ್ಕೆ ಧುಮುಕಿದೆ. ಕೆಲವು ದಿನಗಳು ನನ್ನ ಗಂಡ ತುಂಬಾ ಪ್ರೀತಿ ತೋರಿದ ಹಾಸಿಗೆ. ಮೇಲಿನ ಪ್ರೀತಿ ನನಗೆ ಈಡಿ ಜಗತ್ತೆ ಮರೆಸಿತು ಹಗಲು ರಾತ್ರಿ ಒಂದೇ ಸಮನೇ ಅವನು ತೋರಿದ ಪ್ರೀತಿ ನನ್ನ ಬದುಕಿನ ಸಾಧನೆಯ ಚಿತ್ರಣ ಮರೆಯುವಂತೆ ಮಾಡಿತು. ಆದರೆ ಈ ಪ್ರೀತಿ ಬರಿ ಮೂರು ಮಕ್ಕಳಾಗುವರೆಗೆ ಅಂತಾ ಗೊತ್ತಿರಲಿಲ್ಲಾ. ಒಂದು ಮಗುವಾದಗ ಪ್ರೀತಿ ಕಡಿಮೆ ಅನಿಸಿತು ಎರಡನೆಯ ಮಗುವಿಗೆ ಸ್ವಲ್ಪ ಕಡಿಮೆ ಆಯಿತು. ಮೂರನೆ ಮಗುವಾದಾಗ ನೋಡಿದರೆ ನಾನು ಬೀದಿಪಾಲಾಗಿದ್ದೆ. ಇದೆ ಈ ಶ್ರೀಮಂತರು ತೋರಿದ ಪ್ರೀತಿಯ ಫಲ ಏಕೆ ಹೀಗಾಯಿತು ಎಂದು ಕೇಳಿದರೆ ಮುಖ್ಯ ಕಾರಣ ತಿಳಿಸಿದಳು ಒಂದು ನಾನು ಗಂಡು ಮಗು ಹೆರಲಿಲ್ಲಾ ಎಂಬ ಬಲವಾದ ಕಾರಣ , ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದೆ. ಎರಡನೇ ಕಾರಣ ನಾನು ಆ ಮನೆಗೆ ಕಾಲಿಟ್ಟ ಮೂರನೆ ದಿನಕ್ಕೆ ರೋಗಗ್ರಸ್ಥನಾದ ನಮ್ಮ ಮಾವ ತೀರಿಕೊಂಡಿದ್ದ. ಅವನು ತನ್ನ ರೋಗ ನಿಯಂತ್ರಿಸಲಾಗಿ ತೀರಿ ಹೋದರೆ ನನ್ನ ಕಾಲ್ಗುಣದಿಂದ ಸತ್ತ ಎಂದು ಅಂದು ಗೋಗರಿದರು. ಇನ್ನು ನನ್ನ ಗಂಡನಿಗೆ ಅನೇಕ ಅನೈತಿಕ ಸಂಬಂಧಗಳಿದ್ದವು ಎಂಬುವುದು ಬಹಳ ದಿನಗಳ ನಂತರ ನನಗೆ ತಿಳಿಯಿತು. ಸುಮಾರು ಹೆಣ್ಣುಗಳನ್ನು ತನ್ನ ಶ್ರೀಮಂತಿಕೆಯಿಂದ ಅದರ ಅಮಲಿನಲ್ಲಿ ಹಾಳು ಮಾಡಿದ್ದ ಎಂಬ ಉದಾಹರಣೆ ಊರಿನ ಜನ ಮಾತಾಡಿದ್ದು ತುಂಬಾ ತಡವಾಗಿ ಸತ್ಯ ತಿಳಿಯಿತು. ಇದು ಸತ್ಯವಾಗಿ ಕಂಡದ್ದು ನನ್ನ ಗಂಡನ ಹೆಲ್ತ ಚೆಕಪ್ ಮಾಡಿಸಿದಾಗ ಆತನಿಗೆ ಎಚ್.ಐ.ವಿ. ಪ್ಲಸ್ ಇದೆ ಎಂದು ತಿಳಿದಾಗ. ಹೊರಗಿನ ಅವನ ಸಂಬಂಧಗಳಿಗೆ ನನ್ನ ಗಂಡ ಈ ಮಾರಕ ರೋಗಕ್ಕೆ ತುತ್ತಾಗಿದ್ದ. ಆದರೆ ಈ ಅನಿಷ್ಠ ಕಳಂಕ ನನಗೆ ಅಂಟಿತ್ತು ಹೀಗಾಗಿ ಅತ್ತೆ ಮಾವ ಮೈದುನ ನನಗೆ ಕಿರುಕುಳ ಕೊಡಲು ಪ್ರಾರಂಭಿಸಿದರು ಬೇಕಂತಲೆ ವಿಷಯವನ್ನು ಪ್ರಸ್ಥಾಪಿಸುತ್ತಾ , ನನಗೆ ಹೀಯಾಳಿಸುತ್ತಾ , ಚುಚ್ಚು ಮಾತಾಡಿದರು. ದಿನೆ ದಿನೆ ನಾನು ಕುಂದು ಹೋಗತೊಡಗಿದೆ . ನನಗೆ ಜೀವನ ಇಷ್ಟೇನಾ ಎನ್ನುವ ಮಟ್ಟಿಗೆ ಹೀಯಾಳಿಸತೊಡಗಿದರು. ಇತ್ತ ತಂದೆ ತಾಯಿ ಮನೆಗೆ ಹೋಗಬೇಕೆಂದರೆ ಅಲ್ಲಿಯು ಅವರು ಇಲ್ಲಾ..ಎಲ್ಲಿ ಹೋಗುವುದು ಎಂದು ತಿಳಿಯದು. ಈಗ ನನಗೆ ಇಷ್ಟವಾದ ಯಾವುದೋ ನಗರದಲ್ಲಿ ಜೀವನ ಮಾಡಬೇಕು ಇನ್ನು ಬದುಕಬೇಕು ಎಂಬ ಛಲವಿದೆ, ವಿಶ್ವ ಅದಕ್ಕಾಗಿ ನಾನು ಇನ್ನು ಬದುಕಬೇಕು ಎಂಬ ಹಂಬಲದಿಂದ ಜೀವಂತವಾಗಿದ್ದೇನೆ ಎಂದು ಅಳತೊಡಗಿದಳು. ಇಷ್ಟು ಕಥೆ ಕೇಳಿದ ನನಗೆ ವಿಚಿತ್ರ ಅನಿಸಿತು ಅವಳಿಗೆ ಸಮಾಧಾನ ಮಾಡಿ ನಾನಿರುವ ರೂಂ ನ ಬೀಗ ಕೊಟ್ಟೆ ಇಲ್ಲಿಯೆ ಇರು ನಾನು ಈಗ ಮೂರುದಿನ ಬೆಂಗಳೂರಿಗೆ ಹೋಗಿ ಬರುತ್ತೇನೆ ಅಲ್ಲಿಯವರೆಗೂ ಮಕ್ಕಳೊಂದಿಗೆ ಹಾಯಾಗಿರು. ನಾನು ಬಂದಮೇಲೆ ಒಂದು ವ್ಯವಸ್ಥೆಯ ಬಗ್ಗೆ ಯೋಚಿಸೋಣ ಎಂದೆ. ಆಕೆಗೆ ನನ್ನ ಮನೆಯ ಕೀ ಕೊಟ್ಟು ಅಡ್ರಸ್ ಕೊಟ್ಟು ಬೀಳ್ಕೊಟ್ಟು ಬೆಂಗಳೂರಿಗೆ ನಡೆದೆ. ಅತ್ತ ರೂಂಗೆ ಹೋದ ಆಕೆ ಮತ್ತು ಮೂರು ಮಕ್ಕಳು ಅಲ್ಲಿಯೆ ಊಟ ಮಾಡಿ ದಿನ ಕಳಿದಾಗ ಆ ಮನೆಯಲ್ಲಿರುವ ಕೆಲವು ದಿನ ಪತ್ರಿಕೆಗಳ ತುಣುಕುಗಳನ್ನು ನೋಡಿದಳು. ಅದರಲ್ಲಿ ಈ ವಿಶ್ವ ಬರೆದ ಬರಹಗಳು ಪ್ರಕಟವಾಗಿದ್ದವು . ವಿಶೇಷ ಅಂದರೆ ಅವೆಲ್ಲಾ ಅವನು ಬರೆದ ಬರಹಗಳು ಆಶ್ಚರ್ಯವಾಯಿತು ಸುಮಾರು ಬರಹಗಳು ಅಂಕಣಗಳು ಬರೆದಿದ್ದ ಎರಡು ದಿನಗಳಿಂದ ಅವಳು ಅವುಗಳನ್ನು ಓದುವುದರಲ್ಲೆ ಕಳೆದಳು. ಆತ ಆಗಲೆ ಖ್ಯಾತ ಬರಹಗಾರನಾಗಿ ರಾಜ್ಯ ಮಟ್ಟದ ಸಾಧನೆಯನ್ನು ಮಾಡಿದ್ದ ಎಂದು ತಿಳಿಯಿತು. ಇದನ್ನು ನೋಡಿ ಪುಳಕಿತಳಾದಳು. ಅವನ ಬರಹಗಳೆಲ್ಲಾ ಆತನ ಜೀವನ ಅನುಭವ ಕಂಡು ಬೆರಗಾದಳು ಅನೇಕ ಪುಸ್ತಕಗಳನ್ನು ಬರೆದಿರುವ ಇವರು ಅವೆಲ್ಲವು ನೋಡಿದಾಗ ಸಾಧನೆಯ ಅನೇಕ ದಾರಿಗಳು ನೆನಪಾದವು. ಶಿಕ್ಷಕರೆದುರು ಪ್ರಶ್ನೆ ಕೇಳಿ ಸಾಧಿಸುವ ಮೊಂಡತನ ಅವನ ಬರಹದಲ್ಲಿ ಎದ್ದು ಕಂಡವು. ಅವನ ಜೀವನ ತುಂಬಾ ಕ್ರೀಯಾಶೀಲವಾಗಿ ಕಳೆಯುತ್ತಿದ್ದ. ಅವನ ಬರಹಗಳನ್ನು ನಮ್ಮ ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳು ಪ್ರಕಟಿಸಿದ್ದವು ಮೂರನೆ ದಿನಕ್ಕೆ ಒಬ್ಬ ಪೋಸ್ಟ್ ಮ್ಯಾನ ಬಂದ ಅವನು ಒಂದು ಪಾರ್ಸಲ್ ಕೊಟ್ಟು ಹೋದ. ಅದರಲ್ಲಿ ತೆಗೆದು ನೋಡಲು ಅಭಿಮಾನಿಗಳ ಪತ್ರ ಹಾಗೂ ಸಂಭಾವನೆಯ ಚೆಕ್ ಇದ್ದವು . ಇವನು ಅನುಸರಿಸಿದ ಸಾಧನೆಯ ಹಾದಿ ನೋಡಿ ವಿಚಿತ್ರವಾಯಿತು ಪ್ರಸಾರ ಕಪ್ಪು ಬಿಳುಪು ಎಂಬಂತೆ ಕಾಣುತ್ತಿದ್ದವು. ಈತ ಶಾಲಾ ಹಂತದಿಂದ ಹಿಡಿದು ಇಲ್ಲಿಯವರೆಗೂ ವಿಶೇಷವಾದ ಕೆಲವು ಹವ್ಯಾಸ ಬೆಳಿಸಿಕೊಂಡು ಬಂದಿದ್ದ. ಅವನ್ನೆ ಮುಂದುವರೆಸಿ ಈಗ ಹೆಸರಾಂತ ಬರಹಗಾರನಾದ ಈತನ ಜೀವನ ಹೇಗಿದೆ ಮೊದಲು ಹೇಗೆ ಕಳೆದ ಎನ್ನುವ ಕುತೂಹಲಕಾರಿ ಸಂಗತಿಗಳು ಅವನ ಜೀವನದ ಕೆಲವು ನೋವು ನಲಿವುಗಳನ್ನು ಆತನ ಜೀವನ ಚರಿತ್ರೆ ಬರೆಯುತ್ತಿದ್ದ ಪೇಪರಗಳು ಕೈಗೆ ಸಿಕ್ಕಾಗ ನೋಡಿದೆ ಅಲ್ಲಿರುವ ಕೆಲವು ಹುಡಿಗಿಯರಿಂದ ಮೋಸ ಹೋದ ಸಂಗತಿಗಳನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದ. ಹೀಗೆ ಅವುಗಳನ್ನು ಮೆಲುಕು ಹಾಕುತ್ತಾ ಹೋಗುತ್ತಿರುವಾಗ ಬಾಗಿಲು ಸಪ್ಪಳವಾಯಿತು ತೆರದು ನೋಡಿದಾಗ ಮೋಹನ ಈಜ್ ಬ್ಯಾಕ್ ಹಾಯ್ ಸೌಮ್ಯಾ ಹೇಗಿದ್ದೀರಾ ? ಮಕ್ಕಳೆಲ್ಲಾ ಹೇಗಿದ್ದಾರೆ? ನಿಮಗೆ ನನ್ನ ಮನೆ ಇಷ್ಟವಾಯಿತಾ? ಎಂದು ಕೇಳಿದರು ಹಾಗೆ ಮಾತನಾಡುತ್ತಾ ಎಲ್ಲರು ಸೇರಿ ಊಟಮಾಡಿದೇವು. ರಾತ್ರಿ ಮಲಗುವಾಗ ಹಾಗೆ ವಿಹಾರಕ್ಕಾಗಿ ಮಹಡಿ ಮೇಲೆ ಇಬ್ಬರು ಕುಳಿತು ನಮ್ಮ ಜೀವನದ ಕೆಲವು ತುಣುಕುಗಳನ್ನು ಮೆಲುಕು ಹಾಕುತ್ತಾ ಹೋದೇವು. ಸರಿ ಮುಂದೇನು ಎಂಬ ಪ್ರಶ್ನೆ ಅವನೆ ಕೇಳಿದ ಅದಕ್ಕೆ ಇಲ್ಲಿಯೆ ಇರುತ್ತೇನೆ. ಎಂಬ ಉತ್ತರಕ್ಕೆ ಆತ ಹೇಳಿದ್ದು ಇಷ್ಟು "ಇಲ್ಲಿಯೆ ನನ್ನ ಒಬ್ಬ ಗೆಳೆಯ ಚಿಕ್ಕ ಆಫೀಸಲ್ಲಿ ಕಂಪ್ಯೂಟರ್ ಕೆಲಸ ಖಾಲಿಯಿದೆ ಅಂತಾ ಹೇಳಿದ್ದಾನೆ . ನಾನು ಅವನೊಂದಿಗೆ ಮಾತಾಡಿದ್ದೇನೆ ಸದ್ಯಕ್ಕೆ ನೀನು ಅಲ್ಲಿಗೆ ಹೋಗು ಒಂದು ಕೆಲಸ ಕೈಯಲ್ಲಿದ್ದರೆ ಯಾವುದು ನೆನಪು ಬರಲ್ಲಾ ಹಾಗೆ ನೀನು ಯಾವುದಾದರು ಜೀವನದ ಸಾಧನೆಯ ಹಾದಿ ಆರಿಸಿಕೊ ಅದರತ್ತ ಯೋಚನೆ ಮಾಡೋಣ " ಅಂದಾ ಅವನ ಮಾತಿನಂತೆ ಒಂದು ಚಿಕ್ಕ ಕೆಲಸ ಕೊಡಿಸಿದ ಒಂದು ಬಾಡಿಗೆ ಮನೆಯಲ್ಲಿ ನನ್ನ ಮೂರು ಮಕ್ಕಳೊಂದಿಗೆ ನನ್ನ ಹೊಸ ಜೀವನ ಪ್ರಾರಂಭವಾಯಿತು. ನನ್ನ ಮಕ್ಕಳಿಗೆ ಪಕ್ಕದಲ್ಲಿರುವ ಸರಕಾರಿ ಶಾಲೆಗೆ ಸೇರಿಸಿದೆ ಆಗಾಗ ವಿಶ್ವ ಮನೆಗೆ ಬಂದು ನನ್ನಿಂದ ಅಡಿಗೆ ಮಾಡಿಸಿಕೊಂಡು ಮಕ್ಕಳೊಂದಿಗೆ ಊಟಮಾಡಿ ನನ್ನ ಕುಶಲೋಪರಿ ವಿಚಾರಿಸಿಕೊಂಡು ಹೋಗುತ್ತಿದ್ದ. ಜೀವನ ಹೇಗೊ ಒಂದು ಘಟ್ಟಕ್ಕೆ ಬಂತು ಎನಿಸಿತೊಡಗಿತು. ಆಗ ವಿಶ್ವನಿಗೆ ಕೇಳಿದೆ, ನಾನು ನಿನ್ನ ಹಾಗೆ ಬರಿಯಬೇಕು ಅಂದುಕೊಂಡಿದ್ದೇನೆ ನನಗೆ ಸಾಹಾಯ ಮಾಡು ಹೇಗೆ ಬರೆಯಲಿ ಎಲ್ಲಿಗೆ ಮತ್ತು ಹೇಗೆ ಕಳಿಸಲಿ ಎಂದು ಕೇಳಿದ ಪ್ರಶ್ನೆಗೆ ವಿಶ್ವ ನಿನ್ನ ಜೀವನ ಅನುಭವವೆ ಸಾಕು ಬರೆಯೋಕ್ಕೆ ಅವುಗಳನ್ನು ಬರೆದು ಸದ್ಯಕ್ಕೆ ನನ್ನ ಕಂಪ್ಯೂಟರ್ ನಲ್ಲಿ ದಾಖಲಿಸು, ನಾನು ಸಾಹಾಯ ಮಾಡುತ್ತೇನೆ. ಎಂದಾ ಆಗ ನಾನು ಕೂಡಾ ಬರೆಯ ತೊಡಗಿದೆ. ನಾನು ನನ್ನ ಜೀವನದ ಕೆಲವು ನೈಜ ತುಣುಕುಗಳನ್ನು ಬರೆಯ ತೊಡಗಿದೆ. ಅದಕ್ಕೆ ವಿಶ್ವ ತಿದ್ದುತ್ತಾ ಪತ್ರಿಕೆಗಳಿಗೆ ಕಳುಹಿಸುತ್ತಾ ಹೋದ. ಅವಾಗ ಶುರುವಾಯಿತು ನನ್ನ ಪರ್ವಕಾಲ ವಿಶ್ವ ನನ್ನ ಬರವಣಿಗೆಗ ಬೆನ್ನುಲುಬಾಗಿ ನಿಂತ. ಹಲವು ದಿನಗಳೆ ಕಾಯಬೇಕಾಯಿತು ಈ ಬರಹಗಳು ಪ್ರಕಟವಾಗಲು ಸುಮಾರು ದಿನಗಳ ನಂತರ ಒಂದು ಪತ್ರಿಕೆಯಿಂದ ಕರೆ ಬಂತು, ಅವರಿಗೆ ನನ್ನ ಬರಹ ಇಷ್ಟವಾಗಿ ತಾವು ಅದನ್ನು ಪ್ರಕಟಿಸುವದಾಗಿ ಹೇಳಿದರು. ಅಂದು ತುಂಬಾ ಖುಷಿ ಆಯಿತು ನಾನು ಈಗಾಗಲೆ ಬರೆಯುವ ಶೈಲಿ ರೂಢಿಸಿಕೊಂಡಿದ್ದೆ, ಅದನ್ನೆ ಮುಂದುವರೆಸುತ್ತಾ ಹೋದೆ ಗೊತ್ತಿರುವ ಗೆಳೆಯರಿಗೆ ಹಂಚುತ್ತಾ ಹೋದೆ ಆಗ ಬೆಳೆಯತೊಡಗಿದೆ . ಐದು ವರ್ಷಗಳ ನಂತರ ಒಂದು ಸುಂದರ ವೇದಿಕೆಯ ಮೇಲೆ ನಾನು ಹಾಗೂ ವಿಶ್ವ ಇದ್ದೇವು ಮೊದಲಿಗೆ ವಿಶ್ವ ಮಾತಾಡುವ ಅದರಲ್ಲಿಯು ನನ್ನ ಪುಸ್ತಕದ ಪರಿಚಯದ ಮಾತು ಅದಾಗಿತ್ತು " ಯಾರಿಗೆ ಜೀವನದಲ್ಲಿ ಬದುಕಬೇಕು ಸಾಧಿಸಬೇಕು " ಎಂಬ ಹಂಬಲವಿದೆಯೊ ಅವರಿಗೆ ನಮ್ಮ ಸೌಮ್ಯ ಮಾದರಿಯಾಗಿದ್ದಾರೆ ಅವರ ಈ ಪುಸ್ತಕವು ಜೀವನದಲ್ಲಿ ನೊಂದು ಬೆಂದು ಈ ಬದುಕು ಸಾಕು ಎನ್ನುವವರಿಗೆ ದಾರಿದೀಪವಾಗಲಿದೆ ಎಂದರು. ಇನ್ನು ನನ್ನ ಸರದಿ ಇವತ್ತು ನಾನು ನನಗೆ ದ್ವೇಷಿಸಿದ ಊಟ ಕೊಡದೆ ಹೊರಗೆ ಹಾಕಿದ ನನ್ನ ಅತ್ತೆಗೆ ತುತ್ತು ಅನ್ನ ಹಾಕುತ್ತಿರುವ ಒಬ್ಬ ನತದೃಷ್ಠ ಮಹಿಳೆ ಆದರೆ ಎಲ್ಲರಿಗೂ ವಿಶ್ವ ನಂತಹ ಗೆಳೆಯ ಸಿಕ್ಕರೆ ಎಲ್ಲರು ಸಾಧನೆಯ ಹಾದಿ ಮುಟ್ಟುವಲ್ಲಿ ಸಂದೇಹವಿಲ್ಲಾ ಎಂದೆ. ಜನರ ಚೆಪ್ಪಾಳೆಗಳ ಮದ್ಯೆ ನನ್ನ ಮತ್ತೊಂದು ಪುಸ್ತಕ ಲೋಕಾರ್ಪಣೆ ಆಯಿತು . ಅದೇ

" ನೈಜ ಬದುಕಿನ ಮತ್ತೊಂದು ಪರ್ವಕಾಲ"

ಹೀಗೆ ಮಹಿಳೆಗೆ ಅಂಟಿರುವ ಅನೇಕ ಮೂಢನಂಬಿಕೆಗಳನ್ನು ನಾವೆಲ್ಲ ಕೈ ಬಿಟ್ಟು ನೈಜವಾಗಿ ಆಕೆಯ ರಕ್ಷಣೆ ಮತ್ತು ಅವಕಾಶ ಮಾಡಕೊಡಬೇಕಾದೆ. ಇಲ್ಲವಾದಲ್ಲಿ ಮುಂದೊಂದು ದಿನ ಹೆಣ್ಣು ಹೆಣ್ಣು ಎಂದು ಹುಡುಕಾಡುವ ಕಾಲ ಬಂದೀತು , ಎಚ್ಚರ!
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):