ಪುಣ್ಯ- ಪಾಪ - ಪರಿಹಾರ

0

ಶಿವ ಶಿವ ಎಂದರೆ ಭಯವಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
ಶಿವ ಭಕ್ತರಿಗೆ ನರಕವಿಲ್ಲ ........
ಏನೋ ತಿಮ್ಮಾ ಶಿವನ ಧ್ಯಾನ ಮಾಡುತ್ತಿದ್ದೀಯಲ್ಲಾ? ಏನು ವಿಶೇಷ?
ಈಗ ಶಿವನ ಧ್ಯಾನ ಮಾಡುವುದು ಒಂದೇ ದಾರಿ ಅಂತ ನಮ್ಮ ಗಣಿ ಧಣಿಗಳಿಗೆ ಹೇಳಿದ್ದಾರಂತೆ. ಹಿಂದೆ ಭೀಕರ ಕಷ್ಟಗಳನ್ನು ಎದುರಿಸಲಾಗದ ಅನೇಕ ಮಹಾನುಭಾವರು ಶಿವನ ಧ್ಯಾನ ಮಾಡಿದ್ದರಂತೆ.
ಹೌದೋ ಹಿಂದೆ ಅನೇಕ ರಾಕ್ಷಸರು ಶಿವನಿಂದ ವರಪಡೆದರೂ ಆಮೇಲೆ ಅವರೆಲ್ಲಾ ದೇವತೆಗಳಿಂದ ಹತರಾದರಲ್ಲಾ!?
ಏ ಶೀನ, ಶಿವ ರಾಕ್ಷಸರಿಗೆ ಮಾತ್ರ ವರ ಕೊಟ್ಟಿಲ್ಲ. ಶ್ರೀ ರಾಮ ದೇವರು ಮರಳಿನಲ್ಲಿ ಶಿವ ಲಿಂಗ ಮಾಡಿ ಅದನ್ನು ಪೂಜಿಸಿದ್ದರಿಂದಲೇ ರಾವಣನನ್ನು ಕೊಂದು ಸೀತೆಯನ್ನು ಹಿಂದೆ ಪಡೆಯಲು ಸಾಧ್ಯವಾಗಿದ್ದು ಗೊತ್ತಾ?
ತಿಮ್ಮಾ.. ಅದೆಲ್ಲಾ ಪುರಾಣವಾಯಿತು. ಗಣಿಧಣಿಗಳು ಶಿವನ ಪೂಜೆ ಮಾಡಿದರೆ ಅವರ ಪಾಪವೆಲ್ಲಾ ಪರಿಹಾರವಾಗಿ ಶಿಕ್ಷೆಯಿಂದ ಪಾರಾಗಬಹುದೇನೋ?
ಮತ್ತಿನ್ನೇನು... ಪರಿಹಾರವಾಗುತ್ತೆ ಎಂದು ಜ್ಯೋತಿಷಿಗಳು, ಬ್ರಾಹ್ಮಣರು ಹೇಳಿದ್ದಾರಲ್ಲಾ!?
ಚಿನ್ನದ, ವಜ್ರದ ಕಿರೀಟಗಳನ್ನು ದೇವಮಂದಿರಗಳಿಗೆ ಕೊಟ್ಟು, ಹೋಮ ಹವನ ಮಾಡಿದರೂ ಜೈಲಿನಲ್ಲಿ ಚಾಪೆಯ ಮೇಲೆ ಮಲಗುವುದು ತಪ್ಪಲಿಲ್ಲ. ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಎಂಬ ಮಾತು ಕೇಳಿಲ್ಲವೇನೋ?
ಹಾಗಾದರೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು, ದೇವರ ಪೂಜೆ ಮಾಡುವುದು ಉಪಯೋಗವಿಲ್ಲವೇನೊ?
ನಾನು ಹೇಳಿದ್ದು ಹಾಗಲ್ಲ. ಬರೀ ದೇವರ ಪೋಜೆ ಮಾಡುತ್ತಾ, ಮಠಮಂದಿರಗಳಿಗೆ ಅಲೆಯುತ್ತಾ, ಮಠಾಧಿಪತಿಗಳ ಕಾಲು ಹಿಡಿಯುತ್ತಾ, ಹೋಮ ಹವನ ಮಾಡುತ್ತಾ ಕಾಲ ಕಳೆಯುವ ಬದಲು ಇನ್ನಾದರೂ ವೈಭವದ ಜೀವನ ಬಿಟ್ಟು ಸರಳ ಜೀವನ ಮಾಡುತ್ತಾ ಜನರ ಸೇವೆ ಮಾಡಿದರೆ ಸ್ವಲ್ಪ ಪಾಪವಾದರೂ ಸವೆಯಬಹುದು ಅಂತ.
ಇದನ್ನೆಲ್ಲಾ ನೀನು ಹೇಳಿದರೆ ಏನು ಪ್ರಯೋಜನ? ನಿನ್ನ ಮಾತು ಗಣಿಧಣಿಗಳಿಗೆ ಕೇಳುತ್ತದೆಯೇನೋ?
ಅದು ನನಗೂ ಗೊತ್ತು. ಆದರೆ ತಿಳಿದವರು ಇಂತಹ ತಿಳುವಳಿಕೆ ನೀಡದೆ ಮತ್ತಷ್ಟು ಹೋಮ ಹವನ, ಪೂಜೆ ಎಂದು ಹಣ ಕೀಳುವುದನ್ನು ನೋಡಿದಾಗ ಬೇಸರವಾಗಿ ನನಗನ್ನಿಸಿದ್ದನ್ನು ಹೇಳಿದೆನಷ್ಟೆ...
ಹಾಗಾದರೆ ನಾವೀಗ ಹೀಗೆ ಹಾಡೋಣ
ಕಾಯಕವೇ ಕೈಲಾಸ ಕೇಳಿರಣ್ಣಾ......
ದುಡ್ದೇ ದೊಡ್ಡಪ್ಪನಲ್ಲ ತಿಳಿಯಿರಣ್ಣಾ....
ದೀನ ಬಡವರ ಸೇವೆ ಮಾಡಿರಣ್ಣಾ.....
ಅವರಲ್ಲೇ ದೇವರನ್ನು ಕಾಣಿರಣ್ಣಾ.....
ಅವರ ಸೇವೆಯಲ್ಲಿ ಸುಖವ ಕಾಣಿರಣ್ಣಾ.....

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶೋಭಾರವರೇ, ಒಂದು ಒಳ್ಳೆಯ ವಿಷಯವನ್ನು ಮುಂದಿಟ್ಟಿದ್ದೀರ ಅದು ಸಾಮಾನ್ಯ ಮನುಷ್ಯನಿಗಾದ್ರೆ ಅರ್ಥವಾಗುತ್ತೆ. ಅದೇ ನಮ್ಮ ರಾಜಕೀಯ ನಾಯಕರ ವರಸೆಯೇ ಬೇರೆ ಅವರ ಆಲೋಚನಾ ಕ್ರಮ ಹೇಗಿರುತ್ತೆ ಅಂತಾ ಒಂದು ಸ್ಯಾಂಪಲ್ಲನ್ನು ಕೆಳಗೆ ಕೊಟ್ಟಿದ್ದೇನೆ. ಒಳ್ಳೆಯವನಾಗಿದ್ದಕ್ಕೆ ರಾಮ ಹದಿನಾಲ್ಕು ವರ್ಷ ವನವಾಸ ಮಾಡಿದ ಹೆಂಡತಿ ಮತ್ತು ತಮ್ಮನನ್ನೂ ಕಾಡಿಗಟ್ಟಿದ. ಅದೇ ರಾವಣ ಕಡೇತನಕ ಮೆರೆದ, ಕಟ್ಟಕಡೆಯ ಸೀನಿನಲ್ಲಿ ಮಾತ್ರ ಸ್ವಲ್ಪ ಯಾತನೆ ಅನುಭವಿಸಿದ. ಇನ್ನು ಪಾಂಡವರ ಗತಿಯೂ ಅದೇ ತಾನೇ? ಅದಕ್ಕೇ ವಿಲನ್ನುಗಳ ತರ ಇದ್ರೇ ಲಾಸ್ಟ್ ಸೀನಿನವರೆಗೂ ಎಂಜಾಯ್ ಮಾಡಿ ಒಂದೇ ಒಂದು ಸೀನಿನಲ್ಲಿ ಕಷ್ಟಪಡ್ಬೇಕಷ್ಟೆ?! ಅಷ್ಟಕ್ಕೂ ಇವತ್ತು ನಮ್ಮ ಪಾರ್ಟಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇಲ್ಲದಿರೋದ್ರಿಂದ ಈ ಕಷ್ಟ, ಮತ್ತೆ ನಾಳೆ ನಮ್ಮವ್ರು ಆರಿಸಿ ಬಂದರೆ ವಿರೋಧ ಪಕ್ಷದವರಿಗೆ ಇರುತ್ತೆ ಈ ಕೃಷ್ಣನ ಜನ್ಮಸ್ಥಾನ - ನೋಡಿಲ್ವಾ ನೀವು ತಮಿಳುನಾಡಿನಲ್ಲಿ. ವಸಿ ತಡ್ಕಳಿ ಮುಂದೈತೆ ಮಾರಿ ಹಬ್ಬ, ಆವಾಗ ತೋರಿಸ್ತೀವಿ ನಮ್ಮ ವರಾತ ಅಂತ ಮೀಸೆ ತಿರುವ್ತಾ ಅವ್ನೆ ನಮ್ಮ ಗಣಿ ಸಾವುಕಾರ. ನೀವು ನೋಡಿದ್ರೆ ಅದೆಂಥದೋ ಜನಸೇವೆ ಅಂತಾ ಏನೇನೋ ಬಡಬಡಸ್ತಾಯಿದೀರಲ್ಲ. ನಿಮ್ಮೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರವರೇ ಪ್ರತಿಕ್ರಿಯಿಸಿದುದಕ್ಕೆ ಧನ್ಯವಾದಗಳು. ನನ್ನ ಬಡಬಡಿಕೆ ಯಾರಾದರು ಒಬ್ಬರಿಗಾದರೂ ಅರ್ಥವಾಗಿ ಸಾತ್ವಿಕ ಜೀವನ ನಡೆಸುವಂತಾಗಲಿ ಎಂಬುದು ನನ್ನ ಹಂಬಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ದ್ಱಷ್ಥಿ ಎಲ್ಲಾ ಬಳ್ಳಾರಿಯ ಗಣಿ‍ಧಣಿಗಳ ಮೇಲೆ ನೆಟ್ಟ ಹಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.