ಪೇಟೆಗೆ ಬಂದ ಹಳ್ಳಿ ಹೈದನ ಬಾಳು

3.5

ಇಂದಿನ ಬೆಳಗಿನ (14-7-2012) ಹೊಸ ದಿಗಂತ ಪೇಪರ್ ಓದುತ್ತಿದ್ದಂತೆ ಮನಸ್ಸಿಗೆ ತುಂಬಾ ಬೇಸರವೆನಿಸಿ ಇದನ್ನು ಬರೆಯಲು ಕುಳಿತೆ.  ಏಕೋ ಏನು ಹೇಳಬೇಕೆಂದೇ ತೋಚುತ್ತಿಲ್ಲ.  ಕಾರಣ ಇದೇ ಸಂಪದದಲ್ಲಿ 30-8-2010ರಂದು ಚಾನೆಲ್ ವೊಂದರಲ್ಲಿ ಬರುತ್ತಿದ್ದ ಹಳ್ಳಿ ಹೈದ ಪೇಟೆಗೆ ಬಂದ ರಿಯಾಲಿಟಿ ಷೋ ಬಗ್ಗೆ ಅದೇ ಹಣೆ ಬರಹದೊಂದಿಗೆ ಲೇಖನವೊಂದನ್ನು ಬರೆದಿದ್ದೆ.  

ಅದರಲ್ಲಿ ಭಾಗವಹಿಸಿದ ಸ್ಫರ್ಧಿಗಳ ಮುಂದಿನ ಭವಿಷ್ಯ ಏನಾಗಬಹುದು ಮತ್ತು ಅದರ ಜವಾಬ್ದಾರಿ ಹೊರುವವರಾರು?  ಈ ಬಗ್ಗೆ ಯೋಚಿಸಬೇಡವೇ ಎಂಬುದೇ ಆ ಲೇಖನದ ಸಾರಾಂಶ.  ಅಂದು ನಾನು ಯೋಚಿಸಿದಂತೆ ಅದೇ ರಿಯಾಲಿಟಿ ಷೋ ದಲ್ಲಿ ಭಾಗವಹಿಸಿ ಬಹುಮಾನವನ್ನೂ ಪಡೆದುಕೊಂಡ ಹೈದನು ಇಂದು ಮಾನಸಿಕ ಆಸ್ಪತ್ರೆಯಲ್ಲಿ ಕುಳಿತಿದ್ದ ಚಿತ್ರದೊಂದಿಗೆ . ಅವನ ತಂದೆ ತಾಯಿಯರ ಅಳಲು ಇತ್ಯಾದಿ ಗಳು ಇಂದಿನ ಹೊಸದಿಗಂತದ ಒಳ ಪುಟದಲ್ಲಿ ಪ್ರಕಟವಾಗಿದೆ.


ಅಂದಿನ ಲೇಖನದಲ್ಲಿಯೇ ಕೊನೆಯ ಸಾಲಾಗಿ ಹೀಗೆ ಬರೆದಿದ್ದೆ "ಗುಡ್ಡ ಸುಟ್ಟಮೇಲೆ ದರಕು ಒಬ್ಬಳಿಸುವುವ ಬದಲು ಚಿಂತಿಸಿ ಹೆಜ್ಜೆ ಇಡಬಾರದೇ?  ನಿಮ್ಮೆಲ್ಲರ ಅಭಿಪ್ರಾಯ? ??????"  ಈ ಬಗ್ಗೆ ಕೆಲವರು ತಮ್ಮ ಪ್ರತಿಕ್ರಿಯೆಯನ್ನೂ ಬರೆದಿದ್ದರು.  ಇದು ಕೇವಲ ಅರಣ್ಯ ರೋದನವಾಯಿತಷ್ಟೆ.  ಈ ಹೈದರಿಗೆ ಗೆದ್ದರೆ ಹಣ ಬರುತ್ತದೆ ಸರಿ ಆದರೆ ಇದರಿಂದ ಕುಟುಂಬಕ್ಕೆ - ಸಮಾಜಕ್ಕೆ ಒಳಿತಾಗಬಹುದೇ? ಈ ಹೈದರು ಮಾನಸಿಕ ಸ್ವಾಸ್ಥ್ಯ ಇಟ್ಟುಕೊಳ್ಳಬಲ್ಲರೇ? ಇದಕ್ಕೆ ಬಹುಮಾನ ಗೆದ್ದ ಒಬ್ಬ ಹೈದ ಉತ್ತರ ನೀಡಿದಂತಾಗಿದೆ.  ಉಳಿದವರ ಪರಿಸ್ಥಿತಿ ಇನ್ನೂ ಬೆಳಕಿಗೆ ಬರಬೇಕಾಗಿದೆ ಅಷ್ಟೆ. ಉಳಿದವರು ಹೇಗೇ ಇದ್ದರೂ  ಅವರಿಗೆ ಈ ಗ್ಲಾಮರ್ ಇಲ್ಲದ ಕಾರಣ  ಪರಿಸ್ಥಿತಿ ಬೆಳಕಿಗೆ ಬರಲಾರದು.  ಅದು ಅಲ್ಲಿಯ ಸ್ಥಳೀಯರನ್ನೇ ಕೇಳಿ ನೋಡಬೇಕಷ್ಟೆ.


ಇನ್ನಾದರೂ ಸಮಾಜದ ಕನ್ನಡಿಗಳಾದ  ಚಾನೆಲ್ ಗಳು ಹಣದಾಸೆಯಿಂದ ಚಲ್ಲಾಟ ಬಿಟ್ಟು ತಮ್ಮ ಸಾಮಾಜಿಕ ಜವಾಬ್ದಾರಿಯ ಬಗ್ಗೆ  ಒಂದು ಗಂಭೀರ ಚಿಂತನೆ ನಡೆಸಲಿ ಎಂಬುದೇ  ನನ್ನ ಆಶಯ ಅಷ್ಟೆ.

 ಈ ಹಿಂದೆ ಬರೆದ ಲೇಖನದ ಕೊಂಡಿ: http://sampada.net/forum/27694

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಂತಹ ಅಮಾಯಕರನ್ನು ಟಿವಿಗಳು ಹಣ, ಪ್ರಚಾರ, ಜನಪ್ರಿಯತೆ ಗಳಿಸಲು ದುರ್ಬಳಕೆ ಮಾಡುತ್ತಿರುವುದರ ವಿರುದ್ಧ ಪ್ರಬಲ ಜನಧ್ವನಿ ಮೊಳಗಬೇಕಿದೆ. ಹಿಂದೊಮ್ಮೆ ಟವಿ 9ರಲ್ಲಿ ಖಾಸಗಿ ಸಂಸ್ಥೆಯ ಮಾಲಿಕನೊಬ್ಬ ಮಹಿಳಾ ನೌಕರಳೊಬ್ಬಳನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಎಂದು ಆರೋಪಿಸಿ ಟಿವಿಯವರು ಹಲವಾರು ದಿನಗಳ ಕಾಲ ಮಾಲಿಕನನ್ನು ಕನ್ನಡ ರಕ್ಷಣಾ (?) ವೇದಿಕಯವರು ಮತ್ತು ಇತರರು ಬಟ್ಟೆ ಹರಿದು, ಚಪ್ಪಲಿಯಲ್ಲಿ ಹೊಡೆಯುತ್ತಾ ಇದ್ದುದನ್ನು ಪ್ರಸಾರ ಮಾಡಿದ್ದರು. ಅವನ ಮಾನ ಮೂರಾಬಟ್ಟೆಯಾಗಿತ್ತು. ಈಗ ಕೆಲವು ದಿನಗಳ ಹಿಂದೆ ಅದೇ ಮಹಿಳಾ ನೌಕರೆ ಅದೇ ಹಳೆಯ ಮಾಲಿಕನಿಂದ 3 ಕೋಟಿ ರೂ. ಕೀಳುವ ಸಲುವಾಗಿ ಬ್ಲಾಕ್ ಮೇಲ್ ತಂತ್ರ ಮಾಡಿದ್ದು ಮೇಲುನೋಟಕ್ಕೆ ತಿಳಿದು ಆಕೆಯನ್ನು ದಸ್ತಗಿರಿ ಮಾಡಿದ್ದಾರೆ. ಟಿವಿ9 ಕಳೆದಿದ್ದ ಸಂಸ್ಥೆಯ ಮಾಲಿಕನ ಮಾನ ಹಿಂತಿರುಗಿಸುವುದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಮಾತು ನಿಜ ನಾಗರಾಜರವರೇ ಅದರ ಬಗ್ಗೆ ನಾನು ಬರೆದಿದ್ದೇನೆ ಒಮ್ಮೆ ಓದಿ http://www.sampada.n...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅ0ದ ಹಾಗೆ ಅದು ಹೊಯ್ಸಳ ಸೇನೆ.....ರಕ್ಷಣಾ ವೇದಿಕೆಯಲ್ಲ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಯಾವುದೋ ಒಂದು! ಅವುಗಳ ಉದ್ದೇಶ ಸುಪಾರಿ ಪಡೆದು ದಾದಾಗಿರಿ ಮಾಡುವುದು ಎಂದು ತೋರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಓದಿದೆ. ನಿಮ್ಮ ಮಿತ್ರರಿಗೆ ಮಾಧ್ಯಮದ ವಿರುದ್ಧ ಮಾನನಷ್ಠ ಮೊಕದ್ದಮೆ ಹೂಡಲು ಅಡ್ಡಿಯಿರಲಾರದೆಂದು ಭಾವಿಸುತ್ತೇನೆ, ಗುರುರಾಜರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಾಧ್ಯಮದವರು ಪ್ರಶ್ನಾತೀತರು ಎಂದು ವರ್ತಿಸುವುದು ಸರಿಯಲ್ಲ. ಅವರಿಗೂ ಸಾಮಾಜಿಕ ಜವಾಬ್ದಾರಿ ಇರಬೇಕು. ಹುಚ್ಚುಚ್ಚು ಕಾರ್ಯಕ್ರಮ ಮಾಡಿ ಆ ಹುಡುಗನಿಗೆ ನೀಡಿದ ಬಹುಮಾನವನ್ನು ಅವನೊಬ್ಬನಿಗೇ ಕೊಡುವ ಬದಲು ಆ ಇಡೀ ಊರಿಗೆ ಏನಾದರೂ ಒಳ್ಳೆಯ ಕೆಲಸಕ್ಕೆ ಬಳಸಿದ್ದರೆ ಒಂದು ವಾಹಿನಿಯಿಂದ ಒಳ್ಳೆಯ ಕೆಲಸವಾಯ್ತು ಅನ್ನಬಹುದಿತ್ತು. ಆದರೆ ಇವರಿಗೆ ಟಿಆರ್‌ಪಿ ಮುಖ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕಲಿಯುಗೆ ಪ್ರಥಮ ಪಾದೆ.. ಭರತ ಖಂಡೆ......... ಇನ್ನೂ ಇದು ಕಲಿಯುಗದ ಪ್ರಥಮಪಾದ, ಅದರಲ್ಲೂ ಸ್ವಲ್ಪಭಾಗ ಕಳೆದಿದೆ ಅಂತ ತಿಳಿದವರು ಹೇಳಿದ್ದುಂಟು. ಈಗ ನಡೆಯುತ್ತಿರುವ ವಿದ್ಯಾಮಾನಗಳಿಗೆ ನಾವು ಸುಸ್ತಾದರೆ...ಹೇಗೆ....?? ದೈರ್ಯ ತಗೋಳಿ ಇನ್ನೂ ತುಂಬಾ ಬಾಕಿ ಇದೆ. ಸಾಮಾಜಿಕ ಕಳಕಳಿಯ ತಮ್ಮ ಲೇಖನಕ್ಕೆ ನನ್ನ ವಂದನೆಗಳು ಮತ್ತು ತಮಗೂ ಕೂಡ. ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾನು ಸಹ ಅವನಿಗೆ ಸಂಬಂದಿಸಿದ ಕಾರ್ಯಕ್ರಮ ನಿನ್ನೆ ಟೀವಿಯಲ್ಲಿ ನೋಡಿದೆ. ಆ ಹುಡುಗನಿಗೆ ಬಂದ ಹಣದಲ್ಲಿ ಅವನು ಪ್ರಥಮವಾಗಿ ಕೊಂಡದ್ದು ಟಿ.ವಿ. ಅಂತೆ. ಆದರೆ ಅವನು ಇರುವ ಊರಿನಲ್ಲಿ ವಿಧ್ಯುತ ಅನುಕೂಲವಿಲ್ಲ ಹಾಗಾಗಿ ಆ ಟೀವಿಗೆ ಒಂದು ಜನರೇಟರ್ ಕೊಂಡುಕೊಂಡ ಎಂದು ಪೇಪರಿನಲ್ಲಿ ಇತ್ತು. ಅಲ್ಲಿಗೆ ಅವನ ತಲೆಯನ್ನು ಪೇಟೆಯವರು ಯಾವ ಮಟ್ಟಕ್ಕೆ ಕೆಡಿಸಿದ್ದಾರೆ ಎಂದು ಯೋಚಿಸಿ. ಅಷ್ಟೆ ಅಲ್ಲ ಅವನು ನಟಿಸಿದ ಚಿತ್ರದ ನಿರ್ಮಾಪಕರೊ ನಿರ್ದೇಶಕರೊ , ಮತ್ತು ನಾಯಕಿ ಇದ್ದರು ಮಾತನಾಡಲು ಅವರು ಹೇಳುತ್ತಿದ್ದರು ಅವನಿಗೆ ಹುಡುಗಿ ಅಂದರೆ ಆಗುತ್ತಿರಲಿಲ್ಲ ಯಾರಾದರು ಹತ್ತಿರ ಬಂದರೆ ದೂರ ನಿಲ್ಲುತ್ತಿದ್ದ, ಹಾಗಾಗಿ ಈಚೆಗೆ ಅವನಿಗೆ ಮದುವೆಯಾಗಿದೆ ಅವನಿಗು ಹುಡುಗಿಗು ಜಗಳವಾಗುತ್ತಿತ್ತು ಎಂದು. ಎಂತ ಆಶ್ಚರ್ಯ! ಎಂದು ಇಣಿಕಿನೋಡದ ಮನೆಯ ಒಳಗಿನ ವಿಷಯಗಳು ಚರ್ಚಿಸಲ್ಪಡುತ್ತವೆ. ಓದಿಲ್ಲ ಏನು ಗೊತ್ತಿಲ್ಲದ ಹುಡುಗಿಯ ಬಗ್ಗೆ ಮಾಧ್ಯಮಗಳಲ್ಲಿ ಅಪವಾದ ಹೊರಸಲ್ಪಡುತ್ತದೆ ! ಎಂತ ಕರುಣೆ ಇಲ್ಲದವರು ಇವರು. ನಾಯಕಿ ನಟಿ ಹೇಳುತ್ತಿದ್ದಳು ಅವನು ನನ್ನನ್ನು ಮದುವೆ ಏಕೆ ಬರಲಿಲ್ಲ ಎಂದು ಸಿಟ್ಟುಮಾಡಿಕೊಂಡ ಆದರೆ ಮದುವೆ ಕರೆದೆ ಇರಲಿಲ್ಲ ವಿಚಿತ್ರವಾಗಿದ್ದ ಎಂದು. ಹಾಗಿರಬೇಕಾದರೆ ಮದುವೆಗೆ ಮೊದಲೆ ಅವನಿಗೆ ಏನೊ ಆಗಿದೆ. ಆದ್ರೆ ಟಿ.ವಿ ಯಲ್ಲಿ ಅವನ ಹೊಸ ಪತ್ನಿಯ ಬಗ್ಗೆ ಮಾತು ಏಕೆ?.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.