ಪ್ರಶಸ್ತಿ ಪಡೆದ ಈ ಚಿತ್ರ ಒಬ್ಬ ಅದ್ಭುತ ಛಾಯ ಚಿತ್ರಗಾರನ ಆತ್ಮಹತ್ಯೆಗೆ ಕಾರಣವಾಯಿತು!!!

0

ನ್ನ ಸ್ನೇಹಿತ ಅನಿಲ್ ಮನೆಯಲ್ಲಿ ಹರಟುತ್ತಾ ಕುಳಿತ್ತಿದ್ದೆ   ಹಾಗೆ ನನ್ನ ಕಣ್ಣಿಗೆ ಒಂದು  ಹೊಸ ವರುಷಕ್ಕೆ ನೀಡಿದ ಶುಭಾಷಯ ಪತ್ರ ಸಿಕ್ಕಿತು ,ಪತ್ರದಲ್ಲಿನ ಮಾಹಿತಿ ನನ್ನ ಮನ ಕಲಕಿ  ವಿಷಯದ ಬೆನ್ನತ್ತಿದಾಗ ತೆರೆದುಕೊಂಡಿದ್ದು ಈ ಮನಕರಗುವ  ಸಂಗತಿ ನಿಮ್ಮೊಡನೆ ಹಂಚಿ ಕೊಳ್ಳಲು ಇಲ್ಲಿ ದಾಖಲಿಸಿದ್ದೇನೆ.1994  ರ ಲ್ಲಿ ಸುಡಾನ್ ನ ಬರಗಾಲದ ಭೀಕರತೆ  ವಿಶ್ವಕ್ಕೆ ಅಷ್ಟಾಗಿ ಗೊತ್ತಿರಲಿಲ್ಲ  ಇದರ ಚಿತ್ರಣ ನೀಡಲು  ವಿಶ್ವಾದ್ಯಂತ ಹಲವು ಫೋಟೋ ಜರ್ನಲಿಸ್ಟ್ ಗಳು  ಸುಡಾನ್ ಗೆ ತೆರಳಿದ್ದರು.ಅವರಲ್ಲಿ ಪ್ರಮುಖ ನಾದವ  ಈ ಕೆವಿನ್ ಕಾರ್ಟರ್. ಕೆವಿನ್  ಕಾರ್ಟರ್ ದಕ್ಷಿಣ ಆಫ್ರಿಕಾ ದ ಜೋಹಾನ್ಸ್ಬರ್ಗ್  ನವನು 

ವಿಶ್ವ ವಿಖ್ಯಾತ ಘಟನೆಗಳ ಫೋಟೋಗಳು ಇವನ ಕ್ಯಾಮರದಲ್ಲಿ ಸೆರೆಯಾಗಿದ್ದವು  ಬರದ ದೇಶದಲ್ಲಿ ತೆಗೆದ ಈ ಕೆಳಗಿನ  ಒಂದು

ಫೋಟೋ ಜಗತ್ತಿಗೆ ಸುಡಾನ್ ದೇಶದ ಬರದ ಭೀಕರತೆ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿ ತಲ್ಲಣ ಗೊಳಿಸಿತು.ಈ ಚಿತ್ರಕ್ಕಾಗಿ  ಕೆವಿನ್ ಕಾರ್ಟರ್ ಗೆ ಪುಲಿಟ್ಜರ್ 1994 ರ ಪ್ರಶಸ್ತಿ ಗಿಟ್ಟಿಸಿದ !!!ಈ  ಚಿತ್ರ  ಸುಡಾನ್ ದೇಶದ ಬರಗಾಲದ ಒಂದು ದಿನ  ಹಸಿವಿನಿಂದ ನರಳುತ್ತಾ  ಹತ್ತಿರ ವಿಶ್ವ ಸಂಸ್ತೆ ತೆರೆದಿದ್ದ  ಆಹಾರ ಕೇಂದ್ರಕ್ಕೆ ತೆವಳಿಕೊಂಡು ತೆರಳುತ್ತಿರುವ  ಆನಾಥ ಮಗು ,......... ಪಕ್ಕದಲ್ಲೇ ತನ್ನ ಆಹಾರ ಕ್ಕಾಗಿ  ಈ ಮಗು ಸಾಯುವುದನ್ನು ಕಾದು ಕೂತ  ರಣಹದ್ದು !!!! ಬದುಕು ಸಾವಿನ ಮಧ್ಯೆ ತೂಗುಯ್ಯಾಲೆಯಲ್ಲಿರುವ  ಒಂದು ಜೀವದ ಚಿತ್ರಣ !!!ಈ ಚಿತ್ರವನ್ನು ಸೆರೆ ಹಿಡಿಯಲು ಕೆವಿನ್ ಪಟ್ಟ ಸಾಹಸ ಬಹಳಷ್ಟು. ಹದ್ದು ಹಾಗು ಮಗುವಿನಿಂದ  ಅತ್ಯಂತ ಸನಿಹದಿಂದ ಹತ್ತು ಮೀಟರ್  ದೂರದಲ್ಲಿ  ತನ್ನ ಚಾಣಾಕ್ಷತನದಿಂದ  ಈ ಘಟನೆ ಸೆರೆ ಹಿಡಿದು  ಎಲ್ಲರ ಮನ ಕಲಕಿ ಬಿಟ್ಟ !!! ಸುಡಾನ್ ದೇಶದ ಬರದ ಚಿತ್ರಣವನ್ನು ಜಗತ್ತು  ಅರ್ಥೈಸಿಕೊಂಡಿದ್ದು  ಇದೆ ಚಿತ್ರದಿಂದ .ದುರಂತವೆಂದರೆ ಈ ಘಟನೆ ಇಂದ ಹೊರ ಬರಲಾರದ ಕೆವಿನ್ ಕಾರ್ಟರ್ ಜೀವನದಲ್ಲಿ ನಿರಾಶೆಗೊಂಡು ಆತ್ಮ ಹತ್ಯೆಗೆ  ಶರಣಾದ. ಜಗತ್ತಿಗೆ  ಅದ್ಭುತ ಚಿತ್ರಗಳ ಮೂಲಕ ವಿಚಾರ ಮುಟ್ಟಿಸುತ್ತಿದ್ದ ಒಬ್ಬ ಅದ್ಭುತ ಫೋಟೋ ಗ್ರಾಫಾರ್  ಜಗತ್ತಿನಿಂದ ಮರೆಯಾದ.  ನಮ್ಮ ದೇಶದಲ್ಲಿ ಆನ್ನ, ನೀರಿಗೆ ಬರವಿಲ್ಲ  ಪ್ರತಿಷ್ಠೆಗೆ  ಮದುವೆ ಮನೆಗಳಲ್ಲಿ, ಹಲವಾರು ಸಂದರ್ಭಗಳಲ್ಲಿ  ನಾವು ಚೆಲ್ಲುವ ಆಹಾರದ ಬಗ್ಗೆ ಯೋಚಿಸಿದರೆ  ನಮಗೆ .............ನಾಚಿಕೆ ಆಗುವುದಿಲ್ಲವೇ????ಇನ್ನಾದರೂ  ಆನ್ನ ತಿನ್ನುವ ಮೊದಲು  ಈ ಚಿತ್ರ ನೋಡಿ  ಆಹಾರ ,ನೀರು  ಪೋಲಾಗದಂತೆ ಎಚ್ಚರ ವಹಿಸಲು  ಇಂದೇ ತೀರ್ಮಾನಿಸೋಣ .  ಈ ಮೂಲಕ ಕೆವಿನ್ ಕಾರ್ಟರ್ ಗೆ  ನಮನ ಸಲ್ಲಿಸೋಣ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಸ‌0ಪದದಲ್ಲೇ ಓದಿದ ನೆನಪು !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮತ್ತೊಮ್ಮೆ ಓದಿದ್ದಕ್ಕೆ ಥ್ಯಾಂಕ್ಸ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಡಾನ , ಸೋಮಾಲಿಯ ದೇಶದಲ್ಲಿ ಅನ್ನ, ನೀರಿನ ಕೊರತೆಗಳು ಬಡತನವು ಎಂಬ ಕಾರಣವು ಎನ್ನಿಸುವುದಿಲ್ಲ .. ಅಲ್ಲಿಯ ದೇಶದ ಯುದ್ದ, ಸಾವು ನೋವುಗಳು ಈ ವಿಷಮ ಪರಿಸ್ಥಿತಿಯ ಮೂಲ ಕಾರಣಗಳು ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪರಿಸ್ಥಿತಿಯ ಮೂಲ ಕಾರಣಗಳು ಏನೇ ಇದ್ದರೂ ಈ ಮಗುವಿಗೆ ಆಹಾರ ನೀರಿನ ಕೊರತೆ ಉಂಟಾದದ್ದು ನಿಜ ಅಲ್ಲವೇ ????? ನಿಮ್ಮ ವಿಮರ್ಶಾತ್ಮಕ ಅಬಿಪ್ರಾಯ ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮನಕಲುಕುವ ಚಿತ್ರದೊಂದಿಗಿನ ಲೇಖನ >> ಇನ್ನಾದರೂ ಅನ್ನ ತಿನ್ನುವ ಮೊದಲು ಈ ಚಿತ್ರ ನೋಡಿ ಅಹಾರ ನೀರು ಪೋಲಾಗದಂತೆ ಎಚ್ಚರವಹಿಸಲು ಇಂದೇ ತೀರ್ಮಾನಿಸೋಣ << ಖಂಡಿತವಾಗಿ ಚಿಂತಿಸಲೇ ಬೇಕಾದ ಮಾತು ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಮಾತುಗಳು ನಿಜ ಸರ್ , ನಿಮ್ಮ ಅನಿಸಿಕೆಯಂತೆ ಎಲ್ಲ ಅಂದುಕೊಂಡು ಆಚರಣೆಗೆ ತಂದರೆ ಈ ಲೇಖನದ ಉದ್ದೇಶ ಸಾರ್ಥಕ ಆಗುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸತೀಶರ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. ವಿಚಾರ ಪ್ರಚೋದಕ ಲೇಖನಕ್ಕೆ ಅಭಿನ0ದನೆಗಳು ಬಾಲುರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಅನಿಸಿಕೆಗೆ ,ಪ್ರೋತ್ಸಾಹಕ್ಕೆ ಧನ್ಯವಾದಗಳು ಶ್ರೀಧರ್ ಬಂಡ್ರಿ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅಯ್ಯೋ ಅನ್ನಿಸಿತು! ಭಾವುಕನನ್ನಾಗಿಸಿದ ಬರಹ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಮ್ಮ ಅನಿಸಿಕೆಗೆ ವಂದನೆಗಳು. ನಿಮ್ಮಂತೆಯೇ ನನಗೂ ಆಯಿತೂ ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಾಲು ಅವ್ರೆ ನಿಮ್ಮ ಬರಹ ಓದಿ ಮನ ಮನಸ್ಸು ಧಗ್ದವಾಯ್ತು.. ನಿಮ್ಮ ಈ ಬರಹದಲಿನ ಆ ಛಾಯಾಗ್ರಾಹಕ ಬರೀ ಚಾಯಾಗ್ರ್ಹಾಕನಾಗಿರದೆ ಮಾನವೀಯ ಕಾಳಜಿ ಮತ್ತು ಅಂತಕರ್ಣ ಇದ್ದವನಾಗಿದ್ದು ಅವನು ಭೇಟಿ ಕೊಟ್ಟ ದೇಶದಲ್ಲಿನ ಹಸಿವು ಬಡತನ ೧ ಹೊತ್ತಿನ ಊಟ ಇಲ್ಲದಿರುವಿಕೆ ನೋಡಿದಾಗ ಅವನಿಗೆ ಆತ್ಮಹತ್ಯೆ ಯೋಚನೆ ಬಂದಿದ್ದರೆ ಆಶ್ಚರ್ಯವಿಲ್ಲ, 'ಹೆಚ್ಚೆಚು ಅಡಿಗೆ ಮಾಡಿ ಹೊಟ್ಟೆ ತುಂಬಿ ಉಳಿದದ್ದನ್ನ ತಿಪ್ಪೆಗೆ ಎಸೆಯುವವ್ರು' ಇದನ್ನು ಅರ್ಥ ಮಾಡಿಕೊಂಡರೆ ಸಾಕಸ್ಟೇ . ಒಂದೊಳ್ಳೆಯ ಬರಹ ಸಾರ್ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದೂ ಸರ್ ನಿಮ್ಮಂತೆ ಅನುಭವ ನನಗೂ ಆಯ್ತು.ಆಹಾರ , ನೀರು ಇವುಗಳನ್ನು ವಿನಾಕಾರಣ ವ್ಯರ್ಥ ಮಾಡುವವರು ಅರ್ಥಮಾಡಿಕೊಂಡರೆ ಈ ಲೇಖನ ಸಾರ್ಥಕ ಆಗುತ್ತೆ ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.