ಬಂಧ ಅದುವೆ ಅನುಬಂಧ..

3.5

 
 
ಎಷ್ಷೊಂದು ಚಂದವಲ್ಲವೇ ಈ ಬಂಧ
ನೋಡಲು ಬಲು ಆನಂದ
ಒಬ್ಬರನ್ನೊಬ್ಬರು ಅರಿಯುವುದೇ ಮಹದಾನಂದ
ಅದೇ ಅಲ್ಲವೇ ಅನುಬಂಧ
 
ತನಗರಿವಿಲ್ಲದಂತೆ 
ಕಳಚಿಕೊಳ್ಳುತ್ತಿದೆಯೇನೋ ಈ ಬಂಧ
ದ್ವೇಷ -ಅಸೂಯೆ ಮೇಲು-ಕೀಳು
ಬಡವ-ಬಲ್ಲಿದ ಎಂಬ ಭಾವನೇ
ಇರುವಲ್ಲಿ ಸಂಬಂಧವೇ !!!
 
ಅಣ್ಣ-ತಮ್ಮ ಅಕ್ಕ-ತಂಗಿ 
ತಂದೆ-ತಾಯಿ ಬಂಧು-ಬಳಗ
ಎಲ್ಲವೂ ಮರೆಯಾಗುತ್ತಿದೆ.
ಏಕೆ ಈ ಅಗಲಿಕೆ ಕಂದ!!!
 
ಮಾನವ ತನ್ನ ಸುಖವನ್ನಷ್ಟೆ ನೋಡುತ್ತಾನೆ ಹೊರತು
ಪರರ ಸುಖವನ್ನ ನೋಡುತ್ತಾನೆಯೇ
ತಾನು ಸಂಪಾದಿಸಿದ್ದು ಅನ್ಯರಿಗೇಕೆ ಸಹಾಯ
ಎನ್ನುವ ಕಠೋರ ಮನಸ್ಸು!!!
 
ಸಂಬಂಧ ಬಿಡಿಸಲಾಗದ ಅನುಬಂಧ
ಕೆಳಗೆ ಬಿದ್ದವರನ್ನ ಮೇಲೆರಿಸುವುದೇ ಈ ಬಂಧ
ಆದರೆ ಈ ಸಂಬಂಧ ಕೆಳಗೆ ಬಿದ್ದವರನ್ನ
ಕೀಳು ದೃಷ್ಟಿಯಿಂದ ನೋಡುವುದೇಕೆ??
 
ನೀವು ಏನು ಮಾಡದೇ ಇದ್ದರು ಬೇಸರವಿಲ್ಲ
ಎಷ್ಟಾದರು ತಮ್ಮವರಲ್ಲವೇ ಎನ್ನುತ್ತಾನೆ ಈ ಮನುಜ
ಆ ಮನುಷ್ಯನೋ ಒಂದೆರಡು ಪ್ರೀತಿಯ ಮಾತುಗಳನ್ನಾಡಲು
ಹಿಂಜರಿಯುವರಲ್ಲ, ಇದೇನಾ ಸಂಬಂಧ
 
ಸಂಬಂಧವೆಂದರೆ ಕೂಡಿಕೊಳ್ಳುವ ಬಂಧ
ಇಲ್ಲಿ ಕಳೆದುಕೊಳ್ಳುತ್ತಿದೆಯೇನೋ ಈ ಅನುಬಂಧ
ಓ ಮನುಜರೇ!! ಸಂಬಂಧವನ್ನ ಪ್ರೀತಿಸಿ ಗೌರವಿಸಿ!!
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.