ಬೂಟ್ ಪಾಲೀಶ್ ಹುಡುಗ ಮತ್ತು ಸ್ವಾತಂತ್ರ್ಯೋತ್ಸವ

4.5

ಶಾಲೆಯೆದುರು ಬೀದಿಯಲ್ಲಿ  ಕುಳಿತ

ಅವನ ಕಣ್ಣಗಳಲ್ಲಿಂದು  ಹೊಸ ಹೊಳಪು !

ಇದೊಂದು ದಿನವಾದರೂ.........

 ಖಾದಿ ಬಟ್ಟೆ ತೊಟ್ಟ ಬೆರಳೆಣಿಕೆಯ ಮಂದಿಯ

ಪಾದರಕ್ಷೆಗೆ ಪಾಲೀಶ್ ಯೋಗ..!

ಸಿಗಬಹುದಿಂದು ಬಹಳಷ್ಟು ಗಿರಾಕಿ..

ಜೈಲಿನಲಿ ಬಂಧಿಯಾಗಿಹ ತನ್ನ ತಾಯಿಗೆ

ಕೊಡಬಹುದು ಒಂದಿಷ್ಟು ಸಿಹಿ..!

ಕಣ್ಣೆದುರಿಗೆ....

ಕೈಯ್ಯಲ್ಲಿ ಚೈನಾಮೇಡ್ ತ್ರಿವರ್ಣ ಧ್ವಜ ಹಿಡಿದ

ಮಕ್ಕಳ ಶಿಸ್ತಿನ ದಂಡು.....

ಅವರ ಹಿಂದೆ ನಿಸ್ತೇಜ ಕಣ್ಣುಗಳ  ಒಂದಿಷ್ಟು ಹಿರಿಯರ ಹಿಂಡು

ವಸ್ತ್ರ ಮಾತ್ರ ಗರಿ...ಗರಿ

ಸಾಗಿತ್ತು ಪಥ ಸಂಚಲನ....ಅವರ ಹಿಂದೆಯೇ....

ಮಣ ಭಾರ ಹೊತ್ತ ಗಾಡಿ ಎಳೆಯುವ ಹಮಾಲಿ..

ಹೂ. ಹಣ್ಣು..ಮಾರುವವರು ಸಾಗುತ್ತಿದ್ದಾರೆ...!

ದಿನದ ಹೊಟ್ಟೆ ಹಸಿವಿಗೆ  ಹಿಟ್ಟು ಕಟ್ಟಲು...!

ಅರುಳವ ಧ್ವಜದಿಂದ...ಕೆಸರಲಿ ಬೀಳುವ ಹೂ ಪಕಳೆಗಳು..

ಭಾಷಣ,... ಹಾರ...., ಆಹಾರ..ಯಾರೋ ಕೈಗಿತ್ತರು...  ಚಾಕಲೇಟ್

ಅಮ್ಮನ ನೆನಪಾಗಿ ಕಿಸೆಯಲ್ಲಿಟ್ಟುಕೊಂಡ...

ಅವನ ಕಣ್ಣುಗಳಲ್ಲೊಂದು ಪ್ರಶ್ನೆಯಿತ್ತು...!

ಸ್ವಾತಂತ್ರ್ಯವೆಂದರೆ...ಚಾಕಲೇಟ್  ತಿನ್ನುವದೇ ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಸರಣಿ: 
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಭಾಗ್ವತ್ ರವರೆ ಕವನ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವೆಂಕಟೇಶರವರೆ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅರ್ಥಹೀನ ಅವ್ಯವಸ್ಥೆಯ ಕೆಸರ ಮಧ್ಯೆ ಸಿಲುಕಿಹೆವು, ಈಜಿ ಸೆರುಲು ದಡ ಎತ್ತಲೂ ಕಾಣದು, ಈಜಲು ಕೈಕಾಲು ಬಡಿದರೆ, ಮತ್ತೆ ಸಿಲುಕಿನಲ್ಲಿ ಹೆಚ್ಚು ಹೆಚ್ಚು ಸಿಲುಕೀವೆಂಬ ಭಯ, ಆದರೂ ಕೊನೆಯುಂಟೆಂಬ ಅಚಲ ನಿಲುವುಂಟು ನಿಸ್ಸಂಶಯ. ವ್ಯವಸ್ಥೆಯ ಮುಖ ಚೆನ್ನಾಗಿ ಬಿಂಬಿತವಾಗಿದೆ ಭಾಗ್ವತರೆ. -ಧನ್ಯವಾದಗಳು -ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಾಮಮೋಹನರವರೆ, ನಿಮ್ಮ ಪ್ರೋತ್ಸಾಹದ ನುಡಿಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಂದರ ಕವನ ಭಾಗ್ವತರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಂತೋಷರವರೆ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆ ಹುಡುಗನ ಪ್ರಶ್ನೆ, ಹತಾಶೆ. . .! ಅವನು ಮುಂದೆ ಸಮಾಜವನ್ನು ಹೇಗೆ ಕಂಡಾನು? . . .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿನಾಗರಾಜರವರೆ, <<ಅವನು ಮುಂದೆ ಸಮಾಜವನ್ನು ಹೇಗೆ ಕಂಡಾನು? . >>. ನಿಮ್ಮ ಊಹೆಯೂ ಸರಿಯೇ.. ,ನಾವು ಆಶಾವಾದಿಯಾಗಿರಬೇಕು ಸರಿ ಆದರೆ, ಹುಡುಗನ ಮನದಲ್ಲಿ ಮೂಡುವ ಪುಟ್ಟ ಪ್ರಶ್ನೆಯೂ ಪುಟ್ಟಸತ್ಯವಾಗಿದೆ ಅಲ್ಲವೇ ? ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. -ಭಾಗ್ವತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.