ಬೆ೦ದಕಾಳೂರು ಇನ್ನು ಹಾಗೇ ಇದೆ..

To prevent automated spam submissions leave this field empty. 
ನಾನು ಬೆಂಗಳೂರಿನಿಂದ ಶಿವಮೊಗ್ಗ ಹೋಗುವ ಇಂಟರ್ಸಿಟಿ ರೈಲು ಸಂಜೆ 4.30ರ ಸಮಯಕ್ಕೆ ಹೊರಟಿತು.ಮೆಜೆಸ್ಟಿಕ್ ಬಿಟ್ಟು ತುಸು ದೂರ ಬರುತ್ತಿತ್ತು.ಆಗ ರೈಲಿನಲ್ಲಿ
ಬಾಗಿಲ ಬಳಿ ಕುಳಿತಿದ್ದ ಒರ್ವ
ವ್ಯಕ್ತಿ ಫೋನಿನಲ್ಲಿ ಮಾತಾಡುತಿದ್ದ.ರೈಲು ನಿಧಾನವಾಗಿ ಚಲಿಸುತಿತ್ತು.ಅಲ್ಲೇ ರೈಲಿನಿ೦ದ ಹೊರಗೆ ನಿಂತಿದ್ದ ಹುಡುಗನೊಬ್ಬ ಹೊರಗಿನಿ೦ದಲೇ ಆ ವ್ಯಕ್ತಿಯ ಕೆನ್ನೆಗೆ ಹೊಡೆದ.
ಹೊಡೆದಾಕ್ಷಣ ಆ ವ್ಯಕ್ತಿ ಗಾಬರಿಗೆ ಕೈನಲ್ಲಿದ್ದ ಮೊಬೈಲ್ ಮುಂದಕ್ಕೆ ಬಿದ್ದಿತು.ಅದನ್ನು ಆ ಹುಡುಗ ಎತ್ತಿಕೊಂಡು ಒಡಿ ಹೋದ..
ಇದು ಪ್ರತಿನಿತ್ಯ ನೆಡೆಯುವ ಕಳ್ಳತನ.ಅಲ್ಲಿನ ಹುಡುಗರು ಇದಕ್ಕಾಗಿ ನಿಧಾನಕ್ಕೆ ಚಲಿಸುವ ರೈಲಿನ ಹತ್ತಿರ ಬಂದು ಫೋನಿನಲ್ಲಿ ಮಾತಾಡುವರನ್ನು ಗಮನಿಸುತಿರುತ್ತಾರೆ.
ಯಾರಾದರು ಕಂಡೊಡನೆ ಅವರ ಕೆನ್ನೆಗ ಹೊಡೆಯುತ್ತಾರೆ.ಅವರು ಆ ರಭಸಕ್ಕೆ ತಮ್ಮ ಕೈನಲ್ಲಿದ್ದ
ಮೊಬೈಲ್ ಬಿಡುತ್ತಾರೆ.ಆಗ ಮೊಬೈಲ್ ಕಳೆದುಕೊಳ್ಳತ್ತಾರೆ.ಅದನ್ನು ಆ  ಹುಡುಗರು ಎತ್ತಕೊಂಡು ಹೋಗಿ ಸಿಕ್ಕಷ್ಟಕ್ಕೆ ಮಾರಿಕೊಳ್ಳುತ್ತಾರೆ.ಇದಕ್ಕೆ ಆ ರೈಲ್ವೆ ಪೊಲಿಸರು
ಕೊನೆಕಾಣಿಸಬೇಕು.
ಮೆಜೆಸ್ಟಿಕ್ ಅ೦ಡರ್ ಪಾಸ್ ಹಲವರ ಪಾಲಿಗೆ ಹಲವು ವ್ಯವಹಾರಗಳ ಅಡ್ಡ...ಆ ಜಾಗದಲ್ಲಿ ಸಾವಿರಾರು ಜನರು ತಿರುಗಾಡುತ್ತಿರುತ್ತಾರೆ,,ನಾನು ಅಲ್ಲಿ ಹೋಗುತ್ತಿರುವಾಗ
ಇಬ್ಬರು ಒಬ್ಬರು ಪುರುಷ ಒಬ್ಬರು ಮಹಿಳೆ..ಇಬ್ಬರು ಕುರುಡರು.ಅವರು ಗ೦ಡ
ಹೆ೦ಡತಿಯರೋ ಅಲ್ಲವೊ ಗೊತ್ತಿಲ್ಲ..ಆದರೆ ಇಬ್ಬರು ಒ೦ದು ಕೈ ಚಾಚಿ ಹೋಗಿ ಬರುವವರನ್ನು ಸಹಾಯ ಮಾಡುವ೦ತೆ ಕೋರಿಕೊಳ್ಳುತ್ತ ನಿ೦ತಿದ್ದರು..ಅವರು ಏನು
ಮಾತಾಡದೆ ಇಬರು ಮೌನವಾಗಿ ಸುಮ್ಮನೆ ನಿ೦ತಿದ್ದರಷ್ಟೆ..ಆ ವ್ಯಕ್ತಿ ಆ ಮಹಿಳೆಯ
ಕೈಯನ್ನು ಇನ್ನೊ೦ದು ಕೈನಲ್ಲಿ ಹಿಡಿದು ನಿ೦ತಿದ್ದ..ಇಬ್ಬರು ಸಹಾಯ ಯಾಚಿಸುತ್ತ ನಿ೦ತುದ್ದರು...ಯಾರೊಬ್ಬರು ಅವರತ್ತ ತಿರುಗಿ ನೋಡುವ ವ್ಯವಧಾನ ಹೊ೦ದಿರಲಿಲ್ಲ.
.ಅವರನ್ನು ನೋಡಿದರೆ ಕರುಳು ಕಿತ್ತು ಬರುವ೦ತಿತ್ತು..ಮನಸ್ಸಿಗೆ ಬಹಳ ಬೇಸರವೆನಿಸುತಿತ್ತು....
ಆದರೆ ಆ ದೇವರೆ ಅವರಿಗೆ ಸಹಯಾ ಮಾಡಬೇಕಿತ್ತಷ್ಟೆ....
ಮೆಜೆಷ್ಟಿಕ್ ಹಾಗು ಸಿಟಿ ರೈಲ್ವೆ ನಿಲ್ದಾಣಕ್ಕೆ ಸ೦ಪರ್ಕ ಕಲ್ಪಿಸುವುದು ಒ೦ದು ಅ೦ಡರ್ ಪಾಸ್ ಅದು ಬಿಟ್ಟರೆ ಬೇರಿ ಯಾವುದೇ ಸನಿಹದ ಮಾರ್ಗವಿರಲ್ಲ..ಬಿ.ಬಿ.ಎ೦.ಪಿ
ಅಲ್ಲೊ೦ದು ಬ್ರಿಡ್ಜ್ ಮೇಲ್ಸೇತುವೆ ನಿರ್ಮಿಸಿದರೆ ಬಹಳ ಅನುಕೂಲವಾದೀತು...
ನೀವೆಲ್ಲಾ ಬೆಂಗ್ಳೂರು ನಿವಾಸಿಗಳಲ್ವೇ...
ನೀವ್ ಬೆಂಗಳೂರ್ನ ಪೂರ್ತಿ ನೋಡಿದಿರಾ
ನೋಡಿದ್ರೆ ಒಂದ್ನಿಮಿಷ ಅಲ್ಲಿರಲ್ಲ.ಯಾಕ್ ಗೊತ್ತಾ?
ನೀವು ನೋಡಿರೊ ಮಾಲ್ ಮಲ್ಟಿಪ್ಲೆಕ್ಸ್ ಪಾರ್ಕ ಹೊಟೆಲ್ ರೆಸ್ಟೊರೆಂಟ್ ಹೈಟೆಕ್ ಸಿಟಿ ಬ್ಯಾಂಗ್ಳೂರ್.
ಆದ್ರೆ ಮೆಜೆಸ್ಟಿಕ್ ಸಮೀಪ ಇರುವ ಸ್ಲಮ್ ಗಳನೊಮ್ಮೆ ನೋಡಿದರೆ ಹೈಟೆಕ್,ಸಿಲಿಕಾನ್ ಸಿಟಿ ಬೆ೦ಗಳುರಿನ ನಿಜ ಜೀವನ ದರ್ಶನವಾಗುತ್ತದೆ. ಅಲ್ಲಿನ ಗಲ್ಲಿ ಗಳನ್ನು ಮನೆಗಳನ್ನು ನೋಡಿದರೆ ಅಬ್ಬ ಔಸಿರು ಕಟ್ತಿಸುವ೦ತ ಜಾಗ ಅದು..
ಒಂದಿಂಚು ಜಾಗ ಬಿಡದೆ ಒತ್ತೊತಿಗೆ ಕಟ್ಟಿರೊ ಮನೆಗಳು
ಚರಂಡಿ ನೀರು ಹರಿಯಲು ಸಾಧ್ಯವಿರದಂತೆ ಕಟ್ಟಿರೋ ಗೋಡೆಗಳು.ಉಸಿರಾಡಲು ಸಾಧ್ಯವಿಲ್ಲದಂತೆ ಗಾಳಿಯು ನುಸುಳಲಾಗದಂತೆ ಪಕ್ಕಪಕ್ಕಕ್ಕೆ ಕಟ್ಟಿದ್ದಾರೆ.ಒರ್ವ ಧಡೂತಿ ವ್ಯಕ್ತಿಯಂತು ಅಲ್ಲಿ ಹೋಗಲು ಸಾಧ್ಯವೇ ಇಲ್ಲ.
ಇವೆಲ್ಲಾ ಕಾಣುವುದು ನೀವು ಹುಬ್ಬಳ್ಳಿ ಶಿವಮೊಗ್ಗ
ರೈಲಿನಲ್ಲಿ ಯಶವಂತಪುರ ಮೂಲಕ ಬೆಂಗಳೂರೂ ಪ್ರವೇಶಿಸುವಾಗ ಕಾಣುವ ಐಟಿ ಬಿಟಿ ಸಿಟಿ ಸಿಲಿಕಾನ್ ಸಿಟಿ ಬೆಂಗಳೂರಿನ ಮತ್ತೊಂದು ವೈಭೋಗ.ನೋಡುವ
ನಮಗೆ ಇಲ್ಲಿ ಹೇಗೆ ಜೀವಿಸುತ್ತಾರೋ ಏನಿಸುತ್ತದೆ.
ಇದು ಯಶವಂತಪುರದಿಂದ ಮೆಜೆಸ್ಟಿಕ್ ವರೆಗೂ ಸ್ಲಮ್ ಬಾಲ ಸಿಗುತ್ತದೆ.ನಡುವೆ ಮಲ್ಲೇಶ್ವರಂ ಬಿಟ್ಟು.ರಾಜಕಾಲುವೆಯ ಕಟ್ಟೆಯ ಮೇಲು ಬಿಡದೆ ಕಟ್ಟಿಕೊಂಡಿದ್ದಾರ.ಆ
ವಾಸನೆ ಸೊಳ್ಳೆ ಕಾಟ ಕ್ರಿಮಿ ಕೀಟ ಗಳಿಂದ ಖಾಯಿಲೆ ಬರುವುದಿಲ್ಲವೆ..,.
ಅದಲ್ಲದೆ ಅಲ್ಲೊಂದು ಕೆರೆ ಇದೆ ಸ್ಲಮ್ ಪಕ್ಕವೇ.ಅಲ್ಲಿ ಆ ಕೆರೆಗೆ ಇಡೀ ನಗರದ ತ್ಯಜ್ಯಾ ವಿಲೇವಾರಿಯಾಗುತ್ತದೆ.ಸ್ಲಮ್ ಮಕ್ಕಳು ಅಲ್ಲಿ ಬಂದು ಆ ಕೊಳಕು ನೀರಿನೊಳ
ಗೆ ಸಾಹಸದವಾಟವಾಡುತ್ತಾರೆ.ಅದು ರೋಗವನ್ನು ಆಹ್ವಾನಿಸಿದಂತೆ ಸರಿ.
ಬೆ೦ಗಳುರನ್ನು ಸಿ೦ಗಪೂರ್ ಮಾಡಿದರೆ ಅದು ನಿಜಕ್ಕು ಹೆಮ್ಮೆಯ ವಿಷಯವೆ..ಈಗಿನ ಅಭಿರೄದ್ಧಿಯ ದಿಕ್ಸೂಚಿಯೇ ಸರಿ..ಮೆಟ್ರೋ,ಬುಲೇಟ್ ಟ್ರೈನ್ ಟ್ರಾಕ್ ಪ್ರಸ್ತಾಪ್
ಬೆ೦ಗಳುರನ್ನು ಇನ್ನಷ್ಟು ವೇಗವಾಗಿ ಬೆಳೆಸಬಹುದು,,,ಆದರೆ ಅದಕ್ಕು ಮುನ್ನ ಇರುವ ಕೊಳಚೆ
ಪ್ರದೇಶವನ್ನು ಸ೦ಪೂರ್ಣ ಖಾಲಿ ಮಾಡಿ ಬೆ೦ಗಳುರನ್ನು ಸು೦ದರ ನಗರವನ್ನಾಗಿಸಬೇಕು ಎ೦ಬುದೇ ನಮ್ಮ ಆಶಯ.....
 

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಭು ಕುಮಾರ್, ನಿಮ್ಮ ಮೇಲಿನ ಮಾತಿಗೆ ನನ್ನ ಸಹಮತ ಇದೆ. ಜೊತೆಗೆ ಒಂದೆರಡು ಮಾತುಗಳನ್ನ ಸೇರಿಸಲು ಇಷ್ಟ ಪಡುತ್ತೇನೆ. ಬೆಂಗಳೂರನ್ನು ಸುಂದರ ಮಾಡೋ ನೆಪದಲ್ಲಿ, ಸ್ಲಂ ಅಲ್ಲಿ ಇರುವ ಜನಗಳಿಗೆ ತೊಂದರೆ ಹಾಗಾಬಾರದು, ಅವರನ್ನು ಖಾಲಿ ಮಾಡಿಸುವ ಯತ್ನದಿಂದ, ಅವರ ವಸತಿಗಳಿಗೆ ಜಾಗ ಇಲ್ಲದ ಹಾಗೆ ಆಗುತ್ತದೆ. ಮೊದಲು ಸರ್ಕಾರ ಆ ಸ್ಲಂ ಜನಗಳಿಗೆ ಒಂದು ದಾರಿ ಮಾಡಿ, ಆಮೇಲೆ ಬೆಂಗಳೂರನ್ನು ಸುಂದರ ಮಾಡಲಿ ಎಂಬುದೇ ನನ್ನ ಆಶಯ...

ಚೇತನ್ ಅವ್ರೇ,ಸ್ಲಮ್ ನಿವಾಸಿಗಳಿಗೆ ಎಲ್ಲ ಸೌಕರ್ಯವು ಇರುವ ಹೊರವಲಯದ ವಿಶಾಲ ಜಾಗದಲ್ಲಿ ವಸತಿ ನೀಡಿದರೆ ಆರೋಗ್ಯವು ಕ್ಷೇಮವಾಗಿರುತ್ತದೆ ಸ್ವಂತ ಸೂರು ಸಿಗುತ್ತದೆ.ನಗರವೂ ಸುಂದರವಾಗಿರುವುದು. ತಮ್ಮೀ ಪ್ರತಿಕ್ರಿಯೆಗೆ ವಂದನೆಗಳು

ಪ್ರಭು ಅವರೆ, ಸ್ಲಮ್ ವಾಸಿಗಳನ್ನು ಹೊರವಲಯಕ್ಕೆ ದಬ್ಬಿದರೆ, ಅವರು ಕೆಲಸಕ್ಕೆ ಬೆಂಗಳೂರಿಗೇ ಬರಬೇಕು. ಬರುವ ಹೋಗುವ ಖರ್ಚು? ಅದಕ್ಕಿಂತ ರಾಜಕಾರಣಿಗಳು ಮಾಡುತ್ತಿರುವುದೇ ವಾಸಿ- ನಿಮಗೆ ಇಲ್ಲೇ ಬಹುಮಹಡಿ ಕಟ್ಟಡ ಕಟ್ಟಿ ಕೊಡುವೆವು ಎಂದು ಅವರ ಬಳಿ ಎಲ್ಲಾ ಕಾಗದ ಪತ್ರಗಳಿಗೆ ಸೈನ್ ಹಾಕಿಸಿ, ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿ, ಸ್ಠಳವನ್ನು ಸ್ವಾಹಾ ಮಾಡುವುದು..:) -ಗಣೇಶ.

ಪ್ರಭು ಅವ್ರೆ ಬೆಂಗಳೂರಿಗೆ ಬಂದು ನಮ್ಮನ್ನು ಕಾಣದೆ ಹಾಗೆ ಹೊದಿರ....:((( ಅದು ಅತ್ಲಾಗಿರ್‍ಲೀ... ನೀವ್ ಬೆಂಗಳೂರು ಮೆಜೆಸ್ಟಿಕ್ ಮತ್ತು ಅಂಡರ್ ಪಾಸ್ ಬಗ್ಗೆ ಹೇಳಿದ್ದು ಸತ್ಯ...ಹಾಗೆಯೇ ಕೊಳಗೇರಿ ಜನರು ಅಲ್ಲಿನ ಪರಿಸರ ಇತ್ಯಾದಿ ಸಹ ಸತ್ಯ... ಅಂಥವರನ್ನ ಅಥವಾ ಅವರ ಏರಿಯಾ ಅಭಿವೃದ್ಧಿ ಮಾಡಬೇಕು ಅಂದ್ರೆ ಅವರ ಸ್ಥಾಳಾಂತರ ಅಗತ್ಯ.. ಆದರೆ ಆದಾಲ್ಲು ವೋಟ್ ಬ್ಯಾಂಕ್ ರಾಜಕೀಯ ನಡೆವದು ಹಾಗೆಯೇ ಆ ಜಾಗ ಬೇರೆಯವರು ಕಬಳಿಸಲೂಬಹುದು...:(( ಇನ್ನೂ ಅವರ ಸ್ತಿಥಿ ಗತಿ ಬಗ್ಗೆ- ಬೇರೆಯವರು ಸಹಾ ಕಸ್ಟ ಪಟ್ಟು ದುಡಿದು ಮೇಲೆ ಬರಬಹುದಾದರೆ ಇವರಿಗ್ಯಾಕೆ ಸಾಧ್ಯ ಇಲ್ಲ?.. ಅದಕ್ಕೆ ಅವರು ಪ್ರಯತ್ನಿಸಬೇಕು ಅಸ್ಟೆ.... ಇನ್ನೂ ನೀವ್ ಹೇಳಿದ ಆ ಘಟನೆ(ಕೈಗೆ ಹೊಡೆದು ಮೊಬೈಲು ಕಸಿದು ಕೊಳ್ಳುವುದು) ಮಾಮೂಲಿ ಹಾಗೆಯೇ ಇನ್ನೊಂದು ಸಹಾ- ಅದು ಹೋಗುತ್ತಿರುವ ರೈಲಿನ ತೆರೆದ ಕಿಟಕಿಗಳಿಗೆ ಎಗ್ಗ ಮಗ್ಗ ಕಲ್ಲು ತೂರೊದು....:((( ಅದೆಲ್ಲವನ್ನೂ ಮಾಡುವವರು ಈ ಕೊಳಗೇರಿ ಹುಡುಗರೆ... ಬದಲಾವಣೆ ಅನಿವಾರ್ಯ ಅದು ನಮ್ಮಿಂದ್ಲೇ ಆಗಬೇಕು... ಅವರು ಪ್ರಯತ್ನಿಸಬಹುದು.. ಅಲ್ಲವೇ...?? ಅದೆಲ್ಲದರ ಹೊರತಾಗಿ ನಿಮ್ಮ ಕಾಳಜಿ ಇಸ್ಟ ಆಯ್ತು.... ಶುಭವಾಗಲಿ... \|/

ಸಪ್ತಗಿರಿಯವರೇ ಈ ಬಾರಿ ನಾನು ಕೆಲಸನಿಮಿತ್ತ ಬಂದಿದ್ದರಿಂದ ಸಮಯವಿರಲಿಲ್ಲ.ಇನ್ನೊಮ್ಮೆ ಬಂದಾಗ ಭೇಟಿಯಾಗುತ್ತೇನೆ. ರೇಲ್ವೆ ಪೋಲಿಸರು ಚುರುಕಾದರೆ ರೈಲಿನಲ್ಲಿ ಕಳ್ಳತನ ಕಲ್ಲತೂರೋರಿಗೆ ಬ್ರೇಕ್ ಹಾಕಬಹುದು.

ಪ್ರಭುರವರೆ ತಮ್ಮ ಮಾತು ನಿಜ. ಮೆಜಸ್ಟಿಕ್ಕಿನ ಅಂಡರ್ ಪಾಸ್ ನಿಂದ ಹೊರ ಬಂದ ಮೇಲೆ ಹೊಸ ಜಗತ್ತಿಗೆ ಮರಳಿದಂತೆನಿಸುತ್ತದೆ.ಹೊರ ಬಂದ ಮೇಲೂ ಜೊತೆಯಲ್ಲೊಯ್ದ ಪರ್ಸ,ಮೊಬೈಲ್ ಎಲ್ಲಾ ನಮ್ಮ ಬಳಿಯೇ ಇದ್ದರೆ ದೊಡ್ಡ ಸಾಹಸ ಮಾಡಿದಂತೆಯೇ ಸರಿ. >ಸೌಮ್ಯ

ಪ್ರಭು ಕುಮಾರ್ ಅವರೆ, >>>...ಅಲ್ಲಿನ ಹುಡುಗರು ಇದಕ್ಕಾಗಿ ನಿಧಾನಕ್ಕೆ ಚಲಿಸುವ ರೈಲಿನ ಹತ್ತಿರ ಬಂದು ಫೋನಿನಲ್ಲಿ ಮಾತಾಡುವರನ್ನು ಗಮನಿಸುತಿರುತ್ತಾರೆ.ಯಾರಾದರು ಕಂಡೊಡನೆ ಅವರ ಕೆನ್ನೆಗ ಹೊಡೆಯುತ್ತಾರೆ... - ಬೈಕ್/ಕಾರು ಬಿಡುತ್ತಾ ಮೊಬೈಲಲ್ಲಿ ಮಾತಾಡುವವರ ಮೇಲೂ ಈ ಪ್ರಯೋಗ ನಡೆದರೆ..ಚೆನ್ನಾಗಿತ್ತು. >>>...ಆದರೆ ಅದಕ್ಕು ಮುನ್ನ ಇರುವ ಕೊಳಚೆ ಪ್ರದೇಶವನ್ನು ಸ೦ಪೂರ್ಣ ಖಾಲಿ ಮಾಡಿ ಬೆ೦ಗಳುರನ್ನು ಸು೦ದರ ನಗರವನ್ನಾಗಿಸಬೇಕು ಎ೦ಬುದೇ ನಮ್ಮ ಆಶಯ.. -ಎಲ್ಲಾ ಕೊಳಚೆಯನ್ನು ಸುತ್ತಮುತ್ತಲ ಹಳ್ಳಿಗಳಿಗೆ ಸಾಗಿಸಿದರಾಯಿತು. :) ಲೇಖನ, ಆಶಯ ಚೆನ್ನಾಗಿದೆ. -ಗಣೇಶ

ಗಣೇಶ್ ಜಿ ಬೈಕು ಕಾರುಗಳಲ್ಲಿ ಮೊಬೈಲ್ ನಲ್ಲಿ ಮಾತಾಡುತ್ತ ಮೈ ಮರೆಯುವರು ಎಚ್ಚರವಾಗಬೇಂಕೆಂದರೆ ಈ ತರಹದ ಘಟನೆಗಳು ಪಾಠವಾಗಬೇಕು. ನಿಮ್ಮ ಪ್ರತಿಕ್ರಾಯೆಗೆ ಧನ್ಯವಾದಗಳು