ತಿಳಿ ಹಾಸ್ಯ

ರುಚಿ: ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ)

ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ) ಪ್ರೇರಣೆ: ಗಣೇಶರ ಇಡ್ಲಿಮಂಚೂರಿ ಬೇಕಾಗುವ ವಸ್ತುಗಳು: ಅಕ್ಕಿಹಿಟ್ಟು, ಸ್ವಲ್ಪ ಚಿರೋಟಿ ರವೆ, ಸಾದ್ಯವಾದಲ್ಲಿ ಸ್ವಲ್ಪ ತುಪ್ಪ, ತೆಂಗಿನ ತುರಿ, ಅಚ್ಚಕಾರದ ಪುಡಿ , ಇಂಗು, ಉಪ್ಪು, ಓಮ್ ಕಾಳುಗಳು, ಸ್ವಲ್ಪ ಜೀರಿಗೆ, ಮೆಣಸು, ಕರೆಯಲು ಎಣ್ಣೆ ಸಿದ್ದಪಡಿಸಿಟ್ಟುಕೊಳ್ಳಿ ಮಾಡಬಹುದಾದ ಸಮಯ: ಮನೆಯಲ್ಲಿ ಹೆಂಡತಿ, ಹಾಗು ಮಕ್ಕಳು(ಗಳು) ಇಲ್ಲದ ಸಮಯ - ಕಡಿಮೆ ಅಂದರೆ ಎರಡು ತಾಸು ಅವರುಗಳು ಬರದ ಸಮಯ ಆರಿಸಿಕೊಳ್ಳುವುದು ಉತ್ತಮ. ತಯಾರಿಸುವ ವಿದಾನ : ಮೊದಲಿಗೆ ಮನೆಯಲ್ಲಿರುವ ಮೊಬೈಲ್ ಸ್ವಿಚ್ ಆಫ್ ಮಾಡಿ, ನಂತರ ಲ್ಯಾಂಡ್ ಲೈನ್ ಡಿಸ್ಕನೆಕ್ಟ್ ಮಾಡಿ ಸಿದ್ದರಾಗಿ. ಒಂದು (ತಲೆ ಒಡೆದು) ಲೋಟದಷ್ಟು ಅಕ್ಕಿಹಿಟ್ಟನ್ನು ದಪ್ಪ ತಳದ ಬಾಂಡಲೆಯಲ್ಲಿ ಒಲೆಯ ಮೇಲಿಟ್ಟು ಹದವಾಗಿ ಬಿಸಿಮಾಡಿ ಒಂದು ಬೌಲ್ ಗೆ ಹಾಕಿಕೊಳ್ಳಿ, ಹಾಗೆ ನಾಲ್ಕು ದೊಡ್ಡ ಚಮಚದಷ್ಟು ಚಿರೋಟಿ ರವೆಯನ್ನು ತುಪ್ಪದಲ್ಲಿ ಹುರಿದು ಅಕ್ಕಿ ಹಿಟ್ಟಿನ ಜೊತೆ ಹಾಕಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.4 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭೀಮನ ಅಮಾವಾಸ್ಯೆ!!!!

ಭೀಮನ ಅಮಾವಾಸ್ಯೆ ಹಿಂದಿನ ದಿನ ಪೂಜೆ ಸಾಮಗ್ರಿ ತರಲು ಮಡದಿ ಹೇಳಿದ್ದಳು. ಮಂಜನ ಜೊತೆ ಮಾರ್ಕೆಟಿಗೆ ಹೋಗಿದ್ದೆ. ಮಂಜ ಸ್ಕೂಟರ್ ನಲ್ಲಿ ಹೋಗುವ ಇಬ್ಬರು ಹುಡುಗರನ್ನು ನೋಡಿ "ದೋ ಚಕ್ಕಾ ಚಕ್ಕಾ ಸಾಥ್ ಸಾಥ್" ಎಂದು ಹೇಳಿದ. ನನಗೆ ಗಾಬರಿ ಅವನಿಗೆ ಹೇಗೆ ತಿಳಿಯಿತು ಮತ್ತು ಹೀಗೆ ಏಕೆ? ಹೇಳಿದ ಎಂದು. ನಾನು ಕೇಳಿದೆ. ಅಷ್ಟು ನಿಖರವಾಗಿ ಹೇಗೆ ಹೇಳುತ್ತಿ ಎಂದೆ. ಅದಕ್ಕೆ ಮಂಜ ನೋಡು ಅಲ್ಲಿ ಅವರ ಗಾಡಿ ನಂಬರ್ ಎಂದು ತೋರಿಸಿದ. ಅದು ೨೬೭೭ ಇತ್ತು. ಇವನು ಅದನ್ನು ಹಿಂದಿಯಲ್ಲಿ ಹೇಳಿ ನನಗೆ ಗಲಿಬಿಲಿಗೊಳಸಿದ್ದ. ಮುಂದೆ ಹೋಗುವಷ್ಟರಲ್ಲಿ ಒಂದು ಅಂಗಡಿ ಕಾಣಿಸಿತು. ಅದರ ಹೆಸರು ಬೈ ಅಂಡ್ ಸೇವ್ ಎಂದು ಕಂಗ್ಲಿಷ್ನಲ್ಲಿ ಬರೆದಿತ್ತು. ಅದನ್ನು ನೋಡಿ ನಾನು ಇಲ್ಲೇ ಸಾಮಾನು ತೆಗೆದುಕೊಂಡು ಹೋಗೋಣ ಎಂದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಮರ ಆರ೦ಭ ....

ಮನೆಯಲ್ಲಿ ಸಮರ ಮುಗಿಸಿ, ಒಂದು ಸಮಾರ೦ಭಕ್ಕೆ ಹೋಗಿದ್ದೆ. ಸಮರದ ಆರಂಭ ಆಗಿದ್ದು ಭಾನುವಾರದ ದಿನ. ಬೇಗ ಎದ್ದು ಏನಾದರೂ ತಿಂಡಿ ಮಾಡು ಎಂದು ಅವಳಿಗೆ ಪೀಡಿಸಿದ್ದಕ್ಕೆ. ಭಾನುವಾರ ಕೂಡ ನಮಗೆ ಕೆಲಸ..ಛೇ ಎಂದು ಗೊಣಗಿ, ನಿನ್ನೆಯ ಇಡ್ಲಿ ಇದೆ ತಿಂದು ಹೋಗಿ. ನನಗೆ ಬೇಗ ಏಳೋಕೆ ಆಗಲ್ಲ ಎಂದು ಬೈದಿದ್ದಳು . ಸಮಾರಂಭದಲ್ಲಿ ಏನಾದರೂ ಸಿಗುತ್ತೆ, ನಾನು ಅಲ್ಲೇ ತಿನ್ನುತ್ತೇನೆ ಎಂದು ಹೇಳಿ ಸಮರದ ಅಂತ್ಯ ಹಾಡಿ ಬಂದಿದ್ದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೆಸರಿನ ಹುಚ್ಚು ....

ನಾನು ಮತ್ತು ಮಂಜ ಸೇರಿ ಹೋಟೆಲ್ ಹೋಗಿದ್ದೆವು. ಇನ್ನೂ ಕುಳಿತು ಕೊಂಡಿರಲಿಲ್ಲ ಅಷ್ಟರಲ್ಲೇ "ಏ ಗೋಪಾಲ್ ಆಯಿತ" ಎಂಬ ಕೂಗು. ನಂಗೆ ಆಶ್ಚರ್ಯ ಏನು ಎಂದು. ತಿರುಗಿ ನೋಡಿದೆ ಒಬ್ಬ ಹುಡುಗ ಕಾಫೀ ತೆಗೆದುಕೊಂಡು ಬಂದು ಹೋಟೆಲ್ ಓನರ್ ಗೆ ಕೊಡುತ್ತಿದ್ದ. ಮತ್ತೆ ಕೆಲ ಸಮಯದ ನಂತರ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂಬ ಕೂಗು. ಆ ಹುಡುಗ ಬಂದು ಕ್ಲೀನ್ ಮಾಡಿ ಹೋದ. ಮಂಜ ನನ್ನ ಮುಖ ನೋಡಿ ಮುಸಿ ಮುಸಿ ನಗುತ್ತಿದ್ದ. ಅದೇಕೋ ಗೊತ್ತಿಲ್ಲ ನನ್ನ ಹೆಸರಿನಲ್ಲಿರುವ ಜನರು ಬರೀ ಇಂತಹ ಕೆಲಸದಲ್ಲೇ ಇರುವುದೇಕೆ ಎಂದು ಯೋಚಿಸತೊಡಗಿದೆ. ಇನ್ನೂ ತುಂಬಾ ಸಿನೆಮಾಗಳಲ್ಲಿ ನನ್ನ ಹೆಸರಿನ ವಿಲನ್ ಇರುವುದನ್ನು. ಕಡೆಗೆ ನಾನೇ ತಪ್ಪಾಗಿ ಸಾಫ್ಟ್‌ವೇರ್ ಫೀಲ್ಡ್ ಗೆ ಬಂದೆನೇನೋ ಎಂದು ಕೂಡ ಅನ್ನಿಸಿದ್ದು ಉಂಟು. ಹೀಗೆ ಘಾಡವಾಗಿ ಯೋಚನೆಗೆ ಮುಣುಗಿದ ನನ್ನನ್ನು ಮಂಜ ಏನು ಯೋಚನೆ ಮಾಡುತ್ತಾ ಇದ್ದೀಯಾ? ಎಂದು ಕೇಳಿದ. ಅವನಿಗೆ ನನ್ನ ಹೆಸರಿಗೆ ಆಗುತ್ತಿರುವ ಶೋಷಣೆಯ ಬಗ್ಗೆ ಹೇಳಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಟ್ರೈನಿನ ಲೋಚಗುಡುವಿಕೆ ....

ಇವತ್ತು ಬೈಸಿಕೊಳ್ಳುವುದೂ ಗ್ಯಾರಂಟೀ ಎಂದು ಕೊಳ್ಳುತ್ತ, ಮನೆಯೊಳಗೆ ಕಾಲು ಇಟ್ಟೆ. ಹಲ್ಲಿ ಲೋಚಗುಡುತ್ತಾ ಇತ್ತು. ಹಲ್ಲಿ ನೋಡಿ ಹಲ್ಲು ಕಡಿದು ಒಳಗಡೆ ಹೋದೆ. ಅದನ್ನು ಓಡಿಸಲು ಹೋದೆ. ತುಂಬಾ ಜೋರಾಗಿ ಓಡಿ ದಣಿದವನಂತೆ ನಿಂತು ಮತ್ತೆ ಲೋಚಗುಟ್ಟಿತು. ಮತ್ತೊಮ್ಮೆ ಅದನ್ನು ಓಡಿಸಲು ಹೋದೆ. ಸ್ವಲ್ಪ ಕೂಡ ಅಲುಗಾಡದೆ ಹಾಗೆ ನಿಂತು ಬಿಟ್ಟಿತು. ಸಧ್ಯ ಅದಕ್ಕೂ ಗೊತ್ತಾಗಿ ಬಿಟ್ಟಿದೆ, ಇವನ ಪರಾಕ್ರಮ ಇಷ್ಟಕ್ಕೆ ಮಾತ್ರ ಸೀಮಿತ ಎಂದು. ಇನ್ನೇನು ಮಾಡದೆ ಸುಮ್ಮನೇ ಒಳಗಡೆ ನಡೆದೆ.

ನಾನು ಒಳ್ಳೆಯ ವಿಚಾರ ಮಾಡುವಾಗ ಒಮ್ಮೆಯೂ ಲೋಚಗೂಡದ ಹಲ್ಲಿ, ನಾನು ಕೆಟ್ಟ ವಿಚಾರ ಮಾಡುವಾಗ ಮಾತ್ರ ಖಂಡಿತ ಲೋಚಗುಡುತ್ತದೆ. ಅದನ್ನು ನಾನು ತುಂಬಾ ಕೆಟ್ಟ ಕಣ್ಣಿನಿಂದ ನೋಡಿ, ಮತ್ತೆ ನಾನೇ ಲೋಚಗೂಡಲು ಶುರು ಮಾಡುತ್ತೇನೆ. ನನ್ನ ಲೋಚಗುಡುವಿಕೆಯಿಂದ ನನಗೆ ಯಾವುದೇ ಫಾಯಿದೆ ಆಗಿದೆಯೋ ಖಂಡಿತ ಗೊತ್ತಿಲ್ಲ. ಹೆಂಡತಿ ಮಾತ್ರ ಕೃಷ್ಣ ಕೃಷ್ಣ .. ಎಂದು ಎರಡು ಬಾರಿ ಶ್ರೀ ಕೃಷ್ಣ ಪರಮಾತ್ಮನನ್ನು ಎರಡು ಬಾರಿ ನೆನಸುತ್ತಾಳೆ. ಅಷ್ಟು ಚೆನ್ನಾಗಿ ಮಿಮಿಕ್ರಿ ಮಾಡುತ್ತೇನೆ. ಅದು ಹಲ್ಲಿಯದು ಮಾತ್ರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಾಲಿನ ಟ್ಯೂಬ್ ಲೈಟ್

ನಿನ್ನ ಬಾನುವಾರ ಹೀಗೆ ಮಾತನಾದುತ್ತ ಮನೆಯ ಹಾಲಿನಲ್ಲಿ ಕುಳಿತಿದ್ದೆ, ನಮ್ಮ ಚಿಕ್ಕಪ್ಪನ ಮಗ ಶ್ರೀದರ ಬಂದಿದ್ದ. ಹಾಲಿನ ಒಂದು ಬದಿಯ ಲೈಟ್ ಹಾಕಿದ್ದು ಎದುರು ಬದಿಯ ಟ್ಯೂಬ್ ಲೈಟ್ ಹಾಕಿರಲಿಲ್ಲ. ಹಾಕೋಣ ಅಂತ ಎದ್ದು ಸ್ವಿಚ್ ಅದುಮಿದೆ. ಏಕೊ ಟ್ಯುಬ್ ಹತ್ತಲೆ ಇಲ್ಲ. ಅದರ ಹತ್ತಿರ ನಿಂತು ನೋಡಿದೆ. ಒಳಗೆ ಸಣ್ಣ ಬೆಳಕೊಂದು ಓಡಾಡುತ್ತಿದೆ. ನನ್ನ ಚಿಕ್ಕಪ್ಪನ ಮಗ ಶ್ರೀದರ ಎದ್ದು ಬಂದು ನೋಡಿದ ಅವನು ನನಗಿಂತ ಹೆಚ್ಚು ಬುದ್ದಿವಂತ ಮೊದಲಿನಿಂದಲೂ. ಟ್ಯೂವಿನ ಎರಡು ಬದಿ ಗಮನಿಸಿ ಕಪ್ಪಾಗಿರುವದನ್ನು ಕಂಡು ಹೇಳಿದ
"ಟ್ಯೂಬ್ ಹೋಗಿದೆ ಅಷ್ಟೆ, ಬಾ ಹೋಗಿ ಬೇರೆ ತರೋಣ" ಎಂದು ಹೊರಟ ಅವನ ಗಾಡಿಯಲ್ಲೆ !  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗಂಡಾಂತರ....

ತುಂಬಾ ಮನೆಗಳಲ್ಲಿ ನಿಜವಾದ ಗಂಡಾಂತರ ಆಗುವುದು ಗಂಡಾಂತರವಾದ ಮೇಲೇನೆ. ಗಂಡ ಅಂತರ ಧ್ಯಾನ ಅಥವಾ ಅಂತರ ಪಿಶಾಚಿ ಆದ ಮೇಲೆ ಎಂದು ತಪ್ಪು ತಿಳಿಯಬೇಡಿ ಮತ್ತೆ ಗಂಡ ಆಫೀಸ್ ಹೋದ ಮೇಲೆ ಎಂಬ ಅರ್ಥದಲ್ಲಿ ಹೇಳಿದ್ದು. ಗಂಡ ಆಫೀಸ್ ಹೋದ ಮೇಲೆ ನಡುಯುವ ಟಿ ವಿ ಎಂಬ ಮೂರ್ಖರ ಪೆಟ್ಟಿಗೆಯಲ್ಲಿ ಬರುವ ಧಾರಾವಾಹಿ ಎಂಬ ಗಂಡಾಂತರಗಳ ಬಗ್ಗೆ ಹೇಳಿದ್ದು. ಧಾರಾವಾಹಿ ಎನ್ನುವುದಕ್ಕೆ ಬಹುಶಃ ಕಣ್ಣೀರ 'ಧಾರಾ' ಆ'ವಾಹ'ಯಾಮಿ ಇರಬಹುದೇನೋ....ನೀವು ಕೇಳಬಹುದು ಇದು ಲಿಂಗ ಹೇಗೆ ಬದಲಿಸಿತು ಎಂದು, ಈಗಿನ ಕಾಲದಲ್ಲಿ ಎಲ್ಲವೂ ಸಾಧ್ಯ. ಸಾಕಷ್ಟು ನಿದರ್ಶನಗಳು ಕೂಡ ಇವೆ....ದಿನ ಪತ್ರಿಕೆ,ಟಿ ವಿ ಯಲ್ಲಿ ನೋಡಿರಲೂಬಹುದು....ಆದರೂ ಹೆಚ್ಚು ಹೆಣ್ಣು ಮಕ್ಕಳೇ ನೋಡುವುದರಿಂದ ಇದನ್ನು ಧಾರಾವಾಹಿ ಎಂದು, ಅವರ ಸಹಾನುಭೂತಿಗೆ ಹೆಸರು ಬಂದಿರಲಿಕ್ಕೆ ಕೂಡ ಸಾಧ್ಯ ಉಂಟು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತರಲೆ ಮಂಜನ ತತ್ವಜ್ಞಾನ ....

ಮೊದ ಮೊದಲು ತುಂಬಾ ಓದುತ್ತಿದ್ದೆ. ಆಮೇಲೆ ಏನಾದರೂ ಬರೆಯಬೇಕು ಎಂಬದು ಮನಸ್ಸಿನಲ್ಲಿ ಹೊಯ್ದಾಡಹತ್ತಿತ್ತು. ಆಮೇಲೆ ಏನು? ಬರೆಯಬೇಕು, ಏನು? ಬರೆದರೆ ಎಲ್ಲರೂ ಸ್ವೀಕರಿಸುತ್ತಾರೆ ಎಂದು ಯೋಚಿಸಹತ್ತಿದೆ. ತತ್ವಜ್ಞಾನದ ಬಗ್ಗೆ ಎಂದು ನಿಶ್ಚಯಿಸಿ ಆಗಿತ್ತು. ಮಂಜನಿಗೆ ಒಮ್ಮೆ ಕೇಳಿ ನೋಡಿದರೆ ಹೇಗೆ ಎಂದು ಯೋಚಿಸಿ ಮಂಜನಿಗೆ ಕೇಳಿದೆ. ಮಂಜ ಈ ತತ್ವಜ್ಞಾನ ಎಂಬುದು ಎಲ್ಲರೂ ಕೊಡುವ ಜ್ಞಾನ, ಬೇಕಾದರೆ ಎಲ್ಲರೂ ತಮ್ಮ.. ತಮ್ಮ.. ಶೈಲಿ ಮಾತ್ರ ಬದಲಿಸಿ ಅರುಹುತ್ತಾರೆ ಅಷ್ಟೇ ಎಂದ. ಒಬ್ಬ ಎಳೆನೀರು ಮಾರುವ ಮನುಷ್ಯ ಕೂಡ ಹೇಳುತ್ತಾನೆ ಅದನ್ನ ಎಂದ. ಅದು ಹೇಗೆ? ಎಂದು ಕೇಳಿದೆ. ಬಾ ತೋರಿಸುತ್ತೇನೆ ಎಂದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೆಚ್ಚು ಪೂರ್ವಕ್ಷರ....

ಪ್ರಸಿದ್ಧ ವ್ಯಕ್ತಿಗಳ ಹೆಸರುಗಳ ಬಗ್ಗೆ ಒಮ್ಮೆ ಯೋಚಿಸುತ್ತಾ ಇದ್ದೆ. ಎಲ್ಲಾ ಪ್ರಸಿದ್ದ ವ್ಯಕ್ತಿಗಳಲ್ಲಿ ಒಂದು ಸಾಮ್ಯತೆ ಕಂಡು ಬಂತು. ಅದು ಏನೆಂದರೆ ಎಚ್ ಎಂಬ ಪೂರ್ವಕ್ಷರ {ಪೂರ್ವ(ಮೊದಲ) ಅಕ್ಷರ}. ಎಚ್ ಪೂರ್ವಕ್ಷರಗಳಲ್ಲಿ ನನ್ನ ಮೆಚ್ಚಿನ ಹಾಸ್ಯ ಲೇಖಕರಾದ ನಮ್ಮ ಶ್ರೀ ಎಚ್ ಡುಂಡಿರಾಜ್ ಕೂಡ. ಕೆಲವರು ಇದನ್ನು ಹೆಚ್ ಎಂದು ಕೂಡ ಬರೆಯುವುದುಂಟು. ಈ ಹೆಚ್(ಎಚ್) ಎನ್ನುವುದು ಕನ್ನಡೀಕರಿಸಿದರೆ ಹೆಚ್ಚು ಎಂದು ಆಗಬಹುದೇನೋ, ಅದಕ್ಕೆ ಅವರು ಅಷ್ಟು ಹೆಚ್ಚು ಹೆಚ್ಚು ನಮ್ಮನ್ನು ನಗಿಸುತ್ತಾ ಹಾಸ್ಯ ಲೇಖನಗಳನ್ನು ಬರೆದಿರೋದು. ಸಂಪದ ಸೃಷ್ಟಿಕರ್ತರಾದ ಶ್ರೀ ಹರಿಪ್ರಸಾದ್ ನಾಡಿಗ್ ಅವರ ಹೆಸರು ಕೂಡ ಹೆಚ್ ನಿಂದ ಶುರು ಆಗುತ್ತೆ. ಮತ್ತೆ ನನ್ನ ಆಪ್ತರಾದ ದುಬೈ ಮಂಜಣ್ಣನ ಹೆಸರು ಕೂಡ ಹೆಚ್ ನಿಂದ ಶುರು ಆಗುತ್ತೆ , ಹೊಳೆನರಸಿಪುರ ಮಂಜುನಾಥ ಎಂದು. ಮತ್ತೆ ನನ್ನ ಸಹೃದಯಿ ಮಿತ್ರ ಹರೀಶ್ ಅತ್ರೇಯ....ಹೀಗೆ ಹಲವಾರು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನ ಮೆಚ್ಚಿದ ಹುಡುಗಿಗೆ ಮೆಚ್ಚಿಸುವ ಪರಿ ....

ಮದುವೆ ಆದ ಹೊಸದರಲ್ಲಿ ಒಬ್ಬರನ್ನೊಬ್ಬರು(ತಮ್ಮ.. ತಮ್ಮ.. ಹೆಂಡತಿ-ಗಂಡನನ್ನು ಮತ್ತೆ ಗಂಡ-ಹೆಂಡತಿಯನ್ನ) ಮೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿರುತ್ತಾರೆ, ಆಮೇಲೆ ಹರಿತವಾದ ಮಚ್ಚಿನ ಹಾಗೆ ಇರುವ ಮಾತಿನ ಕಾರ್ಯಕ್ರಮ ತಾನಾಗೇ ಶುರು ಆಗುತ್ತೆ. ನಾನು ಅದು ಮಾಡಿದೆ, ಇದು ಮಾಡಿದೆ ಎಂದು ಹೇಳುವ ಗಂಡನ ಪ್ರತಾಪಗಳು ಮಡದಿಗೆ ಅರಿವಾಗಿರುತ್ತೆ. ಮಡದಿಗೆ ಮೊದಲು ಬಂದ ಮೇಲೆ ಗಂಡನನ್ನು ಅರಿಯುವ ಸಮಯದಲ್ಲಿ ಉದ್ಭವಿಸುವ ಎಲ್ಲಾ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ಉತ್ತರಗಳನ್ನು ತಮ್ಮ, ತಮ್ಮ ಉತ್ತರ ಕುಮಾರರಿಂದ(ಗಂಡಂದಿರಿಂದ) ಪಡೆದಿರುತ್ತಾರೆ. ಹೀಗೆ ಮೆಚ್ಚಿಸುವ ಮತ್ತು ಹೋಗಳಿಕೆಯ ಕಾರ್ಯಕ್ರಮಕ್ಕೆ ನಾಂದಿ ಹಾಡಿ ಆಗಿರುತ್ತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಧಾರವಾಡ ಪೆದ್ದನ.... ಮೈಸೂರು ಶಾಕ್ ....

ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಸುದ್ದಿ ಆಗುವಷ್ಟು ದೊಡ್ಡವನೇನು ನಾನಲ್ಲ ಬಿಡ್ರಿ. ಬಿಡ್ರಿ ಅಂದಿದ್ದಕ್ಕೆ, "ಎಲ್ಲೇ ಹಿಡುಕೊಂಡೆ ನಿನ್ನ ಲೇ" ಅಂತ ಮಾತ್ರ ಕೇಳಬ್ಯಾಡ್ರಿ. ಇದು ನಮ್ಮ ಭಾಷಾ ಸೊಗುಡು. ಸೊಗಡೋ ಅಥವಾ ಸುಡುಗಾಡೋ... ಅರ್ಥ ಆದ್ರ ಸಾಕು ಅಂತೀರೇನು.. ಅದು ಖರೇನ.. ಯಾಕಂದ್ರ ನಾನು ಧಾರವಾಡದವ ಇದ್ದೇನಲ್ಲ ಅದಕ್ಕ. ಮೈಸೂರಿಗೆ ನೌಕ್ರಿಗೆ ಅಂತ ಬಂದಿದ್ದ. ಅವರ ಭಾಷೆ ನೋಡಿ, ಅಂದ್ರ ಕೇಳಿ ನನಗ ಅಲ್ಲೇ ಹೊಂದಾಣಿಕಿ ಆಗೋದ ಸ್ವಲ್ಪ ತ್ರಾಸ(ಕಷ್ಟ) ಆತು. ಯಾಕಂದ್ರ ನಾವು ಯಾವುದ ವಿಷ್ಯ ಇರಲಿ ಬಹಳ ಎಳಯನ್ಗಿಲ್ಲ. ಆದ್ರ ಮೈಸೂರಿನವರು ರಬ್ಬರ್ ಏಳದ ಹಂಗ ಏಳಿತಾರ ರೀ...ನಾವು ಆರಾಮ ಇದ್ದೀಯೇನಲೇ ಅಂತ, ನನ್ನ ಪ್ರೀತಿ 'ರಾಮ'ನ ಹೆಸರನ್ನು ಸೇರಿಸಿಕೊಂಡು ಕ್ಷೇಮ ಸಮಾಚಾರ ಕೇಳಿದ್ರ, ಇವರು "ಏನ ಸರ್ ಚೆನ್ನಾಗಿದ್ದೀರಾ?" ಎಂದು ಕೇಳ್ತಾರ ಅದು ಪೂರ್ತಿ ಎಳ್ದು. ಎಳ್ದು ಅಂದ್ರ ತಮ್ಮ ಕಡೆ ಜಗ್ಗಿ ಅಲ್ಲ ಮತ್ತ. ಭಾಷೆ ಮಾತ್ರ ಎಳ್ದು ಅಂತ ಹೇಳಿದೆ.. ತಪ್ಪು ತಿಳ್ಕೋಬ್ಯಾಡ್ರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ವೇದಾಂತಿ ದಂತಕತೆ....

ಮುಂಜಾನೆ ಎದ್ದು ಬೇಗನೆ ದೇವರ ಸ್ತೋತ್ರ ಹೇಳುತ್ತ ಇದ್ದೆ. ನನ್ನ ಗೆಳೆಯ ವಿಲಾಸ್ ಬಂದ. ಬಂದವನೇ, ಎಲ್ಲಾ ಕ್ಷೇಮ ಸಮಾಚಾರವಾದ ಮೇಲೆ, ತನ್ನ ಮದುವೆ ಕಾರ್ಡ್ ಕೊಟ್ಟ. ನಮಗೂ ತುಂಬಾ ಖುಷಿ ಆಯಿತು. ಇಲ್ಲೇ, ತಿಂಡಿ ತಿಂದು ಹೋಗು ಎಂದು ಹೇಳಿದೆ. ಆಯಿತು ಎಂದ. ಮಡದಿ ತಿಂಡಿ ತಂದು ಕೊಟ್ಟಳು. ತಿಂಡಿ ತಿನ್ನುವ ಸಮಯದಲ್ಲಿ ಒಂದು ಹರಳು ನನ್ನ ಬಾಯಿಗೆ ಬಂತು. ನಾನು ಪಕ್ಕಕ್ಕೆ ಇಟ್ಟು, ತಿಂಡಿ ತಿಂದು ಮುಗಿಸಿದೆ. ಆಮೇಲೆ ಕಾಫೀ ಕುಡಿಯುತ್ತಾ ಇರುವಾಗ, ಮತ್ತೆ ಮಾತನಾಡುತ್ತಾ ನಿನಗೆ ಯಾರಾದರೂ ದಂತ ವೈಧ್ಯರು ಗೊತ್ತಾ ಎಂದು ಕೇಳಿದ. ನನಗೆ ಘಾಬರಿ, ನನಗೆ ಹರಳು ಬಂದರು, ನಾನೇ ಸುಮ್ಮನಿರುವಾಗ ಇವನದು ಜಾಸ್ತಿ ಆಯಿತು ಅನ್ನಿಸಿತು. ನಾನು ಸುಮ್ಮನೇ ನಕ್ಕು ಸುಮ್ಮನಾದೆ. ಮತ್ತೊಮ್ಮೆ ಕೇಳಿದ ಆಸಾಮಿ... ಆದರೂ ಸುಧಾರಿಸಿಕೊಂಡು, ಹಾ... ಗೊತ್ತು ನನ್ನ ಒಬ್ಬ ಹಳೆಯ ಗೆಳೆಯ ರಾಜೀವ ಇದ್ದಾನೆ ಎಂದೆ. ಅವನಿಗೆ ಹೇಳು ನಾನು ಬರುತ್ತಿದ್ದೇನೆ ಅಂತ ಎಂದ. ಏಕೆ? ಹಲ್ಲಿಗೆ ಏನು ಆಯಿತು ಎಂದೆ. ಅದು ಮದುವೆ ಮುಂಚೆ ಹಲ್ಲು ಚೆನ್ನಾಗಿ ತೋರಿಸಿಕೊಂಡು ಬರಬೇಕು ಎಂದಿದ್ದೇನೆ ಎಂದಾಗ ನನ್ನ ಮನಸ್ಸು ನಿರಾಳವಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ್ವಚ್ಛತಾ ಕಾರ್ಯಕ್ರಮ ....

ರೀ, ಮನೆಯಲ್ಲಾ ತುಂಬಾ ಗಲೀಜ್ ಆಗಿದೆ, ಒಂದು ದಿವಸನಾದರೂ ಕ್ಲೀನ್ ಮಾಡಿದ್ದೀರ? ಎಂದಳು ನನ್ನ ಮಡದಿ. ನೀನೇನು ಮಡಿಲೆ ಇದ್ದೀಯಾ? ನೀನೆ ಮಾಡಬಹುದಲ್ಲ ಎಂದು ಹೇಳಿ ಉಗಿಸಿಕೊಂಡೆ. ನನ್ನನ್ನ ಏನು? ಎಂದು ತಿಳಿದಿದ್ದೀಯಾ?. ನನಗೆ ತುಂಬಾ ಕೆಲಸಗಳಿರುತ್ತವೆ. ಬ್ಲಾಗ್ ನೋಡಬೇಕು, ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕು, ಮತ್ತೆ ಓದಬೇಕು ಎಂದು ಹೇಳಿದೆ. ಓದುವ ಸಮಯದಲ್ಲಿ... ಚೆನ್ನಾಗಿ ಊದಿದಿರಿ ಎಂದು ಕಾಣುತ್ತೆ, ಅದಕ್ಕೆ ಈಗ ಓದುತ್ತಾ ಇದ್ದೀರ ಎಂದಳು. ಏನೋ? ಒಂದೆರಡು ಬ್ಲಾಗ್ ಬರೆದ ಮಾತ್ರಕ್ಕೆ, ನಿಮ್ಮಷ್ಟಕ್ಕೆ ನೀವೇ ದೊಡ್ಡ ಸಾಹಿತಿ ಎಂದು ತಿಳಿದುಕೊಳ್ಳಬೇಡಿ. ನಿಮಗೇನೂ ಕೊಂಬು ಬಂದ ಹಾಗೆ ಆಡುತ್ತಿರುವಿರಿ ಎಂದಳು. ಏನು? ನನಗೆ ಕೊಂಬು ಇಲ್ಲವೇ?, ನನ್ನ ಹೆಸರು ಏನು? ಎಂದೆ. ಮತ್ತೇನು ದನ ಕಾಯುವವನು ಎಂದಳು. ಲೇ ಅವು ಆಕಳುಗಳು ಎಂದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬುರುಡೆ ಪುರಾಣ ....

ಮೊನ್ನೆ ತುಂಬಾ ಕೆಲಸವಿದ್ದ ಕಾರಣ, ಆಫೀಸ್ ನಿಂದ ಸ್ವಲ್ಪ ತಡವಾಗಿ ಹೋದೆ. ಮಡದಿ, ಮಗ ಇಬ್ಬರು ನಿದ್ದೆಯಲ್ಲಿ ಇದ್ದರು. ತೊಂದರೆ ಏಕೆ? ಮಾಡಬೇಕು ಎಂದು ಅವರನ್ನು ಎಬ್ಬಿಸದೇ, ನಾನೇ ಊಟ ಮಾಡಿ, ಬೆಡ್‌ರೂಮ್ ಗೆ ಹೋಗದೇ, ಹಾಲ್ ನಲ್ಲಿ ನಿದ್ದೆಗೆ ಜಾರಿದೆ. ಹಾಸಿಗೆ ಮೇಲೆ ಒರಗಿದ ಕೂಡಲೇ, ನಿದ್ರಾ ದೇವಿಗೆ ಶರಣಾಗಿ ಬಿಟ್ಟೆ. ಮಧ್ಯ ರಾತ್ರಿ ಯಾರೋ... ನನ್ನನ್ನು ಎಬ್ಬಿಸಿದ ಹಾಗೆ ಆಯಿತು. ಆ ಕಡೆ ಒರಗಿ ಮಲಗಿಕೊಂಡೆ. ಮತ್ತೆ ಬಡಿದು ಎಬ್ಬಿಸಿದ ಹಾಗೆ ಆಯಿತು. ಕಣ್ಣು ಬಿಟ್ಟೆ, ಚಾಕು ಹಿಡಿದು ಯಾರೋ.. ನಿಂತ ಹಾಗೆ ಅನ್ನಿಸಿತು. ನನ್ನ ಉಸಿರೇ ನಿಂತ ಹಾಗೆ ಆಗಿತ್ತು. ಪಕ್ಕದಲ್ಲಿ ಬೇರೆ ಮಡದಿ ಇಲ್ಲಾ, ಇದ್ದಿದ್ದರೆ ಸ್ವಲ್ಪ ಧೈರ್ಯ ಬರಬಹುದಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊಟ್ಟೆ ಕೆರೆಯ ಮೇಲಿನ ಕಟ್ಟೆ....

ನನ್ನ ಅಕ್ಕನ ಮಗಳ ಮದುವೆಗೆ ಎಂದು ಧಾರವಾಡಕ್ಕೆ ಹೋಗಿದ್ದೆ. ಅಲ್ಲಿ ಕೆಲ ಚಿಕ್ಕವರು ದೊಡ್ಡವರಿಗೆ ನಮಸ್ಕಾರ ಮಾಡುವ ದೃಶ್ಯ ನನಗೆ ಕಾಣಿಸಿತು. ನಾನು ಹೋದೊಡನೆಯೆ, ನನಗೆ ಅಮ್ಮ, ಇವರು ನನ್ನ ಮಾವನ ಮಗ ಎಂದು ಪರಿಚಯ ಮಾಡಿಕೊಟ್ಟರು. ಈಗ ನಾನು ಅವ್ರಿಗೆ ನಮಸ್ಕಾರ ಮಾಡಬೇಕೋ ಅಥವಾ ಅವರು ನನಗೆ ನಮಸ್ಕಾರ ಮಾಡಬೇಕೋ ಎಂಬುದು ಸೋಜಿಗದ ಸಂಗತಿ. ಕಡೆಗೆ ಅವರೇ ನನಗೆ ನಮಸ್ಕಾರ ಮಾಡಲು ಬಂದರು. ಅದಕ್ಕೆ ನನ್ನ ಅಮ್ಮ ಲೇ ಅವನು ದೊಡ್ಡವನು ಕಣೋ ನೀನೆ ನಮಸ್ಕಾರ ಮಾಡು ಎಂದು ಫರ್ಮಾನು ಹೊರಡಿಸಿದರು. ನಾನು ಮನಸಿನಲ್ಲಿ ಇದೊಳ್ಳೇ ಸಂಪ್ರದಾಯ ಎಂದು ಬಗ್ಗಿ ನಮಸ್ಕರಿಸಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೀರೀಯಸ್‌ನೆಸ್ ....

ತುಂಬಾ ಸೀರೀಯಸ್ ಆಗಿ ಕುಳಿತು ಒಂದು ಹಾಸ್ಯ ಲೇಖನ ಬರೆಯುತ್ತಿದ್ದೆ. ನನ್ನ ಮಡದಿ "ಏನ್ರೀ ನಿಮಗೆ ಸೀರೀಯಸ್‌ನೆಸ್ ಇಲ್ಲವೇ.. ಇಲ್ಲ.." ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ನೋಡಿದರೆ ಆ ಪೆನ್ನು,ಪುಸ್ತಕ ಹಿಡಿದು ಕುಳಿತು ಬಿಟ್ಟಿದ್ದೀರಾ? ಎಂದಳು. ಇದನ್ನು ಮೊದಲನೆ ಬಾರಿ ಹೇಳಿದ್ದರೆ ಸ್ವಲ್ಪ ಸೀರೀಯಸ್ ಆಗಿ ತೆಗೆದುಕೊಳ್ಳಬಹುದಿತ್ತು. ಆದರೆ ಇದು ಎಷ್ಟನೆ ಬಾರಿ ಎಂಬುದು ನನಗೆ ತಿಳಿದಿಲ್ಲ...ಅದಕ್ಕೆ ಅಂತ ಒಂದು ಕಂಪ್ಯೂಟರ್ ನೇಮಿಸಿದರು ಲೆಕ್ಕ ಸಿಗುವುದಿಲ್ಲ. ಮೊದ ಮೊದಲು ಅಪ್ಪ ಕೂಡ ಇದನ್ನೇ ಹೇಳುತ್ತಿದ್ದರು. "ಲೇ ಕತ್ತೆ ಅಷ್ಟು ವಯಸ್ಸು ಆಯಿತು, ಯಾವಾಗೆ ಬರುತ್ತೋ ಸೀರೀಯಸ್‌ನೆಸ್" ಅಂತ. ಅದೇನೋ ಗೊತ್ತಿಲ್ಲ ಇಂತಹ ಅಪವಾದಕ್ಕೆ ನಾನು ಗುರಿಯಾಗುತ್ತೇನೋ ಅಥವಾ ಅಪವಾದ ನನ್ನನ್ನು ಗುರಿ ಮಾಡಿ ಕೆಲಸ ಮಾಡುತ್ತೋ ಇದುವರೆಗೂ ಅರಿಯದ ಸಂಗತಿಯಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ....

ನನ್ನ ಪೋಸ್ಟ್ ಪೇಡ್ ಮೊಬೈಲ್ ಬಿಲ್ಲು ನೋಡಿ, ಏನೇ? ಇದು ಎಂದು ಕೇಳಿದೆ. ಅದಕ್ಕೆ.. ನನ್ನ ಮಡದಿ ಅದು ಮೊಬೈಲ್ ಬಿಲ್ಲು ಎಂದಳು. ನಾನೆಲ್ಲಿ ಹೇಳಿದೆ ಕಾಮನಬಿಲ್ಲು ಅಂತ ಎಂದೆ. ಕಾಮನ ಬಿಲ್ಲು ಅಲ್ಲಾರಿ ಅದು ಕಾಮಣ್ಣನ ಬಿಲ್ಲು ಇರಬಹುದು ಎಂದು ಹೀಯಾಳಿಸಿದಳು. ಓ ಅಂದ ಹಾಗೆ ಇವತ್ತು ಆಫೀಸ್ ನಿಂದ ಬರುವ ಸಮಯದಲ್ಲಿ ಕಾಮನಬಿಲ್ಲು ಸಿ ಡಿ ತೆಗೆದುಕೊಂಡು ಬನ್ನಿ, ನನಗೆ ಆ ಸಿನೆಮಾ ಅಂದರೆ ತುಂಬಾ ಇಷ್ಟ ಎಂದು ಮಾತು ಮರೆಸಲು ನೋಡಿದಳು. ನೀನು ಹೀಗೆ ಫೋನ್ ಯೂಸ್ ಮಾಡ್ತಾ ಇದ್ದರೆ, ನಾನು ಬಿಲ್ಲು ಹಿಡ್ಕೊಂಡು ಕಾಡಿಗೆ ಹೋಗಬೇಕಾಗುತ್ತೆ ಎಂದೆ. ನಾನೊಬ್ಬನೇ ಅಲ್ಲ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಶ್ರೀ ರಾಮನ ಜೊತೆ ಸೀತಾ ಮಾತೆ ಹೋಗಲಿಲ್ಲವೆ ಹಾಗೆ ಎಂದೆ. ಓ.. ನಾನು ಬರಲ್ಲಪ್ಪಾ ಬೇಕಾದರೆ ನೀವು ಹೋಗಿ ಬನ್ನಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೋಡಿ ಕಲಿತಿರುವ ನೀತಿ ಪಾಠ....

ನಮ್ಮ ಊರಿಂದ ನನ್ನ ಮಡದಿಯ ದೂರದ ಸಂಭಂಧಿ ಬಂದಿದ್ದ. ಹೆಸರು ಸುರೇಶ. ಅವನು ನಾನು ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕಡೆಗೆ ಒಂದು ದಿನ ಅಂಕಲ್ ಮದುವೆ ಮಾಡಿಕೊಳ್ಳಬೇಕೆ ಅಥವ ಬೇಡವೇ. ನಾನು ತುಂಬಾ ಜನರಿಗೆ ಇದರ ಬಗ್ಗೆ ಕೇಳಿದ್ದೇನೆ. ನನಗೆ ಇದುವರೆಗೆ ಕೂಡ ಉತ್ತರ ಸಿಕ್ಕಿಲ್ಲ, ನೀವಾದರೂ ಹೇಳಿ ಎಂದು ಪೀಡಿಸುತ್ತಿದ್ದ. ಅವನಿಗೆ ಏನು ಉತ್ತರ ಹುಡುಕಬೇಕೆಂದು ತಡಕಾಡಿ ಸುಮ್ಮನಾಗಿದ್ದೆ. ಮತ್ತೆ ಮರುದಿನ ನನ್ನ ಆಫೀಸ್ ರಜೆ ಇತ್ತು. ನಾನು ಅವನಿಗೆ ನಿನ್ನೆ ಒಂದು ಪ್ರಶ್ನೆ ಕೇಳಿದ್ದೇಯಲ್ಲಾ?. ಇವತ್ತು ಅದರ ಉತ್ತರ ಹೇಳುತ್ತೇನೆ. ನಮ್ಮಿಬ್ಬರನ್ನೂ ಗಮನಿಸು, ಆಮೇಲೆ ನಿನಗೆ ತಿಳಿಯುತ್ತೆ ಮದುವೆ ಬೇಕಾ ಅಥವಾ ಬೇಡವಾ ಎಂದು ಅವನಿಗೆ ಹೇಳಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಮ್ಮಿಶ್ರ ಸಂಸಾರ ....

ನಮ್ಮ ಸಮ್ಮಿಶ್ರ ಸಂಸಾರ(ಸರಕಾರ) ಸುಗಮವಾಗಿ ನಡೆದು ಕೊಂಡು ಹೋಗಬೇಕಾದರೆ ಬೇಕೇ.. ಬೇಕು.. ಸರ (ಅದು ಬಂಗಾರದ್ದು ಮಾತ್ರ) ಮತ್ತು ಕಾರ(ಸಧ್ಯ ಇನ್ನೂ ಕೇಳಿಲ್ಲ.)... ಒಂದು ದಿನ ಏನೋ? ಇರಲಿ ಎಂದು ಪ್ಲ್ಯಾಟಿನಮ್ ಸರ ತೆಗೆದುಕೊಂಡು ಬಂದಿದ್ದೆ. ಅವಳಿಗೆ ಸಕ್ಕತ್ ಕೋಪ ಬಂದು ಬಿಟ್ಟಿತ್ತು. ಏನ್ರೀ..? ನನಗೆ ಅಲ್ಯೂಮಿನಿಯಮ್ ಸರ ತಂದು ಕೊಟ್ಟಿದ್ದೀರ?. ಎಲ್ಲಾ ಗಂಡಸರು ಇಷ್ಟೇ... ಮದುವೆ ಆಗುವ ಮುಂಚೆ ಚಿನ್ನ... ರನ್ನ... ಎಂದೆಲ್ಲ ಹೋಗಳುವದು. ಆಮೇಲೆ ಮಡದಿ ಎಂದರೆ ಅಷ್ಟಕ್ಕೇ ಅಷ್ಟೇ ಎಂದು ಸರ ಬಿಸಾಡಿದಳು. ಸರಸರನೇ ಹೋಗಿ ಅದನ್ನು ಎಕ್ಸ್‌ಚೇಂಜ್ ಮಾಡಿ ಚಿನ್ನದ ಸರ ತಂದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಯುವಿಕೆ ಅಂತ್ಯ ....

ಹಾಗೆ ಪೇಪರ್ ಓದುತ್ತಾ ಕುಳಿತಿದ್ದೆ. ಪೇಪರ್ ನಲ್ಲಿ ಅತಿ ಪ್ರಾಮಾಣಿಕತೆಯಿಂದ ನೋಡುವ ಒಂದು ಅಂಕಣ ಎಂದರೆ ನನ್ನ ಭಯದ + ವಿಷಯ (ಭವಿಷ್ಯ). ಈ ವಾರ ನಿಜವಾಗಿಯೂ ಭಯದ ವಿಷಯವೇ ಇತ್ತು ಅನ್ನಿ. ಏಕೆಂದರೆ ಈಗ ಅಪ್ರೈಸಲ್ ಸಮಯ.... ಕಳೆದ ವಾರ ಕೈ ಕೆರೆತ ಬೇರೆ ಆಗಿ ಒಂದು ವಾರ ರಜೆ ತೆಗೆದುಕೊಂಡಿದ್ದಕ್ಕೆ, ನನ್ನ ಬಾಸ್ ಬೇರೆ ಕೋಪ ಮಾಡಿಕೊಂಡಿದ್ದರು. ಹೀಗಾಗಿ ನನ್ನ ಭವಿಷ್ಯ ಭಯದ ವಿಷಯವಾಗಿ ಪರಣಮಿಸಬಹುದು ಎಂದು ನಾನು ಎಣಿಸಿದ್ದೆ. ಹೇಗಿದ್ದರು ಭವಿಷ್ಯ ನಮ್ಮ ಮನೋಜನೆ ಬರೆಯೋದು ಚೆನ್ನಾಗೆ ಬರೆದಿರುತ್ತಾನೆ ಎಂದು ತೆಗೆದು ನೋಡಿದೆ. ನನ್ನ ರಾಶಿ ಮೀನಕ್ಕೆ ಕಣ್ಣು ಆಡಿಸಿದೆ. ಚೆನ್ನಾಗಿ ಬರೆದಿದ್ದ. ಖುಷಿಯಾಗಿ ನೋಡಿ ಪೇಪರ್ ಬಂದು ಮಾಡ ಇಡ ಹತ್ತಿದಾಗ, ಮಡದಿ ಏನ್ರೀ?. ನಿಮ್ಮ ಭವಿಷ್ಯ ಅಷ್ಟು ನೋಡಿದರೆ ಆಯಿತ?, ಥೂss.. ನಿಮ್ಮ ಎಂದು ಉಗಿದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದು ಮಧ್ಯಂತರ ಕಥೆ ....

ಮಧ್ಯ ನನ್ನ ಜೊತೆ ಜೊತೆಗೆ ಇರುವ ವಸ್ತು. ಘಾಬರಿ ಆಯಿತಾ?. ಕೇಳಿ ನನ್ನ ಜೊತೆ ಇರುವ ಮಧ್ಯ ಮತ್ತು ಅಂತರದ ಕಥೆ (ವ್ಯಥೆ).

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಪ್ಪಲ್ ಚನ್ನಿಗರಾಯ ....

ನಮ್ಮ ಕಾಲೇಜ್ ನಲ್ಲಿ ಅಂಜನ್ ಎಂಬ ಹುಡುಗ ಇದ್ದ. ಸಕ್ಕತ್ ಜಿಪುಣ. ಒಂದು ಪೈಸೆ ಕೂಡ ಬಿಚ್ಚುತ್ತಿರಲಿಲ್ಲ. ಹುಡುಗಿಯರು ಎಂದರೆ ಅತ್ಯಂತ ಆಪ್ಯತೆ. ಅವರ ಜೊತೆ ಕೂಡ ಒಂದು ಪೈಸೆ ಬಿಚ್ಚುತ್ತಿರಲಿಲ್ಲ. ಹುಡುಗಿಯರ ಹತ್ತಿರಾನೇ ದುಡ್ಡು ವಸೂಲಿ ಮಾಡುತ್ತಿದ್ದ. ಕ್ಯಾಂಟೀನ್ ಗೆ ಬಂದರು ದುಡ್ಡು ಕೊಟ್ಟು ಖರೀದಿಸದೇ, ನಾನು ಸ್ವಲ್ಪ ರುಚಿ ನೋಡುತ್ತೇನೆ ಎಂದು ಹೇಳಿ ಎಲ್ಲರ ಪ್ಲೇಟ್ ಗೆ ಕೈ ಹಾಕಿ ತಿನ್ನುತ್ತಿದ್ದ. ಕೆಲ ಹುಡುಗರು ಅವನು ಬರುತ್ತಾನೆ ಎಂದರೆ ಗಬ.. ಗಬ.. ಎಂದು ಬೇಗನೆ ತಿಂದು ಜಾಗ ಖಾಲಿ ಮಾಡುತ್ತಿದ್ದರು. ಹುಡುಗಿಯರನ್ನು ಪರಿಚಯ ಇಲ್ಲದೇ ಇದ್ದರು ಅವರನ್ನು ಹೋಗಿ ಮಾತನಾಡಿಸುತ್ತಿದ್ದ. ಒಂದು ಹುಡುಗಿ ಅಂಜನಾ ಎಂದು ಇತ್ತು. ಅವಳ ಹೆಸರಿಗೂ ತನ್ನ ಹೆಸರು ತುಂಬಾ ಮ್ಯಾಚ್ ಆಗುತ್ತೆ ಎಂದು ಅವಳ ಹಿಂದೆ ಬಿದ್ದಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀನು ಸಾಯಿತಿ ಅಂತೆ .........?

ಮಡದಿ ಊರಿಗೆ ಹೋಗಿದ್ದರಿಂದ ಮನೆಯ ಎಲ್ಲಾ ಕೆಲಸಗಳು ನನ್ನ ಹೆಗಲ ಮೇಲೆ ಬಿದ್ದಿದ್ದವು. ಬಟ್ಟೆ ಒಗೆಯುವದು, ಪಾತ್ರೆ ತಿಕ್ಕುವದು ....ಎಲ್ಲವೂ. ಮನೋಜನ ಮಡದಿನೂ ಊರಿಗೆ ಹೋಗಿದ್ದರಿಂದ, ಇಬ್ಬರು ಇಲ್ಲೇ ಅಡಿಗೆ ಮಾಡಿ ಊಟ ಮಾಡಿದರೆ ಆಗುತ್ತೆ ಬಾ ಎಂದು ಅವನಿಗೆ ಹೇಳಿದೆ. ಆಯಿತು, ಎಂದು ನಮ್ಮ ಮನೆಯಲ್ಲೇ ಠಿಕಾಣಿ ಹೂಡಿದ. ಏನೋ ನನ್ನ ಕೆಲಸಗಳಲ್ಲಿ ಸಹಾಯ ಮಾಡುತ್ತಾನೆ ಎಂದು, ನಾನು ಅಂದುಕೊಂಡರೆ ಮನೋಜ ರಾತ್ರಿ ತೀರ್ಥಯಾತ್ರೆಗೆ ಹೋಗಿ ಬಂದು ಊಟ ಮಾಡಿ ಮಲಗಿ ಬಿಡುತ್ತಿದ್ದ. ಅವನ ಕರೆದ ಕರ್ಮಕ್ಕೆ ನನ್ನ ಕೆಲಸ ಇನ್ನೂ ಜ್ಯಾಸ್ತಿ ಆಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೋಟೆಲ್ ಊಟ... ಹೊಟ್ಟೆಯಲ್ಲಿ ಆಟ...

ಮೂರು ದಿವಸ ಆಯಿತು ಮುಂಜಾನೆ ಎದ್ದು ೧೦ ರೂಪಾಯಿ ಕೊಟ್ಟು ಬಿಳಿ ಗುಳಿಗೆ ನುಂಗಿ ಆಫೀಸ್ ಹೋಗುತ್ತಾ ಇದ್ದೇನೆ. ನಾನು ಎಷ್ಟೇ ಹೋಟೆಲ್ ಹೊಕ್ಕರು ಸಿಗುವದು ಅದೇ ಬಿಳಿ ಗುಳಿಗೆಗಳು, ಕೆಲವು ಚಿಕ್ಕ , ಮತ್ತೆ ಕೆಲವು ಗಾತ್ರದಲ್ಲಿ ದೊಡ್ಡದಾಗಿರಬಹುದು ಅಷ್ಟೇ. ನಿಮಗೆ ಬಿಳಿ ಗುಳಿಗೆ ಎಂದರೆ ಅರ್ಥ ಆಯಿತು ತಾನೇ?. ಇಡ್ಲಿ.. ಸಾರ್ ಇಡ್ಲಿ... ಯಾವುದೆ ಸಮಯದಲ್ಲಿ ಹೋದರು ಸಿಗುವದು ಇದೊಂದು ಮಾತ್ರೆ ಮಾತ್ರ. ಇಷ್ಟಕ್ಕೂ ಅದು ಇದು ಹಾಳು ಮೂಳೆ... ಕ್ಷಮಿಸಿ ಮುಳ್ಳು... ಆಯಾಯ್ಯೋ ಮತ್ತೊಮ್ಮೆ ಕ್ಷಮಿಸಿ... ಮೂಳು ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ, ಇಡ್ಲೀನೇ ತಿನ್ನು ಎಂದು ನನ್ನ ಮಡದಿ ತಾಕೀತ್ ಮಾಡಿ ಊರಿಗೆ ಹೋಗಿದ್ದಾಳೆ. ಇದಕ್ಕೆ ಜೊತೆಯಾಗಿ ಇನ್ನೊಂದು ಮಾತ್ರೆ ಬೇರೆ ಚಾಕ್ಲೇಟ್ ಕಲರ್ ಗುಳಿಗೆ ... ವಡೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಡಾಕು ಮಂಗಲ್ ಸಿಂಗ್....

ಮುಂಜಾನೆ ಬೇಗ ಎದ್ದು, ನಾನು ಬರೆದಿರುವ ಲೇಖನದ ಹಿಟ್ಸ್ ನೋಡುತ್ತಾ ಕುಳಿತಿದ್ದೆ. ಇನ್ನೂ ಸವಿ ನಿದ್ದೆಯಲ್ಲೇ ಇದ್ದ, ನನ್ನ ಮಡದಿ ಏನ್ರೀ, ಏನು ಮಾಡುತ್ತಾ ಇದ್ದೀರ ಎಂದಳು. ಹಿಟ್ ನೋಡುತ್ತಾ ಇದ್ದೀನಿ ಕಣೇ ಎಂದೆ. ಏಕೆ? ಎಂದು ಬೆಚ್ಚಿ ಎದ್ದು ಬಿಟ್ಟಳು. ಎಲ್ಲಿದೆ ಜಿರಳೆ? ಎಂದಳು. ಅವಳಿಗಿಂತ ಜ್ಯಾಸ್ತಿ ಘಾಬರಿ ಆಗಿದ್ದು ನಾನು. ನಾನು ಕುರ್ಚಿಯಿಂದ ಟ್ಯಾಂಗ್ ಎಂದು ಜಿಗಿದೆ. ಕುರ್ಚಿ ಲಡಕ್ಕ್ ಎಂದು ಮುರಿದು, ಅದರ ಜೊತೆ ನಾನು ಬಿದ್ದೆ. ನಾನು ಅವಳಿಗೆ ಕೇಳಿದೆ ಎಲ್ಲಿದೆ ಜಿರಳೆ ಎಂದು. ನೀವು ತಾನೇ ಹಿಟ್ ಹುಡುಕುತ್ತಾ ಇರೋದು ಎಂದಳು. ನಾನು ತಲೆ ಜಜ್ಜಿಕೊಂಡು, ನಾನು ನೋಡುತ್ತಾ ಇರೋದು ನನ್ನ ಲೇಖನದ ಹಿಟ್ಸ್ ಗಳನ್ನ ಎಂದಾಗ, ಓ ಕರ್ಮ ನಿಮಗೆ ಒಂದು ಕೆಲಸ ಇಲ್ಲ ಎಂದರೆ, ಎಲ್ಲರೂ ಹಾಗೇನಾ? ಎಂದು ಬೈದು, ಮುಖ ತೊಳೆದುಕೊಂಡು ಬಂದು ಟೀ ಮಾಡಲು ಅನುವಾದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು....


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತರ್ಲೆ ಮಂ(ಗ)ಜನ ತಮಾಷೆಗಳು ...

ನಾವೆಲ್ಲರೂ ಮಂಜನ ಮನೆಗೆ ಊಟಕ್ಕೆ ಹೋಗಿದ್ದೆವು. ಮಂಜನ ಮನೆಗೆ ಮಂಜನ ತಂಗಿ ಶಾಂತಲಾ ತನ್ನ ಮಕ್ಕಳು ಸಂಕೇತ ಮತ್ತು ಶರತ ಜೊತೆ ಬಂದಿದ್ದಳು.

ಮಂಜ ನಿನಗೆ ಏನೇನು? ಬರುತ್ತೆ, ಶಾಲೆಯಲ್ಲಿ ನಿಮ್ಮ ಟೀಚರ್ ಏನೇನು ಹೇಳಿದ್ದಾರೆ ಎಂದು ಅಳಿಯ ಸಂಕೇತನಿಗೆ ಕೇಳಿದ.
ಅದಕ್ಕೆ ಸಂಕೇತ ಅವರಿಗೆ ಟೀಚರ್ ಅನ್ನಬಾರದು ಅವರು ಮಿಸ್ ಎಂದ.
ಮಿಸ್ ಅಂದರೆ ಇನ್ನೂ ಮದುವೆ ಆಗಿಲ್ಲವಾ? ಎಂದ.
ಪಾಪ ಆರು ವರ್ಷದ ಸಂಕೇತನಿಗೆ ಏನು? ತಿಳಿಯಬೇಕು. ಅವರ ಅಮ್ಮ ಶಾಂತಾ ಮದುವೆ ಆಗಿದೆ ಕಣೋ ಎಂದಳು. ನಿನಗೆ ಎರಡನೆ ಮದುವೆ ಮಾಡಿಕೊಳ್ಳುವ ಆಸೆ ಏನೋ? ನೋಡಿ ಅತ್ತಿಗೆ ಎಂದು ಅವನ ಹೆಂಡತಿಗೆ ಹೇಳಿದಳು.
ಆಯಿತು ಏನೇನು ಹೇಳಿದ್ದಾರೆ ಸಂಕೇತ ನಿಮ್ಮ ಮದುವೆಯಾದ ಮಿಸ್ ಎಂದು ಮಂಜ ಕೇಳಿದ.
ಬಾ ಬಾ ಬ್ಲ್ಯಾಕ್ ಶೀಪ ಹಾವಿ ಎನಿ ಹುಲ್ಲ ಎಂದ ತೊದಲುತ್ತಾ ಹೇಳಿತು.
ಎಲ್ಲಾ ಅರ್ಥ ಆಯಿತು. ಆದರೆ, ಕೆಲವು ಬಿಟ್ಟು ಎಂದ ಮಂಜ. ಬಾ.. ಬಾ.. ಎಂದು ಏನನ್ನು ಕರೆದೆ . ಹಾವಿಗಾ? ಮತ್ತೆ ಅದಕ್ಕೆನು ಗೊತ್ತು ಹುಲ್ಲ ಇದೆಯೋ ಇಲ್ಲವೋ ಎಂದು ತಮಾಷೆಗೆ ಕೇಳಿದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೆಂಡತಿ ಹೆಸರು ಬಸವ್ವ ....

ನೋಡುತ್ತಿದ್ದ ಟಿ ವಿ ಬಂದು ಮಾಡಿದ ನನ್ನ ಬಿ ವಿ. ನಾಳೆ ದೀಪಾವಳಿ, ಬೆಳಗ್ಗೆ ಬೇಗ ಏಳಬೇಕು ಎಂದು ಆಜ್ಞೆ ಹೊರಡಿಸಿದಳು. ಬೆಳಗ್ಗೆ ಬೇಗ ಎದ್ದು ನಾನೇ ಟೀ ಮಾಡಲು ಅನುವಾದೆ. ದೇವರ ಮುಂದೆ ಇಟ್ಟ ಸಕ್ಕರೆ ಟೀ ಮಾಡುವ ಪಾತ್ರೆಗೆ ಸುರಿದೆ. ಅಷ್ಟರಲ್ಲಿ ನನ್ನ ಮಡದಿ ರೀ ಅದರಲ್ಲಿ ಇರುವೆ ಇತ್ತು ಹಾಗೆ ಹಾಕಿದಿರಾ? ಎಂದಳು. ಇರಲಿ ಬಿಡೆ ಕಣ್ಣು ಸ್ವಚ್ಛ ಆಗುತ್ತೆ ಎಂದೆ. ಓss.. ಹಾಗಾ, ಟೀ ಕುಡಿದ ಮೇಲೆ, ಇರುವೆ ಕಣ್ಣು ಸ್ವಚ್ಛ ಆಗುತ್ತಾ?. ಅದಕ್ಕೆ ಇರಬೇಕು ನಾನು ಅದನ್ನು ಓಡಿಸಿದರು, ಅಲ್ಲೇ ಸಕ್ಕರೆ ಸವಿಯುತ್ತಾ ಇತ್ತು. ಲೇ ನಾನು ಹೇಳಿದ್ದು ನಮ್ಮ ಕಣ್ಣು ಸ್ವಚ್ಛ ಆಗುತ್ತೆ ಅಂತ ಎಂದೆ. ಅದು ಸರಿ ಅನ್ನಿ, ನಿಮ್ಮ ಕಣ್ಣು ಸ್ವಚ್ಛ ಆಗಬೇಕು. ನೀವು ಇರುವೆ ಹಾಕಿಕೊಂಡು ಟೀ ಮಾಡಿಕೊಳ್ಳಿ. ನಾನು ಬೇರೆ ಟೀ ಮಾಡಿಕೊಳ್ಳುತ್ತೇನೆ ಎಂದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಕಾಶ ಬುಟ್ಟಿ...ಜೋಕುಮಾರನ ಹೊಟ್ಟೆ

ಆಕಾಶ ಬುಟ್ಟಿ... ಅಪ್ಪನ ಹೊಟ್ಟೆ ..ಎಂದು ಮಡದಿ,ಮಗ ಆಡಿಕೊಳ್ಳುತ್ತಾ ಇದ್ದರು. ನನಗು ಹಾಗೆ ಅನ್ನಿಸಿತು. ಕೋಪದಿಂದ ಈ ಹೊಟ್ಟೆ ಕತ್ತರಿಸಿ ಒಗೆದು ಬಿಡಬೇಕು ಎಂದು. ಎಷ್ಟೇ ಆದರೂ ನನ್ನ ಹೊಟ್ಟೆ ತಾನೇ?. ದಿನಾಲೂ ಬೇಗ ಎದ್ದು ವಾಕಿಂಗ್ ಹೋಗಬೇಕು ಎಂದು ಯೋಚಿಸುತ್ತಿದ್ದೆ. ಆದರೆ ಸೂರ್ಯನಿಗಿಂತ ಬೇಗ ಎದ್ದರೆ, ಸೂರ್ಯನ ಕರ್ತವ್ಯ ನಿಷ್ಟೆ ನಾನು ಹಾಳು ಮಾಡಿದ ಪಾಪ ನನಗೆ ಯಾಕೆ ಎಂದು ಸುಮ್ಮನಿದ್ದೆ. ದಿನಾಲೂ ಸೂರ್ಯ ಎದ್ದಮೇಲೆಯಾದರೂ ಏಳಬೇಕು ಎಂದು. ಆದರೆ ನನ್ನ ಕರ್ಮಕ್ಕೆ ಆ ಜ್ಯೋತಿಷಿ ಮನೋಜ ಬೆಳಗಿನ ಜಾವದ ಕನಸು ನನಸು ಆಗುತ್ತೆ ಕಣೋ ಎಂದು ಹೇಳಿದ್ದ. ದಿನಾಲೂ ಬೆಳಗಿನ ಜಾವದಲ್ಲಿ ಯಾವುದಾದರೂ ಒಳ್ಳೆಯ ಸುಂದರಿಯ ಕನಸು, ಇಲ್ಲ ಫಾರಿನ್ ನಲ್ಲಿ ಇದ್ದ ಹಾಗೆ ಕನಸು ಹೀಗೆ ಮಜ.. ಮಜ.. ಕನಸುಗಳು. ಎದ್ದರೆ, ಕನಸು ಹಾಳಾಗುತ್ತೆ ಎಂಬ ಭಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತರ್ಲೆ ಮಂ(ಗ)ಜನ ಪ್ರೇಮ ಪಾಠ ....

ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬರೆದು ಕೊಡುವದು, ಪ್ರೀತಿಯನ್ನು ಅವರ ಪ್ರೇಯಸಿಗೆ ಅರುಹುವದು ಹೀಗೆ ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗುಣವಂತನ ಗರುಡ ರೇಖೆ....

ಕವಿತೆ ಬಗ್ಗೆ ಯೋಚನೆ ಮಾಡುತ್ತಾ ಆಫೀಸ್ ನಿಂದ ಮನೆಗೆ ಹೊರಟಿದ್ದೆ. ಮಗನಿಗೆ ಇಷ್ಟ ಎಂದು ಗೋವಿನ್ ಜೊಳ ಕ್ಷಮಿಸಿ ಅಮೇರಿಕನ್ ಕಾರ್ನ್ ತೆಗೆದುಕೊಂಡು ಹೋದೆ. ಮೊನ್ನೆ ಒಂದು ಮಾಲ್ ನಲ್ಲಿ ಯೂರೋಪಿನ ಸವತೆಕಾಯಿ ಎಂದು ನಮ್ಮ ಧಾರವಾಡದಲ್ಲಿ ಸಿಗುವ ಸವತೆಕಾಯಿ ಇಟ್ಟಿದ್ದರು. 35 ರೂಪಾಯಿ ಒಂದು ಕೆ.ಜಿ ಅದೇ ಧಾರವಾಡದಲ್ಲಿ 8 ರೂಪಾಯಿಗಳು ಮಾತ್ರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!

ನಾನು ಆಫೀಸ್ನಿಂದ ಬರುವ ಸಮಯದಲ್ಲಿ ಚಾಮರಾಜ್ ಪೇಟೇ ಸಮೀಪ ಇರುವ ಹೋಟೆಲ್ ಹೊಕ್ಕೆ. ನಾನು ಇಡ್ಲಿ ತಿನ್ನುತ್ತಾ ಇದ್ದಾಗ ನನ್ನ ಹಿಂದೆ ಇರುವ ವ್ಯಕ್ತಿ ಬಿಸ್ಲೆರಿ ಇದೆಯಾ? ಎಂದು ಕೇಳಿದ. ಅದಕ್ಕೆ ಅಂಗಡಿಯವನು ಇಲ್ಲ ಎಂದ. ಹೋಗಲಿ ಚಟ್ನಿ ಹಾಕಿ ಎಂದು, ಚಟ್ನಿ ಹಾಕಿಸಿಕೊಂಡು ಇಡ್ಲಿ ತಿಂದು ಹೋದ. ನನಗೆ ಆಶ್ಚರ್ಯ ಚಟ್ನಿ ತಿಂದರೆ ಬಾಯಾರಿಕೆ ಹೋಗುತ್ತಾ? ಎಂದು. ಕಡೆಗೆ ಅಲ್ಲೇ ಇದ್ದ ನೀರನ್ನು ಕುಡಿದ. ಮತ್ತೆ ಅವನ ಫೋನ್ ರಿಂಗ್ ಆದ ಹಾಗೆ ಆಯಿತು. "ಹಲ್ಲು" ಎಂದು ಮಾತನಾಡಿದ. ಅಲ್ಲಿಂದ ಉತ್ತರ ಬರಲಿಲ್ಲ. ಅದು ಕರೆ ಆಗಿರದೇ, ಅಲಾರಂ ಆಗಿತ್ತು. ತನ್ನ ಬಳಿ ವಾಚ್ ಇದ್ದರು ನನಗೆ ಟೈಮ್ ಎಷ್ಟು ಎಂದು ಕೇಳಿದ. ಮತ್ತೆ ಅವನಿಗೆ ಒಂದು ಫೋನ್ ಬಂದಿತು. ಅದರಲ್ಲಿ ಯಾವಾಗ ನಾಳೆ ಬರುತ್ತಿಯಾ? ಎಂದು ಕೇಳಿದ. ಬಹುಶಃ ಅವನ ಹೆಂಡತಿಯದು ಎಂದು ಕಾಣುತ್ತೆ. ತಡಬಡಿಸಿ ಹೊರಟು ಹೋದ. ಹೆಂಡತಿ ಅಂದರೆ ಭಯ-ಭಕ್ತಿ ಎಂದು ಕಾಣುತ್ತೆ. ನಾನು ತಿಂಡಿ ತಿಂದು ನನ್ನ ಸ್ಕೂಟರ್ ಏರಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೀರೆಯಲ್ಲಿರುವ ನೀರೆ ....

ನನ್ನ ಮಡದಿ ತುಂಬಾ ಸಂತೋಷದಿಂದ ಇದ್ದಳು. ತವರು ಮನೆಗೆ ಹೋಗುವ ಸಂಭ್ರಮ. ಅವಳು ಇಷ್ಟು ಸಂತೋಷದಿಂದ ಇರುವದನ್ನು ನಾನು ನೋಡಿದ್ದು ಎರಡು ವಾರದ ಹಿಂದೆ ಹೊಸ ಸೀರೆ ಕೊಡಿಸಿದ್ದಾಗ.ಕಾಫೀ ಕುಡಿಯುತ್ತಾ ತುಂಬಾ ಸೀರಿಯಸ್ ಆಗಿ ಪೇಪರ್ ನೋಡುತ್ತಿದ್ದಳು. ಎರಡು ದಿನಗಳ ಹಿಂದೆ ಅಷ್ಟೇ ಮಹಾ ಸಂಗ್ರಾಮ ನಡೆದಿತ್ತು. ನೀನು ತವರು ಮನೆಗೆ ಹೋಗಬೇಡ ಎಂದು ಹೇಳಿದರು ಕೇಳಿರಲಿಲ್ಲ. ಸುಮ್ಮನೇ ಅವಳ ಮೇಲೆ ನನಗೆ ಎಷ್ಟು ಪ್ರೀತಿ ಎಂದು ತೋರಿಸಲು ಈ ಪೂರ್ವನಿಯೋಜಿತ ಸಂಗ್ರಾಮಕ್ಕೆ ನಾಂದಿ ಹಾಡಿದ್ದೇ. ನನಗೂ ಒಳಗೊಳಗೆ ಖುಷಿ, ಒಬ್ಬನೇ ಸಕ್ಕತ್ ಮಜಾ ಮಾಡಬಹುದು ಎಂದು. ಹೆಂಡತಿ ತವರು ಮನೆಗೆ ಹೋಗುತ್ತಾಳೆ ಎಂದರೆ ಯಾರಿಗೆ ತಾನೇ ಖುಷಿ ಇಲ್ಲ ನೀವೇ ಹೇಳಿ. ಇದೆಲ್ಲವೂ ನಮ್ಮ ಮಂಜ ಹೇಳಿ ಕೊಟ್ಟ ಟ್ರಿಕ್ಸ್.ಅದನ್ನು ನನ್ಮಗ ಮಂಜ ಟಿಪ್ಸ್(ಎಣ್ಣೆ ಪಾರ್ಟೀ) ಕೊಟ್ಟ ಮೇಲೆ ಟ್ರಿಕ್ಸ್ ಹೇಳಿಕೊಟ್ಟಿದ್ದ. ಮಂಜ ತನ್ನ ಮಡದಿಗೆ, ಗೊತ್ತು ಆಗಬಾರದು ಎಂದು ಕೆಮ್ಮಿನ ಔಷಧ ಬಾಟಲಿಯಲ್ಲಿ ಬ್ಲ್ಯಾಕ್ ಲೇಬಲ್ ಇಟ್ಟು ಕೊಂಡಿದ್ದಾನೆ. ಸುಮ್ಮನೆ ಕೆಮ್ಮಿದ ಹಾಗೆ ಮಾಡಿ ಅದನ್ನು ದಿನ ಸ್ವಾಹಾ ಮಾಡುತ್ತಾನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ತಲೆ ಹರಟೆ ಶ್ಯಾಮ್ ರಾಯರು....

ಏನ್ರೀ ಕಾಣುತ್ತಾ ಇಲ್ಲ ಎಂದರು. ಹೊಸದಾಗಿ ಎದಿರು ಮನೆಗೆ ಬಂದಿರುವ ಶ್ಯಾಮ್ ರಾಯರು. ನಾನು ಘಾಬರಿ!!, ಆನೆ ಹಾಗೆ ಇರುವ ನಾನೇ ಕಾಣುವಾದಿಲ್ಲವಾ? ಎಂದು. ನನಗೆ ಆಶ್ಚರ್ಯ,ಮತ್ತೆ ಹೇಗೆ ಕಂಡು ಹಿಡಿದರು ನಾನೇ ಎಂದು. ನನಗೆ ಹೇಳಿದರಾ ಅಥವಾ ಬೇರೆ ಮತ್ಯಾರಿಗೋ ಎಂದು ಹಿಂದೆ ನೋಡಿದೆ. ಯಾರು ಇಲ್ಲ. ನಾನೇ ಎಂದು ಖಾತರಿ ಆದ ಮೇಲೆ, ಏನು ಕಾಣಬೇಕಿತ್ತು ರಾಯರೆ ಎಂದೆ. ತುಂಬಾ ತಲೆ ತಿನ್ನೋ ಮನುಷ್ಯ. ಇದೆ ಡೈಲಾಗ್ ಏನಾದರೂ ನನ್ನ ಗೆಳೆಯರ ಸಂಗಡ ಆಗಿದ್ದರೆ, ಸಕ್ಕತ್ ತಮಾಷೆ ಆಗಿರೋದು. ಒಂದು ತರಹ ಕಾಶೀನಾಥ ಫಿಲ್ಮ್ ಡೈಲಾಗ್ ತರಹ. ಬೇಕಾದರೆ ಇನ್ನೊಮ್ಮೆ ಮೊದಲಿನಿಂದ ಓದಿ ನೋಡಿ.

ಮದುವೆ ಆಗಿಲ್ಲ. ಅದಕ್ಕೆ ಇರಬೇಕು ಅಷ್ಟು ಫ್ರೀ ಆಗಿ ಇರುತ್ತಾರೆ. ಯಾರಾದರೂ ಹರಟೆಗೆ ಸಿಕ್ಕರೆ ಸಾಕು ಎನ್ನುವಂತ ಪ್ರಾಣಿ. ಆದರೆ ಹೇಳುವದು ಕೂಡ ಪೂರ್ತಿ ಇರಲ್ಲ. ನಾನು ಸ್ವಲ್ಪ ಫ್ರೀ ಇದ್ದೇ. ಏಕೆಂದರೆ ಮಡದಿ ತವರು ಮನೆಗೆ ಹೋಗಿದ್ದಳು.

ನಿಮಗೆ ನಮ್ಮ ಅಳಿಯ ರೋಹಿತ್ ಗೊತ್ತಾ? ಎಂದರು.
ಇಲ್ಲ ಎಂದೆ.
ಏನು ಡೆಲಿವರೀ ಮಾಡುತ್ತಾನೆ ಗೊತ್ತಾ? ಎಂದರು.
ಓ ಹೇರಿಗೆ ಡಾಕ್ಟರ್ರಾ? ಎಂದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಲ್ಲುಕಿರಿ (ಹಲಕಾ ರೀ...)....ಎಂಬ ಕಿರಿ ಕಿರಿ

ಬೆಳಿಗ್ಗೆ ಬೇಗನೆ ಎದ್ದು, ಬಚ್ಚಲ ಮನೆಗೆ ಹಲ್ಲು ಉಜ್ಜಲು ಹೋದೆ. ನನಗಿಂತಲೂ ಬೇಗನೆ ಎದ್ದು ಚಿಕ್ಕ ಚಿಕ್ಕ ನೊರ್ಜಗಳು(ನೊಣಗಳು) ನನ್ನ ಟೂತ್ ಬ್ರಶ್ ನಿಂದ ಹಲ್ಲು ಉಜ್ಜುತ್ತಿದ್ದವು. ಈ ನೊರ್ಜಗಳಿಗೆ ನನ್ನ ಬ್ರಶ್ ಅಂದರೆ ಎಷ್ಟು ಪ್ರೀತಿ. ನನ್ನ ಬ್ರಶ್ ಬಳೀನೆ ಇಟ್ಟಿರುವ ನನ್ನ ಮಗನ ಮತ್ತು ಮಡದಿಯ ಬ್ರಶ್ ಬಿಟ್ಟು ನನ್ನ ಬ್ರಶ್ ಮೇಲೆ ಯಾಕೆ? ಕಣ್ಣು ಎಂದು ಮನಸಿನಲ್ಲೇ ಬೈದು ಬ್ರಶ್ ತೊಳೆದು ಹಲ್ಲು ಉಜ್ಜಿ ಬಂದೆ. ನನ್ನ ಮಡದಿ ಆಗಲೇ ಎದ್ದು ಸ್ನಾನ ಮುಗಿಸಿ ಶ್ರೀರಾಮ ರಕ್ಷಾ ಹೇಳುತ್ತಿದ್ದಳು. ನಾನೇ ಹೋಗಿ ಕಾಫೀ ಮಾಡಲು ಇಟ್ಟು ಪಡಸಾಲೆಗೆ ಬಂದು ಕುಳಿತೆ. ಅಷ್ಟರಲ್ಲಿ ನನ್ನ ಮಡದಿ ತನ್ನ ಎಲ್ಲ ಮಂತ್ರಗಳನ್ನು ಮುಗಿಸಿ ಬಂದು ನನಗೆ ಮಂಗಳಾರತಿ ಮಾಡಲು ಶುರು ಮಾಡಿದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ್ಪೆಶಲ್ ತಿಂಡಿ....

ನಮ್ಮ ನಾಟಿ ವೈದ್ಯರ ಕೃಪಾ ಕಟಾಕ್ಷ(ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು....), ಕ್ಷಮಿಸಿ ಕಾಟದಿಂದ ನನ್ನ ಇದ್ದ ಎಲ್ಲ ಬಿಳಿ ಕೂದಲುಗಳು ಉದುರಿ ಬರಿ ಕರಿ ಕೂದಲುಗಳು ಉಳಿದಿದ್ದವು. ಇದ್ದ ಕರಿ ಕೂದಲುಗಳು ತುಂಬಾ ದೂರ ದೂರ ಗುಂಪು ಗುಂ‌ಪಾಗಿ ಇದ್ದವು. ಕೆಲವರು ನನ್ನನ್ನು ಅರ್ಚಕ ಎಂದು ತಿಳಿದು ಕೇಳಿದ್ದು ಉಂಟು. ಮತ್ತೆ ಕೆಲವರು ಏನಪ್ಪಾ ಈಗ ಮುಂಜಿವೆ ಆಯಿತಾ ಮದುವೆ ಆದ ಮೇಲೆ ಎಂದು ನನ್ನ ಕೆಲ ಮಿತ್ರರು ಅಪಹಾಸ್ಯ ಮಾಡಿದ್ದು ಉಂಟು. ಸಧ್ಯ ಯಾರು ಈಗ ಜವಳ ಆಯಿತಾ ಎಂದು ಕೇಳಲಿಲ್ಲ. ಇದರಿಂದ ಮುಕ್ತಿ ಪಡೆಯುವ ಸಲುವಾಗಿ ಇದ್ದ ಕರಿ ಕೂದಲುಗಳನ್ನು ಉದ್ದವಾಗಿ ಬೆಳಸಿ, ಅದರಿಂದ ನನ್ನ ತಲೆಯಲ್ಲಿ ಇದ್ದ ಖಾಲಿ ಜಾಗಗಳನ್ನೂ ತುಂಬಿದ್ದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏರ್ ಟೆಲ್ ಹೊಸಾ ಸೇವೆ - ಗೌಡಪ್ಪನಿಗಾಗಿ ಒಂದನ್ನ ಒತ್ತಿ

ಬೆಳಗ್ಗೆ ಎಲ್ಲಾ ಕೆರೆತಾವ ಕಾರ್ಯ ಮುಗಿಸಿಕೊಂಡು ನಿಂಗನ ಚಾ ಅಂಗಡಿ ತಾವ ಪೇಪರ್ ಓದ್ತಾ ಕೂತಿದ್ವಿ. ಅಟ್ಟೊತ್ತಿಗೆ ಸುಬ್ಬ ಏದುರಿಸನಾಗೆ ಓಡಿ ಬಂದು, ಗೌಡ ಎಲ್ರಲಾ ಅಂದ. ಇಲ್ಲೇ ಕೆರೆತಾವ ಹೋಗಿರಬೇಕು ನೋಡಲಾ ಅಂದ್ವಿ. ಇಲ್ಲ ಕಲಾ ಎಲ್ಲೂ ಕಾಣ್ತಾ ಇಲ್ಲ ಅಂದ. ಯಾಕಲಾ ಗಾಬರಿಯಾಗಿದೆಯಾ. ಲೇ ಗೌಡನ ಹೆಂಡರಿಗೆ ಸಾನೇ ಹುಸಾರಿಲ್ಲ. ಆಸ್ಪತ್ರಾಗೆ ಒಯ್ಯಬೇಕು. ಅದಕ್ಕೆ ಗೌಡಪ್ಪ ಎಲ್ಲಿದಾನೆ ಹೇಳ್ರಲಾ ಅಂದ ಸುಬ್ಬ. ನೋಡಲಾ ಅವನತಾವ ಏರ್ ಟೆಲ್ ಮೊಬೈಲ್ ಐತೆ. ಅದ್ರಾಗೆ ಯಾರಾದರೂ ಮಿಸ್ ಆದ್ರೆ ಹುಡಕೋಡೋ ವ್ಯವಸ್ಥೆ  ಹೊಸದಾಗಿ ಐತೆ ಕಲಾ. ನನ್ನ ಬಳಿ ಮೊಬೈಲ್ ಇಲ್ಲ ಅಂದಾ ಸುಬ್ಬ. ತೊಗಳಲ್ಲಾ ನಿಂಗನ ಮೊಬೈಲು ಅಂದು ಚಾ ಅಂಗಡಿ ನಿಂಗನ ಮೊಬೈಲ್ ಕೊಟ್ಟೆ. ಲೇ ಬರೇ 2ರೂಪಾಯಿ ಮಾತ್ರ ಕರೆನ್ಸಿ ಐತೆ ಕನ್ರಲಾ ಅಂದ ನಿಂಗ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನಗೆ ಮದಿರೆ ಬೇಡ ಸ್ವಾಮಿ....

ಶ್ಯಾಮ್ ಮೊದಲು ತುಂಬಾ ಹುಂಬನಂತೆ ವರ್ತಿಸುತ್ತಿದ್ದ. ಮದುವೆ ಆದ ಮೇಲೆ ತುಂಬಾ ಸುಧಾರಿಸಿದ್ದಾನೆ. ಒಂದು ದಿನ ಶ್ಯಾಮ್ ಹೆಂಡತಿ ಊರಲ್ಲಿ ಇರಲಿಲ್ಲ. ಹೀಗಾಗಿ ನನಗೆ ಮತ್ತು ಮಂಜನಿಗೆ ವಿಶೇಷ ಆಹ್ವಾನ ಇತ್ತು. ಇಬ್ಬರು ಸೇರಿ ಬಾಡಿಗೆ ೯೦ ಎಣ್ಣೆ ಹಾಕಿಸಿ ಹೊರಟೆವು. ನಮ್ಮ ಬಾಡಿಗೆ ಅಲ್ಲ... ಅದು ಬೈಕ್ ಬಾಡಿಗೆ....:). ನಮ್ಮ ಬಾಡಿಗೆ ಶ್ಯಾಮ್ ಮನೇಲಿ ವಿಶೇಷ ವ್ಯವಸ್ಥೆ ಇತ್ತು. ಮೊದಲನೆ ಬಾರಿ ಶ್ಯಾಮ್ ತನ್ನ ಹೆಂಡತಿನ ಬೇರೆ ಊರಿಗೆ ಮದುವೆಗೆ ಕಳುಹಿಸಿದ್ದ. ಅವಳಷ್ಟೇ ಅವನು ಅವಳನ್ನು ತುಂಬಾ ಪ್ರೀತಿಸುತ್ತಿದ್ದ. ಅವಳ ಜೊತೆ ಇದ್ದಾಗ ಎಂದು ಕುಡಿದಿಲ್ಲ. ಅದಕ್ಕೆ ಕಾರಣ ಅವಳ ಮೇಲಿನ ಪ್ರೀತಿಯಿಂದ.

ಶ್ಯಾಮ್ ಮನೆಗೆ ಬಂದೆವು. ಶ್ಯಾಮ ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದ್ದ. ಕೆಲ ಹನಿ ಹೊಟ್ಟೆಗೆ ಇಳಿದ ಮೇಲೆ, ನಮ್ಮ ಮಂಜಿನ ಹನಿಗಳು (ಮಂಜನ ಮಾತುಗಳು) ಶುರು ಆದವು. ಮಂಜ ಎಡಬಿಡದೆ ಮಾತನಾಡುತ್ತಿದ್ದ.ಮಂಜನ ಸರದಿ ಮುಗಿದ ಮೇಲೆ,ಶ್ಯಾಮ್ ತನ್ನ ಹೆಣ್ಣು ನೋಡುವ ಶಾಸ್ತ್ರದ ಬಗ್ಗೆ ಹೇಳಹತ್ತಿದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನೇಲಿ ಇಲಿ.... ಬೀದಿಲಿ ಬೀದಿ ಇಲಿ(ಹೆಗ್ಗಣ) ....

ಏನೋ ಬರೀತಾ ಕುಳಿತಿದ್ದೆ. ನನ್ನವಳು ರೀ ಬೀChiಗೆ ಅಂದಳು. ನನಗೆ ಅಂತಹ ದೊಡ್ಡ ಹಾಸ್ಯ ಸಾಹಿತಿಗೆ ಹೋಲಿಸುತ್ತಿದ್ದಾಳೆ ಎಂದು ತುಂಬಾ ಖುಷಿಯಿಂದ ನನ್ನಷ್ಟಕ್ಕೆ ನಾನೇ ಭೇಷ್.. ಭೇಷ್... ಎಂದು ಹೇಳಿಕೊಳ್ಳುತ್ತ. ನಾನು ಅಷ್ಟು ದೊಡ್ಡ ಎಂದು ಬಾಯಿ ತೆಗೆಯುವ ಮೊದಲೇ ಅಡುಗೆ ಮನೆಯಿಂದ ಬಂದ ನನ್ನ ಮಡದಿ ರೀ ಈ ಬಾರಿ ಉಡುಪಿಗೆ ಹೋದಾಗ ಬೀಚ್ ಗೆ ಹೋಗೋಣ ಎಂದಳು. ನಾನು ಮುಂದೆ ಹೇಳುವದನ್ನು ನಿಲ್ಲಿಸದಿದ್ದರೆ ನಾನೇ ಅಪಹಾಸ್ಯ ಆಗಿಬಿಡುತ್ತಿದ್ದೆ. ಆಯಿತು ಎಂದು ಹೇಳಿ ಮತ್ತೆ ಬರೆಯುತ್ತಾ ಕುಳಿತೆ. ಏನೋ ಬರೀತಾ ಇದ್ದ ಹಾಗಿದೆ ರಾಯರು ಎಂದಳು. ನಾನು ಬರೆಯುತ್ತಿರುವ ಲೇಖನದ ಬಗ್ಗೆ ಸ್ವಲ್ಪ ವಿವರವಾಗಿ ಹೇಳಲು ಅನುವಾದೆ. ಅಷ್ಟರಲ್ಲಿ ಅವಳ ಮೊಬೈಲ್ ರಿಂಗ್ ಆಯಿತು. ನಾನು ಕಾಯುತ್ತಾ ಕುಳಿತೆ ಬರೋಬ್ಬರಿ ಅರ್ಧ ಘಂಟೆ ಮಾತನಾಡಿದ್ದಳು. ಮತ್ತೆ ಅಡುಗೆ ಮನೆಗೆ ಹೊರಟು ಹೋದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಂಗೇಜ್ಮೆಂಟ್ (ಯಂಗ್ ಏಜ್ ಮೆಂಟ್)

ಟಿವಿ ಇದ್ದರೆ ನಿಮಗೆ ನನ್ನ ಮಾತೆ ಕಿವಿಗೆ ಬೀಳುವದಿಲ್ಲ ಎಂದು ಬೈದು ಕೊಳ್ಳುತ್ತಿದ್ದಳು. ನಾನು ನೋಡುತ್ತಿದ್ದ ಸಿನಿಮಾದಲ್ಲಿ ಹೀರೊ ಇಬ್ಬರು ಹೆಂಡತಿಯರನ್ನು ಮದುವೆ ಆಗಿದ್ದ. ನನಗೆ ಒಂದೇ ಸಂಭಾಳಿಸಲು ಆಗುತ್ತಿಲ್ಲ. ಇವನು ಎರಡೆರಡು ಸಂಭಾಳಿಸುತ್ತಾನಲ್ಲ ಭೇಷ್... ಭೇಷ್ .. ಎಂದೆ. ಸಿನಿಮಾಕ್ಕೂ ಮತ್ತೆ ನಿಜ ಜೀವನಕ್ಕೂ ತುಂಬಾ ವ್ಯತ್ಯಾಸ. ರೀssss.. ಪ್ರಕಾಶ್ ಮಾಮಾ ಫೋನ್ ಮಾಡಿದ್ದರು, ತುಂಬಾ ಖುಷಿಯಲ್ಲಿ ಇದ್ದರು ಎಂದಳು ಮಡದಿ. ಅದು ಹೇಗೆ ಹೇಳುತ್ತಿ ಅವರೇನು ನಿನಗೆ ಕಾಣಿಸುತ್ತರಾ? ಫೋನ್ ನಲ್ಲಿ ಎಂದೆ. ಅವರ ಮಾತು ಕೇಳಿ ರೀ .. ಎಂದಳು. ನಿಮ್ಮನ್ನು ಕೇಳಿದರು ಎಂದಳು. ರೀ ಒಂದು ಸಂತೋಷದ ವಿಚಾರ ಮಾಮಾನ ಎಂಗೇಜ್ಮೆಂಟ್ ಅಂತೆ. ನಾನು ತುಂಬಾ ಖುಶಿಯಿಂದ ಹೌದಾ? ಎಂದೆ. ಪಾಪ ತುಂಬಾ ಕಷ್ಟ ಪಟ್ಟು ೬ ಜನ ಅಕ್ಕ - ತಂಗಿಯರ ಮದುವೆ ಮಾಡಿದ್ದಾರೆ. ಕಡೆಗೂ ಅವರ ಮದುವೆ ಫಿಕ್ಸ್ ಆಗಿದ್ದು ಕೇಳಿ ತುಂಬಾ ಖುಷಿ ಆಯಿತು ಎಂದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸುಬ್ಬನ ಹನಿ...(ಹಣಿ...) ಮೂನ್

ಈ ಜನಗಳಿಗೆ ಬುದ್ದೀನೇ ಇಲ್ಲ? ಎಂದು ಬೈದು ಕೊಳ್ಳುತ್ತ ನಿಂತಿದ್ದ ನಮ್ಮ ಸುಬ್ಬ. ಏನು? ಯಾರು ಏನು ಕೇಳಿದರು ಎಂದು ಕೇಳಿದೆ.ಈ ಜನಗಳಿಗೆ ಮದುವೆ ಅಂದ್ರೆ ತಮಾಷೆಯಾಗಿಬಿಟ್ಟಿದೆ. ಯಾರೇ ಇರಲಿ ಭೇಟಿಯಾದ ಮೇಲೆ ಕೇಳುವ ಮೊದಲನೆ ಪ್ರಶ್ನೆ ಮದುವೆ ಆಯಿತಾ?. ಅದು ಆದ ಮೇಲೆ ಎರಡನೆ ಪ್ರಶ್ನೆ ಮಕ್ಕಳು ಎಷ್ಟು? ಎಂದು. ಏನು ಮಕ್ಕಳ ಎಂದರೆ... ಮಕ್ಕಳ ಆಟವ? ಎಂದು ಕೇಳಿದ ಸುಬ್ಬ. ಆ ಹೌದು ಮಕ್ಕಳು ಏಕೆ? ಆಗಿಲ್ಲ ನಿನಗೆ,ಮಕ್ಕಳಾಗಿಲ್ಲ ಎಂದು ಹೋಗಿ ನಮ್ಮ ಜ್ಯೋತಿಷ್ಯ ಪ್ರವೀಣ ಮನೋಜನ್ನಾದರೂ ಕೇಳೋ ಎಂದು ಹೇಳಿದ ನಮ್ಮ ಮಂಜ. ಲೇ ಎಂದು ಕೆಕ್ಕರಿಸಿ ಮಂಜನನ್ನು ನೋಡಿದ. ಏಕೆ? ಎಂದಿರೋ, ಮದುವೆ ಆಗಿ ಒಂದು ವಾರ ಆಗಿಲ್ಲ ಕೂಡ. ಅಗಲೆ ಮಕ್ಕಳು ಎಲ್ಲಿಂದ ಬರಬೇಕು ನಮ್ಮ ಸುಬ್ಬನಿಗೆ. ಇನ್ನೂ ಅಕ್ಕ-ಪಕ್ಕದ ಮನೆ ಮಕ್ಕಳನ್ನು ತನ್ನ ಮಕ್ಕಳು ಎಂದು ಹೇಳಬೇಕಷ್ಟೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು....

"ಕಟ್... ಕಟ್ ..." ಸ್ವಲ್ಪ ಸಮಯದ ನಂತರ ಮತ್ತೆ ಅದೇ "ಕಟ್ ಕಟ್". ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ "ಕಟ್... ಕಟ್.... " ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯ.ನನ್ನ ಖುಷಿಗೆ ಪಾರವೇ ಇರಲಿಲ್ಲ. "ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ". ನಾನು ಮರೆತು ಬಿಟ್ಟೆ ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ ಅಂಕಲ್ ಶಬ್ದ ಕೇಳಿ ಬಾಡಿ ಬೆಂಡಾಗಿತ್ತು .ಆಯಿತು ಎಂದು ಹೇಳಿ ಬಾಗಿಲು ಮುಚ್ಚಿ ಕೊಂಡೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತರ್ಲೆ ಮಂ(ಗ)ಜನ ಸಂಗೀತ ಸಾಂಗತ್ಯ....

ಮಂಜನಿಗೆ ಆಗ ಸುಮಾರು ೮ ವರ್ಷ ಇರಬೇಕು. ನಮ್ಮ ಮಂಜನ ಮನೆಗೆ ಬಾಡಿಗೆಗೆ ರಂಗಣ್ಣ ಶಾಸ್ತ್ರಿ ಬಂದಿದ್ದರು. ತುಂಬಾ ದಿನಗಳಿಂದಲೂ ಮನೆ ಖಾಲಿ ಇತ್ತು. ಮನೆಯ ಕೀಲಿ ಕೈ ಕೊಟ್ಟು ಬಾ ಎಂದು ಮಂಜನ ತಂದೆ ಮಂಜನಿಗೆ ಹೇಳಿದ್ದರು. ಮಂಜ ರಂಗಣ್ಣ ಶಾಸ್ತ್ರಿಯವರ ಮನೆಗೆ ಹೋದ. ಅಲ್ಲಿ ಅವರನ್ನು ನೋಡಿ ಘಾಬರಿಯಾಗಿ ಅವರ ಕೈಗೆ ಕೀಲಿ ಕೈ ಕೊಟ್ಟ. ಅದನ್ನು ಕೆಳಗೆ ಇಟ್ಟರು. ಮಂಜ ಘಾಬರಿಯಿಂದ ಮನೆಗೆ ಬಂದು ಒಂದು ಈರುಳ್ಳಿ ತೆಗೆಂದುಕೊಂಡು ಶಾಸ್ತ್ರಿಗಳ ಮನೆಗೆ ಓಡಿದ. ಮಂಜನ ಅಪ್ಪ ಏನು ಆಯಿತು ನೋಡು ಅವನು ಏಕೆ? ಹೀಗೆ ಓಡುತ್ತಿದ್ದಾನೆ ಎಂದು ಹೆಂಡತಿಗೆ ಕೇಳಿದರು. ಅಷ್ಟರಲ್ಲಿ ಮಂಜ ಈರುಳ್ಳಿ ತೆಗೆದು ಅವರ ಮೂಗಿಗೆ ಹಿಡಿದ. ರಂಗಣ್ಣ ಶಾಸ್ತ್ರಿಗಳು "ಅಕ್ಷಿ ಅಕ್ಷಿ .. ಎಂದು ಸೀನುತ್ತ, ಮಂಜನಿಗೆ ಎರಡು ಹೊಡೆಯುತ್ತಾ ಇದ್ದರು. ಅಷ್ಟರಲ್ಲಿ ಮಂಜನ ತಾಯಿ ಬಂದು ಏಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೆನ್ನೆ ಮೇಲೆ ಪ್ರೇಮದುಂಗುರ ....

ರೀ ಇದೇನು ಇಷ್ಟು ಕೆಟ್ಟದಾಗಿ ಹಾಡುತ್ತೀರಿ? ಎಂದು ನನ್ನನ್ನು ವ್ಯಂಗ್ಯ ಮಾಡಿದಳು ನನ್ನ ಮಡದಿ. ನಾನೇನು ನಿನ್ನ ಹಾಗೇ ಲತಾ ಅಥವಾ ಆಶಾ ಅಂತ ಮಾಡಿದ್ದೀಯ ಎಂದು ಕೇಳಿದೆ.ಅಲ್ಲಾ ಹಾಡೋ ಹಾಡಿನ ಸಾಹಿತ್ಯನಾದರೂ ಸರಿಯಾಗಿ ಹಾಡಬೇಡವ ಎಂದಳು. ನಾನೇನು ತಪ್ಪು ಹಾಡಿದೆ ಎಂದು ಕೇಳಿದೆ. ಮತ್ತೆ ಏನು "ಕೋಗಿಲೆಯು ನಾಟ್ಯದಲ್ಲಿ ತಾನೇ ತಾನೆಂದಿತು" ಎಂದರೆ ಹೇಗೆ ಎಂದಳು. ಅದಕ್ಕೆ ಆನೆಯಂತಹ ನಾನೇ ನಾಟ್ಯ ಮಾಡುವಾಗ ಖುಶಿಯಿಂದ ಇದ್ದಾಗ ಕೋಗಿಲೆ ನಾಟ್ಯ ಮಾಡಬಾರದ. ಏನು ನಾಟ್ಯ ಅನ್ನುವದು ಬರಿ ನವಿಲೀಗೆ ಮತ್ತು ನನ್ನವಳಿಗೆ ಮಾತ್ರ ಸಂಭಂದಿಸಿದ್ದ ಎಂದು ಕೇಳಿದೆ. ನಾನು 9 ವರ್ಷದ ಹಿಂದೆ ಹಾಡಿದರೆ ನನ್ನ ಜೊತೆ ಸಾತ ಕೊಡುತ್ತಿದ್ದಳು ಪಕ್ಕದ ಮನೆ ಪ್ರೇಮ ಎಂದೆ. ನಿನಗೆ ರಾಗ ತಾಳ ಬಿಟ್ಟು ನನ್ನ ಮೇಲೆ ರಾಗ ದ್ವೇಷದಿಂದ ನೋಡುತ್ತೀ ಎಂದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಹಾ ಶ್ಯಾಮ್ ಮದುವೆ ಅಂತೆ ...

ನಮ್ಮ ಪಕ್ಕದ ಮನೆ ಶ್ಯಾಮ್ ತುಂಬಾ ಹೆಣ್ಣುಗಳನ್ನು ನೋಡಿದ್ದ. ಮದುವೆ ಮಾತ್ರ ಕನಸಿನ ಮಾತಾಗಿತ್ತು. ಕಡೆಗೆ ಬೇಸತ್ತು ಮದುವೆ ಬೇಡ ಎನ್ನುವ ಸ್ತಿತಿಗೆ ಬಂದು ತಲುಪಿದ್ದ. ಪರಿಸ್ತಿತಿ ಇಷ್ಟು ಗಂಭೀರ(ಗಮ್ - ಬೀರ ದಾಸ ಆಗಿದ್ದ.) ಆಗುತ್ತೆ ಎಂದು ಅವರ ಮನೆಯಲ್ಲಿ ಯಾರು ಎಣಿಸಿರಲಿಲ್ಲ. ಅವನ ಅಜ್ಜಿ ಮಾತ್ರ ಅವನಿಗೆ ಪೀಡಿಸುತ್ತಲೇ ಇದ್ದರು. ಮದುವೆ ಆದರೇನೇ ಸುಖದಿಂದ ಇರಬಹುದಾ?. ಇಲ್ಲದಿದ್ದರೆ ಇಲ್ಲವಾ ಎಂದು ನನಗೆ ಶ್ಯಾಮ್ ಕೇಳಿದ. ನಾನು ಏನು? ಹೇಳಬೇಕು ಎಂದು ಯೋಚಿಸಹತ್ತಿದೆ. ಅದಕ್ಕೆ ಅವರ ಅಜ್ಜಿ ನೀನಾದ್ರೂ ತಿಳಿ ಹೇಳಿ ಇವನಿಗೆ ಎಂದರು. ಮೊದಲೇ ನನ್ನ ಮತ್ತು ನನ್ನ ಮಡದಿಯ ಜಗಳವಾಗಿ ಮಾತು ಬಿಟ್ಟು ಒಂದು ವಾರ ಆಗಿದೆ ಎಂದು ಮೊದಲೇ ಶ್ಯಾಮ್ ಗೆ ಗೋತ್ತಿತ್ತು.

ಶ್ಯಾಮ್ ನಿನಗೆ ಮದುವೆ ಏಕೆ ಬೇಡಪ್ಪ ಎಂದೆ.
ಮದುವೆಗೆ ವಧು ಬೇಕು ತಾನೇ ಎಂದ. ಶ್ಯಾಮ್ ಅಂತ ಹೆಸರು ಇಟ್ಟ ಮಾತ್ರಕ್ಕೆ ಹೆಣ್ಣುಗಳು ಏನು ತರಕಾರಿ ಅಂಗಡಿಯಲ್ಲಿ ಸಿಗುವ ತರಕಾರಿನಾ?. ಮತ್ತೆ ನೋಡಿ ಅಜ್ಜಿ ಬರಿ ಮದುವೆ ಆಗು... ಮದುವೆ ಆಗು ... ಎಂದು ಪೀಡಿಸಿದರೆ ಎಂದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತರ್ಲೆ ಮಂ(ಗ)ಜನ (ನವ) ಗೃಹ ಪ್ರವೇಶ ....

"ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು" ಎಂಬ ಗಾದೆ ಇದೆ. ಹಾಗೆ ನಮ್ಮ ಮಂಜನಿಗೂ ಒಂದು ಮನೆ ತೆಗೆದು ಕೊಳ್ಳಬೇಕೆಂಬ ಆಸೆ ಇತ್ತು. ನಾನು ಅವನಿಗೆ ಬೆಂಗಳೋರಿನಲ್ಲೇ ಒಂದು ಫ್ಲಾಟ್ ತೆಗೆದುಕೋ ಎಂದು ಹೇಳಿದೆ. ಅದಕ್ಕೆ ನಮ್ಮ ಮಂಜ ಅದನ್ನು ತೆಗೆದು ಕೊಂಡರೆ ಅದು ನಮ್ಮ ಸುಬ್ಬನ ಫ್ಲೈಟ್ (2012 ರ ಸುಬ್ಬನ ಫ್ಲೈಟ್.... ) ಹಾಗೆ ಆಕಾಶದಲ್ಲಿ ನೇತ ನಾಡೂವದು ಬೇಡ ಎಂದು ಕಡೆಗೂ ಹುಬ್ಬಳ್ಳಿಯಲ್ಲಿ ಒಂದು ಮನೆ ಖರೀದಿ ಮಾಡಿದ. ಅದಕ್ಕೆ ನಮ್ಮ ಸುಬ್ಬ ಮಂಜನಿಗೆ ಹುಂಬ ಕಡೆಗೂ ಹುಂಬ ಹಳ್ಳಿಲಿ ಮನೆ ಖರೀದಿ ಮಾಡಿದ ಎಂದು ಸತಾಯಿಸುತ್ತಿದ್ದ. ಲೇ ಅದು ಹುಂಬ ಹಳ್ಳಿ ಅಲ್ಲ ಎಂದರೆ, ನಮ್ಮ ಸುಬ್ಬ ಮೊದಲು ಅದು ಹೂ ಬಳ್ಳಿ ಅಂತ ಇತ್ತು. ಈಗ ನಮ್ಮ ಮಂಜ ಹೋದ ಮೇಲೆ ಅದು ಹುಂಬ ಹಳ್ಳೀನೇ ಎಂದ.


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಟ ..ವಟ... ಸಾವಿತ್ರಿ

ಮಂಜ ತುಂಬಾ ವಧುಗಳನ್ನು ನೋಡಿದ್ದ. ಕೆಲವು ವಧುಗಳು ಇವನ ತರ್ಲೆ ಪ್ರಶ್ನೆಗಳಿಂದ ಇವನನ್ನು ವರಿಸಲಿಲ್ಲ. ಮತ್ತೆ ಕೆಲವನ್ನು ಇವನೇ ಬೇಡವೆಂದ. ಆದರೆ ಇವನು ಮಾತ್ರ ಹೆಣ್ಣು ನೋಡುವ ಶಾಸ್ತ್ರ ಮಾತ್ರ ಬಿಟ್ಟಿರಲಿಲ್ಲ. ಮತ್ತೊಂದು ದಿನ ಹೆಣ್ಣು ನೋಡಲು ಹೋಗಿದ್ದ. ಆ ದಿನ ಅವನಿಗೆ ಹೆಣ್ಣಿಗೆ ಏನು ಪ್ರಶ್ನೆ ಕೇಳಬೇಡ ಎಂದು ಅವರಪ್ಪ ತಕೀತ ಮಾಡಿದ್ದರು. ಎಲ್ಲರೂ ಹೆಣ್ಣಿನ ಮನೆಗೆ ಹೋದೆವು. ಮಂಜ ಮನೆ ಮುಂದೆ ನಿಂತ ಒಂದು ಕಾರ್ ಮೇಲೆ ಬರೆದ ಎನ್ನುವ ಸಂತೂವನ್ನು ಜಂತು ಎಂದು ಓದಿದ.ಆಗ ಅವರಪ್ಪ ಮತ್ತೆ ಅವನಿಗೆ ಎಚ್ಚರಿಸಿದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪರಿಸರ ಪ್ರೇಮಿ ಸೀನ ಹಾಗೂ ಗಿಳಿ


" ಬ್ಯಾಡ ಅಂದ್ರೆ ಬ್ಯಾಡ"  ಗಂಡ ಹೆಂಡತಿ ಯರ ಮಧ್ಯೆ ಏನೋ ಜಗಳ ಅಂತ ಕಾಣತ್ತ್
"ಒಳಗೆ ಬರಲಕ್ಕಾ?" ಕೇಳಿದೆ.
"ಬನ್ನಿ ಬನ್ನಿ ಅಣ್ಣ " ಕರೆದಳು ಸೀನನ ಅರ್ಧಾಂಗಿ.
"ಏನಾ ಗಲಾಟೆ" ಕೇಳಿದೆ ಸೀನನ್ನ.
"ಎಂತದಿಲ್ಯಾ, ಮೊಬಾಯಿಲ್ ಬೇಕಂಬ್ರ್ .....ಈ ಹಳ್ಳಿಯಲ್ ನಮ್ಮ ಮನಿಯಗೇ ಗುಬ್ಬಚ್ಚಿ ಸಂಸಾರ ಇಪ್ಪದ್, ಮತ್ತೆಲ್ಲೂ ಇಲ್ಲೆ ಗೊತ್ತಾ ಮತ್ತೆಲ್ಲಾರೂ ನಾವ ಮೊಬಾಯಿಲ್ ತಕಂಡ್ರೆ ಅಷ್ಟೇ ಅದೂ ಓಡಿ ಹೋತ್ ಅಷ್ಟೇ"
"ಹಂಗಾರೆ ಒಂದ್ ಗಿಳಿ ತಕಂಡ್ ಬನ್ನಿ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಗ್ಯ ರಾಗಿ ಭೋಗ್ಯ ಮ್ಯಾಗಿ!

"ಒಂದು ಬಾರಿ ಉಣ್ಣುವವನು ಯೋಗಿ .ಎರಡು ಬಾರಿ ಉಣ್ಣುವವನು ಜೋಗಿ . ಮೂರು ಬಾರಿ ಉಣ್ಣುವವನು ರೋಗಿ . ನಾಲ್ಕು ಬಾರಿ ಉಣ್ಣುವವನನ್ನ ಹೊತ್ಕೊಂಡು ಹೋಗಿ." ಎಂಬ ಉಕ್ತಿ ಇದೆ ಆದರೆ ನಮ್ಮ ಮನೇಲಿ ನಾಲ್ಕು ಬಾರಿ ಮಾಡೋದು ಬರಿ ಮ್ಯಾಗಿ!....

ಮ್ಯಾಗಿ ಈಗ ನಮ್ಮನೆಯ ಮಹಾಪ್ರಸಾದವಾಗಿ ಪರಿಣಮಿಸಿದೆ . ಮೊದ ಮೊದಲು ಈ ಮ್ಯಾಗಿಯನ್ನು ನಾನು ಕಂಡಿದ್ದು 8 ವರ್ಷಗಳ ಹಿಂದೆ ನನ್ನ ಗೆಳಯ ಶ್ರೀಧರ ಬೆಂಗಳೊರಿನಲ್ಲಿ ಒಂದು ಹೋಟೆಲ್ಲಿಗೆ ಕರೆದುಕೊಂಡು ಹೋಗಿದ್ದಾಗ. ಒಳಗೆ ಹೋಗುವ ಮೊದಲೇ ಇದು ಸಸ್ಯಾಹಾರಿ ಹೋಟೆಲ್ ಹೌದೋ ಅಲ್ಲವೋ ಎಂದು ದೃಡಪಡಿಸಿಕೊಂಡ ಮೇಲೆ ಒಳಗೆ ಹೋಗಿದ್ದು. ಏಕೆಂದರೆ , ಶ್ರೀಧರ ನಿಜವಾಗಿಯೂ ಜನಿವಾರದ ಹುಡುಗನೇ ಆಗಿದ್ದರು ಅನಂತರ Engineering ಕಲೆತು ಮುಗಿಸುವಸ್ಟರಲ್ಲೇ ಎಲ್ಲ ಜಾನುವಾರಗಳನ್ನು ಜಗಿದಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ತಿಳಿ ಹಾಸ್ಯ