ಬ್ಲಾಗ್ ಬರಹ

ಕ್ವಿಲ್ಲಿಂಗ್ - ಟೀನ್ಸ್ ನ ತ್ರಿಲ್ಲಿಂಗ್ ಹವ್ಯಾಸ

    ಆಗ ಒಂದು ಕಾಲವಿತ್ತು. ಶಾಲೆಯ ಸಮವಸ್ತ್ರ ಬಿಟ್ಟು, ಬಣ್ಣ ಬಣ್ಣ ಬಟ್ಟೆ ಧರಿಸಬಹುದಾದಂತ ಕಾಲೇಜು ಸೇರಿದ ಕೂಡಲೇ, ಎಷ್ಟೋ ತಿಂಗಳುಗಳ ಪಾಕೆಟ್ ಮನಿ ಶೇಕರಿಸಿ ಇಟ್ಟುಕೊಂಡು ಓಲೆ ಕೊಳ್ಳುತ್ತಿದ್ದೆವು. ಆಗ ನಾಣ್ಯಗಳಲ್ಲಿ, ವುಲ್ಲನ್, ಕ್ರೋಶ ದಲ್ಲಿ ವಿವಿಧ ಸರ ಓಲೆ ಮಾಡಿದ್ದರೂ, ಈಗಿನಷ್ಟು ಕಡಿಮೆ ಖರ್ಚಿನಲ್ಲಿ  ಬಗೆ ಬಗೆ ಬಣ್ಣಗಳಿಂದ ಕೂಡಿದ ಆಭರಣಗಳನ್ನು ಮನೆಯಲ್ಲೇ ಮಾಡಿಕೊಳ್ಳುವಷ್ಟು ಸೌಲಭ್ಯ ಇರಲಿಲ್ಲ. ಈಗ ಇದಕ್ಕೆ ಸಾಮಗ್ರಿಗಳೊಡನೆ, ಮಾಡುವ ವಿಧಾನವು ಬಹಳ ಸುಲಭವಾಗಿ ಎಲ್ಲೆಡೆ ದೊರೆಯುತ್ತಿರುವುದರಿಂದ, ನಮ್ಮ ಟ್ರಬಲ್-ಟೀನ್ಸ್ ರನ್ನು ಟಿವಿ, ನೆಟ್ ಬಿಟ್ಟು ಮನೆಯಲ್ಲೇ ಅನೇಕ ಹವ್ಯಾಸಗಳಲ್ಲಿ ತೊಡಗಿಸುವ ಆಕರ್ಷಣೀಯ/ಉಪಯುಕ್ತ ಹವ್ಯಾಸ ಕ್ವಿಲ್ಲಿಂಗ್.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮುಚ್ಚಿದ ಬಾಗಿಲು

ವನ ಕೋಣೆಯ ಬಾಗಿಲು ಮುಚ್ಚಿಯೇ ಇರುತ್ತಿತ್ತು. ಬೆಳಗ್ಗೆ ಸುಮಾರು ಏಳು ಗಂಟೆಯ ಹೊತ್ತಿಗೆ ಯಶು ಆತನ ಕೋಣೆಯ ಬಳಿ ಹಾಲು ತೆಗೆದುಕೊಂಡು ಬರುತ್ತಿದ್ದಳು. ಅವನ ಕೋಣೆಯ ಬಾಗಿಲು ತೆರೆಯಲು ಯಾವುದೇ ಕಾಲಿಂಗ್ ಬೆಲ್‌ನ ಆವಶ್ಯಕತೆ ಇರುತ್ತಿರಲಿಲ್ಲ. ಯಶು ಧರಿಸಿದ್ದ ಕಾಲ್ಗೆಜ್ಜೆಯ ಸದ್ದು ಕೇಳಿದರೆ ಸಾಕು ಬಾಬು ಬಾಗಿಲು ತೆರೆಯುತ್ತಿದ್ದ. ಯಶುವಿನ ಕೈಯಿಂದ ಹಾಲಿನ ಪಾತ್ರೆ ತೆಗೆದುಕೊಂಡು ಅದನ್ನು ಇನ್ನೊಂದು ಪಾತ್ರೆಗೆ ಹಾಕಿ ಖಾಲಿ ಬಾಟಲಿಯನ್ನು ಆಕೆಗೆ ಕೈಗಿತ್ತು ಮತ್ತೆ ಬಾಗಿಲು ಮುಚ್ಚಿಕೊಳ್ಳುತ್ತಿದ್ದ. ಸುಮಾರು 25ರ ಹರೆಯದ ಆ ಯುವಕ ಏನು ಮಾಡುತ್ತಿದ್ದಾನೆ?  ಎಂದು ಯಾರಿಗೂ ಗೊತ್ತಿರಲಿಲ್ಲ. ಯಶು ಏನಾದರೂ ಪ್ರಶ್ನೆ ಕೇಳಿದರೆ 'ಹಾಂ.. ಹೂಂ' ಎಂಬ ಉತ್ತರವನ್ನು ಮಾತ್ರ ನೀಡುತ್ತಿದ್ದ.

ಅಂದ ಹಾಗೆ ಬಾಬು 'ಕಯ್ಯೂರ್‌' ಎಂಬ ಈ ಗ್ರಾಮಕ್ಕೆ ಯಾಕಾಗಿ ಬಂದನೆಂದು ಯಾರಿಗೂ ಈವರೆಗೆ ಗೊತ್ತಿಲ್ಲ. ಮಾತಿಗೆ ಸಿಗುವ ಹುಡುಗ ಅವನಲ್ಲ. ಕಾಣಲು ಸ್ಪುರದ್ರೂಪಿ, ಉದ್ದನೆಯ ಪೈಜಾಮ ಹಾಕಿ ಎಡ ತೋಳಲ್ಲಿ ಒಂದು ಜೋಳಿಗೆ ಸಿಕ್ಕಿಸಿ ಕೆಲವೊಂದು ದಿನ ಆ ಊರಲ್ಲಿ ಒಂದಿಷ್ಟು ತಾಸು ಸುತ್ತಾಡುವುದನ್ನು ಬಿಟ್ಟರೆ ಬೇರೇನು ಮಾಡುತ್ತಿದ್ದಾನೆ ಎಂದು ಯಾರೂ ಕೇಳುತ್ತಿರಲಿಲ್ಲ. ಇರಲಿ ಬಿಡಿ, ನಮಗೆ ಯಾಕೆ ಈ ಉಸಾಬರಿ ಎಂದು ಹೇಳುವವರೇ ಬಹುತೇಕ ಮಂದಿ. ಏನೋ ಪ್ರಾಜೆಕ್ಟ್ ಮಾಡಲಿಕ್ಕೆ ಬಂದಿದ್ದಾನಂತೆ ಅವ ಎಂದು ಯಾರೋ ಹೇಳಿದ್ದರು.

ಆದರೆ ಬಾಬು ಇಲ್ಲಿಗೆ ಬಂದು ತಿಂಗಳಾಯ್ತು. ಯಾರಲ್ಲೂ ಹೆಚ್ಚಿಗೆ ಮಾತುಕತೆಯಿಲ್ಲ. ಆತನ ಕೋಣೆಯ ಕಿಟಿಕಿ ಬಾಗಿಲು ಸದಾ ಮುಚ್ಚಿಕೊಂಡೇ ಇರುತ್ತದೆ. ಯಶು ಹಾಲು ತಂದಾಕ್ಷಣ ಮಾತ್ರ ಒಂದೆರಡು ನಿಮಿಷ ಬಾಗಿಲು ತೆರೆದು ಕೊಳ್ಳುತ್ತದೆ. ಮತ್ತೆ...ಅದೇ ಮುಚ್ಚಿದ ಬಾಗಿಲು.

ಅಪರೂಪಕ್ಕೊಮ್ಮೆ ಕಣ್ಣೇಟ್ಟನ್‌ರ  ಚಹಾದಂಗಡಿಗೆ ಬಂದು ಕಟ್ಟನ್ ಚಾಯ ಕುಡಿಯುವುದನ್ನು ಬಿಟ್ಟರೆ ಆತ ಬೇರೆ ಕಡೆಯಿಂದ ಯಾವುದೇ ವಸ್ತು ಖರೀದಿಸುವುದನ್ನು ಈವರೆಗೆ ಯಾರೂ ಕಂಡವರಿಲ್ಲ. ಇವನೇನು ಗಾಳಿ ಮಾತ್ರ ಸೇವಿಸಿ ಬದುಕುತ್ತಾನೆಯೇ? ಅಥವಾ ಮನೆಯೊಳಗೆಯೇ ಎಲ್ಲಾ ವಸ್ತುಗಳನ್ನು ಉತ್ಪಾದಿಸುವ ಯಂತ್ರವಿದೆಯೇ? ಎಂದು ಜನರಾಡಿಕೊಳ್ಳುತ್ತಿದ್ದರು. ಆತನ ಕೋಣೆಯ ಬಳಿ ಯಶು ಬಿಟ್ಟರೆ ಬೇರೆ ಯಾರೂ ಸುಳಿದಾಡುತ್ತಿರಲಿಲ್ಲ. ಯಶು ಅಂದರೆ ಬಾಬು ಬಾಡಿಗೆಗೆ ಇದ್ದಾನಲ್ಲಾ ಆ ಮನೆಯ ಮಾಲೀಕರ ಮಗಳು. ಇಗಷ್ಟೇ ಹತ್ತನೇ ಕ್ಲಾಸು ಮುಗಿಸಿದ್ದಾಳೆ. ಯಶುಗೆ ಬಾಬುವನ್ನು ಕಂಡರೆ ಏನೋ ಆಕರ್ಷಣೆ. ಆದರೆ ಅವನು ಒಂದು ದಿನವಾದರೂ ಯಶುವಿನ ಮುಖ ಸರಿಯಾಗಿ ನೋಡಿರಲೇ ಇಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.9 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಬಿಎಂಟಿಸಿ ಬಸ್ಸು ಪ್ರಯಾಣ: ಅನುಭವಗಳ ಬುತ್ತಿಯಿಂದ...

ಯಾವತ್ತೂ ನಮಗಾಗಿ ಪ್ರಾರ್ಥಿಸಬಾರದಂತೆ, ಇನ್ನೊಬ್ಬರಿಗೆ ಪ್ರಾರ್ಥಿಸಬೇಕು ಅಂತಾರಲ್ಲ...ನಾವೂ ಹಾಗೆ ಇನ್ನೊಬ್ಬರಿಗಾಗಿ ಪ್ರಾರ್ಥಿಸುತ್ತೇವೆ. ಅದ್ಯಾವಾಗ ಗೊತ್ತಾ? ಬಸ್ ಸ್ಟಾಪ್ ನಲ್ಲಿ ನಿಂತಿರುವಾಗ...ಬಸ್ ಸ್ಟಾಪ್ ನಲ್ಲಾ? ಆಶ್ಚರ್ಯ ಆಯ್ತಾ? ಹೌದಪ್ಪಾ...ಪಿಜಿಯಿಂದ ಅವಸರವಸರವಾಗಿ ಓಡಿಕೊಂಡು ಬಂದು ಹರಿಶ್ಚಂದ್ರ ಘಾಟ್! ಬಸ್ ಸ್ಟಾಪ್ ನಲ್ಲಿ ಶಿವಾಜಿನಗರಕ್ಕೆ ಹೋಗುವ ಬಸ್ ಗಾಗಿ ಕಾಯುತ್ತಿರುವಾಗ ಅಲ್ಲಿನ ಜನಸಂಖ್ಯೆ ಜಾಸ್ತಿಯಿದ್ದರೆ...ದೇವರೆ ಇವರೆಲ್ಲ ಮೆಜೆಸ್ಟಿಕ್ ಗೋ, ಮಾರ್ಕೆಟ್ ಕಡೆಗೋ ಹೋಗುವವರಾಗಿರಲಿ...ಶಿವಾಜಿನಗರಕ್ಕೆ ಹೋಗುವ ಬಸ್ ನವರಂಗ್ ನಿಂದ ಬರುವಾಗಲೇ ಜನರನ್ನು ತುಂಬಿಸಿಕೊಂಡು ಬರ್ತಿದೆ. ಇನ್ನು ಇವರೆಲ್ಲರೂ ಅದೇ ಬಸ್ ಗೆ ಬಂದ್ರೆ ಪಡ್ಚ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಪದಿಗರಿಗೆ ಬೈ ಬೈ

ಸಂಪದಿಗರಿಗೆ,
ನಾನು ಊರಿಗೆ ಹೋಗ್ತಿದ್ದೀನ್ರೀ ಅಲ್ಲಲ್ಲ ಬರ್ತಿದ್ದೀನಿ ನಿಮ್ಮುನ್ನೆಲ್ಲಾ ಮಿಸ್ ಮಾಡ್ಕೋತೀನಿ. 30ದಿನ ನಿಮ್ಮಜತೆ ಮಾತಾಡಕ್ಕಾಗಲ್ಲ. ಏಕಂದ್ರೆ ನಾನು ಬೆಂಗ್ಳೂರಲ್ಲೇ ಇರ್ತೀನಿ. ಬರ್ಲಾ ಬೈ ಬೈ.

ಸೀತ ಆರ್. ಮೊರಬ್.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಬ್ಲಾಗ್  ಬರಹ