ಮಲೆನಾಡು

ಮರಳಿ ನೆನಪಿಗೆ..

ನನ್ನ ಮಾವನ ಮಗನ ಮದುವೆಗೆ ಇನ್ನೂ ೨ ದಿನ ಬಾಕಿ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾವನ ಮಗ ಮಾತ್ರವಲ್ಲದೆ ನನ್ನ ಇನ್ನೂ ಇಬ್ಬರು ಆಪ್ತ ಗೆಳೆಯರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಆಫೀಸ್‌ನಲ್ಲಿ ರಜೆ ಸಿಗುವುದು ತೀರಾ ಕಷ್ಟವಾದರೂ ನನ್ನ ಕೆಲಸದ ರೀತಿ ರಿವಾಜುಗಳನ್ನರಿತ ನನ್ನ ಮ್ಯಾನೇಜರ್ ನನಗೆ ರಜೆ ಅಂತ ಕೊಡದಿದ್ದರೂ, ಇಂಟರ್ನೆಟ್ ನೆಟ್ವರ್ಕ್ ಇರುವಂಥ ಜಾಗದಿಂದ ಕುಳಿತು ಕೆಲಸ ಮಾಡಲು ಅನುಮತಿ ನೀಡಿದ್ದಳು. ಒಂದೇ ವಾರದಲ್ಲಿ ಮೂರು ಮದುವೆ ಇದ್ದ ಕಾರಣ ನಾಲ್ಕು ದಿನಗಳ ಮುಂಚೆಯೇ ನಮ್ಮೂರ ಕಡೆ ಧಾವಿಸಿದ್ದೆ. ಮಾವನ ಮನೆ ಇರುವುದು ತೀರ್ಥಹಳ್ಳಿಯಲ್ಲಿ. ಅಲ್ಲೇ ಕುಳಿತು ಸಂಜೆಯ ನಂತರ ಅಮೇರಿಕ ಕಚೇರಿ ವೇಳೆಯಲ್ಲಿ ಕೆಲಸ ಮಾಡಬೇಕಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಲೆನಾಡಿನ factಗಳು... ಭಾಗ-1

ಮಲೆನಾಡಿನ ಕೆಲವು ವಸ್ತುಸ್ಥಿತಿಗಳನ್ನು ಹಾಸ್ಯಭರಿತ ಧಾಟಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೆ ಇಷ್ಟವಾದರೆ ಸರಿ, ಇಲ್ಲದಿದ್ದರೆ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ,

1. ಭಟ್ರ ಮನೆ ಕೊಟ್ಟಿಗೆಯಲ್ಲಿ ನೇತು ಹಾಕಿರೋ ಚೀಲದಲ್ಲಿ ಕೋಳಿ ಕೂಗ್ತಿದೆ ಅಂದ್ರೆ, ಅವತ್ತು ಭಟ್ರ ಮನೇಲಿ ಹರಕೆ ಇದೆ ಅಂತ ಅರ್ಥ!

2. ದೀಪಾವಳಿ ಬಿಟ್ಟು ಬೇರೆ ಟೈಮಲ್ಲಿ ಪಟಾಕಿ ಅಥ್ವಾ ಈಡಿನ ಸೌಂಡು ಕೇಳ್ತು ಅಂದ್ರೆ, ಯಾರೋ ಹೊಗೆ ಹಾಕಿಸ್ಕೊಂಡಿದಾರೆ ಅಂತ ಅರ್ಥ!

3. ಮನೇಲಿ ನೆಲದ ಮೇಲೆ ರಕ್ತದ ಕಲೆ ಆಗಿದೆ ಅಂದ್ರೆ, ಯಾರೋ ತೋಟದಿಂದ ಇಂಬ್ಳ ಹತ್ತಿಸ್ಕೊಂಡು ಬಂದಿದಾರೆ ಅಂತ ಅರ್ಥ!

4. ಯಾರ್ದಾದ್ರೂ ಮನೇಲಿ ಹುರುಳಿ ಸಾರು ಆಗಿದೆ ಅಂದ್ರೆ, ಹೂಟೆ ಶುರುವಾಯ್ತು ಅಂತ ಅರ್ಥ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬದಲಾಗುತ್ತಿರುವ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣ

      ಮಲೆನಾಡಿನ   ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ.  ಈಗಾಗಲೇ  ಬಹುಶ:  ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ ಕಳೆಯುವುದರ ಒಳಗೆ ಈ ಅಡಿಕೆ ಕೊಯ್ಲಿನ ಚಟುವಟಿಕೆಗಳು ಆರಂಭಗೊಳುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ರಾಘವೇಂದ್ರ ಶರ್ಮಾ ತಲವಾಟ ಮತ್ತವರ ಜೇನು ಕೃಷಿ

ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ ಮಾಲೀಕರು ಮಲೆನಾಡ ವೈವಿಧ್ಯವನ್ನು ತಮ್ಮ ಬ್ಲಾಗಿನಲ್ಲಿ ಚಿತ್ರಿಸುತ್ತಾ ಬಂದ, ಸಂಪದಿಗರಾದ ರಾಘವೇಂದ್ರ ಶರ್ಮ ತಲವಾಟರು. ಅನೇಕ ಮಲೆನಾಡಿನ ವೈವಿಧ್ಯಮಯ ಖಾದ್ಯಗಳನ್ನು ಮಳೆಗಾಲದಲ್ಲಿ ಉಣಬಡಿಸಿ ನಮ್ಮ ನಾಲಿಗೆ ಚಪಲವನ್ನು ಹೆಚ್ಚಿಸಿದ್ದಾರೆ.

ಕೃಷಿಯಲ್ಲಿ ತೊಡಗಿರುವ ಶರ್ಮಾರವರು ಜೇನುಸಾಕಣೆಯನ್ನೂ ಮಾಡುತ್ತಿದ್ದಾರೆ. ನಮಗೋಸ್ಕರ ತಮ್ಮ ಮನೆಯಲ್ಲಿನ ಜೇನುಪೇಟ್ಟಿಗೆಯನ್ನು ಹೊತ್ತುತಂದು ನಮಗೆ ತೋರಿಸಿದ್ದಕ್ಕೆ ಅವರಿಗೊಂದು ಧನ್ಯವಾದ.

ರಾಘವೇಂದ್ರ ಶರ್ಮಾ ತಲವಾಟರು
Raghavendra Talavaata

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
Subscribe to ಮಲೆನಾಡು