ಅಡುಗೆ

ಒಂದು ಊರಿನ ಕಥೆ

ಒಂದೂರಿತ್ತಂತೆ.  ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ ರುಚಿಃ ಅಂತ ಅದೇನೋ ಹೇಳ್ತಾರಲ್ಲ ಹಾಗೆ.  ಎಲ್ರೂ ಅವರವರ ಮನೆಯಲ್ಲಿ ಅಡಿಗೆ ತಕ್ಕ ಮಟ್ಟಿಗೆ ಚೆನ್ನಾಗೇ ಮಾಡಿ ಊಟ  ಬಡಿಸ್ತಿದ್ದರಂತೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಳಿಯೋಗರೆ ಮತ್ತು ಬಿಸಿಬೇಳೆ ಹುಳಿಯನ್ನ ...

 ತಲೆಬರಹ ನೋಡಿ, ಇದೇನು, ಅಡಿಗೆ ಶಾಲೆ ಶುರು ಮಾಡ್ತೀರಾ ಅಂದ್ರಾ? ಮಾಡಿದ್ರೆ ತಪ್ಪೇನಿಲ್ಲ, ಆದ್ರೆ ಸದ್ಯಕ್ಕಂತೂ ಯೋಚನೆ ಇಲ್ಲ ಅದರದ್ದು. ಇನ್ನು ಮುಂದೆ ಯಾವಾಗಲಾದ್ರೂ ಮಾಡೋಹಾಗಿದ್ರೆ ನಿಮಗೆ ಹೇಳೋದಂತೂ ಮರೆಯೋದಿಲ್ಲ! ಈಗ ಈ ಹಳೇ ಒಂದು ವಿಷಯದ ನೆನಪು ನನ್ನ ತಲೆಯೊಳಗೆ ಹೊಕ್ಕಿತ್ತು. ಅದಕ್ಕೇ ಅಂತಾನೇ ಈ ಪುಳಿಯೋಗರೆ ಮತ್ತೆ ಬಿಸಿಬೇಳೆ ಹುಳಿಯನ್ನದ ಪುರಾಣ ಹೇಳೋಕೆ ಹೊರಟಿದ್ದು.
 ನನಗಂತೂ ಅನ್ನವಿಲ್ಲದೇ ಒಂದು ಇದ್ದರೂ ಏನೋ ಕಳೆದುಕೊಂಡ ಹಾಗಾಗುತ್ತೆ. ದಿನಾಲೂ ತಿನ್ನೋ ಆ ಅನ್ನಕ್ಕೆ ಅಷ್ಟು ಸತ್ವ ಇರುತ್ತೆ ಅಂತ ಗೊತ್ತಾಗಿದ್ದು ನಾನು ಮಹಾರಾಷ್ಟ್ರದಲ್ಲಿ ಕೆಲಸ ಮಾಡಲು ಹೋದಾಗಲೇ. ಇನ್ನೂ ಬಾಡಿಗೆ ಮನೆ ಸಿಕ್ಕಿರಲಿಲ್ಲ. ಯಾವುದೋ ಒಂದು ಹಾಸ್ಟೆಲ್ ನಲ್ಲಿ ವಾಸ, ಮತ್ತೆ ಒಂದು ಮೆಸ್ ನಲ್ಲಿ ಊಟ. ಆ ಮೆಸ್ ನಡೆಸುವಾಕೆಯಂತೂ ಚಪಾತಿ ಪಲ್ಯವನ್ನು ಬಡಿಸುವಾಗ ಅಷ್ಟೇನೂ ಹಿಂದೆಗೆಯದಿದ್ದರೂ, ಅನ್ನ ಬಡಿಸಲು ಮಾತ್ರ ಕಪಿಮುಷ್ಟಿಯೇ ಸರಿ! ಚಮಚಾಗಳ ಲೆಕ್ಕದಲ್ಲಿ ಅನ್ನ ಹಾಕಿದರೆ ದಿನಾ ಅನ್ನ ತಿನ್ನುವಂತಹವರಿಗೆ ಅದೆಷ್ಟು ಹಿಂಸೆ ಆಗಬಹುದು ಅಂತ ಗೊತ್ತಾಗಿದ್ದೇ ಆಗ. ಒಂದು ೩-೪ ವಾರ ಗಳಲ್ಲಿ ಮನೆ ಬಾಡಿಗೆಗೆ ಸಿಕ್ಕಿ, ನಾನು ನನ್ನ ಕೈಯಡುಗೆಯನ್ನೇ ತಿನ್ನುವಂತಾದ ಮೇಲೆ ಬದುಕಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (8 votes)
To prevent automated spam submissions leave this field empty.

ಮುಳ್ಳು ಹರಿವೆ

ಹರಿವೆ ಸೊಪ್ಪು ಅಡುಗೆಗೆ ಬಳಸುತ್ತಾರೆ. ಆದರೆ ಇದು ಮುಳ್ಳು ಹರಿವೆ. ಹರಿವೆ ಸೊಪ್ಪಿನಂತೆಯೇ ಇರುವ ಎಲೆಗಳ ನಡುವೆ ಮುಳ್ಳು ಬೆಳೆದಿರುವುದು ಕಾಣಸಿಗುತ್ತದೆ.

 

ಪ್ರಶ್ನೆ: ಮುಳ್ಳು ಹರಿವೆಯನ್ನೂ ಅಡುಗೆಗೆ ಬಳಸುವುದುಂಟೋ?

 

ಚಿತ್ರ: ಹರಿ ಪ್ರಸಾದ್ ನಾಡಿಗ್, ೬/೬/೨೦೧೧

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹುರುಳಿಸಾರು+ಸ್ವಲ್ಪ ಬೆಣ್ಣೆ+ಒಂದು ಹಪ್ಪಳ= ಅದ್ಭುತ ರುಚಿ!

ಹುರುಳಿ ಕಟ್ಟಿನ ಸಾರು ಮಲೆನಾಡಿಗರಿಗೆ ಮುಂಗಾರಿನ ಸಮಯದಲ್ಲಿ ಸಾಮಾನ್ಯ ಅಡುಗೆ. ದಿನವಿಡೀ ಗದ್ದೆಯನ್ನು ಹೂಟೆ (ಉಳುಮೆ) ಮಾಡುವ ಎತ್ತುಗಳಿಗೆ ಹುರುಳಿಯನ್ನು ಬೇಯಿಸಿ ಕೊಡುತ್ತಾರೆ. ಎತ್ತುಗಳಿಗೆ ಹೆಚ್ಚಿನ ಶಕ್ತಿ ಸಿಗಲಿ ಹಾಗೂ ಥಂಡಿಯ ವಾತಾವರಣದಿಂದ  ತೊಂದರೆಯಾಗದಿರಲಿ ಎಂಬುದೇ ಹುರುಳಿ ನೀಡುವ ಉದ್ದೇಶ. ಹಾಗೆ ಹುರುಳಿಯನ್ನು  ಬೇಯಿಸುವಾಗ ಸಿಗುವ ಕಂದು ರಸವೇ ಈ ಹುರುಳಿ ಕಟ್ಟು. ದಿನವಿಡೀ ತಣ್ಣನೆಯ ನೀರಿನಲ್ಲಿರುವ ಎತ್ತುಗಳ ಪಾದ ಮೆದುವಾಗಿರುತ್ತದೆ ಎಂಬ ಕಾರಣಕ್ಕಾಗಿ ಬಿಸಿಯಾಗಿರುವ ಹುರುಳಿಕಟ್ಟನ್ನು ಎತ್ತುಗಳ ಕಾಲಿಗೆ ಕೊಯ್ಯುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಹುರುಳಿಕಟ್ಟು ಸಾರು ಮಾಡುವುದಕ್ಕೆ ಬಳಕೆಯಾಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅಡುಗೆಯ ಸಂಭ್ರಮ

ಅಮ್ಮ ಅಪ್ಪ ತಿಂಗಳುಗಟ್ಟಲೆ ಟ್ರಿಪ್ ಎಂದುಕೊಂಡು ಹೋದರೆ ನಮಗೆಲ್ಲ ಊಟ ತಿಂಡಿ ಕಥೆ ಮುಗಿಯಿತು. ಹೊರಗೆ ತಿನ್ನುವಂತಿಲ್ಲ, ಮನೇಲಿ ಮಾಡಿಕೊಳ್ಳಲಾಗುವುದಿಲ್ಲ ಎಂಬ ಪರಿಸ್ಥಿತಿ. ಹೊರಗೆ ತಿಂದರೆ ಜ್ವರ ಗ್ಯಾರಂಟಿ, ಮನೇಲಿ ಅಡುಗೆ ಮಾಡುವಷ್ಟು ಸಮಯ ಇಲ್ಲ, ಜೊತೆಗೆ ಸೋಮಾರಿತನ ಎಂದೆಲ್ಲ (ಎಲ್ಲದಕ್ಕಿಂತ ಮಿಗಿಲಾಗಿ ಸರಿಯಾಗಿ ಅಡುಗೆ ಮಾಡೋಕೆ ಬರಲ್ಲ ಅನ್ನೋದು). ಆದರೆ ಈ ಬಾರಿ ಧೈರ್ಯ ಮಾಡಿ ಒಂದು ಗ್ಯಾಸ್ ಸ್ಟೌ ತಂದೇ ಬಿಟ್ಟೆ. ಅಣ್ಣನ ಮನೆಗೆ ಹೋಗಬೇಕಿಲ್ಲದೆ ನಾನೇ ಅಡುಗೆ ಮಾಡಿಕೊಳ್ಳಬಹುದೆಂದು ಸಂತಸದಿಂದ ಬೀಗಿದೆ. ಆದರೆ ಆ ಸ್ಟೌನಲ್ಲಿ ಮೊದಲ ಬಾರಿ ಅಡುಗೆ ಮಾಡಿ ಅದು ಏನೇನೋ ಆದಾಗ ಸಂಭ್ರಮ ಎಲ್ಲ ಕರಗಿ ಹೋಯ್ತು.

ಒಂದೆರಡು ದಿನಗಳಲ್ಲಿ ಮುಂಚಿನಂತೆ at least ತಿನ್ನಲು ಯೋಗ್ಯವಾದ ಅಡುಗೆ ಮಾಡುವಷ್ಟು progress ಸಾಧಿಸಿದೆ. ಕೆಲಸಗಳ ಬ್ಯಾಕ್ ಲಾಗ್ ಉಳಿದವು. ನಿತ್ಯ ಸುಮಾರು ಹೊತ್ತು ಅಡುಗೆ ಮಾಡೋಕೆ ಕಳೆಯೋ ಹಾಗಾಯ್ತು. ಸ್ವಲ್ಪ ದಿನಗಳಲ್ಲಿ ಅಡುಗೆ ಮಾಡುವ ಸ್ಪೀಡು ಉತ್ತಮವಾಯ್ತು. ಹಾಗೆಯೇ ತಿಂಡಿ ಅಮ್ಮ ಮಾಡುವಂತೆಯೇ ಮಾಡಲು ಪ್ರಯತ್ನಿಸಿದೆ. ಸಿಕ್ಕಾಪಟ್ಟೆ ಬೋರು ಹೊಡೆಸಿತು ಸರಿಯಾಗಿ ಬರದೆ. ಒಂದೊಂದು ಸಾರಿ ಮಾಡಿದ ಅಡುಗೆ ತಿನ್ನಲೂ ಬಾರದಂತಾಗಿ ಹೋಟೆಲಿಗೇ ಹೋಗಬೇಕಾಯ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅಮ್ಮ ಮಾಡುವಂತೆಯೇ ಶಾವಿಗೆ ಉಪ್ಪಿಟು ಸುಮಾರು ೮ನೇ ಸಲ ಪ್ರಯತ್ನಿಸಿದೆ. ಜ್ಯಾಕ್ ಪಾಟ್! ಅಮ್ಮ ಮಾಡುವ ಹಾಗೆಯೇ ಬಂದಿತ್ತು! ಸಂಭ್ರಮ ಹೇಳತೀರದು!

ಇಷ್ಟು ದಿನ ಬರದದ್ದು ಈಗೇನು ಅಮ್ಮ ಮಾಡುವಂತೆಯೇ ರುಚಿಯಾಗಿ ಆದದ್ದು? ಕೆಳಗೆ ಅಣ್ಣನ ಮನೆಯಲ್ಲಿ ಅಮ್ಮ ಉಪ್ಪಿಟ್ಟಿಗೆಂದು ರೆಡಿ ಮಾಡಿ ಬಾಟಲಿಯಲ್ಲಿ ತುಂಬಿಟ್ಟಿದ್ದ ಪುಡಿಯೊಂದನ್ನು ತಂದು ಚಿಟುಕಿಸಿದ್ದು, ಅಷ್ಟೇ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಅಡುಗೆ