Skip to main content

ಶನಿವಾರ 21 September 2019

ಇತ್ತೀಚೆಗೆ ಸೇರಿಸಿದ ಪುಟಗಳು

ಪ್ರವಾಸ ಕಥನ

ಅಮೆರಿಕದಲ್ಲಿದ್ದಷ್ಟು ದಿನ, 'ಮಯೂರ' ಪತ್ರಿಕೆಯನ್ನು ಅದೆಷ್ಟು ಬಾರಿ ಓದೀದೆನೋ ದೇವರೇ ಬಲ್ಲ !

ನಾವು ( ನಾನು ಮತ್ತು ನನ್ನ ಶ್ರೀಮತಿ) ಕನ್ನಡ ಪತ್ರಿಕೆಗಳಾದ ಸುಧಾ, ತರಂಗ, ಮಯೂರ, ತುಷಾರ, ಓದುವ ಹವ್ಯಾಸವಿದ್ದವರು. ಬೆಂಗಳೂರಿನಲ್ಲಿದ್ದಾಗ, ಪ್ರಜಾವಾಣಿ, ಕನ್ನಡ ಪ್ರಭ, ವಿಜಯಕರ್ನಾಟಕ, ಡೆಕ್ಕನ್ ಹೆರಾಳ್ಡ್, ಹಿಂದು, ಪತ್ರಿಕೆಗಳು ನಮ್ಮ ಮುಂದೆ ಸುಳಿಯುತ್ತಿದ್ದವು. ಆದರೆ, ಮುಂಬೈನಲ್ಲಿದ್ದಾಗಲಂತೂ  ಉದಯವಾಣಿ, ಕರ್ನಾಟಕ ಮಲ್ಲ, ಟೈಮ್ಸ್ ಆಫ್ ಇಂಡಿಯ ಓದುವುದು ರೂಢಿಯಾಗಿತ್ತು. ಆದರೆ ಅಮೆರಿಕೆಯಲ್ಲಿ ಕನ್ನಡ ಪತ್ರಿಕೆಗಳು ಲಭ್ಯವಾಗದಿದ್ದಾಗ, ಎಂತಮಾಡುವುದು ? ಹಳೆಯ ಪತ್ರಿಕೆಗಳನ್ನೇ ಎಲ್ಲಿಹೋದರಲ್ಲಿ ತೆಗೆದುಕೊಂಡು ಹೋಗಿ ಅತಿಆಸಕ್ತಿಯಿಂದ ಮತ್ತೆ ಮತ್ತೆ, ಓದುವ ಅಭ್ಯಾಸವನ್ನು ಶುರುಮಾಡಬೇಕಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಟೊರಾಂಟೋನಗರದ ಮಧ್ಯೆಯೇ 'ಹೈಪಾರ್ಕ್', ಹತ್ತಿರವೇ 'ಸರೋವರಗಳು', ನಗರದ ಸುತ್ತಲೂ '೩ ನದಿಗ'ಳು !

ಪ್ರಕಾಶ್ ಕೈನಲ್ಲಿ 'ಮೇಪಲ್ ಎಲೆ' ! ನಾನಂತೂ ಅದೆಷ್ಟು ಮರಗಳನ್ನು ನೋಡಿ ಅವುಗಳ ಎಲೆಗಳನ್ನು ಸಂಗ್ರಹಿಸಿದೇನೋ ನನಗೇ ನೆನಪಿಲ್ಲ. ಆ ಎಲೆಗಳನ್ನು ಮನೆಗೆ ತಂದು ಅವನನು ಜೋಪಾನವಾಗಿ ನನ್ನ ದೊಡ್ಡ ಪುಸ್ತಕವೊಮ್ದರಲ್ಲಿ ಇಟ್ಟಿದ್ದೆ. ಆದರೆ ಬರುವಾಗ ಗಡಿಬಿಡಿಯಲ್ಲಿ ಆ ಪುಸ್ತಕ ಮರೆತಿದ್ದೆ. ಇದು ಹೇಗೋ ನನ್ನ ಶ್ರೀಮತಿಗೆ ತಿಳಿದುಹೋಯಿತು. ಅವಳು ಆ ಪುಸ್ತಕವನ್ನು ತನ್ನ ಸೂಟ್ ಕೇಸ್ ನಲ್ಲಿ ಇಟ್ಟಿದ್ದಳು. ನಾನು ಖಿನ್ನನಾಗಿ ವಿಮಾನನಿಲ್ದಾಣದಲ್ಲಿ ನನ್ನ ಎಳೆಗಳ ಪುಸ್ತಕವನ್ನು ಯೋಚಿಸುತ್ತಿದ್ದಾಗ ನನ್ನ ಹೆಂಡತಿ ನಗುತ್ತಿರುವುದು ನನಗೆ ಒಂದು ತರಹದ ಸಮಾಧಾನ ಕೊಟ್ಟಿತು. ಓಹೋ ಆ ಪುಸ್ತಕ ಅವಳ ಬಳಿ ಇದೆ ಎನ್ನುವ ವಿಚಾರ ನನಗೆ ಗೊತ್ತಾಯಿತು. ಮೇಪಲ್ ಎಲೆ ಮತ್ತು ಮೇಪಲ್ ಮರದ ಒಣಗಿದ ಕಾಯಿಗಳು ನನಗೇ ಕೊಟ್ಟ ಮುದ ಅವರರ್ನನೀಯ  !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮ್ಮ ಮಧುರೈ ಮೀನಾಕ್ಷಿ ದೇವಸ್ಥಾನದ ಪ್ರವಾಸ !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಷ್ಪಗಿರಿ ಟ್ರೆಕ್ಕಿಂಗ್: ಮರೆಯಲಾಗದ ಮೂರು ದಿನಗಳು

ಮುಂದುವರಿದ ಭಾಗ...


 


ಪೂರ್ತಿ ಕತ್ತಾಲಾಗಿತ್ತು. ಜಲಪಾತವಾಗಿ ಧಮುಕುತ್ತಿದ್ದ ಹೊಳೆಯನ್ನು ದಾಟಿ ನಾವು ಮುಂದೆ ಹೋಗಬೇಕಾಗಿತ್ತು. ಅಜ್ಜ ಆ ಹೊಳೆಗೆ ಅಡ್ಡಲಾಗಿ ಸ್ಥಳೀಯರು ಒಂದು ಉದ್ದದ ಮರದ ಬಡಿಗೆಯನ್ನ ಅಡ್ಡಲಾಗಿ ಹಾಕಿ ಮಾಡಿಕೊಂಡಿರುವ ಸೇತುವೆಯಿದೆ ಎಂದಿದ್ದರು. ತಡಕಾಡಿ ಹೇಗೋ ಅದರ ಬಳಿ ಹೋದೆವು. ಎಲ್ಲರೂ ಒಟ್ಟಿಗೆ ಹೋಗುವಂತಿರಲಿಲ್ಲ. ತುಂಬಾ ಕತ್ತಲಾಗಿದ್ದರಿಂದ ಒಬ್ಬೊಬ್ಬರೆ ಹೋಗುವುದೂ ಕಠಿಣ ಸವಾಲಾಗಿತ್ತು. ಧೈರ್ಯ ಮಾಡಿ ಹೆಜ್ಜೆಗಳನ್ನು ಮೆಲ್ಲನೆ ತೆಗೆದಿಡುತ್ತಾ ಎರಡೂ ಬದಿಗೆ ಕಟ್ಟಿದ್ದ ತಂತಿಗಳನ್ನಿಡಿದುಕೊಂಡು ಒಬ್ಬೊಬ್ಬರೆ ಹೋದೆವು. ತಳದಲ್ಲಿ ನೀರಿನ ಆಳವೆಷ್ಟು, ಬಿದ್ದರೆ ಗತಿಯೇನು ಎಂದೆಲ್ಲಾ ಯೋಚನೆಗಳು ಮನದೊಳಗೆ ಓಡಾಡ್ತಿದ್ದಿದ್ದು ನಿಜ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಪುಷ್ಪಗಿರಿ ಟ್ರೆಕ್ಕಿಂಗ್: ಮರೆಯಲಾಗದ ಮೂರು ದಿನಗಳು

ಮೊದಲನೆಯ ಮಹಡಿಯಲ್ಲಿ ಒಂದೇ ರೀತಿಯ ಎರಡು ರೂಮುಗಳನ್ನ ನಾಲ್ಕು ಜನ ಸ್ನೇಹಿತರು ಸೇರಿ ಬಾಡಿಗೆಗೆ ತೆಗೆದುಕೊಂಡಿದ್ವಿ. ಯಾಕೋ ಓನರ್ ಕಿರಿಕಿರಿ ಸಹಿಸಲಾಗದೆ ಪದವಿಯ ಎರಡನೆಯ ವರ್ಷ ಅಲ್ಲೇ ಎದುರಿಗಿದ್ದ ಹೆಂಚಿನ ಮನೆಗೆ ಶಿಫ್ಟ್ ಆದೆವು. ಮನೆ ದೊಡ್ಡದಾಗಿದ್ದರಿಂದ ಬಾಡಿಗೆಯ ತಲೆಹೊರೆ ಇಳಿಸಿಕೊಳ್ಳಲು ಜೊತೆಗೆ ಇನ್ನೂ ಎರಡು ಜನ ಸೇರಿಸಿಕೊಳ್ಳುವ ಐಡಿಯಾ ಇದ್ದದ್ದು ನಿಜ. ಆದರೆ, ಮೇಗ್ರಾಜ ಮತ್ತು ಅಕ್ಮಲ್ ಅಲ್ಲೇ ಉಳಿದರು, ಒಂದು ರೂಮು. ಯೋಜನೆ ತಲೆಕೆಳಗಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಪ್ರವಾಸದ ಜೊತೆ ಸಂಪದಿಗರ ಬೇಟಿ

ಕಳೆದ ಶನಿವಾರ ಮತ್ತುಭಾನುವಾರ ಹೊರನಾಡು,ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ ಬೇಟಿ ಮಾಡಲು ಪ್ಲಾನ್ ಮಾಡಿದ್ದು ಅದರಂತೆ ಹೊರೆಟೆವು ಹೊರಡುವುದಕ್ಕೆ ಮುಂಚಿತವಾಗಿ ಹೊರನಾಡಿನ ಸಂಪದಿಗರಾದ ರಾಘವೇಂದ್ರ ನಾವಡರಿಗೆ ಪೋನಾಯಿಸಿ ನನ್ನ ಪರಿಚಯ ಮಾಡಿಕೊಂಡೆ ಅವರ ಸಂತಸದಿಂದ ಹೊರನಾಡಿನಲ್ಲೆ ಶನಿವಾರ ರಾತ್ರಿ ವಾಸ್ತವ್ಯ ಹೂಡಲು ತಿಳಿಸಿದರು ನನಗಂತು ತುಂಬಾನೇ ಖಷಿ ಆಯಿತು ಎಂಗೂ ಸಂಪದದವರನ್ನು ಹೊರನಾಡಿನಲ್ಲಿ ಬೇಟಿ ಮಾಡಬಹುದು ಅಂತ ಅದರಂತೆ ಪ್ಲಾನ್ ಮಾಡಲು ಹೋದ್ರೆ ನನ್ನ ಜೊತೆಗೆ ಪ್ರಯಾಣಿಸಿದ ಗೆಳೆಯರು ಅಲ್ಲಿ ಬೇಡ ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡೋಣ ಎಂದರು ಅದರಂತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕುದರೆಮುಖ ಪರ್ವತ ಚಾರಣ-1

ಮುಂದುವರಿದ ಭಾಗ...ಕಾಡಿಗೆ ಸ್ವಲ್ಪ ಒಳಹೊಕ್ಕೊಡನೆ ಗುಡಿಸಲೊಳ ಕತ್ತಲೆ ಕೋಣೆಗೆ ನುಗ್ಗಿದಂತಾಗಿತ್ತು. ಸಂಜೆ ಸೂರ್ಯನ ಬೆಳಕು ಕಿಟಕಿ ಬಾಗಿಲುಗಳ ಸಂಧಿಯಲ್ಲಿ ಇಣುಕಿದಂತೆ ಮರಗಿಡರಳ ರೆಂಬೆ-ಕೊಂಬೆಗಳ ಮೂಲಕ ನೆಲದಲ್ಲಿ ಚೆಲ್ಲಿತ್ತು. ಕೆಲವರು ಕಣ್ತಪ್ಸಿ ಹೋದ್ರು, ಉದರ ಬಾಧೆ ನೀಗಿಸಿಕೊಳ್ಳಲು. ಕೆಲವರಷ್ಟೆ ಸೌದೆಗಾಗಿ ಮುನ್ನುಗಿದ್ವು. ಕಾಡೊಳಗಿನ ನೀರವತೆ ನಂಗಂತೂ ಭಯ ಹುಟ್ಸಿತ್ತು. ‘ಹೆಚ್ಚು ದೂರ ಹೋಗದ್ ಬೇಡ’ ಎಂದು ಒಬ್ರನ್ನೊಬ್ರು ಎಚ್ಚರಿಸಿಕೊಳ್ತ ಸೌದೆ ಒಟ್ಟು ಮಾಡಿದ್ವಿ. ಒಣಗಿದ್ದ ಸೌದೆ ಒದ್ದೆಯಾಗಿ, ಬೇಜಾನ್ ಸಿಕ್ಕಿದವು!!! ಟೆಂಟಿಗೆ ಉದ್ದನೆಯ ಮೂರು ಕಂಬಗಳು ಬೇಕಾಗಿದ್ವು ಅಷ್ಟೆ. ನನ್ನ ಮನೆಯಿಂದ ಕದ್ದೊಯ್ದಿದ್ದ ಕತ್ತಿ(ಮಚ್ಚು)ಯಿಂದ ಕಂಬ ಕಡ್ಯಾಕೆ ಶುರುಮಾಡಿದ್ಮೇಲೇ ಗೊತ್ತಾಗಿದ್ದು ಆ ಕತ್ತಿ ‘ಸತ್ತವ್ರ ಮೂಗ್ ಕೊಯ್ಯೋಕು ಲಾಯಕ್ಕಿಲ್ಲ’ ಅಂತ. ಎರಡು ಕಂಬ ಹೇಗೋ ಪರ್ದಾಡ್ಕಂಡು ಕಡ್ದು ಕೊನೆಗೆ ಮೂರ್ನೇ ಕಂಬ ಕಡೀಬೇಕಿದ್ದ ಕತ್ತಿನೇ ಕಟ್ಟಾಗ್ ಹೋಯ್ತು. ಮುರಿದ ಕತ್ತೀಲೆ ಹೇಗೋ ಕತ್ರಿಸಿ ಹೊರಗ್ ತಂದ್ವಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕುದರೆಮುಖ ಪರ್ವತ ಚಾರಣ-1

ಇದು 10 ವರ್ಷ ಹಿಂದಿನ ನೆನಪು ಅಷ್ಟೆ!!! (28-10-2000 )


ಆಗಷ್ಟೆ ಪದವಿಗೆ (ಹಾಸನದಲ್ಲಿ) ಕಾಲಿಟ್ಟಿದ್ದ ನಂಗೆ ನನ್ನೂರಿನಿಂದ ಸುಮಾರು ನೂರು ಕಿ.ಮೀ. ದೂರದಲ್ಲಿರುವ ಕುದರೆಮುಖ ಅಂದ್ರೆ ಅಲ್ಲೊಂದು ಐರನ್ ಓರ್ ಫ್ಯಾಕ್ಟ್ರಿ ಇದೆ ಅಂತ ಮಾತ್ರ ಗೊತ್ತಿತ್ತಷ್ಟೆ. ಮೂರ್ನಾಲ್ಕು ತಿಂಗಳು ಕ್ಲಾಸಿಗ್ ಹೊದ್ಮೇಲೆ ಕುದರೆಮುಖ ಅಂದ್ರೆ ನಿಜವಾಗಿ ಏನು ಅಂತ ತಿಳ್ಕಂಡೆ. ಅದ್ಹೆಂಗೆ ಅಂತಿದೀರಾ? ನಾನು, ಪ್ರೇಮ್, ಮೇಗ್ರಾಜ, ಅಕ್ಮಲ್, ವಿಶ್ವ, ದೀಪು, ಶಿವು, ಸದಾನಂದ, ದೊರೆ... ಹೀಗೆ ಸುಮಾರ್ ಜನ ಕ್ಲಾಸ್ಮೇಟ್ಸು ಒಟ್ಗೆ ಕ್ಲಾಸಿಗೆ ಬಂಕ್ ಹೊಡ್ದು ಸುಮ್ನೆ ಹರ್ಟೆ ಹೊಡ್ಕಂಡು ಸುತ್ತಾಡಕ್ ಶುರು ಮಾಡ್ದು, ಹೀಗೆ ಬಂಕ್ ಹೊಡ್ಯದು ಮಾಮೂಲಾಗೊಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶೀಘ್ರದಲ್ಲಿ ನಿರೀಕ್ಷಿಸಿ...

ಸಂಪದ ಬಳಗದ ಹಳೆಯ ಸಂಪದಿಗರಾದ ಎಚ್.ಎ.ಅನಿಲ್ ಕುಮಾರ್ ರವರು http://sampada.net/user/anilkumar

ತಮ್ಮ ಇತ್ತೀಚಿನ ಕಲ್ಕತ್ತಾ ಪ್ರವಾಸ ಕಥನವನ್ನು ಸಂಪದದಲ್ಲಿ ಪ್ರಕಟಿಸಲಿದ್ದಾರೆ.

ಪ್ರವಾಸವನ್ನು ಬರೀ ಡಾಕ್ಯುಮೆಂಟೇಶನ್ ರೀತಿಯಲ್ಲಿ ಬರೆಯದೆ.. ನವಿರಾದ ಹಾಸ್ಯದೊಂದಿಗೆ ಪ್ರವಾಸದ ಅನುಭವ ಮತ್ತು ವಿವರಗಳನ್ನು ತಮ್ಮದೇ ವಿಶಿಷ್ಠ ಶೈಲಿಯಲ್ಲಿ  ಪ್ರವಾಸ ಕಥನ ಬರೆಯುವುದರಲ್ಲಿ ಹೆಸರಾದ ಅನಿಲ್ ಕುಮಾರ್ ರವರು ಈ ಹಿಂದೆ ಸಂಪದಕ್ಕಾಗಿ ಫಿನ್ಲೆಂಡ್ ಮತ್ತು ಲಂಡನ್ ಪ್ರವಾಸಕಥನವನ್ನು ಬರೆದಿದ್ದರು..

ಈಗ ಅವರು ತಮ್ಮ ಇತ್ತೀಚಿನ ತಮ್ಮ ಕಲ್ಕತ್ತಾ ಪ್ರವಾಸದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲಿಗೋ ತಿರ್ಗಾಟ

ಶುಕ್ರವಾರ ನಾನು, ಹರಿ ಪ್ರಸಾದ್ ನಾಡಿಗರು ಕ್ಯಾಮರಾ, ಲೆನ್ಸು ಅಂತ ಚಿಕ್ಕಪೇಟೆ ಅಲೀತಾ ಇರ್ಬೇಕಾದ್ರೆ ನನ್ನ ಫ್ರೆಂಡಿನ ಫೋನ್ ಬಂತು.

ಸ್ಕಂದ: ಎಲ್ಲಿದೀಯ

ನಾನು: ಚಿಕ್ಕ ಪೇಟೆ

ಸ್ಕಂದ: ವೀಕೆಂಡ್ ಏನ್ ಪ್ಲಾನು

ನಾನು: ಏನೂ ಇಲ್ಲ

ಸ್ಕಂದ: ಎಲ್ಲಿಗಾದ್ರೂ ಹೋಗೋಣ

ನಾನು: ಸರಿ ಎಲ್ಲಿಗೆ?

ಸ್ಕಂದ: ಗೊತ್ತಿಲ್ಲ, ಸುಮ್ನೆ ಮೈಸೂರ್ ರೋಡಲ್ಲಿ ಹೋಗೋಣ.. ಎಲ್ಲಿಗೆ ಅಂತ ಆಮೇಲೆ ಡಿಸೈಡ್ ಮಾಡಿದ್ರಾಯ್ತು

ನಾನು: ಸರಿ, ಯಾವಾಗ?

ಸ್ಕಂದ: ಇನ್ನು ೨೦ ನಿಮಿಷದಲ್ಲಿ ನ್ಯಾಷನಲ್ ಮಾರ್ಕೇಟ್ ಹತ್ರ ಸಿಕ್ತೀನಿ

ನಾನು: ಸರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ

ನೀರವ ರಾತ್ರಿಯ ಆ ದಿನ, ಸದ್ದೇ ಇಲ್ಲ. ಎಲ್ಲರೂ ನಿದ್ರಾದೇವಿಗೆ ಶರಣಾಗುತ್ತಾ ಶಾಂತರಾದಂತೆ ಕಾರು ಡ್ರೈ ಮಾಡಿ, ಕಾಡುಮೇಡು ಸುತ್ತಿ, ಬೆಟ್ಟ ಹತ್ತಿ ದಣಿದಿದ್ದ ನನ್ನ ದೇಹವೂ ಗೊತ್ತಿಲ್ಲದೇ ನಿಶ್ಚಲ ನಿದ್ರಾಸ್ಥಿತಿ ತಲುಪಿತ್ತು. ತಣ್ಣನೆ ಗಾಳಿ ಬೀಸುತ್ತಾ, ಹೊದ್ದಿಗೆ ಸರಿಯಾಗಿ ಕಾಲಿಗೆ ಹೊದ್ದಿದೆಯೇ ಎಂದು ಪರೀಕ್ಷಿಸಿದ್ದಷ್ಟೇ ಗೊತ್ತು. ಮತ್ತ್ತೆ ಎಚ್ಚರವಾದಾಗ ಮೈಮೇಲೆ ಒಂದಷ್ಟು ಹೆಚ್ಚಿನ ಬಟ್ಟೆಗಳಿದ್ದದ್ದೂ, ಬೇರೆಯವರು ಮಾತನಾಡುತ್ತಿದ್ದ ಕಿರುದನಿ ಕೇಳಿ ಬಂತು. ಕಣ್ಣು ಬಿಡುತ್ತಿದ್ದಂತೆ ಕಂಡಿದ್ದು ಎದ್ದು ಕುಳಿತಿದ್ದ ಪವಿತ್ರಾ, ರವಿ ಮತ್ತು ಅರವಿಂದ. ನಾನು ಎಚ್ಚರವಾದಂತೆ, ನಾವೇನೋನೋ ಕೇಳಿದ್ವಿ ಕೇಳಿಸ್ಲಿಲ್ವೇನೋ? ನೋಡಿಲ್ಲಿ ಸಿಕ್ಕಾ ಪಟ್ಟೆ ನಡುಗ್ತಿದ್ದೆ ಅಂತ ಇದನ್ನೆಲ್ಲಾ ಹೊದಿಸಿದ್ದೇವೆ ಅಂದಾಗ ಹೋ! ಎಂದದ್ದಷ್ಟೇ ಗೊತ್ತು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಭಾಗ ೨

ಎಲ್ಲರೂ ಕಾರಲ್ಲಿ ಕೂತಾಗಿತ್ತು. ಹಿನ್ನಲೆಯಲ್ಲಿ ಸಂಗೀತ, ಮುಂದೆ ನಾನು ರವಿ ಹೊರವಲಯಕ್ಕೆ ಸಾಗೋ ದಾರಿಯ ಹುಡುಕಾಟದಲ್ಲಿ ಬೋರ್ಡ್ ನೋಡ್ತಾ ಮುಂದೆ ಸಾಗಿದ್ವಿ. ರಾಜೀವ್ ಹೇಳಿದ ಹಾದಿ ಸುಲಭವಾಗಿ ನಮ್ಮನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು ಹೋಗಿತ್ತು… ಈಗಾಗಲೇ ಎಲ್ಲರೂ ಸೀಟ್ ಬೆಲ್ಟ್ ಬಿಗಿಗೊಳಿಸಿಕೊಂಡಾಗಿತ್ತು… ಮಾತುಗಳು ಸರಾಗವಾಗಿ ನಾಲಿಗೆಯ ಮೇಲೆ ಹೊರಳಲು ಶುರುವಿಟ್ಟುಕೊಂಡತೆಯೇ, ನಮ್ಮ ಕಾರು ಚಲಿಸುವ ವೇಗ ಹೆಚ್ಚಿತ್ತು….

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (7 votes)
To prevent automated spam submissions leave this field empty.

ಮಲ್ಲಳ್ಳಿ ಮತ್ತು ಮೂಕನಮನೆ ಜಲಪಾತ

ಆಗಸ್ಟ್ ೧೫ ರಂದು ಸ್ವಾತಂತ್ರ ದಿನದ ರಜಾದಲ್ಲಿ ಪ್ರವಾಸ ಹೋಗೋಣವೆಂದು ಯೋಚನೆ ಮಾಡುತ್ತಿದ್ದಾಗ ಹೊಳೆದದ್ದು ಮೂಕನ ಮನೆ ಜಲಪಾತ. ಪಯಣಿಗ ಬ್ಲಾಗಿನ ಪ್ರಶಾಂತ್ (ಪರಿಚಯವಿಲ್ಲ ಆದರೂ) ಅವರಿಂದ ಬಂದ ಮಿಂಚೆ ಅಲ್ಲಿಗೆ ಹೋಗುವ ದಾರಿ ತಿಳಿಸಿತ್ತು. ಮನೆಗೆ ಬಂದಿದ್ದ ಅತಿಥಿ ಸಂಪದದ ಮೂಲಕ ಪರಿಚಯವಾದ ಹಾಸನದಲ್ಲಿ ನೆಲೆಸಿರುವ ಹರಿಹರಪುರ ಶ್ರೀಧರ್ ಅವರಿಂದ ಇನ್ನೂ ಹೆಚ್ಚು ಮಾಹಿತಿ ಕಲೆಹಾಕಲು ಯತ್ನಿಸಿದಾಗ ಅವರಿತ್ತದ್ದು ದಾಸೇಗೌಡರ ದೂರವಾಣಿ ಸಂಖ್ಯೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಶ್ಮೀರ ಮತ್ತು ಉತ್ತರಭಾರತ ಪ್ರವಾಸ-3

ಸಾರ್ ಬೆಳಿಗ್ಗೆ ೫ ಗಂಟೆಗೆ ಹೊರಡೋಣ ಇಲ್ಲಾಂದ್ರೆ ಒಂದೆ ದಿನದಲ್ಲಿ ಹತ್ತಿ ಇಳಿಯುವುದು ಕಷ್ಟ ಆಗುತ್ತೆ ಎಂದ ಪಾಂಡೆ ಮಾತಿಗೆ ತಲೆದೂಗಿದೆವು. ಎತ್ತರಕ್ಕೆ ಹೋದಹಾಗೆ ಆಮ್ಲಜನಕದ ಕೊರತೆಯಾಗುತ್ತೆ ಎಂದು ಆಮ್ಲಜನಕದ ಸಿಲಿಂಡರ್ಗಳನ್ನು ಕೊಂಡೆವು. ಬೆಳಿಗ್ಗೆ ೫ ಗಂಟೆಗೆ ಪಾಂಡೆಯನ್ನು ಎಚ್ಚರಗೊಳಿಸಿ ವಾಹನದಲ್ಲಿ ಹೊರಟೆವು. ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಾರ್ ಧಾಮ್ ಪ್ರವಾಸ- ಗಂಗೋತ್ರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಶ್ಮೀರ ಮತ್ತು ಉತ್ತರಭಾರತ ಪ್ರವಾಸ-2

ಕಾಟ್ರಾದಿಂದ ಧರ್ಮಶಾಲಕ್ಕೆ ಇರುವ ಬಸ್ ಜಮ್ಮುವಿಗೆ ಬಂದಾಗ ಬೆಳಿಗ್ಗೆ ೮.೩೦. ನಮ್ಮೆಲ್ಲ ಹೊರೆಗಳನ್ನು ಹೊತ್ತ ಕೂಲಿಯವ ನಡೆಯುವುದು ನೋಡಿ ನನಗೆ ಗಾಭರಿಯಾಯ್ತು. ಸುಮಾರು ೧೦ ದೊಡ್ಡ ದೊಡ್ಡ ಚೀಲಗಳನ್ನು ಅನಾಯಾಸವಾಗಿ ತನ್ನಲ್ಲಿದ್ದ ಒಂದೇ ಒಂದು ಹಗ್ಗದ ಸಹಾಯದಿಂದ ಹೊತ್ತುಕೊಂಡು ನಡದೇ ಬಿಟ್ಟ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸವಾರೀನೋ ಪಯಣವೋ (ಭಾಗ-೨)

ಪಯಣ ಅಂದ್ರೆ ಇದೇನಾ !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸವಾರೀನೋ ಪಯಣವೋ !

ಮೇ ೨೧. ದಿನದ ವಿಶೇಷ ಏನ್ ಗೊತ್ತಾ ? ರಾಜೀವ್ ಗಾಂಧಿ ಹತ್ಯೆ ನಡೆದಿತ್ತು ಅಂತೀರಾ ನೀವು ! ಆದ್ರೆ ನಾನ್ ಹೇಳ್ತೇನೆ ಇದೇ ತಾರೀಕಿನಂದು ನಾನು ಭೂಮಿಗೆ ಬಂದ್ ಆಕಾಶ ನೋಡಿದ್ದು ಅಂತ. ಈ ತಾರೀಕಿನ್ನು ಈ ವರ್ಷ ಅವಿಸ್ಮರಣೀಯ ಮಾಡ್ಬೇಕು ಅಂದ್ಕೊಂಡಿದ್ದೆ. ಅದಕ್ಕೆ ಕಾಲವೂ ಕೂಡಿ ಬಂದಿತ್ತು. ಎಲೆಕ್ಷನ್ ಅನ್ನೋ ಕಾರಣಕ್ಕೆ ಎರಡೂವರೆ ತಿಂಗ್ಳಿಂದ ಊರಿಗೆ ಹೋಗಿರ್‍ಲಿಲ್ಲ. ಐದ್ ದಿನ ರಜೆ ಹಾಕಿ ಎಲ್ಲಾದ್ರೂ ಹೋಗೋಣ ಅಂತಿದ್ದೆ. ಚಾನೆಲ್ ಹಿರಿಯರಿಂದ ಮೇ ೨೦ ರಂದು ಅದಕ್ಕೆ ಸಮ್ಮತಿ ಕೂಡಾ ಸಿಕ್ಕಿತು.

ಮೇ ೨೧ ೨೦೦೯

ಬೆಳಗ್ಗೆ ೬ ಗಂಟೆಗೆ ಎಚ್ಚರಾಯ್ತು. ಬೆಳಗ್ಗೆ ಬೆಳಗ್ಗೆ ಮೊಬೈಲ್‌ನಲ್ಲಿ ಎಸ್ಸೆಮ್ಮೆಸ್ ಕುಣಿದಾಡ್ತಾ ಇತ್ತು. ಏನು ಅಂತ ನೋಡಿದ್ರೆ ! ಇನ್ನಾದ್ರೂ ಹೊರಗೆ ಬಂದ್ ನೋಡು... ಸೂರ್ಯ ಆಗ್ಲೇ ಹುಟ್ಟಿದ್ದಾನೆ ಅಂತ ! ಹಾಗೆ ಎದ್ದು, ನಿತ್ಯ ಕರ್ಮ ಮುಗಿಸಿ ಹೊರಡೋಣ ಅಂತ ಯೋಚಿಸ್ತಿರೋವಾಗ ವಾರ್ತಾವಾಚಕಿಯೊಬ್ರು ಕಾಲ್ ಮಾಡಿ ಶುಭಾಶಯ ಕೋರಿದ್ರು... ಅಬ್ಬಾ ! ಇನ್ನಾದ್ರೂ ಹೊರಡೋಣ ತಮ್ಮನ್ ಜೊತೆಗೆ ಇಂದಾದ್ರೂ ನಾಸ್ಟಾ ಮಾಡೋಣ ಅಂತ ಅಂದ್ಕೋತಿದ್ದೆ. ಅವನಿಗೆ ಎಸ್‌ಎಂಎಸ್ ಕೂಡಾ ಮಾಡಿದ್ದಾಗಿತ್ತು. ಇನ್ನಿಬ್ರು ಹಿತೈಷಿಗಳೂ ಕಾಲ್ ಮಾಡಿ ವಿಷ್ ಮಾಡಿದ್ರು.ಅಷ್ಟರಲ್ಲೇ ಗೆಳೆಯ ಸುನಿಲ್ ಫೋನ್ ಮಾಡಿ ವಿಷ್ ಮಾಡಿದ. ಹಾಗೆ ಅವನನ್ನ ಮನೆಗೆ ಆಹ್ವಾನಿಸಿದೆ. ಇದೆಯಲ್ಲಾ ಪುಳಿಯೋಗರೆ ಮಿಕ್ಸ್. ಅದನ್ನ ಅನ್ನಕ್ಕೆ ಕಲಸಿ ತಿಂದು ಹೊರಡೋಣ ಅನ್ನೋವಾಗ ಗಂಟೆ ಹನ್ನೆರಡು. ಇಲ್ಲಿಂದಲೇ ಶುರು.. ಅದನ್ನ ಪಯಣ ಅಂತ ಹೇಳ್ಬೇಕೋ ಅಥವಾ ಸವಾರಿ ಅಂತಾನೋ !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಾರ್ ಧಾಮ್ ಪ್ರವಾಸ

ನನ್ನ ಮುಂದಿನ ದಿನಗಳ ಯಾತ್ರೆಯ ಅನುಭವಗಳನ್ನು ಬರೆಯುವ ಮುನ್ನ, ನಾವು ತೆಗೆದ ಚಿತ್ರಗಳನ್ನು ನಿಮಗೆ ತೋರಿಸಬೇಕೆಂಬ ಆಸೆ ಹೆಚ್ಚಾಗಿದ್ದರಿಂದ, ಅದರ ಕೊಂಡಿಯನ್ನು ಮೊದಲು ಪ್ರಕಟಿಸಿ, ನಂತರ ಕಥನ ಮುಂದುವರಿಸುತ್ತೇನೆ. ಕೇದಾರನಾಥ್ ಚಿತ್ರಗಳು, ಇನ್ನೂ ಹಾಕಿಲ್ಲ. ಯಮುನೋತ್ರಿ, ಗಂಗೋತ್ರಿಯ ಕಥನದ ನಂತರ, ಕೇದಾರ ಮತ್ತು ಬದರಿ ಚಿತ್ರಗಳ ಜೊತೆ, ಕಥನವನ್ನೂ ಬರೆಯುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಶ್ಮೀರ ಮತ್ತು ಉತ್ತರಭಾರತ ಪ್ರವಾಸ

ನೇಪಾಳ ಮತ್ತು ಈಶಾನ್ಯಭಾರತ ಪ್ರವಾಸ ಹೋಗಿಬಂದ ಮೇಲೆ ಉತ್ತರಭಾರತ ಪ್ರವಾಸವೆಂದರೆ ಏಕೋ ಒಂದು ರೀತಿಯ ಭಯ ಆವರಿಸುತ್ತಿತ್ತು. ಬಹುಶಃ ನೇಪಾಳದಲ್ಲಿ ನಮಗೆ ಎದುರಾದ ತೊಂದರೆ ಮತ್ತು ಅಲ್ಲಿ ನಾವು ಅನುಭವಿಸಿದ ಮಾನಸಿಕ ಕಷ್ಟಗಳು ಮತ್ತು ಆರ್ಥಿಕ ನಷ್ಟ ನನ್ನನ್ನು ಯೋಚನೆಗೀಡುಮಾಡಿತ್ತು. ಆದರೂ ಭಾರತದಲ್ಲಿರುವಾಗಲೇ ಕಾಶ್ಮೀರವನ್ನೊಮ್ಮೆ ನೋಡಬೇಕೆಂಬ ಹಂಬಲ ನನ್ನಲ್ಲಿ ಬಲವಾಗಿತ್ತು. ಒಮ್ಮೆ ನನ್ನೊಡನೆ ಪ್ರವಾಸಕ್ಕೆ ಬಂದವರು ಮತ್ತೊಮ್ಮೆ ನನ್ನೊಡನೆ ಬರದಿರುವುದು ಒಂದು ಸಮಸ್ಯೆಯೆ. ಬಹುಶಃ ನನ್ನ ನಡವಳಿಕೆಗಳೋ ಅಥವ ಅತಿಯಾದ ಸಮಯ ಪಾಲನೆ ಮಾಡುವ ನನ್ನ ಗುಣವೋ ಇದಕ್ಕೆ ಕಾರಣವಿರಬಹುದು ಗೊತ್ತಿಲ್ಲ. ಅದೇನೆ ಇರಲಿ ಈ ಬಾರಿ ನನ್ನೊಡನೆ ಪ್ರವಾಸಕ್ಕೆ ಬರಲು ಒಪ್ಪಿದವರು ಸಹೋದ್ಯೋಗಿ ಮತ್ತು ಗಾಯತ್ರಿ ಸಹಕಾರ ಸಂಘದ ನಿರ್ದೇಶಕರುಗಳಾದ ಶ್ರೀಕಾಂತ ಮತ್ತು ನರಸಿಂಹ ಪ್ರಸಾದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಉತ್ತರ ಭಾರತದ ಪ್ರವಾಸ ಕಥನ - ಭಾಗ ೧

ಮೊದಲು ನಡೆದ ಪ್ರವಾಸದ ಯೋಜನೆ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಿಮಾಚಲ ಪರ್ಯಟನೆ - ಯಾಕೂ (ಝಾಕೂ) ದೇಗುಲ, ಶಿಮ್ಲಾ

 

ಶಿಮ್ಲಾ ನಗರದಲ್ಲಿನ ಪೂರ್ವಕ್ಕಿರುವ ಎತ್ತರದ ಬೆಟ್ಟ  - ಝಾಕೂ(ಯಾಕೂ). ಸಮುದ್ರ ಮಟ್ಟದಿಂದ, ಸುಮಾರು ೮೫೦೦ ಅಡಿಗಳ ಮೇಲೆ ಇರುವ ಈ ಬೆಟ್ಟದ ಮೇಲೆ, ಹನುಮಂತನ ದೇಗುಲವೊಂದಿದೆ.
ಈ ದೇಗುಲವನ್ನು ತಲುಪಲು, ಬೆಟ್ಟದ ಬುಡದಿಂದ ೨ ಕಿ.ಮೀ. ಕಡಿದಾದ ದಾರಿ ಇದ್ದು, ಇದನ್ನು ಹತ್ತಿ ತಲುಪಬಹುದು ಇಲ್ಲವೇ ಬೆಟ್ಟಗಳನ್ನು ಸುಲುಭವಾಗಿ ಹತ್ತುವ(೪-wheel drive) ಕಾರಿನಲ್ಲಿ  ತಲುಪಬಹುದು.

ಈ ಝಾಕು ಬೆಟ್ಟಕ್ಕೆ ಹನುಮಂತನು ಭೇಟಿ ಕೊಟ್ಟಿದ್ದನೆಂಬ ಪ್ರತೀತಿ. ಈ ದೇಗುಲದಲ್ಲಿ ಕೆಳಕಂಡ ಇತಿಹಾಸ(ನಂಬಿಕೆ)ಯನ್ನು ದಾಖಲಿಸಿದ್ದಾರೆ:

ರಾಮಾಯಣದಲ್ಲಿ, ಲಕ್ಷ್ಮಣನು ಇಂದ್ರಜಿತುವಿನ ಬಾಣದಿಂದ ಪ್ರಜ್ಞಾಹೀನನಾದಾಗ, ಹನುಮಂತನು ವಾನರ ಸಹಚರರೊಂದಿಗೆ ಹಿಮಾಲಯಕ್ಕೆ ಧಾವಿಸುತ್ತಾನೆ.
ಸಂಜೀವಿನಿಯನ್ನು ಹುಡುಕುತ್ತಾ ಹಿಮಾಲಯದಲ್ಲಿ ಸಂಚರಿಸುತ್ತಿರುವಾಗ, ಝಾಕೂ ಎಂಬ ಋಷಿಯು ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿರುವುದು ಹನುಮನ ಕಣ್ಣಿಗೆ ಬೀಳುತ್ತದೆ.
ಆಗ ಹನುಮನು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ಹೆಚ್ಚು ತಿಳಿಯಲು, ಝಾಕೂ ಋಷಿಯ ಸಹಾಯವನ್ನು ಕೋರುತ್ತಾನೆ.
ಝಾಕೂ ಋಷಿಯು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ತಿಳಿಸಿ, ಅದು ದ್ರೋಣ ಪರ್ವತದಲ್ಲಿ ಸಿಗುವುದಾಗಿ ವಿವರಿಸುತ್ತಾನೆ.
’ಸಂಜೀವಿನಿ ಮೂಲಿಕೆ ಸಿಕ್ಕ ಮೇಲೆ, ಈ ಬೆಟ್ಟಕ್ಕೆ ಬಂದು, ತನ್ನನ್ನು ಭೇಟಿ ನೀಡಿ ಲಂಕೆಗೆ ಹೋಗು’ ಎಂದು ಹನುಮನ ಬಳಿ ವಚನ ತೆಗೆದುಕೊಳ್ಳುತ್ತಾನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗೊತ್ತು ಗುರಿಯಿಲ್ಲದ ಪ್ರವಾಸ

ಶೀರ್ಷಿಕೆ ನಿಮಗೆ ಆಶ್ಚರ್ಯವಾಗಬಹುದು ಆದರೂ ಇದು ಸತ್ಯ, ೫ ಜನ ಸಹೋದ್ಯೋಗಿಗಳು ಪ್ರವಾಸ ಹೊರಡುವುದು, ಅದು ಎಲ್ಲಿಗೆ, ನಮ್ಮ ಗುರಿ ಯಾವುದು ಎಂಬ ಯಾವ ಮಾಹಿತಿ ಇಲ್ಲದೆ. ಕಪ್ಪೆ ತಕ್ಕಡಿಗೆ ಹಾಕಿದಂತ ನನ್ನ ಸಹೋದ್ಯೋಗಿಗಳನ್ನು ಹೊರಡಿಸಿಕೊಂಡು ಹೊರಡುವುದು ಮತ್ತೊಂದು ಸಾಹಸದ ಕೆಲಸವೇ ಸೈ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗಣೇಶ ಬಂದ...ಕಾಯಿ ಕಡುಬು ತಿಂದ...


ಏನಪ್ಪಾ, ದೀಪಾವಳಿ ಕೂಡ ಆಗೋಯ್ತು ಈಗ ’ಗಣೇಶ ಬಂದ...ಕಾಯಿ ಕಡುಬು ತಿಂದ’ ಅಂತಿದಾನೆ ಅಂದುಕೊಂಡಿರಾ...?
ಇದಕ್ಕೆ ಕಾರಣವಿದೆ...ತುಮಕೂರಿನಿಂದ ಕುಣಿಗಲ್ ದಾರಿಯಲ್ಲಿ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗೂಳೂರು ಗಣೇಶನ ನೋಡಲು ಇದೇ ಸರಿ ಸಮಯ...!
ಗೂಳೂರಿನ ಗಣೇಶನಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಊರಿನ ಮಂದಿ ಹೇಳುತ್ತಾರೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ನೋವಲ್ಲೂ ಸಂತಸ

ನಿನ್ನೆ (ಶನಿವಾರ) ಅದೇಕೋ ಮನಸ್ಸು ಭಾರ ಆಗಿತ್ತು. ಏನೋ ಒಂಥರ ತಳಮಳ. ಬಹುಶಃ ದೀಪಾವಳಿಗೆ ಊರಿಗೆ ಹೋಗಲಾಗದ್ದಕ್ಕೋ ಏನೋ. ಎಂಜಿನಿಯರಿಂಗ್ , ಕೆಲಸ ಅಂತ ಈ ೮ ವರ್ಷದಲ್ಲಿ ಇದೇ ಮೊದಲ ಬಾರಿಗೆ ನನಗೆ ಮನೆಯಲ್ಲಿ ಆಚರಿಸೋ ದೀಪಾವಳಿ ತಪ್ಪಿತ್ತು. ಇದನ್ನೇ ನನ್ನ ಗೆಳೆಯನಲ್ಲಿ ಹೇಳಿಕೊಂಡಾಗ ,ನಾಳೆ (ಭಾನುವಾರ) ಹಾಸನಾಂಬಾ ದೇವಸ್ಥಾನಕ್ಕೆ ಹೋಗಿ ಬರೊಣ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರೈಲು ಪ್ರಯಾಣ ಬರೀ 5,000 ಕಿ.ಮೀ....!!

ಮೊನ್ನೆ ನನ್ನ ದೊಡ್ಡಮ್ಮನ ಊರಿಗೆ ಹೋಗೋ ತಯಾರಿಯಲ್ಲಿದ್ದೆ..ಯಾವಾಗಲು ಬಸ್ಸಿನಲ್ಲೇ ಹೋಗೋ ನಾನು ಈ ಸಲ ರೈಲಿನಲ್ಲಿ ಹೋಗೋದು ಅಂತ ಡಿಸೈಡ್ ಮಾಡ್ದೆ..ಇಂತಾ ಚಿಕ್ಕ ವಿಚಾರದಲ್ಲಿ ಡಿಸೈಡ್ ಮಾಡೋದೇನಿದೆ ಅಂತೀರಾ!! ಇದೆ ಇಲ್ದೆ ಏನು?!!ಹಾಗೆ ವಿಚಾರ ಮಾಡಿದಾಗ... ನನಗೆ ನೆನಪಿರೋವಾಗಿಂದ ಈಗಿನವರೆಗೂ ಎಷ್ಟು ಪ್ರಯಾಣ ಮಾಡಿದ್ದೇನೆ ಅಂತ ಒಂದು ಅಂದಾಜು ಲೆಕ್ಕ ಹಾಕಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಯಿಯನ್ನು ಹಿಂಬಾಲಿಸಿದ ಕತೆ

ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರತಿ ಸೆಮಿಸ್ಟರಿನಲ್ಲಿ ಒಮ್ಮೆ ಒಂದು ಪ್ರವಾಸ ಹೋಗುವುದು ವಾಡಿಕೆಯಾಗಿತ್ತು. ಆದರೆ ೨-೩ ದಿನ ಪ್ರವಾಸ ಹೋದರೆ ಪ್ರಯಾಣ, ಆಹಾರ, ಉಳಿದುಕೊಳ್ಳಲು ಆಗುವ ಖರ್ಚೆಷ್ಟು! ಆಗಲೇ ಹೊಳೆದದ್ದು ಟ್ರೆಕಿಂಗ್ ಜಾಗಗಳನ್ನು ನೋಡುವ ಒಂದು ಅಗ್ಗವಾದ ವಿಧಾನ ಎಂದು. 7ನೇ ಸೆಮಿಸ್ಟರ್ ನಲ್ಲಿರಬೇಕಾದರೆ (೨೦೦೫ ಸೆಪ್ಟೆಂಬರ್) ನಾವು ಹೊರಟಿದ್ದು ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ ನೋಡಲು.
ಚಿಕ್ಕಮಗಳೂರಿಗೆ ಹೋಗಿ ಅಲ್ಲಿಂದ ೧೦ಕಿ.ಮೀ. ದೂರದಲ್ಲಿರುವ ಮುಳ್ಳಯ್ಯನ ಗಿರಿ ಬಟ್ಟದ ಕೆಳಗಿನವರೆಗೆ (ಊರಿನ ಹೆಸರು ನೆನಪಿಲ್ಲ. ಕೈಕಂಭ ಎಂತಲೋ ಏನೋ ಇತ್ತು) ಬಸ್ಸಿನಲ್ಲಿ ಹೋಗಿ ಅಲ್ಲಿಂದ ಸುಮಾರು ೮ ಕಿ.ಮೀ. ನಡೆದು ಮುಳ್ಳಯ್ಯನ ಗಿರಿಗೆ ಹೋದೆವು. ದಾರಿಯಲ್ಲಿ ಒಂದೇ ಸಮನೆ ಮಳೆ, ಮಂಜು. ೫ ಅಡಿಗಿಂತ ಮುಂದೆ ಏನೂ ಕಾಣುತ್ತಿರಲಿಲ್ಲ. ಜೊತೆಗೆ ಜೋರಾಗಿ ಗಾಳಿ ಬೇರೆ. ಹಾಗೂ ಹೀಗೂ ಮುಳ್ಳಯ್ಯನ ಗಿರಿ ತಲುಪಿದೆವು. ಮುಳ್ಳಯ್ಯನ ಗಿರಿಯಲ್ಲಿ ಒಂದು ಸುಂದರ ದೇವಾಲಯ ಇದೆ. ದೇವರ ದರ್ಶನ ಮಾಡಿ ಅರ್ಚಕರ ಮನೆಯಲ್ಲೇ ಕಾಫಿ ಕುಡಿದೆವು. ತೆಗೆದುಕೊಂಡು ಹೋಗಿದ್ದ ಬ್ರೆಡ್ ತಿಂದು ಜೊತೆಗೇ ಮನೆಯ ಬಳಿ ಇದ್ದ ನಾಯಿಗೆ ಸ್ವಲ್ಪ ಬ್ರೆಡ್ ಹಾಕಿದೆವು. ನಾಯಿ ಬಹಳ ಖುಶಿಯಾಗಿ ಬಾಲ ಆಡಿಸುತ್ತಾ ಹಾಕಿದ್ದ ಬ್ರೆಡ್ಡನ್ನು ತಿಂದಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಪ್ರವಾಸ ಕಥನ

ಆಯ್ದ ಬರಹಗಳು

Sampada is a community of people passionate about literary activities in Kannada. Sampada is one of the largest Kannada communities on the Internet. ಸಂಪದ ಕನ್ನಡ ನಾಡು, ನುಡಿ, ಓದು ಸುತ್ತ ಆಸಕ್ತಿ ಇಟ್ಟುಕೊಂಡಿರುವವರ ಆನ್ಲೈನ್ ಸಮುದಾಯ ಹಾಗು ಕನ್ನಡದ ಮೊತ್ತ ಮೊದಲ ಆನ್ಲೈನ್ ಸಮುದಾಯಗಳಲ್ಲೊಂದು.

Powered by Drupal. Technology support by : Saaranga