ಮರ

ಬದಲಾಗುವ ಬಣ್ಣಗಳು

ಹೊತ್ತಿಗೆ ತಕ್ಕ ಹಾಗೆ ಬಣ್ಣ ಬದಲಿಸೋ ಜನರನ್ನ ದಿನ ನಿತ್ಯ ನೋಡ್ತಾನೇ ಇರ್ತೀವಿ. ಇನ್ನು ಗೋಸುಂಬೆ ಅಂತಹ ಬಣ್ಣ ಬದಲಿಸೋ ಪ್ರಾಣಿಗಳನ್ನೂ ನೋಡಿದೀವಿ. ಆದ್ರೆ ನಾನು ಹೇಳ್ತಾ ಇರೋ ಬಣ್ಣಗಳೇ ಬೇರೆ! ’ಕಾಲಾಯ ತಸ್ಮೈ ನಮಃ ’ ಅಂತ ಕಾಲ ಕಾಲಕ್ಕೆ ಬಣ್ಣ ಬದಲಿಸೋ ಗಿಡ ಮರಗಳ ಬಗ್ಗೆ ಹೇಳ್ತಿದೀನಿ ನಾನು. ಭೂಮಧ್ಯರೇಖೆ ಇಂದ ದೂರ ಹೋದಷ್ಟೂ, ಚಳಿಗಾಲದಲ್ಲಿ ಎಲೆ ಉದುರಿಸೋ ಮರಗಳು ಹೆಚ್ಚುತ್ತಾ ಹೋಗುತ್ತವೆ. ಎಲೆ ಉದುರಿಸೋ ಮೊದಲು ಇವು ಹಳದಿ ಕೆಂಪು ಕಂದುಗಳ ನೂರಾರು ಛಾಯೆಗಳನ್ನು ತಾಳಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಎಷ್ಟೋ ಬಾರಿ ಹೀಗೆ ಬದಲಾಗುವ ಬಣ್ಣಗಳನ್ನ ನೋಡೋದಕ್ಕೇ ಅಂತಲೇ ನೂರಾರು ಮೈಲಿ ಹೋಗಿದ್ದೂ ಇದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಎಲೆ ಉದುರಿಸುತ್ತಾ ನವಂಬರ್ ಹೊತ್ತಿಗೆ ಮರಗಳೆಲ್ಲ, ಪಾಪ, ಬೋಳಾಗಿ ನಿಂತು ಬಿಡುತ್ತವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೀವನವೆಂಬ ವನ

ಸಾವು ಬಳಿ ಬಂದಿರಲು ಯಾರು ಯಾರನು ಕಾಯುವರು?

ಹಗ್ಗ ಹರಿದಿರಲು ಬಿಂದಿಗೆಯ ಇನ್ಯಾರು ಹಿಡಿಯುವರು?

ಈ ಜಗದ ಬಾಳುವೆಯು ಅಡವಿಯ ಮರಗಳ ಸಾಟಿ

ಕಡಿಯುವುದು ಚಿಗುರುವುದು ನಡೆಯುತಲೆ ಇರುವುದು

 

 

ಸಂಸ್ಕೃತ ಮೂಲ - (ಸ್ವಪ್ನವಾಸವದತ್ತ  ನಾಟಕದ ಆರನೇ ಅಂಕದಿಂದ)

 

ಕಃ ಕಂ ಶಕ್ತೋ ರಕ್ಷಿತುಂ ಮೃತ್ಯುಕಾಲೇ

ರಜ್ಜುಚ್ಛೇದೇ ಕೇ ಘಟಂ ಧಾರಯಂತಿ |

ಏವಂ ಲೋಕಸ್ತುಲ್ಯಧರ್ಮೋ ವನಾನಾಂ

ಕಾಲೇ ಕಾಲೇ ಛಿದ್ಯತೇ ರುಹ್ಯತೇ ಚ ||

 

-ಹಂಸಾನಂದಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ನರಕಕ್ಕೊಂದು ಸುಲಭದ ದಾರಿ

ಮರಗಳ ಕಡಿದು ಪಶುಗಳ ಕೊಂದು
ನೆತ್ತರ ಕೆಸರನು ಮಾಡಿದವರಿಗೂ
ಸ್ವರ್ಗದ ಬಾಗಿಲು ತೆರೆದಿಹುದಾದರೆ
ಮತ್ತಾರು ನರಕಕೆ ಹೋಗುವರು?

ಸಂಸ್ಕೃತ ಮೂಲ - ಪಂಚತಂತ್ರದ ’ಕಾಕೋಲೂಕೀಯ’ ದಿಂದ:

ವೃಕ್ಷಾಂಶ್ಚಿತ್ವಾ ಪಶೂನ್ಹತ್ವಾ ಕೃತ್ವಾ ರುಧಿರಕಾರ್ದಮಂ |
ಯದ್ಯೇವಂ ಗಮ್ಯತೇ ಸ್ವರ್ಗೇ ನರಕಃ ಕೇನ ಗಮ್ಯತೇ ||

वृक्षान्श्चित्वा पशून्हत्वा कृत्वा रुधिरकर्दमं ।
यद्देवम् गम्यते स्वर्गे नरकः केन गम्यते ॥

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ.

ರವಿ.

ಈ ಚಿತ್ರವನ್ನು ಸೆರೆಹಿಡಿದದ್ದು ಬಂಡಿಪುರದ ಬಳಿ. 

ಈ ಚಿತ್ರಕ್ಕೆ ಹೊಂದುವಂತಹ ಕವನ/ ಕತೆ(ಥೆ)/ ಚುಟುಕ ಏನಾದರೂ ಬರೆಯಿರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಮರ ಉಳಿಸಿ, ಮೆಟ್ರೋ ಕಳಿಸಿ

ಗಾರ್ಡನ್ ಸಿಟಿನಾ.... ? ಮೆಟ್ರೋ ಸಿಟಿನಾ......??

 ನೆನ್ನೆ ಸಂಜೆ ಇದನ್ನ ಕೇಳೇ ಬಿಡೋಣ ಅಂತ ಹೊರಟಿದ್ದು ಲಾಲ್-ಭಾಗ್ ಗೆ.  ಅಲ್ಲಿ ಜೇಸ್ ತೆಗೆದ ಕೆಲವು ಚಿತ್ರ ಚಿತ್ರಗಳು ಈ ಕೊಂಡಿಯಲ್ಲಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿರ್ಭಯ ಕರ್ನಾಟಕ

ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲುವುದೆಂತು? ಕಳೆದ ಹತ್ತು ದಿನಗಳಲ್ಲಿ 7 ಬಾರಿ ಮಹಿಳೆಯರ ಮೇಲೆ ಆಕ್ರಮಣ ನಡೆದಿದೆ! ಅದೂ ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶಗಳಾದ ಇನ್ ಪಂಟ್ರಿರಸ್ತೆ, ಕನ್ನಿಗಾಂ ರಸ್ತೆ, ರೆಸ್ಟ್ ಹೌಸ್ ಕಾಲೋನಿ, ವಸಂತನಗರ, ಇಂದಿರಾನಗರ, ಹಲಸೂರುಗಳಲ್ಲಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಪದ

ಸಂಪದ.ನೆಟ್ ಕನ್ನಡಿಗರ ಅಚ್ಚುಮೆಚ್ಚಿನ ತಾಣ. ಕಾರಣ ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ವೇದಿಕೆಯಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Traveling Film South Asia 2008

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಮ್ಮ ರಸ್ತೆ

ನಮ್ಮ ರಸ್ತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆ ಮರ !

ವರ್ಷಗಳ ಹಿಂದೆ ನೆಟ್ಟಿದ್ದ ಗಿಡ
ಇವತ್ತು ಮರ

ಅಕ್ಕರೆಯಿಂದ ನೀರೆರೆದು, ಬೇಲಿ ಹಾಕಿ
ಅದಕ್ಕೊಂದು ಬೋರ್ಡು ಬಿಗಿದು
ಬೀಗಿದ್ದರು

ನಿತ್ಯ ಕಣ್ಣಾಡಿಸಿ, ನೀರು ಹನಿಸಿ
ಮೇಯಲು ಬಂದ ಪಶುಗಳ ಓಡಿಸಿ
ಕಾಯ್ದಿದ್ದರು

ಗಿಡ ಮರವಾಯಿತು
ರಸ್ತೆ ಪಕ್ಕ ಸಮೃದ್ಧವಾಯಿತು
ಕತ್ತೆತ್ತಿ ವಿದ್ಯುತ್‌ ತಂತಿ
ನೆಕ್ಕಲು ಹೊರಟಿತು

ತೋಳಗಲಿಸಿ ಬೆಳೆದು
ರಸ್ತೆಯ ಮೇಲೆ ಇಣುಕಲು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರದಂತಹ ಮನಸ್ಸು

 

ನೆರೆನಂಬಿದವರಿಗೆ ನೆರಳನ್ನೀಯುತ
ಬಿಸಿಲಲಿ ತಾವೇ ನವೆಯುತಲಿ
ತನಿವಣ್ಣುಗಳನೆಲ್ಲ ಇತರರಿಗೀಯುವ
ಮರಗಳಂತಲ್ಲವೆ ಅಗ್ಗಳರು?

ಸಂಸ್ಕೃತ ಮೂಲ:

ಛಾಯಾಮನ್ಯಸ್ಯ ಕುರ್ವಂತೇ ತಿಷ್ಠಂತಿ ಸ್ವಯಮಾತಪೇ|
ಫಲಾನ್ಯಾಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾಃ ಇವ||

-ಹಂಸಾನಂದಿ

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನನ್ನ ಹೊಂಗೇ ಮರ...

ಪ್ರತಿ ದಿನವೂ ನಿಲ್ಲುವುದಲ್ಲೇ...ಅದರ ನೆರಳಲ್ಲೇ...!
ಸರಿ ಸುಮಾರು ಮೂರು ವರುಷವಾಯಿತು...
ಅದರ ಬುಡದಲ್ಲೇ ನಾನು ಬೀಡು ಬಿಡುವುದು!
ಅದು ನನ್ನ ಮರ...ನನ್ನ ಹೊಂಗೇ ಮರ...

ಹೆಚ್ಚು ಸಮಯವೂ ಕಳೆಯುವುದಿಲ್ಲ ನಾನು...
ಕೇವಲ ಹತ್ತೇ ನಿಮಿಷ ಇಡೀ ದಿನದಲ್ಲಿ!
ಹತ್ತು ಹಲವಾರೂ ಮರಗಳುಂಟು ಸುತ್ತ ಮುತ್ತ..
ಆದರೂ ಅದು ಮಾತ್ರವೇ ನನಗೆ ಅಚ್ಚು ಮೆಚ್ಚು!
ಅದು ನನ್ನ ಮರ...ನನ್ನ ಹೊಂಗೇ ಮರ...!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಮರ