ಪಯಣ

ಕಲಾ ದಿನ...

ನಾವು ದಿನನಿತ್ಯ ಮಾಡೋ ಕೆಲಸಗಳ ಹೊರತಾಗಿ ಆಗೀಗೊಮ್ಮೆ ಮಾಡುವ ಹೊಸ ರೀತಿಯ ಚಟುವಟಿಕೆಗಳು ಹೊಸತನ ತರುವುದರೊಂದಿಗೆ ನಮ್ಮನ್ನ ಕ್ರಿಯಾಶೀಲರನ್ನಾಗಿಸುತ್ತವೆ. ಸ್ಟ್ಯಾಗ್ನೆಂಟ್ ಅನಿಸುವಿಕೆ ಕಡಿಮೆಯಾಗುತ್ತೆ. ನನಗೆ ಈವತ್ತೊಂದು ಸಖತ್ ದಿನವಾಗಿತ್ತು.

ಈವತ್ತು ಬೆಳಗ್ಗೆ ಕುಮಾರ ಕೃಪ ರೋಡಿಂದ ಅರಮನೆ ರಸ್ತೆ ಮೂಲಕ ಮನೆಗೆ ಹಿಂತಿರುಗುತ್ತಿರುವಾಗ ಬಸ್ ಕಿಟಕಿಯಿಂದ ಕಂಡ "ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದ (National Gallery of Modern Art)" ಹೊರಗಿನ ಚಿತ್ರಗಳು ಹಾಗೇ ಸೆಳೆದವು.ಅಲ್ಲೇ ಸ್ಟಾಪ್ ಕೊಟ್ಟಿದ್ದರಿಂದ ಮರು ಆಲೋಚಿಸದೆ ಬಸ್ಸಿಂದ ಕೆಳಗಿಳಿದು ಹೊರಟೆ. :)

ಪ್ರವೇಶ ದರ ೧೦ ರೂ. ಕ್ಯಾಮೆರಾದಿಂದ ಪೋಟೋ ತೆಗೆಯುವಂತಿಲ್ಲ ಕಣ್ಗಳ ಮೂಲಕ ತೆಗೆಯಬಹುದಷ್ಟೇ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದಕ್ಷಿಣ ಕರ್ನಾಟಕದಲ್ಲೊಂದು ಸುತ್ತಾಟ

ಜುಲೈ ನಲ್ಲಿ ಹಾಸನ ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಒಂದಷ್ಟು ಸುತ್ತಾಡುವ ಅವಕಾಶ ಸಿಕ್ಕಿತ್ತು. ಹತ್ತನೇ ಶತಮಾನದಿಂದ ಹಿಡಿದು ಇಪ್ಪತ್ತೊಂದನೇ ಶತಮಾನದ ವರೆಗಿನ ಹಲವು ನೋಟಗಳ ಸರಣಿ ಇಲ್ಲಿ ಒಂದಿದೆ.


ಒಂದು ವಿಚಾರ ಹೇಳಬೇಕೆನ್ನಿಸಿತು. ಹಿನ್ನಲೆಯಲ್ಲಿ ಬರುತ್ತಿರುವ ಸಂಗೀತವನ್ನು ರಚಿಸಿದ್ದು ನಾನೇ - ನಾಸಾಮಣಿ ಎನ್ನುವ ರಾಗದಲ್ಲಿ ಒಂದು ಜತಿಸ್ವರ. ಪಿಟೀಲಿನಲ್ಲಿ ನಿಡಿಸಿರುವುದು ಬೆಂಗಳೂರಿನ ಕಲಾವಿದರಾದ ಕೆ.ಆರ್.ಸತ್ಯಪ್ರಕಾಶ್


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸವಾರೀನೋ ಪಯಣವೋ

ನನ್ನ ಪಯಣ ತುಮಕೂರು ತಲುಪಿತ್ತು ಅಂತ ಹೇಳಿದ್ನಲ್ಲಾ. ಅದೇ ಹೆಣದ ವಿಚಾರ ಹೇಳ್ತಿದ್ದೆ. ಗುರುತೇ ಸಿಗದಂತಾಗಿತ್ತು. ಆದರೆ ಅದು ನಾಯಿ ಹೆಣ. ಅದನ್ನು ನೋಡುತ್ತಲೇ ಮನಸ್ಸು ರಾಕೆಟ್ ವೇಗದಲ್ಲಿ ಓಡಿತ್ತು. ಜೀವನದ ಬಗ್ಗೆ ಹಾಗೇ ಚಿಂತನೆ ನಡೆಸಿತ್ತು. ಎಲ್ಲರ ಬದುಕಿನ ಪಯಣ ಹುಟ್ಟಿನಿಂದ ಸಾವಿನ ಕಡೆಗಲ್ಲವೇ ? ಎಲ್ಲೆಲ್ಲೆ ಯಾರು ಹೇಗೆ ಸಾಯ್ತಾರೋ ಗೊತ್ತಿರಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 

ಪೆದ್ದುಗುಂಡನ ರಗಳೆ - ೩

ನಭದ ಆಳೆತ್ತರ ಉದ್ದಗಲಗಳುಂಟೆ
ಅರಿವಿನ ಹರವು ಅದಕೆ ದುಪ್ಪಟ್ಟು
ಕಲಿಕೆ ಪಥ ಅಂತ್ಯವಿಲ್ಲದ ಪಯಣ
ಜ್ಞಾನದಾಹ ಚಿರಕಾಲ - ಪೆದ್ದುಗುಂಡ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೈದರಾಬಾದ್

ಎರಡು-ಮೂರು ವಾರಗಳ ಮಟ್ಟಿಗೆ ಹೈದರಾಬಾದ್-ಗೆ ಹೋಗಬೇಕಾಗಿ ಬಂದಿದೆ, ಬಿಡುವಾದಾಗ ತುಸು ಸುತ್ತೋಣ ಅಂತ, ಬಲ್ಲವರು ಹೈದರಾಬಾದ್ ಸಂಗತಿ ತಿಳಿಸಿ.

sikhanagoudar AT gmail ಗೆ ಮಿಂಚಂಚೆ ಕಳುಹಿದರೂ ಆದೀತು.

ನನ್ನಿ :[:-)]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪಯಣ